ಅಪ್ಪ ಕೆಲಸ ಮಾಡಿದ್ರೆ ಸಪೋರ್ಟ್ ಮಾಡುವುದು ತಪ್ಪಾ? ಡಿ ಕೆ ಶಿವಕುಮಾರ್ ಪುತ್ರ ಹೇಳಿದ್ದೇನು?

ರಾಮನಗರ,ಮೇ 10: ನನಗೆ 18 ವರ್ಷ ತುಂಬಿರಲಿಲ್ಲ ಇದೀಗ 18 ವರ್ಷ ತುಂಬಿದೆ. ಮೊದಲ ಬಾರಿಗೆ ಮತ ಹಾಕಿದ್ದೇನೆ, ಅಪ್ಪ ಕೆಲಸ ಮಾಡಿದ್ರೆ ಸಪೋರ್ಟ್ ಮಾಡುವುದು ತಪ್ಪಾ?ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಪುತ್ರ ಆಕಾಶ್‌ ಕೆಂಪೇಗೌಡ ಪ್ರಶ್ನಿಸಿದ್ದಾರೆ.

ಕನಕಪುರದಲ್ಲಿ ಮತಚಲಾಯಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಫಸ್ಟ್ ಟೈಮ್ ಮತ ಚಲಾಯಿಸಿದ್ದೇನೆ, ನಾನು ನಮ್ಮಪ್ಪನಿಗೆ ಸಪೋರ್ಟ್ ಮಾಡುತ್ತಿದ್ದೇನೆ, ಅಪ್ಪ ಒಳ್ಳೆಯ ಕೆಲಸ ಮಾಡಿದ್ದಾರೆ. ಕನಕಪುರದ ಜನರ ಆಶೀರ್ವಾದ ಅಪ್ಪ ಮತ್ತು ಚಿಕ್ಕಪ್ಪನ ಮೇಲೆ ಇರುತ್ತೆ, ರಾಜ್ಯದ ಜನ ನಂಬಿಕೆ ಇಟ್ಟಿದ್ದಾರೆ ಈ ಬಾರಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತೆ ಅಂತ ಈ ರಾಜ್ಯದ ಜನ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಅಂತ ಇಷ್ಟ ಪಡ್ತಾ ಇದ್ದಾರೆ ಎಂದು ಹೇಳಿದರು.

Congress will come to power DK Shivakumar son Akash said

ಕನಕಪುರದಲ್ಲಿ ಪ್ರಚಾರ ಮಾಡಿದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಅಪ್ಪ ಕೆಲಸ ಮಾಡುತ್ತಿದ್ದಾರೆ ಸಪೋರ್ಟ್ ಮಾಡುವುದು ತಪ್ಪಾ? ಇಲ್ಲಿವರೆಗೂ ನನಗೆ 18 ವರ್ಷ ತುಂಬಿರಲಿಲ್ಲ ಇದೀಗ 18 ವರ್ಷ ತುಂಬಿದೆ ಹಾಗಾಗಿ ಪ್ರಚಾರ ಮಾಡಿದ್ದೇನೆ ಅಪ್ಪ ಗೆಲ್ಲಬೇಕು ಅಂತ ಅಮ್ಮನಿ ಸಾಥ್‌ ನೀಡಿದ್ದೇನೆ ಎಂದು ಹೇಳಿದರು.

ಎಲ್ಲರೂ ಬಂದು ಮತ ಹಾಕಿ. ಮತದಾನ ಪ್ರಮಾಣ ತುಂಬಾ ಕಡಿಮೆಯಾಗಿದೆ ನಾವು ಮತ ಹಾಕುವುದರಿಂದ ಕ್ಷೇತ್ರದಲ್ಲಿ ಬದಲಾವಣೆ ತರಬಹುದು, ನಾವು ಮತ ಹಾಕಿದ್ರೆ ಕ್ಷೇತ್ರದ ಶಾಸಕರನ್ನು ಪ್ರಶ್ನೆ ಮಾಡಬಹುದು. ಆ ಪ್ರಶ್ನೆ ಮಾಡುವ ಹಕ್ಕಿಗಾದರೂ ನಾವು ಮತ ಹಾಕಬೇಕು ಎಂದು ಹೇಳಿದ ಅವರು, ಈ ಬಾರೀ ಹಸ್ತ ಅಧಿಕಾರಕ್ಕೆ ಬರುತ್ತೆ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಈ ಗ್ಯಾರಂಟಿಗಳನ್ನ ಜಾರಿಗೆ ತರುತ್ತೇವೆ ಅಂತ ನಮ್ಮಪ್ಪ ಹೇಳಿದ್ದಾರೆ. ವಿದ್ಯಾಭ್ಯಾಸ ಕೊಟ್ರೆ ಹಳ್ಳಿ ಭಾಗದಲ್ಲೂ ಸಹ ಮಕ್ಕಳು ವಿದ್ಯಾವಂತರಾಗ್ತಾರೆ, ಕರ್ನಾಟಕದ ಜನತೆ ನಮ್ಮಪ್ಪನ ಮೇಲೆ ನಂಬಿಕೆ ಇಟ್ಟಿದ್ದಾರೆ ಹಸ್ತವನ್ನು ಅಧಿಕಾರಕ್ಕೆ ತರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಗರ ಪ್ರದೇಶದಲ್ಲಿ ಸಿಗುವ ಶಿಕ್ಷಣ ಗ್ರಾಮೀಣ ಪ್ರದೇಶದಲ್ಲೂ ಸಿಗಬೇಕು, ಹೀಗಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ. ಸರ್ಕಾರ ಶಕ್ತಿ ಕೊಡುವುದರಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೂ ಸಹ ಅನುಕೂಲಕರವಾಗುತ್ತೆ. ಬಡ ಮಕ್ಕಳ ವಿದ್ಯಾಭ್ಯಾಸದ ಶಕ್ತಿಗಾಗಿ ನಮ್ಮಪ್ಪ, ಸಿದ್ದರಾಮಯ್ಯ ಅವರು ಗ್ಯಾರಂಟಿ ಕೊಡುತ್ತಿದ್ದಾರೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+