ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ಸಿಗರೇ ನಮಗೆ ಔತಣ ಕೂಟ ಏರ್ಪಡಿಸಿದ್ದು: ಜೆಡಿಎಸ್ ನಾಯಕ

|
Google Oneindia Kannada News

ಬೆಂಗಳೂರು, ಮೇ 02: "ಕಾಂಗ್ರೆಸ್ಸಿನಲ್ಲೇ ಗೊಂದಲವಿದೆ. ನಮ್ಮನ್ನು ಊಟಕ್ಕೆ ಕರೆಯುವವರೂ ಅವರೇ, ಮರುದಿನ ಬಿಜೆಪಿಯ ಬಿ ಟೀಂ ಎನ್ನುವವರೂ ಅವರೇ" ಎನ್ನುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ ಜೆಡಿಎಸ್ ನಾಯಕ ಡ್ಯಾನಿಶ್ ಅಲಿ.

ಬಿಜೆಪಿ ಜೆಡಿಎಸ್ ಭಾಯಿ-ಭಾಯಿ: ಶುರುವಾಯ್ತು ಟ್ವಿಟ್ಟರ್ ಲಡಾಯಿ!ಬಿಜೆಪಿ ಜೆಡಿಎಸ್ ಭಾಯಿ-ಭಾಯಿ: ಶುರುವಾಯ್ತು ಟ್ವಿಟ್ಟರ್ ಲಡಾಯಿ!

ಕರ್ನಾಟಕದಲ್ಲಿ ಮೇ 12 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ನಿಮಿತ್ತ ಪ್ರಚಾರ ಕಾರ್ಯ ನಡೆಸುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜೆಡಿಎಸ್ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದರು.

"ಜೆಡಿಎಸ್ ಬಿಜೆಪಿಯ 'ಬಿ' ಟೀಮ್" ಎಂದು ಅವರು ಅಣುಕಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಡ್ಯಾನಿಶ್ ಅಲಿ, ನಮ್ಮನ್ನು ವಿಪಕ್ಷಗಳ ಔತಣ ಕೂಟಕ್ಕೆ ಕರೆದಿದ್ದು ಕಾಂಗ್ರೆಸ್ಸಿಗರು. ನಾವು ಅದರಲ್ಲಿ ಭಾಗಿಯಾಗಿದ್ದೆವು. ನಂತರ ರಾಹುಲ್ ಗಾಂಧಿಯವರೇ ನಮ್ಮ ಮೇಲೆ ದಾಳಿ ನಡೆಸುತ್ತಿದ್ದಾರೆ. ನೀವು ನಮಗಾಗಿ ಔತಣ ಕೂಟ ಏರ್ಪಡಿಸುತ್ತೀರಿ. ಮರುದಿನವೇ 'ನಾವು ಬಿಜೆಪಿಯ ಬಿ ಟೀಂ' ಎನ್ನುತ್ತೀರಿ" ಎಂದು ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮೇಲೆ ಹರಿಹಾಯ್ದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರನ್ನು ಹೊಗಳಿದ್ದನ್ನೂ ಕಾಂಗ್ರೆಸ್ಸು ಟೀಕಿಸುತ್ತಿದ್ದು, ಡ್ಯಾನಿಶ್ ಮಾತು ಕಾಂಗ್ರೆಸ್ಸಿಗರಿಗೆ ಮುಖಭಂಗವನ್ನುಂಟುಮಾಡಿದೆ.

English summary
Karnataka assembly elections 2018: There is a contradiction inside the Congress party. They invited us for the opposition dinner, we participated in it & the next day Rahul Gandhi goes & attacks us. You host dinner for us & next day you say that JD(S) is the B team of BJP says JDS leader Danish Ali.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X