Karnataka Election 2023 LIVE: ವಿಷಕಂಠ ನಂಜುಂಡೇಶ್ವರನಿಗೆ ಕೈಮುಗಿದು ದೆಹಲಿಗೆ ಹೊರಟ ಮೋದಿ

ಕರ್ನಾಟಕ ವಿಧಾನಸಭಾ ಚುನಾವಣೆ 2023 ಲೈವ್ ಸುದ್ದಿ:ಕರ್ನಾಟಕ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರ ತೆರೆ ಬೀಳಲು ಇನ್ನು ಒಂದು ದಿನವಷ್ಟೇ ಬಾಕಿ ಉಳಿದಿದೆ. ಎರಡು ದಿನಗಳ ಸತತ ಸಮಾವೇಶ, ರೋಡ್ ಶೋ ನಂತರ, ನಂಜನಗೂಡಿನಲ್ಲಿ ಸಾರ್ವಜನಿಕ ಸಭೆಯನ್ನು ಮೋದಿ ನಡೆಸಿದ್ದಾರೆ. ಇದಾದ ನಂತರ, ದಕ್ಷಿಣ ಕಾಶಿ ನಂಜುಂಡೇಶ್ವರ ಸನ್ನಿಧಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಧಾನಿ ನರೇಂದ್ರ ಮೋದಿ, ಮೈಸೂರಿನ ಮಂಡಕ್ಕಳ್ಳಿ ವಿಮಾನ ನಿಲ್ದಾಣದ ಮೂಲಕ ದೆಹಲಿಗೆ ವಾಪಸ್ ಹೊರಟಿದ್ದಾರೆ.

ಈ ಬಾರಿಯ ನಿರ್ಧಾರ ಬಿಜೆಪಿಯ ಬಹುಮತದ ಸರ್ಕಾರ ಎಂದ ಪ್ರಧಾನಿ ಮೋದಿ ಅವರು, ಕರ್ನಾಟಕಕ್ಕೆ ಎಲ್ಲಿಯೇ ಹೋದರು ಹೆಚ್ಚಿನ ಪ್ರೀತಿ ಸಿಗುತ್ತಿದೆ. ಇಷ್ಟೊಂದು ಜನರನ್ನ ನೋಡಿ ನನಗೆ ಸಂತೋಷವಾಗುತ್ತಿದೆ. ಇನ್ನೂ ಕಾಂಗ್ರೆಸ್‌ ನವರು ಸುಳ್ಳಿನ ಭರವಸೆಯನ್ನ ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದ ಚುನಾವಣೆ ನಡೆಯಲಿದ್ದು, ಮೇ 8ರಂದು ಬಹಿರಂಗ ಪ್ರಚಾರಕ್ಕೆ ಅಂತಿಮ ದಿನವಾಗಿದೆ. ಇನ್ನು ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಶನಿವಾರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಮೇ 15 ರೊಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.

Karnataka Election 2023 LIVE News Updates Today On PM Modis 6.5 Km Mega Road Show in Bengaluru Highlights in Kannada

'ಒನ್ ಇಂಡಿಯಾ ಕನ್ನಡ' ಜಾಲತಾಣ ಓದುಗರಿಗೆ ಚುನಾವಣಾ ಬೆಳವಣಿಗೆಯ ಮಾಹಿತಿಯನ್ನು ಲೈವ್ ಬ್ಲಾಗ್ ಮೂಲಕ ನೀಡಲಿದೆ. ನೀವು ಇಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ನಾಯಕರ ಪ್ರಚಾರ, ಭರವಸೆ, ಸಾರ್ವಜನಿಕ ಸಭೆಗಳು, ಹೇಳಿಕೆಗಳು, ಚರ್ಚೆಗಳು, ಪ್ರಚಾರದ ಸದ್ದು-ಗದ್ದಲಗಳ ಕ್ಷಣ ಕ್ಷಣದ ಮಾಹಿತಿ ತಿಳಿದುಕೊಳ್ಳಬಹುದು

May 07, 2023, 10:20 pm IST

South First pre-poll survey: ಸೌತ್ ಫಸ್ಟ್‌ನ ಮೂರು ಸಮೀಕ್ಷೆಗಳಲ್ಲಿಯೂ ಸಿಎಂ ಆಗಿ ಸಿದ್ದರಾಮಯ್ಯಗೆ ಅಗ್ರಸ್ಥಾನ!

