Get Updates
Get notified of breaking news, exclusive insights, and must-see stories!

ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಮತ್ತೆ ನಟ ದರ್ಶನ್ ಹವಾ!

ಬೆಂಗಳೂರು: ವಾರದ ಹಿಂದಷ್ಟೇ ಶಾಸಕ ಸತೀಶ್ ರೆಡ್ಡಿ ಪರ ಭರ್ಜರಿ ಪ್ರಚಾರ ನಡೆಸಿದ್ದ ನಟ ದರ್ಶನ್ ಇಂದು ಮತ್ತೊಮ್ಮೆ ಕ್ಯಾಂಪೇನ್ ಮಾಡಿದ್ದಾರೆ. ಬೊಮ್ಮನಹಳ್ಳಿ ಕ್ಷೇತ್ರದ ವಿವಿಧ ಪ್ರದೇಶಗಳಲ್ಲಿ ನಟ ದರ್ಶನ್ ಸತೀಶ್ ರೆಡ್ಡಿ ಪರ ಮತಯಾಚನೆ ಮಾಡಿ, ರೋಡ್ ಶೋ ನಡೆಸಿದ್ರು. ನಟ ದರ್ಶನ್ ಎಂಟ್ರಿ ಸುದ್ದಿ ತಿಳಿಯುತ್ತಿದ್ದಂತೆ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು.

ನಟ ದರ್ಶನ್ ಬೊಮ್ಮನಹಳ್ಳಿಯ ವಿವಿಧೆಡೆ ರೋಡ್ ಶೋ ನಡೆಸಿದರು. ಹುಳಿಮಾವು ಮೂಲಕ ಆರಂಭವಾದ ಈ ರೋಡ್ ಶೋ ಹುಳಿಮಾವು, ಅರಕೆರೆ, ದೇವರಚಿಕ್ಕನಹಳ್ಳಿ, ಹೊಂಗಸಂದ್ರ, ಭಗತ್ ಸಿಂಗ್ ರಸ್ತೆ MSR ಲೇಔಟ್, ವಿರಾಟನಗರ, ರೂಪೇನ ಅಗ್ರಹಾರ, ಮಂಗಮ್ಮನಪಾಳ್ಯ, ಗಾರ್ವೇಭಾವಿಪಾಳ್ಯ, ಬಂಡೆಪಾಳ್ಯ, ಹೊಸಪಾಳ್ಯ ಮಾರ್ಗವಾಗಿ ರೋಡ್ ಶೋ ಸಾಗಿ ಅಗರ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದ ಬಳಿ ಅಂತ್ಯವಾಯಿತು. ಈ ಮೂಲಕ ಕೊನೇ ಹಂತದಲ್ಲಿ ಭರ್ಜರಿ ಪ್ರಚಾರ ನಡೆಯಿತು.

Sandalwood star Darshan did campaign in Bommanahalli constituency once again

1 ವಾರದಲ್ಲಿ 2 ಬಾರಿ ಪ್ರಚಾರ!

ಹೌದು, 1 ವಾರದ ಹಿಂದಷ್ಟೇ ಬಂದು ಶಾಸಕ ಸತೀಶ್ ರೆಡ್ಡಿ ಪರವಾಗಿ ನಟ ದರ್ಶನ್ ಪ್ರಚಾರ ನಡೆಸಿದ್ದರು. ಇಂದು ಮತ್ತೆ ಬಿಜೆಪಿ ಅಭ್ಯರ್ಥಿ ಪರವಾಗಿ ಕ್ಯಾಂಪೇನ್ ಮಾಡಿದ್ದಾರೆ. ಕಳೆದ ಬಾರಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವು ಕಡೆ ರೋಡ್ ಶೋ ನಡೆಸಿದ್ದರು ನಟ ದರ್ಶನ್. ಅಲ್ಲದೆ ಬೊಮ್ಮನಹಳ್ಳಿಯ ಬಿಳೆಕಹಳ್ಳಿಯಿಂದ ಬೈಕ್ ರ‍್ಯಾಲಿ ನಡೆಸಿ ಪುಟ್ಟೇನಹಳ್ಳಿ ಬೃಹತ್‌ ಬಹಿರಂಗ ಸಭೆ ನಡೆಸಿ ಕ್ಯಾಂಪೇನ್ ಮಾಡಿದ್ದರು. ಇದೀಗ ಮತ್ತೊಂದು ರೌಂಡ್ ಶಾಸಕ ಸತೀಶ್ ರೆಡ್ಡಿ ಪರವಾಗಿ ನಟ ದರ್ಶನ್ ಅಖಾಡಕ್ಕೆ ಇಳಿದು ಮತಯಾಚನೆ ಮಾಡಿದ್ದಾರೆ.

ರಜೆದಿನ ಮನೆ ಮುಂದೆ ನಟ ದರ್ಶನ್!

