ಲಕ್ಷ ಲಕ್ಷ ಲಂಚಕ್ಕೆ ಕಡಿವಾಣ: ಬಾರ್ ಲೈಸೆನ್ಸ್ ಆನ್ಲೈನ್ ನವೀಕರಣ

ಬೆಂಗಳೂರು, ಜೂ 30: ಪ್ರತೀ ವರ್ಷ ಜುಲೈ ತಿಂಗಳಲ್ಲಿ ಸರಕಾರದ ಬೊಕ್ಕಸಕ್ಕೆ ಅಬಕಾರಿ ಇಲಾಖೆಯ ಮೂಲಕ 500-700 ಕೋಟಿ ಆದಾಯ ತಂದು ಕೊಡುವ ಬಾರ್ & ರೆಸ್ಟೋರೆಂಟ್ ಲೈಸೆನ್ಸ್ ನವೀಕರಣ ಪ್ರಕ್ರಿಯೆ ಆರಂಭಗೊಂಡಿದೆ.

ಈ ನವೀಕರಣ ಪ್ರಕ್ರಿಯೆಯಿಂದ ಸರಕಾರಕ್ಕೆ ಹೇಗೆ ಆದಾಯ ಬರುತ್ತಿತ್ತೋ, ಹಾಗೇ ಅಬಕಾರಿ ಇಲಾಖೆಯ ಅಧಿಕಾರಿಗಳಿಗೂ ಭರ್ಜರಿ ಇಳುವರಿ ತಂದುಕೊಡುತ್ತಿತ್ತು. ಹಾಗಾಗಿ, ಭ್ರಷ್ಟಾಚಾರ ತಡೆಯಲು ಸರಕಾರ ಆನ್ಲೈನ್ ಮೂಲಕ ಲೈಸೆನ್ಸ್ ನವೀಕರಣ ಮಾಡಲು ನಿರ್ಧರಿಸಿದ್ದು, ಅದಕ್ಕೆ ಚಾಲನೆ ಸಿಕ್ಕಿದೆ.

ರಾಜ್ಯದಲ್ಲಿ ಸುಮಾರು 10,500 ಮದ್ಯದ ಅಂಗಡಿಗಳಿದ್ದು, ನವೀಕರಣದ ವೇಳೆ ಲಕ್ಷಾಂತರ ರೂಪಾಯಿ ಲಂಚ ಕೈಬದಲಾಗುವುದನ್ನು ತಪ್ಪಿಸಲು ಆನ್ಲೈನ್ ಮೂಲಕ, ಲೈಸೆನ್ಸ್ ರಿನೀವಲ್ ಮಾಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ಅಬಕಾರಿ ಆಯುಕ್ತರು ತಿಳಿಸಿದ್ದಾರೆ.

Karnataka government started online bar and restaurant license renewal from 2018

ಅಬಕಾರಿ ಇಲಾಖೆಯ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಿ, ಆಯಾಯ ನಗರಕ್ಕೆ ನಿಗದಿಯಾಗಿರುವ ಶುಲ್ಕವನ್ನು ಬ್ಯಾಂಕ್ ನಲ್ಲಿ ಕಟ್ಟಿರುವ ರಸೀದಿಯನ್ನು ಅರ್ಜಿಯ ಜೊತೆ ಅಪ್ಲೋಡ್ ಮಾಡಬೇಕು. ಸಂಬಂಧ ಪಟ್ಟ ಅಧಿಕಾರಿಗಳು ಇದನ್ನು ಪರಿಶೀಲಿಸಿ, ಡಿಜಿಟಲ್ ಸಹಿಯ ಮೂಲಕ ಲೈಸೆನ್ಸ್ ನವೀಕರಣ ಮಾಡುತ್ತಾರೆಂದು ಆಯುಕ್ತರು ತಿಳಿಸಿದ್ದಾರೆ.

ನವೀಕರಣದ ಶುಲ್ಕ ಈ ರೀತಿಯಿದೆ ( ವಾರ್ಷಿಕ)

ಸಿಎಲ್ - 9 (ಬಾರ್ & ರೆಸ್ಟೋರೆಂಟ್)
ಮಹಾನಗರಪಾಲಿಕೆ - 7.5 ಲಕ್ಷ
ನಗರಪಾಲಿಕೆ - 6 ಲಕ್ಷ
ಪುರಸಭೆ - 5ಲಕ್ಷ
ಪಟ್ಟಣ ಪಂಚಾಯತಿ - 4 ಲಕ್ಷ

ಸಿಎಲ್ - 11ಸಿ (ರಿಟೇಲ್ ಅಂಗಡಿ, ಎಂಎಸ್ಐಎಲ್)
ಮಹಾನಗರಪಾಲಿಕೆ - 4 ಲಕ್ಷ

ಸಿಎಲ್ - 2 (ವೈನ್ ಸ್ಟೋರ್)
ಮಹಾನಗರಪಾಲಿಕೆ - 6 ಲಕ್ಷ
ನಗರಪಾಲಿಕೆ -5ಲಕ್ಷ
ಪುರಸಭೆ - 4.5ಲಕ್ಷ
ಪಟ್ಟಣ ಪಂಚಾಯತಿ - 4 ಲಕ್ಷ

ಸಿಎಲ್ - 4 (ಕ್ಲಬ್)
ಮಹಾನಗರಪಾಲಿಕೆ - 6.5 ಲಕ್ಷ
ನಗರಪಾಲಿಕೆ -5ಲಕ್ಷ
ಪುರಸಭೆ - 4ಲಕ್ಷ
ಪಟ್ಟಣ ಪಂಚಾಯತಿ - 2 ಲಕ್ಷ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+