ಕರ್ನಾಟಕ ವಿಧಾನಸಭಾ ಚುನಾವಣೆಗೆ ಮೇ 10 ರಂದು ಮತದಾನವು ನಡೆಯಲಿದೆ ಈ ಹಿನ್ನೆಲೆ ಪಕ್ಷಗಳು ಕೊನೆಯ ಹಂತದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿವೆ. ಇದರ ಬೆನ್ನಲ್ಲೆ ಮೇ 1 ಮತ್ತು 5 ರ ನಡುವೆ ಸೌತ್ ಫಸ್ಟ್-ಪೀಪಲ್ಸ್ ಪಲ್ಸ್ ಅಂತಿಮ ಚುನಾವಣಾ ಪೂರ್ವ ಸಮೀಕ್ಷೆಯನ್ನು ನಡೆಸಿದ್ದು, ಅದರಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಸಿಎಂ ಅಭ್ಯರ್ಥಿಗಳಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.
May 07, 2023, 10:18 pm IST

ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಮತ್ತೆ ನಟ ದರ್ಶನ್ ಹವಾ!

ಬೆಂಗಳೂರು: ವಾರದ ಹಿಂದಷ್ಟೇ ಶಾಸಕ ಸತೀಶ್ ರೆಡ್ಡಿ ಪರ ಭರ್ಜರಿ ಪ್ರಚಾರ ನಡೆಸಿದ್ದ ನಟ ದರ್ಶನ್ ಇಂದು ಮತ್ತೊಮ್ಮೆ ಕ್ಯಾಂಪೇನ್ ಮಾಡಿದ್ದಾರೆ. ಬೊಮ್ಮನಹಳ್ಳಿ ಕ್ಷೇತ್ರದ ವಿವಿಧ ಪ್ರದೇಶಗಳಲ್ಲಿ ನಟ ದರ್ಶನ್ ಸತೀಶ್ ರೆಡ್ಡಿ ಪರ ಮತಯಾಚನೆ ಮಾಡಿ, ರೋಡ್ ಶೋ ನಡೆಸಿದ್ರು. ನಟ ದರ್ಶನ್ ಎಂಟ್ರಿ ಸುದ್ದಿ ತಿಳಿಯುತ್ತಿದ್ದಂತೆ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು.
May 07, 2023, 8:10 pm IST

ರಾಹುಲ್ ಗಾಂಧಿ ಸಂವಾದ

ರಾಹುಲ್ ಗಾಂಧಿ ಸಂವಾದ
ಬೆಂಗಳೂರಿನ ಐಕಾನಿಕ್ ಏರ್‌ಲೈನ್ಸ್ ಹೋಟೆಲ್‌ನಲ್ಲಿ ಅಸಂಘಟಿತ ಡೆಲಿವರಿ ಕಾರ್ಮಿಕರು ಮತ್ತು ಡಂಜೊ, ಸ್ವಿಗ್ಗಿ, ಜೊಮಾಟೊ, ಬ್ಲಿಂಕಿಟ್ ಡೆಲಿವರಿ‌ ಕೆಲಸಗಾರರೊಂದಿಗೆ ರಾಹುಲ್ ಗಾಂಧಿ ಸಂವಾದ.
May 07, 2023, 7:55 pm IST

ಬೆಂಗಳೂರಿನಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರಿಂದ ಸಾರ್ವಜನಿಕರ ಜೊತೆ ಸಂವಾದ
May 07, 2023, 7:31 pm IST

ನಂಜುಂಡೇಶ್ವರನ ಸನ್ನಿಧಿಯಲ್ಲಿ ಪಿಎಂ ಮೋದಿ

ಕೊನೆಯ ಹಂತದ ಚುನಾವಣಾ ಪ್ರಚಾರವನ್ನು ನಡೆಸಿದ ಪ್ರಧಾನಿ ಮೋದಿ, ನಂಜನಗೂಡಿನಲ್ಲಿರುವ ಪುರಾಣ ಪ್ರಸಿದ್ದ ನಂಜುಂಡೇಶ್ವರನ ಸನ್ನಿಧಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮೋದಿ ಹೆಸರಿನಲ್ಲಿ ವಿಶೇಷ ಪ್ರಾರ್ಥನೆಯನ್ನು ಅರ್ಚಕರು ಸಲ್ಲಿಸಿದ್ದಾರೆ. ದೇವಾಲಯದಲ್ಲಿ ಕೆಲಹೊತ್ತು ಧ್ಯಾನ ನಡೆಸಿದ ಮೋದಿ.
May 07, 2023, 5:14 pm IST

