ಮೋದಿ ಸವಾಲಿಗೆ ಟ್ವಿಟ್ಟರ್ ನಲ್ಲಿ ಸಿದ್ದರಾಮಯ್ಯ ಪ್ರತಿ ಸವಾಲು

ಬೆಂಗಳೂರು, ಮೇ 02: "ಪ್ರಧಾನಿ ಮೋದಿಯವರೇ, ಬಿ ಎಸ್ ಯಡಿಯೂರಪ್ಪ ಅವರ ಸಾಧನೆಯನ್ನು 15 ನಿಮಿಷಗಳಲ್ಲಿ ಓದಿ ಹೇಳಿ" ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ವಿಟ್ಟರ್ ನಲ್ಲಿ ಸವಾಲೆಸೆದಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ.

ಮೇ 12 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯ ನಿಮಿತ್ತ ನಿನ್ನೆ(ಮೇ 01) ಚಾಮರಾಜನಗರ ಜಿಲ್ಲೆಯಲ್ಲಿ ನಡೆಸಿದ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ, ರಾಹುಲ್ ಗಾಂಧಿಯವರನ್ನು ಅಣುಕಿಸಿದ್ದರು.

'ಕಾಗದ ನೋಡಿಕೊಂಡು ಭಾಷಣ ಓದುವ ರಾಹುಲ್ ಗಾಂಧಿ, ಕೇವಲ 15 ನಿಮಿಷ ಕಾಗದ ನೋಡದೆ ಮಾತನಾಡಲಿ ನೋಡೋಣ' ಎಂದು ಮೋದಿ ಸವಾಲೆಸೆದಿದ್ದರು.

Karnataka Elections: Siddaramaiah challenges Narendra Modi on twitter

ಈ ಸವಾಲಿಗೆ ಪ್ರತಿಸವಾಲೆಸೆದ ಸಿದ್ದರಾಮಯ್ಯ, "ಬಿ ಎಸ್ ಯಡಿಯೂರಪ್ಪ ಸರ್ಕಾರ ಕರ್ನಾಟಕದಲ್ಲಿ ಮಾಡಿದ ಸಾಧನೆಯನ್ನು 15 ನಿಮಿಷಗಳಲ್ಲಿ ಕಾಗದ ನೋಡಿಯೇ ಹೇಳಿ ನೋಡೋಣ" ಎಂದಿದ್ದಾರೆ.

ಚುನಾವಣೆಗೆ ಇನ್ನು ಕೆಲವೇ ದಿನ ಬಾಕಿ ಇರುವುದರಿಂದ ನಾಯಕರ ಪರಸ್ಪರ ಕೆಸರೆರಚಾಟಕ್ಕೆ ಕರ್ನಾಟಕ ವೇದಿಕೆಯಾಗಿದ್ದು, ರಾಜ್ಯದಲ್ಲಿ ಪ್ರಧಾನಿ ಮೋದಿಯವರು ಒಂದು ವಾರಗಳ ಕಾಲ ಸುಮಾರು 20-25 rally ನಡೆಸಲಿರುವುದು ರಾಜಕೀಯಕ್ಕೆ ಮತ್ತಷ್ಟು ರಂಗು ತಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+