TV9 C-Voter Pre Poll Survey: ಕರಾವಳಿ ಮತದಾರರ ಒಲವು ಯಾವ ಪಕ್ಷದತ್ತ? ಸಿ-ವೋಟರ್ ಸಮೀಕ್ಷೆ ಹೇಳಿದ್ದೇನು?
ಬೆಂಗಳೂರು, ಏಪ್ರಿಲ್ 25: ಕರ್ನಾಟಕ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಯಾಗಿದೆ. ಕರ್ನಾಟಕದಲ್ಲಿ ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಜನರ ಒಲವು ಯಾವ ಪಕ್ಷದ ಮೇಲಿದೆ ಎನ್ನುದರ ಬಗ್ಗೆ ಟಿವಿ 9 ಮತ್ತು ಸಿ ವೋಟರ್ ಈ ಕುರಿತು ಸಮೀಕ್ಷೆ ನಡೆಸಿದೆ.
ಕಳೆದ ತಿಂಗಳ ಮಧ್ಯದಲ್ಲಿ ಟಿವಿ 9 ಮತ್ತು ಸಿ-ವೋಟರ್ ಈ ಸಮೀಕ್ಷೆಯನ್ನು ನಡೆಸಿದ್ದು, ಆ ಬಳಿಕ ರಾಜ್ಯ ರಾಜಕೀಯದಲ್ಲಿ ಹಲವು ಬದಲಾವಣೆಯಾಗಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿ ಈ ಸಮೀಕ್ಷೆ ನಡೆಸಲಾಗಿದ್ದು, ಮತದಾರರ ಬಳಿ ಒಟ್ಟು ಹನ್ನೆರಡು ಪ್ರಶ್ನೆಗಳನ್ನು ಕೇಳಲಾಗಿದೆ. ಈ ಸಮೀಕ್ಷೆಯ ಫಲಿತಾಂಶಗಳು ತುಂಬಾ ಆಸಕ್ತಿದಾಯಕವಾಗಿದೆ.

ಬಿಜೆಪಿ ಭದ್ರಕೋಟೆ ಕರಾವಳಿಯಲ್ಲಿ ಈ ಬಾರಿ ಮತದಾರರ ಒಲವು ಯಾವ ಪಕ್ಷದ ಮೇಲಿದೆ ಎನ್ನುವುದರ ಬಗ್ಗೆ ಟಿವಿ 9 ಮತ್ತು ಸಿ ವೋಟರ್ ಸಮೀಕ್ಷೆ ನಡೆಸಿದ್ದು, ಇದರ ಸಂಪೂರ್ಣ ವಿವರ ಇಲ್ಲಿದೆ. ಕರಾವಳಿ ಭಾಗದ ಜನರಿಗೆ ಕರ್ನಾಟಕ ವಿಧಾನಸಭಾ ಚುನಾವಣೆ 2023 ರಲ್ಲಿ ನಿಮ್ಮ ಮತ ಯಾವ ಪಕ್ಷಕ್ಕೆ ಎನ್ನುವ ಪ್ರಶ್ನೆಯನ್ನು ಕೇಳಲಾಗಿತ್ತು. ಈ ಪ್ರಶ್ನೆಗೆ ಕರಾವಳಿ ಮತದಾರರು ನೀಡಿದ ಉತ್ತರದ ವಿವರ ಹೀಗಿದೆ.
ದಕ್ಷಿಣ ಕನ್ನಡ, ಉಡುಪಿ ಹಾಗೂ ಮಲೆನಾಡಿನ ಕೆಲವು ಪ್ರದೇಶವನ್ನು ಹೊಂದಿರುವ ಕರಾವಳಿ ಭಾಗ ಒಟ್ಟು 21 ಮತ ಕ್ಷೇತ್ರಗಳನ್ನು ಹೊಂದಿದೆ. ಸಮೀಕ್ಷೆಯ ಪ್ರಕಾರ ಈ ಬಾರಿಯೂ ಕರಾವಳಿ ಜನರ ಮಿಡಿತ ಬಿಜೆಪಿ ಪಕ್ಷದತ್ತ ಇದೆ. ಕರಾವಳಿ ಭಾಗದಲ್ಲಿ ಬಿಜೆಪಿಗೆ 50.30% ರಷ್ಟು ಮತ ಸಿಗುವ ಸಾಧ್ಯತೆ ಇದೆ. ಕರಾವಳಿ ಭಾಗದಲ್ಲಿ ಕಾಂಗ್ರೆಸ್‌ಗೆ 35.4%ರಷ್ಟು ಮತ ಸಿಗುವ ಸಾಧ್ಯತೆ ಇದೆ. ಇನ್ನು ಈ ಭಾಗದಲ್ಲಿ ಜೆಡಿಎಸ್ ಪಕ್ಷಕ್ಕೆ 8.3% ಮತ ಸಿಗುವ ಸಾಧ್ಯತೆ ಇದ್ದು, ಇತರ ಪಕ್ಷಗಳಿಗೆ ಒಟ್ಟು 6% ರಷ್ಟುಮತ ಸಿಗುವ ಸಾಧ್ಯತೆ ಇದೆ.
ಇವುಗಳನ್ನು ಸೀಟ್‌ಗಳಾಗಿ ಪರಿರ್ತಿಸಿದಾಗ ಬಿಜೆಪಿ 16-20 ಕ್ಷೇತ್ರಗಳಲ್ಲಿ, ಕಾಂಗ್ರೆಸ್ 1-5 ಕ್ಷೇತ್ರಗಳಲ್ಲಿಗೆಲುವು ಸಾಧಿಸಿದರೆ, ಜೆಡಿಎಸ್ ಈ ಬಾರಿಯೂ ಕರಾವಳಿಯಲ್ಲಿ ಖಾತೆ ಸಾಧ್ಯತೆ ಇಲ್ಲ. ಇನ್ನು ಇತರೆ ಪಕ್ಷೇತರ ಅಭ್ಯರ್ಥಿಗಳಲ್ಲಿ ಒಬ್ಬ ಅಭ್ಯರ್ಥಿ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂದು ಟಿವಿ 9 ಮತ್ತು ಸಿ ವೋಟರ್ ಈ ಸಮೀಕ್ಷೆ ತಿಳಿಸಿದೆ.












Click it and Unblock the Notifications