ಸೋಮವಾರ ಬಹಿರಂಗ ಪ್ರಚಾರಕ್ಕೆ ತೆರೆ

ಸೋಮವಾರ ಸಂಜೆ 5 ಗಂಟೆಗೆ ಬಹಿರಂಗ ಚುನಾವಣಾ ಪ್ರಚಾರಕ್ಕೆ ತೆರೆ ಬೀಳಲಿದ್ದು, ಮನೆ ಮನೆ ಪ್ರಚಾರಕ್ಕೆ ಅವಕಾಶ ನೀಡಲಾಗಿದೆ. ಈ ಸಮಯದಲ್ಲಿ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಬಿಟ್ಟು ಉಳಿದ ವ್ಯಕ್ತಿಗಳಿಗೆ ಹೊರಹೋಗಲು ಸೂಚನೆ ನೀಡಲಾಗಿದೆ. ಸೋಮವಾರ ಸಂಜೆ 5 ರಿಂದ ಮೇ 10 ರಂದು ಮಧ್ಯರಾತ್ರಿವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಮೇ 13ರಂದು ಮತ ಎಣಿಕೆ ದಿನವೂ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12ರವರೆಗೂ ಮದ್ಯ ಮಾರಾಟ ಇರುವುದಿಲ್ಲ.
May 07, 2023, 3:39 pm IST

ಅಡಿಕೆ‌ ಆಮದು ನೀತಿಯಲ್ಲಿ ಕಾಂಗ್ರೆಸ್​ಗೂ ಬಿಜೆಪಿಗೂ ಅಂತರವಿದೆ. ಅಡಿಕೆ ಬೆಳೆಗಾರರಿಗೆ ಸಂಕಷ್ಟ ಎದುರಾಗಿದ್ದಾಗ, ವಿದೇಶದಿಂದ ಅಡಿಕೆ ಆಮದು ಮಾಡಿದರೆ ಇಲ್ಲಿನ ರೈತರಿಗೆ ಅನ್ಯಾಯವಾಗಲಿದೆ ಯಡಿಯೂರಪ್ಪ ಹೇಳಿದ್ದರು. ನಾನು ದೆಹಲಿಗೆ ಹೋದ ಬಳಿಕ ಅಡಿಕೆ ನೀತಿಯಲ್ಲಿ ಬದಲಾವಣೆ ಮಾಡಿ ಅಡಿಕೆ ಆಮದು ಸುಂಕ ಹೆಚ್ಚಿಸಿದ್ದೇವೆ. ಇದರಿಂದ ಕರ್ನಾಟಕದ ರೈತರಿಗೆ ಅನುಕೂಲವಾಗಿದೆ ಎಂದು ಶಿವಮೊಗ್ಗದ ಪ್ರಚಾರ ಸಮಾವೇಶದಲ್ಲಿ ನರೇಂದ್ರ ಮೋದಿ ತಿಳಿಸಿದರು.
May 07, 2023, 2:51 pm IST

ಶಿವಮೊಗ್ಗದಲ್ಲಿ ಪಿಎಂ ಮೋದಿ

ಶಿವಮೊಗ್ಗ ಗ್ರಾಮಾಂತರ ಆಯನೂರಿನಲ್ಲಿ ಬಿಜೆಪಿ ಬೃಹತ್ ಚುನಾವಣಾ ಸಮಾವೇಶ. ಜೈ ಬಜರಂಗ ಬಲಿ, ಸಿಗಂಧೂರು ಚೌಡೇಶ್ವರಿಯ ಪಾದಕ್ಕೆ ನನ್ನ ನಮನ, ಭೋಲೋ ಭಾರತ್ ಮಾತಾಕೀ ಜೈ ಎಂದು ಭಾಷಣ ಆರಂಭಿಸಿದ ಪ್ರಧಾನಿ ಮೋದಿ. ಚುಟುಕು ತಮ್ಮ ಭಾಷಣದಲ್ಲಿ ಬಜರಂಗ ಬಲಿಯ ಸುದ್ದಿಗೆ ಹೋಗದ ಯಡಿಯೂರಪ್ಪ.
May 07, 2023, 2:30 pm IST

