ಸೋತರೂ ಬಿಜೆಪಿಗಿಂತ ಹೆಚ್ಚು ಮತ ಪಡೆದ ಕಾಂಗ್ರೆಸ್!

ಬೆಂಗಳೂರು, ಮೇ 15: ಕರ್ನಾಟಕದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಗೆಲುವು ಸಾಧಿಸಿದೆ. ಆದರೆ ವಿಚಿತ್ರವೆಂದರೆ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಪಡೆದರೂ ಮತಗಳನ್ನು ಮಾತ್ರ ಕಡಿಮೆ ಪಡೆದಿದೆ.

ಬಿಜೆಪಿ ಒಟ್ಟು 104 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ 78, ಜೆಡಿಎಸ್ ಮತ್ತು ಬಿಎಸ್ಪಿ 38 ಹಾಗೂ ಇತರರು 2 ಸ್ಥಾನಗಳಲ್ಲಿ ಗೆದ್ದಿದ್ದಾರೆ.

ಬಿಜೆಪಿಗಿಂತ 26 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದೆ. ಆದರೆ ಪಡೆದ ಮತಗಳ ವಿಚಾರಕ್ಕೆ ಬಂದಾಗ ಮಾತ್ರ ಕಾಂಗ್ರೆಸಿಗಿಂಗ ಕಡಿಮೆ ಮತಗಳನ್ನು ಪಡೆದುಕೊಂಡಿದೆ.

Karnataka Election Results 2018: Despite the loss, Congress gets more votes than BJP!

ಕಾಂಗ್ರೆಸ್ ಒಟ್ಟು 1.37 ಕೋಟಿ ಮತಗಳನ್ನು ಪಡೆದು, ಚಲಾವಣೆಯಾದ ಮತಗಳಲ್ಲಿ ಶೇಕಡಾ 38 ಮತಗಳನ್ನು ಬಾಚಿಕೊಂಡಿದೆ.

ಬಿಜೆಪಿ 1.31 ಕೋಟಿ ಮತಗಳನ್ನು ಪಡೆದುಕೊಂಡು ಒಟ್ಟು ಚಲಾವಣೆಯಾದ ಮತಗಳಲ್ಲಿ ಶೇಕಡಾ 36.2 ಮತಗಳನ್ನು ಪಡೆದುಕೊಂಡಿದೆ.

ಜೆಡಿಎಸ್ ಕೇವಲ 66.46 ಲಕ್ಷ ಮತಗಳನ್ನು ಪಡೆದಿದೆ. ಈ ಮೂಲಕ ಶೇಕಡಾ 18.4 ಮತಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ.

ವಿಚಿತ್ರವೆಂದರೆ ಅತೀ ಹೆಚ್ಚು ಮತಗಳನ್ನು ಪಡೆದು ಕಾಂಗ್ರೆಸ್ ಎರಡನೇ ಹೆಚ್ಚಿನ ಸೀಟುಗಳನ್ನು ಪಡೆದು ಕಾಂಗ್ರೆಸ್ ಇದೀಗ ಮುಖ್ಯಮಂತ್ರಿ ಹುದ್ದೆಯನ್ನು ಜೆಡಿಎಸ್ ಗೆ ಬಿಟ್ಟು ಕೊಡುತ್ತಿದೆ. ಇನ್ನೂ ಅಚ್ಚರಿಯ ಸಂಗತಿ ಎಂದರೆ ಬಿಜೆಪಿ ಮತ್ತು ಕಾಂಗ್ರೆಸಿನ ಅರ್ಧದಷ್ಟು ಮತಗಳನ್ನು ಪಡೆದುಕೊಂಡ ಜೆಡಿಎಸ್ ಗೆ ಸಿಎಂ ಹುದ್ದೆ ಅನಾಯಾಸವಾಗಿ ಒಲಿದು ಬಂದಿದೆ.

ಇನ್ನು ಉಳಿದವರ ವಿಚಾರಕ್ಕೆ ಬರುವುದಾದರೆ, ನೋಟಾ ಶೇಕಡಾ 0.9 ಮತ (3.09 ಲಕ್ಷ), ಸ್ವತಂತ್ರರು ಶೇ. 4 (14.35 ಲಕ್ಷ), ಬಿಎಸ್ಪಿ ಶೇ. 03 (1.08 ಲಕ್ಷ), ಎಂಇಪಿ ಶೇ. 0.3 (97 ಸಾವಿರ), ಬಿಪಿಜೆಪಿ ಶೇ. 02 (83 ಸಾವಿರ) ಸಿಪಿಎಂ ಶೇ. 0.2 (81 ಸಾವಿರ), ಸ್ವರಾಜ್ ಇಂಡಿಯಾ ಶೇ. 0.2 (79 ಸಾವಿರ), ಕೆಪಿಜೆಪಿ ಶೇ. 0.2 (74 ಸಾವಿರ) ಮತಗಳನ್ನು ಪಡೆದುಕೊಂಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+