ಮತಗಟ್ಟೆ ಮಾಹಿತಿ ತಿಳಿಸಲಿದೆ ಮೊಬೈಲ್ ಅಪ್ಲಿಕೇಶನ್

ಬೆಂಗಳೂರು, ಮೇ 11 : ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನಕ್ಕೆ ಒಂದು ದಿನ ಬಾಕಿ ಉಳಿದಿದೆ. ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಅಭ್ಯರ್ಥಿಗಳು, ಕಾರ್ಯಕರ್ತರು ಮನೆ-ಮನೆಗೆ ತೆರಳಿ ಪ್ರಚಾರವನ್ನು ಮಾಡುತ್ತಿದ್ದಾರೆ.

ಮತದಾನದ ದಿನ ಮತಗಟ್ಟೆ ಎಲ್ಲಿದೆ? ಎಂಬುವುದನ್ನು ಸುಲಭವಾಗಿ ತಿಳಿಯಲು ಚುನಾವಣಾ ಆಯೋಗ 'ಚುನಾವಣಾ' ಎಂಬ ಮೊಬೈಲ್ ಅಪ್ಲಿಕೇಶನ್‌ ಅನ್ನು ಸಿದ್ಧಪಡಿಸಿದೆ. ಎಸ್‌ಎಂಎಸ್ ಮೂಲಕವೂ ಜನರು ಮತಗಟ್ಟೆಯ ಮಾಹಿತಿಯನ್ನು ಪಡೆಯಬಹುದಾಗಿದೆ.

Mobile app

ಮತದಾರರು 9731979899 ನಂಬರ್‌ಗೆ EPIC ಸ್ಟೇಸ್ ವೋಟರ್‌ ಐಡಿ ನಂಬರ್ ಮೆಸೇಜ್ ಮಾಡಿದರೆ ಮತಗಟ್ಟೆ ಎಲ್ಲದೆ? ಎಂಬ ಮಾಹಿತಿ ಪಡೆಯಬಹುದಾಗಿದೆ.

ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಚುನಾವಣಾ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡರೆ ಮತದಾನದ ಕುರಿತು ವಿವಿಧ ಮಾಹಿತಿಗಳು ಅಂಗೈನಲ್ಲಿ ಸಿಗಲಿವೆ. ಅಂಗವಿಕಲ ಅಭ್ಯರ್ಥಿಗಳು ಇದ್ದರೆ ಈ ಅಪ್ಲಿಕೇಶನ್ ಮೂಲಕ ವೀಲ್ ಚೇರ್‌ಗಳನ್ನು ಬುಕ್ ಮಾಡಬಹುದಾಗಿದೆ.

ಶನಿವಾರ ಮತದಾನ : ಮತದಾರರ ಗುರುತಿನ ಚೀಟಿ ಇಲ್ಲದಿದ್ದರೂ ಮತದಾರರ ಪಟ್ಟಿಯಲ್ಲಿ ಹೆಸರಿದ್ದರೆ ಜನರು 12 ದಾಖಲೆಗಳ ಪೈಕಿ ಒಂದನ್ನು ತೋರಿಸಿ ಮತದಾನ ಮಾಡಬಹುದಾಗಿದೆ. ಶನಿವಾರ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+