ಬಜರಂಗದಳದ ನೈತಿಕ ಪೊಲೀಸ್ ಗಿರಿ

ಬಜರಂಗದಳದ ನೈತಿಕ ಪೊಲೀಸ್ ಗಿರಿ
ಬಜರಂಗದಳದ ನೈತಿಕ ಪೊಲೀಸ್ ಗಿರಿ ಹಾಗೂ ಪಿಎಫ್ಐ ನಡುವೆ ಹೋಲಿಕೆ ಬೇಡ. ಐಪಿಸಿ ಸೆಕ್ಷನ್ ಹಾಗೂ ಯುಎಪಿಎ ಕಾಯ್ದೆಯಡಿ ಎರಡೂ ಸಂಪೂರ್ಣ ಪ್ರತ್ಯೇಕ. ಆದ್ದರಿಂದ ದೇಶ ವಿರೋಧಿ ಕೃತ್ಯದಲ್ಲಿ ತೊಡಗಿಸಿಕೊಂಡು ಅಮಾಯಕರನ್ನು ಹತ್ಯೆ ಮಾಡುವ ಪಿಎಫ್ಐನೊಂದಿಗೆ ಬಜರಂಗದಳದ ಹೋಲಿಕೆ ಸರಿಯಲ್ಲ ಎಂಬುದು ನಮ್ಮ ನಮ್ರ ವಿನಂತಿ, ಮಂಗಳೂರಿನಲ್ಲಿ ಅಸ್ಸಾಂ ಸಿಎಂ ಹಿಮಾಂತ್ ಬಿಸ್ವಾಸ್ ಶರ್ಮ.
May 07, 2023, 2:22 pm IST

'ಒಡೆದ ಮೊಸರು ಯಾವತ್ತು ಸರಿಯಾಗಲ್ಲ' ಸಿದ್ದುಗೆ ಸೋಮಣ್ಣ ಟಾಂಗ್

ಲಿಂಗಾಯತರಿಗೆ ಸಿದ್ದರಾಮಯ್ಯ ಕ್ಷಮೆ‌ ಕೇಳಿದ ವಿಚಾರವಾಗಿ ಮಾತನಾಡಿದ ವಿ ಸೋಮಣ್ಣ, 'ಒಡೆದ ಮೊಸರು ಯಾವತ್ತು ಸರಿಯಾಗುವುದಿಲ್ಲ. ಸದ್ಯ ಸಿದ್ದರಾಮಯ್ಯ ಅವರಿಗೆ ಚುನಾವಣೆ ವೇಳೆ ಅರಿವಾಗಿದೆ. ಚುನಾವಣೆಗಾಗಿ ಅವರು ಬದಲಾಗಿದ್ದಾರೆ. ಚುನಾವಣೆ ನಂತರ ಸಿದ್ದರಾಮಯ್ಯ ಮತ್ತೆ ಅದೇ ರೀತಿ ಆಗುತ್ತಾರೆ' ಎಂದು ಮೈಸೂರಿನ ಮಾಧ್ಯಮ ಸಂವಾದದಲ್ಲಿ ಹೇಳಿದರು.
May 07, 2023, 2:21 pm IST

ಬಂಡೆ ಕೋಟೆಗೆ ಎಂಟ್ರಿ ಕೊಟ್ಟ ಸಿಎಂ ಬಸವರಾಜ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಕನಕಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆರ್. ಅಶೋಕ್ ಪರ ಮತಯಾಚನೆ ಮಾಡಿದರು. ಕನಕಪುರದ ಕೆಎಸ್‌​ಆರ್​ಟಿಸಿ ಡಿಪೋದಿಂದ ತಾಲೂಕು ಕಚೇರಿವರೆಗೂ ರೋಡ್​ ಶೋ ನಡೆಸಲಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.
May 07, 2023, 2:06 pm IST

ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್

'ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ಸಿನ ಹಾಗೇ ನಮಗೂ ಆರ್ಥಿಕ ಪರಿಸ್ಥಿತಿ ಇದ್ದಿದ್ದರೆ 140 ಸ್ಥಾನವನ್ನು ಗೆಲ್ಲುತ್ತಿದ್ದೆವು. ಒಮ್ಮೆ ನಮಗೆ ಪೂರ್ಣ ಬಹುಮತ ನೀಡಿ, ನಿಮ್ಮ ಕಷ್ಟ ಸುಖಕ್ಕೆ ಬೇಕಾಗುವ ನಿಜವಾದ ಜನಪ್ರತಿನಿಧಿಗಳು ನಾವಾಗುತ್ತೇವೆ. ಜೆಡಿಎಸ್ ಪಕ್ಷಕ್ಕೆ ಮತ ಹಾಕಿದರೆ ಕರ್ನಾಟಕಕ್ಕೆ ಶಕ್ತಿ ನೀಡಿದ ಹಾಗೆ' ಹೆಬ್ಬೂರಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ
May 07, 2023, 1:52 pm IST

ನನ್ನನ್ನು ಸೋಲಿಸಲು ಇದು ಗುಜರಾತ್‌ ಅಲ್ಲ, ಹುಬ್ಬಳ್ಳಿ: ಜಗದೀಶ್ ಶೆಟ್ಟರ್‌‌

ಇದು ಗುಜರಾತ್‌ನ ಅಹಮದಾಬಾದ್‌ ಅಲ್ಲ, ಹುಬ್ಬಳ್ಳಿ. ಅಲ್ಲಿಯಂತೆ ಆಟ ಆಡಿ ನನ್ನನ್ನು ಇಲ್ಲಿ ಸೋಲಿಸುತ್ತೇವೆ ಎಂಬ ಭಾವನೆ ಬಿಜೆಪಿಗಿದ್ದರೆ ಅದನ್ನು ಮನಸಿನಿಂದ ತೆಗೆದುಬಿಡಿ. ನನ್ನನ್ನು ಸೋಲಿಸಲು ನಿಮ್ಮಿಂದ ಸಾಧ್ಯವಿಲ್ಲ ಎಂದು ಜಗದೀಶ್‌ ಶೆಟ್ಟರ್‌ ಹೇಳಿದರು.
May 07, 2023, 1:44 pm IST

ಶೆಟ್ಟರ್, ಸವದಿ, ಸಿದ್ದರಾಮಯ್ಯ ಸೋಲ್ತಾರೆ ಎಂದ ಅಮಿತ್ ಶಾ

ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಭಾರಿ ಅಂತರದಲ್ಲಿ ಸೋಲ್ತಾರೆ ಎಂದು ಅಮಿತ್ ಶಾ ಭವಿಷ್ಯ ನುಡಿದಿದ್ದಾರೆ. ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದಲ್ಲಿ ಕೂಡ ಬಿಜೆಪಿ ಪರ ಅಲೆ ಇದ್ದು, ವಿ ಸೋಮಣ್ಣ ಗೆಲ್ಲುತ್ತಾರೆ ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ಎಲ್ಲೆಲ್ಲಿ ಪ್ರಚಾರ ಮಾಡಿದ್ದಾರೆ ಅಲ್ಲಿ ಬಿಜೆಪಿ ಗೆದ್ದಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
May 07, 2023, 12:48 pm IST

ಮೇ 13ರಂದು ಬಿಜೆಪಿ ಧರಿಸಿರುವ "ಮೋದಿ ಮುಖವಾಡ" ಹೀಗೆಯೇ ಕಳಚಿ ಬಿದ್ದಿರುತ್ತದೆ!
May 07, 2023, 12:14 pm IST

