ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆದ್ದಾರಿಗಳಲ್ಲಿ ಸಂಚರಿಸುವವರು ಟೋಲ್ ಕಟ್ಟಲು ರೆಡಿಯಾಗಿರಿ

|
Google Oneindia Kannada News

ಬೆಳಗಾವಿ, ನ 30: ಇದುವರೆಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿದ್ದ ಟೋಲ್ ಶುಲ್ಕ ಪಾವತಿ ಮಾಡುವ ಪದ್ದತಿ ಇನ್ನು ರಾಜ್ಯ ಹೆದ್ದಾರಿಗಳಿಗೂ ಅನ್ವಯಿಸುವ ಕಾಲ ಸನ್ನಿಹಿತವಾಗಿದೆ. ರಾಜ್ಯದ ಹದಿನೇಳು ಹೆದ್ದಾರಿಗಳಲ್ಲಿ ಟೋಲ್ ವ್ಯವಸ್ಥೆ ಜಾರಿಗೊಳಿಸಲು ಸರಕಾರ ಸಿದ್ದವಾಗಿ ನಿಂತಿದೆ.

ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯ ಹೆದ್ದಾರಿಗಳ ಗುಣಮಟ್ಟವನ್ನು ಸುಧಾರಿಸಿ ಟೋಲ್ ವ್ಯವಸ್ಥೆ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಎಚ್ ಸಿ ಮಹದೇವಪ್ಪ ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಹೇಳಿದ್ದಾರೆ.

2827 ಕೋಟಿ ರೂಪಾಯಿ ವೆಚ್ಚದಲ್ಲಿ 17 ರಾಜ್ಯ ಹೆದ್ದಾರಿಗಳನ್ನು ಅಭಿವೃದ್ದಿ ಪಡಿಸಲು ನಿರ್ಧರಿಸಲಾಗಿದೆ. ಮುಂದಿನ ತಿಂಗಳ ಆದಿಯಲ್ಲಿ ವಿಶ್ವಬ್ಯಾಂಕ್ ಅಧಿಕಾರಿಗಳು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ರಾಜ್ಯ ಹೆದ್ದಾರಿಗಳ ಅಭಿವೃದ್ದಿಗೆ ಆರ್ಥಿಕ ಸಹಾಯ ಕುರಿತಂತೆ ವಿಶ್ವಬ್ಯಾಂಕ್ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಲಾಗುವುದು.

ಒಂದು ವೇಳೆ ವಿಶ್ವಬ್ಯಾಂಕಿನಿಂದ ಆರ್ಥಿಕ ಸಹಾಯ ಸಿಗದೇ ಇದ್ದ ಪಕ್ಷದಲ್ಲಿ ರಾಜ್ಯ ಸರಕಾರವೇ ಕಾಮಕಾರಿ ಪ್ರಾರಂಭಿಸಲಿದೆ ಎಂದು ಮಹದೇವಪ್ಪ ಹೇಳಿದ್ದಾರೆ.

ರಾಜ್ಯ ಹೆದ್ದಾರಿ ಅಭಿವೃದ್ದಿಗೆ ಟೆಂಡರ್ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಸುಮಾರು ಮೂರುವರೆ ಸಾವಿರ ಕಿಲೋಮೀಟರ್ ರಸ್ತೆಗಳನ್ನು ಅಭಿವೃದ್ದಿ ಪಡಿಸಲಾಗುತ್ತದೆ. ಹಾಗೇ, ಮಳೆಗಾಲ ಮುಗಿದಿರುವ ಹಿನ್ನಲೆಯಲ್ಲಿ ರಸ್ತೆಗಳ ಡಾಂಬರೀಕರಣ ಕಾಮಗಾರಿ ಕೂಡಾ ಸದ್ಯದಲ್ಲೇ ಆರಂಭವಾಗಲಿದೆ ಎಂದು ಸಚಿವರು ಹೇಳಿದ್ದಾರೆ. (ಹೆದ್ದಾರಿಗಳಲ್ಲಿ ಇನ್ನು ಎಲೆಕ್ಟ್ರಾನಿಕಲ್‌ ಟೋಲ್‌ ಪೇ ವ್ಯವಸ್ಥೆ)

