ಜಪಾನ್‌ನಲ್ಲಿ ಟೀಂ ಇಂಡಿಯಾ ಐತಿಹಾಸಿಕ ಸಾಧನೆ: ಏಷ್ಯಾ ಓಷಿಯಾನಿಯಾ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಕಿರೀಟ

ಜಪಾನ್‌ನ ಹಿರೋಸಾಕಿಯಲ್ಲಿ ಮೇ 23 ಮತ್ತು 24, 2026 ರಂದು ನಡೆದ ಐಎಯು 24ಗಂಟೆಗಳ ಏಷ್ಯಾ-ಓಷಿಯಾನಿಯಾ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಅಲ್ಟ್ರಾ ರನ್ನಿಂಗ್ ತಂಡವು ಐತಿಹಾಸಿಕ ಸಾಧನೆ ಮಾಡುವ ಮೂಲಕ ಕ್ರೀಡಾ ಜಗತ್ತಿನ ಗಮನ ಸೆಳೆದಿದೆ. ಭಾರತೀಯ ಅಥ್ಲೆಟಿಕ್ಸ್ ಫೆಡರೇಶನ್ (AFI) ಅಡಿಯಲ್ಲಿ ಭಾಗವಹಿಸಿದ ಟೀಂ ಇಂಡಿಯಾ, ದೇಶದ ಅಲ್ಟ್ರಾ-ರನ್ನಿಂಗ್ ಇತಿಹಾಸದಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಕ್ರೀಡೆಯಲ್ಲಿ ಭಾರತದ ಶಕ್ತಿಯನ್ನು ಮತ್ತೊಮ್ಮೆ ಜಗತ್ತಿಗೆ ಸಾರಿದೆ.

ಪುರುಷರ ವೈಯಕ್ತಿಕ ವಿಭಾಗದಲ್ಲಿ ಭಾರತದ ಕ್ರೀಡಾಪಟುಗಳು ಸಂಪೂರ್ಣ ಪಾರುಪತ್ಯ ಮೆರೆದಿದ್ದು, ಎಲ್ಲಾ ಮೂರು ಪ್ರಮುಖ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

India

ಭಾರತದ ಅಮರ್ ಸಿಂಗ್ ದೇವಂಡ 282.881 ಕಿ.ಮೀ ಕ್ರಮಿಸಿ ಚಿನ್ನದ ಪದಕ ಮುಡಿಗೇರಿಸಿಕೊಳ್ಳುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಜೀನೋ ಆಂಟನಿ 272.894 ಕಿ.ಮೀ ಓಡಿ ಬೆಳ್ಳಿ ಪದಕ ಗೆದ್ದರೆ, ಸೌರವ್ ಕುಮಾರ್ ರಂಜನ್ 260.058 ಕಿ.ಮೀ ಕ್ರಮಿಸುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.

ಒಟ್ಟಾರೆಯಾಗಿ ಭಾರತದ ಪುರುಷರ ತಂಡವು 815.833 ಕಿ.ಮೀ ಕ್ರಮಿಸುವ ಮೂಲಕ ಚಿನ್ನದ ಪದಕವನ್ನು ಗೆದ್ದುಕೊಂಡಿದೆ. ಇದು ಐಎಯು ಚಾಂಪಿಯನ್‌ಶಿಪ್‌ನಲ್ಲಿ ಏಷ್ಯಾದ ದೇಶವೊಂದು ಮಾಡಿರುವ ಅತಿ ದೊಡ್ಡ ದಾಖಲೆಯಾಗಿದೆ. ಈ ಸ್ಪರ್ಧೆಯಲ್ಲಿ ಜಪಾನ್ ಬೆಳ್ಳಿ ಹಾಗೂ ಆಸ್ಟ್ರೇಲಿಯಾ ಕಂಚಿನ ಪದಕ ಪಡೆದಿವೆ.

ಮಹಿಳೆಯರ ವಿಭಾಗದಲ್ಲೂ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿದೆ. ಒಟ್ಟು 667.722 ಕಿ.ಮೀ ದೂರವನ್ನು ಕ್ರಮಿಸುವ ಮೂಲಕ ಭಾರತೀಯ ಮಹಿಳಾ ತಂಡವು ಕಂಚಿನ ಪದಕ ತನ್ನದಾಗಿಸಿಕೊಂಡಿದೆ. ಈ ವಿಭಾಗದಲ್ಲಿ ಜಪಾನ್ ಚಿನ್ನ ಹಾಗೂ ಆಸ್ಟ್ರೇಲಿಯಾ ಬೆಳ್ಳಿ ಗೆದ್ದುಕೊಂಡಿವೆ.

ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಭಾರತದ ತೇಂಜಿನ್ ಡೋಲ್ಮಾ 228.939 ಕಿ.ಮೀ ದೂರವನ್ನು ಕ್ರಮಿಸಿ ಒಟ್ಟಾರೆ 4ನೇ ಸ್ಥಾನ ಪಡೆದಿದ್ದು, ಹೊಸ ರಾಷ್ಟ್ರೀಯ ದಾಖಲೆಯೊಂದಿಗೆ ಮಹಿಳಾ ತಂಡವನ್ನು ಮುನ್ನಡೆಸಿದ್ದಾರೆ.

ಪುರುಷರ ಮತ್ತು ಮಹಿಳೆಯರ 12 ಗಂಟೆ ಹಾಗೂ 24ಗಂಟೆಗಳ ಎರಡೂ ವಿಭಾಗಗಳಲ್ಲಿ ಭಾರತ ಹೊಸ ರಾಷ್ಟ್ರೀಯ ದಾಖಲೆಗಳನ್ನು ನಿರ್ಮಿಸಿದೆ. ಸ್ಪರ್ಧೆಯಲ್ಲಿದ್ದ 11 ಅಥ್ಲೀಟ್‌ಗಳ ಪೈಕಿ 8 ಮಂದಿ ತಮ್ಮ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದಾರೆ.

ಚಿನ್ನದ ಪದಕ ವಿಜೇತ ಅಮರ್ ಸಿಂಗ್ ದೇವಂಡ ಕೇವಲ 3 ಕಿ.ಮೀ ಅಂತರದಿಂದ ಏಷ್ಯನ್ ದಾಖಲೆಯನ್ನು ತಪ್ಪಿಸಿಕೊಂಡಿದ್ದಾರೆ. ಆದರೂ, ಅವರ 282.881 ಕಿ.ಮೀ ಪ್ರದರ್ಶನವು 2026 ರಲ್ಲಿ ಜಗತ್ತಿನ ಅತ್ಯುತ್ತಮ ಪುರುಷರ 24ಗಂಟೆಗಳ ಫಲಿತಾಂಶವಾಗಿ ಹೊರಹೊಮ್ಮಿದೆ. ಈ ಗೆಲುವಿನೊಂದಿಗೆ ಭಾರತವು 2022, 2024 ಮತ್ತು 2026 ರ ಮೂರು ಸತತ ಆವೃತ್ತಿಗಳಲ್ಲಿ 24ಗಂಟೆಗಳ ಅಲ್ಟ್ರಾಮ್ಯಾರಥಾನ್ ಓಟದಲ್ಲಿ ಏಷ್ಯಾ-ಓಷಿಯಾನಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಕ್ರೀಡಾಪಟುಗಳು, ತರಬೇತುದಾರರು, ಫಿಸಿಯೋಥೆರಪಿಸ್ಟ್‌ಗಳು ಮತ್ತು ಪೌಷ್ಟಿಕಾಂಶ ತಜ್ಞರ ಸಂಘಟಿತ ಪ್ರಯತ್ನದಿಂದ ಈ ಯಶಸ್ಸು ಸಾಧ್ಯವಾಗಿದೆ ಎಂದು ತಂಡದ ಮುಖ್ಯ ಕೋಚ್ ಮತ್ತು ಮ್ಯಾನೇಜರ್ ಸಂತೋಷ್ ಪದ್ಮನಾಭನ್ ಹರ್ಷ ವ್ಯಕ್ತಪಡಿಸಿದ್ದಾರೆ. "ಈ ಐತಿಹಾಸಿಕ ಕ್ಷಣಕ್ಕಾಗಿ ನಾವು ಕೃತಜ್ಞರಾಗಿದ್ದೇವೆ. ಈ ಗೆಲುವು ಕ್ರೀಡಾಪಟುಗಳಿಗೆ ಮಾತ್ರವಲ್ಲ, ಭಾರತೀಯ ಅಲ್ಟ್ರಾ-ರನ್ನಿಂಗ್ ಅನ್ನು ನಂಬಿದ ಪ್ರತಿಯೊಬ್ಬ ಬೆಂಬಲಿಗರಿಗೂ ಸಲ್ಲುತ್ತದೆ" ಎಂದು ಅವರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+