ಬೆಂಗಳೂರಿನಲ್ಲಿ ಮೋದಿ ರೋಡ್‌ ಶೋ ಮುಕ್ತಾಯ; ಶಿವಮೊಗ್ಗದಲ್ಲಿ ಮೋದಿ ಅಬ್ಬರ

ಬೆಂಗಳೂರು ಭಾಗದಲ್ಲಿ ಈ ಬಾರೀ 20 ಸ್ಥಾನಗಳನ್ನ ಗೆಲ್ಲುವ ಲೆಕ್ಕಾಚಾರವನ್ನ ಹಾಕಿಕೊಂಡಿರುವ ಬಿಜೆಪಿ ನಾಯಕರು ಪ್ರಧಾನಿ ಮೋದಿ ರೋಡ್‌ ಶೋ ಆಯೋಜಿಸಿದ್ದು, ಎರಡು ದಿನಗಳ ಕಾಲ ಪ್ರಧಾನಿ ಮೋದಿ ಭರ್ಜರಿ ರೋಡ್‌ ನಡೆಸಿದ್ದಾರೆ. ಇನ್ನೂ ರೋಡ್‌ ಶೋ ನಡೆಸಿದ ಬಳಿಕ ಮಧ್ಯಾನ್ಹ 1 ಗಂಟೆಗೆ ಮೋದಿ ಶಿವಮೊಗ್ಗಕ್ಕೆ ತೆರಳಲಿದ್ದು, ಶಿವಮೊಗ್ಗ ಜಿಲ್ಲೆಯ ಆಯನೂರಿನಲ್ಲಿ ಬಿಜೆಪಿ ನಾಯಕರು ಆಯೋಜಿಸಿರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
May 07, 2023, 12:00 pm IST

ಉತ್ತರ ಕೊಡಿ ಮೋದಿ ಎಂದ ಸಿದ್ದರಾಮಯ್ಯ

ರಾಜ್ಯ ಸಂಕಷ್ಟದಲ್ಲಿದ್ದಾಗ ಮೋದಿ ಯಾಕೆ ಬರಲಿಲ್ಲ ಎಂದು ಸಿದ್ದರಾಮಯ್ಯ ಸರಣಿ ಪ್ರಶ್ನೆ ಮಾಡಿದ್ದಾರೆ. ಮೇಕೆದಾಟು ಯೋಜನೆಗೆ ಅನುಮತಿ ನೀಡದೆ ಬೆಂಗಳೂರಿಗೆ ಅನ್ಯಾಯ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಬೆಂಗಳೂರು ಮತ್ತು ಕರ್ನಾಟಕದ ಸಮಸ್ಯೆಗಳ ಪಟ್ಟಿಯನ್ನು ಮುಂದಿಟ್ಟು ಉತ್ತರ ಕೊಡಿ ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದ್ದಾರೆ.
May 07, 2023, 10:42 am IST

ಬೆಳವಣಿಗೆ ಸಹಿಸದೆ ಷಡ್ಯಂತ್ರ ಎಂದ ಮಾಡಾಳ್ ವಿರೂಪಾಕ್ಷಪ್ಪ

ನನ್ನ ಬೆಳವಣಿಗೆ ಸಹಿಸದೆ ಕೆಲವರು ಷಡ್ಯಂತ್ರ ಮಾಡಿ ನನ್ನನ್ನು ಆರೋಪಿ ಮಾಡಿದರು ಎಂದು ಮಾಡಾಳ್ ವಿರೂಪಾಕ್ಷಪ್ಪ ಹೇಳಿದ್ದಾರೆ. ಚುನಾವಣೆ ಮುಗಿದು 15 ದಿನಗಳಲ್ಲಿ ಪ್ರಕರಣದಿಂದ ಮುಕ್ತಿ ಪಡೆಯುತ್ತೇನೆ. ಘಟನೆ ನಡೆದಾಗ ಚನ್ನಗಿರಿಯಲ್ಲಿದ್ದ ನನ್ನನ್ನು ನಂಬರ್ 1 ಆರೋಪಿ ಮಾಡಲಾಗಿದೆ. ಜನರೇ ನನ್ನ ಮಗನನ್ನು ಚುನಾವಣೆಗೆ ನಿಲ್ಲಿಸಿದ್ದಾರೆ, ನನ್ನ ಮಗ ಗೆಲ್ಲುವುದ ನಿಶ್ಚಿತ ಎಂದು ಮಾಡಾಳ್ ವಿರೂಪಾಕ್ಷಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
May 07, 2023, 10:37 am IST