ಟೋಲ್ ವ್ಯವಸ್ಥೆ ಜಾರಿಗೆ ಬರುವ ರಾಜ್ಯ ಹೆದ್ದಾರಿಗಳ ಪಟ್ಟಿ, ಸ್ಲೈಡಿನಲ್ಲಿ

ರಾಜ್ಯ ಹೆದ್ದಾರಿಗಳ ಪಟ್ಟಿ - 1

ರಾಜ್ಯ ಹೆದ್ದಾರಿಗಳ ಪಟ್ಟಿ - 1

1. ಯಲಹಂಕ - ದೊಡ್ಡಬಳ್ಳಾಪುರ - ಗೌರಿಬಿದನೂರು (ರಾಜ್ಯ ಹೆದ್ದಾರಿ 9)
2. ಶಿವಮೊಗ್ಗ - ಹೊನ್ನಾಳಿ - ಹರಿಹರ (ರಾಜ್ಯ ಹೆದ್ದಾರಿ 25)
3. ದೇವನಹಳ್ಳಿ - ವಿಜಯಪುರ - ಕೋಲಾರ ( ರಾಜ್ಯ ಹೆದ್ದಾರಿ 96)
4. ಬಿಳಿಕೆರೆ - ಬೇಲೂರು - ಹಾಸನ ( ರಾಜ್ಯ ಹೆದ್ದಾರಿ 57)

ರಾಜ್ಯ ಹೆದ್ದಾರಿಗಳ ಪಟ್ಟಿ - 2

ರಾಜ್ಯ ಹೆದ್ದಾರಿಗಳ ಪಟ್ಟಿ - 2

5. ಶಹಪುರ - ಯಾದಗಿರಿ - ಮೇಡಕ್ (ಆಂಧ್ರ ಗಡಿ, ರಾಜ್ಯ ಹೆದ್ದಾರಿ 51)
6. ದೇವಸಗುರು - ಲಿಂಗಸಗೂರು - ರಾಯಚೂರು ( ರಾಜ್ಯ ಹೆದ್ದಾರಿ 13)
7. ಸಿಂಧನೂರು - ಲಿಂಗಸಗೂರು (ರಾಜ್ಯ ಹೆದ್ದಾರಿ 19)

ರಾಜ್ಯ ಹೆದ್ದಾರಿಗಳ ಪಟ್ಟಿ - 3

ರಾಜ್ಯ ಹೆದ್ದಾರಿಗಳ ಪಟ್ಟಿ - 3

8. ಹತ್ತಿಗುಡೂರು - ಜೇವರ್ಗಿ - ಹುಮ್ನಾಬಾದ್ - ಬೀದರ್ ( ರಾಜ್ಯ ಹೆದ್ದಾರಿ 105)
9. ಕಮಲಾನಗರ - ಗುಲ್ಬರ್ಗ - ಬೀದರ್ ( ರಾಜ್ಯ ಹೆದ್ದಾರಿ 4)
10. ಬಂಗಾರಪೇಟೆ - ಕೋಲಾರ - ಚಿಂತಾಮಣಿ ( ರಾಜ್ಯ ಹೆದ್ದಾರಿ 5)
11. ಗೊಟೂರು - ಕಾಗೇವಾಡಿ (ರಾಜ್ಯ ಹೆದ್ದಾರಿ 53)

ರಾಜ್ಯ ಹೆದ್ದಾರಿಗಳ ಪಟ್ಟಿ - 4

ರಾಜ್ಯ ಹೆದ್ದಾರಿಗಳ ಪಟ್ಟಿ - 4

12. ಜಟ - ಜಂಬೂಟಿ ( ರಾಜ್ಯ ಹೆದ್ದಾರಿ 31) ಬೆಳಗಾವಿ ಜಿಲ್ಲೆಯಲ್ಲಿ ಹಾದು ಹೋಗುವ ಹೆದ್ದಾರಿ
13. ಕಲಮಲ - ಸಿಂಧನೂರು - ಬೂದಗಂಪ ( ರಾಜ್ಯ ಹೆದ್ದಾರಿ 23)
14. ಸಂಕೇಶ್ವರ - ಗೋಕಾಕ್ - ಯರಗಟ್ಟಿ ( ರಾಜ್ಯ ಹೆದ್ದಾರಿ 44)

ರಾಜ್ಯ ಹೆದ್ದಾರಿಗಳ ಪಟ್ಟಿ - 5

ರಾಜ್ಯ ಹೆದ್ದಾರಿಗಳ ಪಟ್ಟಿ - 5

15. ಹುನಗುಂದ - ಬೆಳಗಾವಿ - ಬಾಗಲಕೋಟೆ - ಲೋಕಾಪುರ ( ರಾಜ್ಯ ಹೆದ್ದಾರಿ 20)
16. ಹಿರಿಯೂರು - ಬಳ್ಳಾರಿ ( ರಾಜ್ಯ ಹೆದ್ದಾರಿ 19)
17. ಕೃಷ್ಣಾ ಸೇತುವೆ - ಲೋಕಾಪುರ ( ರಾಜ್ಯ ಹೆದ್ದಾರಿ 34)

English summary
Karnataka Government to introduce Toll fee system in 17 State Highways very soon, PWD Minister Mahadevappa in Winter Assembly session in Belgaum 2013.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X