ಸಂಪುಟ ವಿಸ್ತರಣೆ ಬಳಿಕ ಡಿ.ಕೆ. ಶಿವಕುಮಾರ್ ಅಲರ್ಟ್ ; ಅತಿವೃಷ್ಟಿ–ಬರ ಪರಿಸ್ಥಿತಿ ಪರಿಶೀಲನೆಗೆ ಸಚಿವರಿಗೆ ಜಿಲ್ಲಾವಾರು ಹೊಣೆ
ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿಯ ನಿರ್ವಹಣೆಗೆ ತುರ್ತು ಕ್ರಮ ಕೈಗೊಂಡಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಉಂಟಾಗಿರುವ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ಉದ್ದೇಶದಿಂದ ಸಚಿವರಿಗೆ ಜಿಲ್ಲಾವಾರು ಜವಾಬ್ದಾರಿ ಹಂಚಿಕೆ ಮಾಡಿ, ತಕ್ಷಣ ಕಾರ್ಯಪ್ರವೃತ್ತರಾಗುವಂತೆ ಸೂಚನೆ ನೀಡಿದ್ದಾರೆ.
ಮುಖ್ಯಮಂತ್ರಿಗಳು ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ತಮಗೆ ಹಂಚಿಕೆ ಮಾಡಿರುವ ಜಿಲ್ಲೆಗಳಿಗೆ ಕೂಡಲೇ ಭೇಟಿ ನೀಡಿ, ಅಲ್ಲಿನ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸುವಂತೆ ನಿರ್ದೇಶನ ನೀಡಿದ್ದಾರೆ. ಸಚಿವರು ತಮಗೆ ವಹಿಸಿರುವ ಜಿಲ್ಲೆಗಳಿಗೆ ತಕ್ಷಣ ಪ್ರವಾಸ ಕೈಗೊಂಡು, ಪ್ರತಿಯೊಂದು ತಾಲೂಕುಗಳಲ್ಲಿನ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಬೇಕು. ಸ್ಥಳೀಯ ಸಮಸ್ಯೆಗಳು, ಪರಿಹಾರ ಕ್ರಮಗಳು ಹಾಗೂ ಅಗತ್ಯ ನೆರವಿನ ಕುರಿತು ಸಮಗ್ರ ವರದಿಯನ್ನು ಸಿದ್ಧಪಡಿಸಿ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.

ಪರಿಶೀಲನೆಯ ಬಳಿಕ ವಾಸ್ತವ ಸ್ಥಿತಿಯ ಸಂಪೂರ್ಣ ವರದಿಯನ್ನು ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಿಗೆ ತಕ್ಷಣ ಸಲ್ಲಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಜನರಿಗೆ ಯಾವುದೇ ತೊಂದರೆ ಉಂಟಾಗದಂತೆ ಪರಿಹಾರ ಕಾರ್ಯಗಳು ವೇಗವಾಗಿ ನಡೆಯಬೇಕು. ಜಿಲ್ಲಾಡಳಿತಗಳೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಚಿವರಿಗೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ನಿರ್ದೇಶನ ನೀಡಿದ್ದಾರೆ.
ಸಚಿವರಿಗೆ ವಹಿಸಲಾದ ಜಿಲ್ಲೆಗಳ ವಿವರ:
ಡಾ. ಜಿ. ಪರಮೇಶ್ವರ - ತುಮಕೂರು
ರಘುಮೂರ್ತಿ - ಚಿತ್ರದುರ್ಗ
ಬಿ.ಎಸ್. ಸುರೇಶ್ (ಬೈರತಿ) - ಚಿಕ್ಕಬಳ್ಳಾಪುರ
ಕೆ.ಎಚ್. ಮುನಿಯಪ್ಪ - ಬೆಂಗಳೂರು ಗ್ರಾಮಾಂತರ
ರಾಮಲಿಂಗಾರೆಡ್ಡಿ - ಕೋಲಾರ
ಹೆಚ್. ಸಿ. ಬಾಲಕೃಷ್ಣ - ಬೆಂಗಳೂರು ದಕ್ಷಿಣ
ಬಿ.ಝೆಡ್. ಜಮೀರ್ ಅಹಮ್ಮದ್ ಖಾನ್ - ವಿಜಯನಗರ
ಕೆ.ಜೆ. ಜಾರ್ಜ್ - ಚಿಕ್ಕಮಗಳೂರು
ಕೆ.ಎಂ. ಶಿವಲಿಂಗೇಗೌಡ - ಹಾಸನ
ಮಧು ಬಂಗಾರಪ್ಪ - ಶಿವಮೊಗ್ಗ
ಎಂ.ಬಿ. ಪಾಟೀಲ್ - ವಿಜಯಪುರ
ವಿಜಯಾನಂದ ಕಾಶಪ್ಪನವರ್ - ಬಾಗಲಕೋಟೆ
ಬಸವರಾಜ ರಾಯರೆಡ್ಡಿ - ಗದಗ
ಎಸ್. ಎಸ್. ಮಲ್ಲಿಕಾರ್ಜುನ - ದಾವಣಗೆರೆ
ರುದ್ರಪ್ಪ ಲಮಾಣಿ - ಹಾವೇರಿ
ಸತೀಶ್ ಜಾರಕಿಹೊಳಿ - ಬೆಳಗಾವಿ
ಸಂತೋಷ್ ಲಾಡ್ - ಧಾರವಾಡ
ಲಕ್ಷ್ಮಣ ಸವದಿ - ಉತ್ತರಕನ್ನಡ
ಪ್ರಿಯಾಂಕ್ ಖರ್ಗೆ - ಕಲಬುರಗಿ
ಅಜಯ್ ಧರಂ ಸಿಂಗ್ - ರಾಯಚೂರು
ಈಶ್ವರ್ ಖಂಡ್ರೆ - ಬೀದರ್
ಯು.ಟಿ. ಖಾದರ್ - ದಕ್ಷಿಣ ಕನ್ನಡ & ಉಡುಪಿ
ಪಿ.ಎಂ. ನರೇಂದ್ರಸ್ವಾಮಿ - ಕೊಡಗು
ಯತೀಂದ್ರ ಸಿದ್ಧರಾಮಯ್ಯ - ಮೈಸೂರು
ಚೆಲುವರಾಯಸ್ವಾಮಿ - ಮಂಡ್ಯ
ಪುಟ್ಟರಂಗಶೆಟ್ಟಿ - ಚಾಮರಾಜನಗರ
ಬಿ. ನಾಗೇಂದ್ರ - ಬಳ್ಳಾರಿ
ಶರಣ ಪ್ರಕಾಶ್ ಪಾಟೀಲ - ಯಾದಗಿರಿ
ಶಿವರಾಜ್ ಸಂಗಪ್ಪ ತಂಗಡಗಿ - ಕೊಪ್ಪಳ
ಕೃಷ್ಣ ಬೈರೇಗೌಡ - ಬೆಂಗಳೂರು ನಗರ


Click it and Unblock the Notifications