ಹೆಚ್‌ಎಎಲ್ 2ನೇ ಹಂತ ತಲುಪಿದ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ. ಜನರಿಂದ ಮೋದಿಗೆ ಹೂ ಮಳೆಯ ಸ್ವಾಗತ. ಜನರತ್ತ ಕೈ ಬೀಸುತ್ತಾ ತೆರದ ವಾಹನದಲ್ಲಿ ರೋಡ್ ಶೋ ನಡೆಸುತ್ತಿರುವ ಮೋದಿ
May 07, 2023, 10:22 am IST

ನ್ಯೂ ತಿಪ್ಪಸಂದ್ರದಿಂದ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಆರಂಭ. ನೂರಾರು ಜನರಿಂದ ಮೋದಿಗೆ ಸ್ವಾಗತ. ರಸ್ತೆಯುದ್ಧಕ್ಕೂ ಸಾಲುಗಟ್ಟಿ ನಿಂತು ಮೋದಿ ಮೋದಿ ಎಂದು ಘೋಷಣೆ ಕೂಗುತ್ತಿರುವ ಜನರು.
May 07, 2023, 10:13 am IST

ರಾಜಭವನದಿಂದ ಹೊರಟ ಪ್ರಧಾನಿ ನರೇಂದ್ರ ಮೋದಿ. ನ್ಯೂ ತಿಪ್ಪಸಂದ್ರದಿಂದ ರೋಡ್ ಶೋ ನಡೆಸಲಿರುವ ಮೋದಿ. ಬೆಂಗಳೂರಿನಲ್ಲಿ ಇಂದು 2ನೇ ದಿನ ರೋಡ್ ಶೋ ನಡೆಸಲಿರುವ ಮೋದಿ.
May 07, 2023, 9:51 am IST

ಮೈಸೂರಿನಲ್ಲಿ ಸಿದ್ದರಾಮಯ್ಯ ಪ್ರಚಾರ

ಇಂದು ಮೈಸೂರು ಜಿಲ್ಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ. ಬೆಳಗ್ಗೆ 11.30ಕ್ಕೆ ಹೆಚ್‌ಡಿ ಕೋಟೆಯಲ್ಲಿ ಮತಯಾಚನೆ ಮಾಡಲಿದ್ದು, 1.30ಕ್ಕೆ ಕೆಆರ್ ನಗರದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಂಜೆ 4 ಗಂಟೆಗೆ ಪಿರಿಯಾಪಟ್ಟಣದಲ್ಲಿ ಮತ್ತು ಸಂಜೆ 6 ಗಂಟೆಗೆ ಹುಣಸೂರು ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ. ಇಂದು ಮೈಸೂರಿನಲ್ಲೇ ಅವರು ವಾಸ್ತವ್ಯ ಹೂಡಲಿದ್ದಾರೆ
May 07, 2023, 8:46 am IST

ಡಿಕೆಶಿಗೆ ಚುನಾವಣಾ ಆಯೋಗದಿಂದ ನೋಟಿಸ್

ಬಿಜೆಪಿ ಸರ್ಕಾರ ವಿರುದ್ಧ ಭ್ರಷ್ಟಾಚಾರ ಆರೋಪಿಸಿ ಪತ್ರಿಕೆಗಳಲ್ಲಿ ಜಾಹೀರಾತು ಹಾಕಿದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಚುನಾವಣಾ ಆಯೋಗವು ನೋಟಿಸ್ ಜಾರಿ ಮಾಡಿದೆ. ಬಿಜೆಪಿ ಸರ್ಕಾರದ ವಿರುದ್ಧ ಮಾಡಿದ ಆರೋಪಗಳ ಬಗ್ಗೆ ನೈಜ ಸಾಕ್ಷ್ಯಗಳನ್ನು ಮೇ 7ರ ಸಂಜೆ 7 ಗಂಟೆಯೊಳಗೆ ಒದಗಿಸುವಂತೆ ಡಿ.ಕೆ. ಶಿವಕುಮಾರ್‌ಗೆ ಚುನಾವಣಾ ಆಯೋಗದಿಂದ ನೋಟಿಸ್ ನೀಡಲಾಗಿದೆ.
May 07, 2023, 8:27 am IST

