ಕಾಂಗ್ರೆಸ್‌ ಬಿ-ಫಾರಂ ವಿತರಣೆ, ರಾಹುಕಾಲ ನೋಡಿ ಟಿಕೆಟ್ ಪಡೆದರು

Posted By:
Subscribe to Oneindia Kannada

   Karnataka Elections 2018 : ಸಾದಹಳ್ಳಿ ರೆಸಾರ್ಟ್ ನಲ್ಲಿ ಬಿ ಫಾರಂ ವಿತರಿಸಿದ ಕಾಂಗ್ರೆಸ್ | Oneindia Kannada

   ಬೆಂಗಳೂರು, ಏಪ್ರಿಲ್ 17: ಕಾಂಗ್ರೆಸ್ ಪಕ್ಷ ತನ್ನ 218 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಬಿ-ಫಾರಂ ವಿತರಿಸುವ ಕಾರ್ಯವನ್ನು ಇಂದಿನಿಂದ ಪ್ರಾರಂಭಿಸಿದೆ.

   ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಸಾದಹಳ್ಳಿಯ ರೆಸಾರ್ಟ್‌ ಒಂದರಲ್ಲಿ ಮೊಕ್ಕಾಂ ಹೂಡಿರುವ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷ ದಿಣೇಶ್ ಗುಂಡೂರಾವ್ ಹಾಗೂ ಇತರ ಮುಖಂಡರು ಬಿ-ಫಾರಂ ವಿತರಿಸುತ್ತಿದ್ದು, ಜೊತೆಗೆ ಅಭ್ಯರ್ಥಿಗಳಿಗೆ ಕೆಲವು ಸಲಹೆ ಸೂಚನೆಗಳನ್ನೂ ನೀಡುತ್ತಿದ್ದಾರೆ.

   ಮಡಿಕೇರಿ ಅಭ್ಯರ್ಥಿಗೆ ಮೆಹುಲ್ ಚೋಕ್ಸಿ ನಂಟು, ಒಟ್ಟು 4 ಬಿ-ಫಾರಂಗೆ ತಡೆ

   ಬಹುತೇಕ ಅಭ್ಯರ್ಥಿಗಳಿಗೆ ಇಂದೇ ಟಿಕೆಟ್ ವಿತರಣೆ ಮಾಡಲಾಗುತ್ತಿದೆ. ವಿಶೇಷ ಎಂದರೆ ಬದಾಮಿ ಕ್ಷೇತ್ರದಿಂದ ಆರಿಸಲಾದ ಅಭ್ಯರ್ಥಿ ದೇವರಾಜ್ ಪಾಟೀಲ್ ಅವರಿಗೆ ಇನ್ನೂ ಬಿ-ಫಾರಂ ವಿತರಣೆ ಮಾಡಿಲ್ಲ. ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

   Karnataka elections: congress issuing its B-Form in Sadahalli resort

   ಬದಾಮಿ ಕ್ಷೇತ್ರಕ್ಕೆ ಬಿಜೆಪಿ ಇನ್ನೂ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ ಹಾಗಾಗಿ ಆ ಪಕ್ಷದ ಟಿಕೆಟ್ ಅಂತಿಮವಾದ ಮೇಲೆ ಅಲ್ಲಿಗೆ ಸಿದ್ದರಾಮಯ್ಯ ಸ್ಪರ್ಧೆ ಮಾಡಬೇಕೆ ಬೇಡವೇ ಎಂದು ನಿರ್ಣಯಿಸಿ ಬಿ-ಫಾರಂ ವಿತರಿಸಲಾಗುತ್ತದೆ ಎನ್ನಲಾಗುತ್ತಿದೆ.

   ಇಂದು ಯಶವಂತಪುರ ಶಾಸಕ ಎಸ್.ಟಿ ಸೋಮಶೇಖರ್, ಮಹದೇವಪುರ ಅಭ್ಯರ್ಥಿ ಎ.ಸಿ. ಶ್ರೀನಿವಾಸ್, ಹೆಬ್ಬಾಳ ಅಭ್ಯರ್ಥಿ ಭೈರತಿ ಸುರೇಶ್, ಚಿಂಚೋಳಿ ಶಾಸಕ ಉಮೇಶ್ ಜಾದವ್, ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಖಾನ್, ಅನಿಲ್ ಲಾಡ್, ಸಾಗರ ಶಾಸಕ ಕಾಗೋಡು ತಿಮ್ಮಪ್ಪ, ಸತೀಶ್ ಜಾರಕಿಹೊಳಿ, ಗುರಪ್ಪನಾಯ್ಡು ಸೇರಿದಂತೆ ಹಲವು ಅಭ್ಯರ್ಥಿಗಳು ಇಂದು ಬಿ ಫಾರಂ ಪಡೆದರು.

   ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

   ಕೆಲವು ಅಭ್ಯರ್ಥಿಗಳು ಪಡೆದ ಭಿ-ಫಾರಂಗೆ ಅಲ್ಲೆ ಪೂಜೆ ಸಹ ಮಾಡಿದರು ಎನ್ನಲಾಗಿದ್ದು, ಕೆಲವು ಅಭ್ಯರ್ಥಿಗಳು ರಾಹುಕಾಲ-ಗುಳಿಗಕಾಲದ ಲೆಕ್ಕಾಚಾರ ಹಾಕಿ ಭಿ-ಫಾರಂ ಪಡೆದರಂತೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   KPCC president G.Parameshwar issueing B-Form to its candidates in a resort near International Airport. many of main leaders of congress got ticket today. Badami's candidate Devaraj Patil did not get B-Form yet.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