ಅಂದಹಾಗೆ ಬೊಮ್ಮನಹಳ್ಳಿ ಪ್ರದೇಶದಲ್ಲಿ ಲಕ್ಷಾಂತರ ಕಾರ್ಮಿಕ ಕುಟುಂಬಗಳು ವಾಸವಾಗಿವೆ. ಹೀಗಾಗಿ ಎಲ್ಲ ಭಾನುವಾರದ ರಜೆಯ ಮೂಡ್‌ನಲ್ಲಿ ಇದ್ದರು. ಈ ಮಧ್ಯೆ ತಮ್ಮ ನೆಚ್ಚಿನ ನಟ ತಮ್ಮ ಮನೆ ಮುಂದೆಯೇ ಎಂಟ್ರಿ ಕೊಟ್ಟಿದ್ದು ಸ್ಥಳೀಯರಿಗೆ ಖುಷಿ ಕೊಟ್ಟಿದ್ದು. ನಟ ದರ್ಶನ್ ರೋಡ್ ಶೋ ಸಾಗಿದ ಮಾರ್ಗದ ತುಂಬಾ ಅಭಿಮಾನಿಗಳು ನಿಂತು, ನೆಚ್ಚಿನ ನಟನನ್ನ ಮತ್ತೊಮ್ಮೆ ಕಣ್ತುಂಬಿಕೊಂಡರು. ಅಲ್ಲದೆ ಡಿ-ಬಾಸ್ ಎನ್ನುತ್ತಾ ಭರ್ಜರಿ ಜಯಕಾರ ಕೂಡ ಹಾಕಿದರು.

Sandalwood star Darshan did campaign in Bommanahalli constituency once again

4ನೇ ಬಾರಿಗೆ ಗೆಲ್ಲುವ ಪ್ರಯತ್ನ

ಬೊಮ್ಮನಹಳ್ಳಿ ಜಿದ್ದಾಜಿದ್ದಿನ ಹಣಾಹಣಿಗೆ ಸಾಕ್ಷಿಯಾಗಿ ನಿಂತಿದೆ. 3 ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸತತ ಗೆಲುವು ಕಾಣುತ್ತಾ ಶಾಸಕರಾಗಿರುವ ಸತೀಶ್ ರೆಡ್ಡಿ 4ನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಹೀಗಾಗಿ ಈ ಚುನಾವಣೆ ಸಾಕಷ್ಟು ಗಮನ ಸೆಳೆದಿದ್ದು, ನಟ ದರ್ಶನ್ ಕೂಡ ಸತೀಶ್ ರೆಡ್ಡಿ ಪರ ಬೊಮ್ಮನಹಳ್ಳಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಕಳೆದ ವಾರ ಬೊಮ್ಮನಹಳ್ಳಿಗೆ ಬಂದಿದ್ದ ದರ್ಶನ್ ಅವರನ್ನ ನೋಡಲು ಬೊಮ್ಮನಹಳ್ಳಿ-ಬೇಗೂರು ರಸ್ತೆಯಲ್ಲಿ ನಟ ದರ್ಶನ್ ಫ್ಯಾನ್ಸ್ ಭಾರಿ ಸಂಖ್ಯೆಯಲ್ಲಿ ಸೇರಿದ್ದರು. ಈಗಲೂ ಅದೇ ಕ್ರೌಡ್ ನೆರೆದಿತ್ತು.

ಈಗಲಾದ್ರೂ ಬದಲಾಗುತ್ತಾ ಟ್ರೆಂಡ್?

2008ರಲ್ಲಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಸ್ಥಾನಮಾನ ಪಡೆಯಿತು. ಅಂದಿನಿಂದ ಇಂದಿನ ತನಕ ಕ್ಷೇತ್ರದಲ್ಲಿ ಬಿಜೆಪಿ ಹಿಡಿತವಿದೆ. ಆದರೆ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಕೂಡ ಗೆಲುವಿಗಾಗಿ ಹೋರಾಟ ಆರಂಭಿಸಿದೆ. ಈ ನಡುವೆ ನಟ ದರ್ಶನ್ ಬಿಜೆಪಿ ಅಭ್ಯರ್ಥಿ ಶಾಸಕ ಸತೀಶ್ ರೆಡ್ಡಿ ಪರವಾಗಿ ಪ್ರಚಾರ ಅಖಾಡಕ್ಕೆ ಎಂಟ್ರಿಯಾಗಿದ್ದಾರೆ. ಮತದಾನಕ್ಕೆ ಕೆಲವೇ ದಿನ ಬಾಕಿ ಇರುವಾಗಲೇ ಭರ್ಜರಿ ಕ್ಯಾಂಪೇನ್ ಶುರು ಮಾಡಿದ್ದಾರೆ. 1 ವಾರದ ಅಂತರದಲ್ಲಿ ಎರಡೆರಡು ಬಾರಿ ನಟ ದರ್ಶನ್ ಬೊಮ್ಮನಹಳ್ಳಿಗೆ ಎಂಟ್ರಿ ಆಗುತ್ತಿರುವುದು ವಿಶೇಷ.

Sandalwood star Darshan did campaign in Bommanahalli constituency once again

ಒಟ್ನಲ್ಲಿ ಪ್ರಚಾರ ಲೆಕ್ಕಾಚಾರ ಮತ್ತು ತಂತ್ರ ರಣತಂತ್ರಗಳ ನಡುವೆ ವೋಟಿಂಗ್ ಡೇ ಹತ್ತಿರವಾಗಿದೆ. ಪ್ರಚಾರ, ರಣತಂತ್ರ ಏನೇ ಇದ್ದರೂ ಅದಕ್ಕೆಲ್ಲಾ ಮತದಾರು ಪ್ರಭು ಉತ್ತರ ನೀಡಲಿದ್ದಾನೆ. ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಅಂದೇ ಬೊಮ್ಮನಹಳ್ಳಿ ಕ್ಷೇತ್ರದ ಸೋಲು-ಗೆಲುವಿನ ಲೆಕ್ಕಾಚಾರಕ್ಕೆ ಉತ್ತರ ಸಿಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+