ರಾಹುಲ್‌ ಗಾಂಧಿ ಯಾತ್ರೆಯಿಂದ ಬಿಜೆಪಿಗೆ ಭಯವಾಗಿದೆ : ಸೋನಿಯಾ ಗಾಂಧಿ

ನಾನು ಬೆಳೆಸಿದ ಬಿಜೆಪಿ ನಾಯಕರು ನನಗೆ ಮೋಸ ಮಾಡಿದ್ದಾರೆ. ನಾನು ಬಳ್ಳಾರಿಯಲ್ಲಿ ಇದ್ದರೆ ನನ್ನನ್ನು ಓಡಾಡಿಸಬೇಕಾಗುತ್ತದೆ ಎಂದು ಹೇಳಿ ನನ್ನನ್ನು ಹೊರಗಡೆ ಹಾಕಿದರು. ನನ್ನ ಮಗಳಿಗೆ ಹೆರಗಿಗೆ ಆದಾಗ ಸಿಬಿಐ ಅಧಿಕಾರಿಗಳು ಮನೆಗೆ ಬಂದು ಮೊಮ್ಮಗಳ ಫೋಟೋ ತೆಗೆದರು. ನೀನು ಬೆಳೆಸಿದ ಬಿಜೆಪಿಯವರು ನಿನ್ನನ್ನು ಬದುಕಲು ಬಿಡುತ್ತಿಲ್ಲ. ಜನರ ಮಧ್ಯೆ ಹೋಗೋಣ ಎಂದು ಪತ್ನಿ ಹೇಳಿದರು. ನನ್ನ ವಿರುದ್ಧ ಅನೇಕ ಕುತಂತ್ರ ಮಾಡಿದ್ದಾರೆ ಎಂದು ಜನಾರ್ಧನ ರೆಡ್ಡಿ ಕಿಡಿಕಾರಿದ್ದಾರೆ.
May 07, 2023, 8:25 am IST

ನಾನು ಬೆಳೆಸಿದ ಬಿಜೆಪಿ ನಾಯಕರು ನನಗೆ ಮೋಸ ಮಾಡಿದ್ದಾರೆ: ರೆಡ್ಡಿ

ನಾನು ಬೆಳೆಸಿದ ಬಿಜೆಪಿ ನಾಯಕರು ನನಗೆ ಮೋಸ ಮಾಡಿದ್ದಾರೆ. ನಾನು ಬಳ್ಳಾರಿಯಲ್ಲಿ ಇದ್ದರೆ ನನ್ನನ್ನು ಓಡಾಡಿಸಬೇಕಾಗುತ್ತದೆ ಎಂದು ಹೇಳಿ ನನ್ನನ್ನು ಹೊರಗಡೆ ಹಾಕಿದರು. ನನ್ನ ಮಗಳಿಗೆ ಹೆರಗಿಗೆ ಆದಾಗ ಸಿಬಿಐ ಅಧಿಕಾರಿಗಳು ಮನೆಗೆ ಬಂದು ಮೊಮ್ಮಗಳ ಫೋಟೋ ತೆಗೆದರು. ನೀನು ಬೆಳೆಸಿದ ಬಿಜೆಪಿಯವರು ನಿನ್ನನ್ನು ಬದುಕಲು ಬಿಡುತ್ತಿಲ್ಲ. ಜನರ ಮಧ್ಯೆ ಹೋಗೋಣ ಎಂದು ಪತ್ನಿ ಹೇಳಿದರು. ನನ್ನ ವಿರುದ್ಧ ಅನೇಕ ಕುತಂತ್ರ ಮಾಡಿದ್ದಾರೆ ಎಂದು ಜನಾರ್ಧನ ರೆಡ್ಡಿ ಕಿಡಿಕಾರಿದ್ದಾರೆ.
May 07, 2023, 8:20 am IST

ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲ್ಲ; ಜೆಡಿಎಸ್ 20 ದಾಟಲ್ಲ: ಡಿಕೆಶಿ

ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ಜೆಡಿಎಸ್ 20 ಕ್ಷೇತ್ರದ ಮೇಲೆ ದಾಟುವುದಿಲ್ಲ. ಜೆಡಿಎಸ್ ಪಕ್ಷಕ್ಕೆ ಅವಕಾಶ ಕೊಟ್ಟು ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಕಿಡಿಕಾರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+