ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಬರಲಿದೆ 1 ರೂ. ಮುಖಬೆಲೆಯ ರೆವಿನ್ಯೂ ಸ್ಟಾಂಪ್‌

|
Google Oneindia Kannada News

ಬೆಂಗಳೂರು, ಡಿ. 24 : ರೆವಿನ್ಯೂ ಸ್ಟಾಂಪ್ ಕಡ್ಡಾಯ, ಖಾಸಗಿ ಸಂಸ್ಥೆಗಳ ಜತೆ ಕರ್ನಾಟಕ ಪ್ರವಾಸೋದ್ಯಮ ಮೂಲಸೌಕರ್ಯ ಲಿಮಿಟೆಡ್ ಹೆಸರಿನಲ್ಲಿ ಕಂಪನಿ ಸ್ಥಾಪನೆ, ರೈತರ ಮೇಲಿನ ಹಲ್ಲೆ ಪ್ರಕರಣವನ್ನು ವಾಪಸ್ ಪಡೆಯುವುದು ಸೇರಿದಂತೆ ಹಲವು ಪ್ರಮುಖ ನಿರ್ಧಾರಗಳನ್ನು ಮಂಗಳವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.

ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಅವರು, 11 ವರ್ಷಗಳ ಹಿಂದೆ ರದ್ದುಪಡಿಸಲಾಗಿದ್ದ ರೆವಿನ್ಯೂ ಸ್ಟಾಂಪ್‌ ವ್ಯವಸ್ಥೆಯನ್ನು ಮತ್ತೆ ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, 1 ರೂ. ಮುಖಬೆಲೆಯ ರೆವಿನ್ಯೂ ಸ್ಟಾಂಪ್‌ ಚಲಾವಣೆಗೆ ಬರಲಿದೆ ಎಂದು ಹೇಳಿದರು.[ಮಠಗಳಿಗೆ ಮೂಗುದಾರ ಮಸೂದೆ ವಾಪಸ್]

Cabinet Meeting

ಕಂದಾಯ ಇಲಾಖೆ ವ್ಯಾಪ್ತಿಗೆ ಬರುವ ಸೇವೆ ಪಡೆಯಲು, ಹಣಕಾಸು ಲೇವಾದೇವಿ ವ್ಯವಹಾರದಲ್ಲಿ ಹಾಗೂ ಮನೆ, ನಿವೇಶನ, ಜಮೀನಿಗೆ ಸಂಬಂಧಿಸಿದಂತೆ ಲೀಸ್‌, ಬಾಡಿಗೆ ಕರಾರು ಒಪ್ಪಂದ ಮತ್ತಿತರ ಕೆಲಸಗಳಿಗೆ ರೆವಿನ್ಯೂ ಸ್ಟಾಂಪ್‌ ಬಳಕೆಯಾಗುತ್ತದೆ. ರೆವಿನ್ಯೂ ಸ್ಟಾಂಪ್‌ ಜಾರಿಯಿಂದ ರಾಜ್ಯ ಸರ್ಕಾರಕ್ಕೆ ವಾರ್ಷಿಕ 10 ಕೋಟಿ ರೂ. ಆದಾಯ ಬರುವ ನಿರೀಕ್ಷೆಯಿದೆ ಎಂದರು.

ಪ್ರವಾಸೋದ್ಯಮಕ್ಕೆ ಆದ್ಯತೆ : ಪ್ರವಾಸೋದ್ಯಮ ಇಲಾಖೆಯ ಸ್ವಾಮ್ಯದಲ್ಲಿ 1467.38 ಎಕರೆ ಇದೆ. ಖಾಸಗಿ ಸಂಸ್ಥೆಗಳ ಜತೆ ಕರ್ನಾಟಕ ಪ್ರವಾಸೋದ್ಯಮ ಮೂಲಸೌಕರ್ಯ ಲಿಮಿಟೆಡ್ ಹೆಸರಿನಲ್ಲಿ ಕಂಪನಿ ಸ್ಥಾಪಿಸಲಾಗುವುದು. ಪಿಪಿಪಿ ಮಾದರಿಯಲ್ಲಿ ಈ ಭೂಮಿಯನ್ನು ಅಭಿವೃದ್ಧಿಪಡಿಸಿ ಪ್ರವಾಸೋದ್ಯಮಕ್ಕೆ ಬಳಸಿಕೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದರು.

ಸಚಿವ ಸಂಪುಟ ಸಭೆಯ ಪ್ರಮುಖ ತೀರ್ಮಾನಗಳು

* ಹಣ ದುರುಪಯೋಗ ಮಾಡಿಕೊಂಡಿದ್ದ ಗುಲ್ಬರ್ಗ ಜಿಲ್ಲೆಯ ಸಹಾಯಕ ತೋಟಗಾರಿಕೆ ಅಧಿಕಾರಿ ಮುನಿಚೆಲುವಯ್ಯ ಸೇವೆಯಿಂದ ವಜಾ.

* ನೈಸರ್ಗಿಕ ಹಾನಿ ತಪ್ಪಿಸಲು 120.60 ಕೋಟಿ ರೂ. ವೆಚ್ಚದಲ್ಲಿ ಉಡುಪಿ, ಉತ್ತರ ಕನ್ನಡ ಹಾಗೂ ಮಂಗಳೂರು ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಚಂಡಮಾರುತ ಅನಾಹುತ ತಡೆ ಯೋಜನೆ ಅನುಷ್ಠಾನ.

* ಕೇಂದ್ರ ಹಾಗೂ ರಾಜ್ಯ ಸರ್ಕಾರದ ದಾಖಲೆ, ಹಣ ಹಿಂಬಾಕಿ ಪಡೆಯುವ ಅವಧಿಯಲ್ಲಿ 1 ರೂ. ಬೆಲೆ ರೆವಿನ್ಯೂ ಸ್ಟಾಂಪ್ ಬಳಕೆ ಕಡ್ಡಾಯ.

* ಸರ್ಕಾರದ ಮಾನ್ಯತೆ ಪಡೆದ ಖಾಸಗಿ ಐಟಿಐಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 1450 ಸಿಬ್ಬಂದಿಗಳಿಗೆ ನಿವೃತ್ತಿ ವೇತನ ಮತ್ತು ಪಿಂಚಣಿ ಯೋಜನೆಗೆ ಅನುಮೋದನೆ.

* ಹೊನ್ನಾಳಿ ತಾಲೂಕಿನ ಚಟ್ನಳ್ಳಿ, ಕೊಪ್ಪಳ ನಗರ ತಾಪಂ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದ್ದ ರೈತಕೂಲಿಗಳ ಸಂಘ, ಹಸಿರು ಸೇನೆ ವಿರುದ್ಧ ಹಾಕಿದ್ದ ಮೊಕದ್ದಮೆ, ಟಯೋಟಾ ಕಿರ್ಲೋಸ್ಕರ್ ಕಂಪನಿಯಿಂದ ವಜಾ ಆಗಿದ್ದ ಕಾರ್ಮಿಕರ ವಿರುದ್ಧ ಹಲಸೂರು ಠಾಣೆಯಲ್ಲಿ ಹೂಡಿದ್ದ ಮೊಕದ್ದಮೆ ವಾಪಸ್ ಪಡೆಯಲು ತೀರ್ಮಾನ.

English summary
The Karnataka government has decided to re-introduce the Rs. 1 revenue stamp for financial transactions. An order on this will be issued soon, said Minister for Law and Parliamentary Affairs T.B. Jayachandra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X