Get Updates
Get notified of breaking news, exclusive insights, and must-see stories!

Karnataka election 2023: ನಿಮ್ಮ ಮತಗಟ್ಟೆಯ ವಿವರ ತಿಳಿಯಬೇಕೆ?: ಹೀಗೆ ಸರ್ಚ್‌ ಮಾಡಿ, ಇಲ್ಲಿದೆ ಮಾಹಿತಿ

ಕರ್ನಾಟಕ, ಮೇ, 09: ರಾಜ್ಯ ವಿಧಾನಸಭೆ ಚುನವಾಣೆಗೆ ಮೇ 10ರಂದು ಮತದಾನ ಪ್ರಕ್ರಿಯೆ ನಡೆಯಲಿದ್ದು, ಮೆ 13ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಇದೀಗ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಹಲವರಲ್ಲಿ ನಮ್ಮ ಮತಗಟ್ಟೆ ಯಾವುದು ಎನ್ನುವ ಗೊಂದಲದಲ್ಲಿ ಇರುತ್ತಾರೆ. ಆದ್ದರಿಂದ ನಿಮ್ಮ ಮತಗಟ್ಟೆಯ ವಿವರವನ್ನು ಮೊಬೈಲ್‌ನಲ್ಲಿಯೇ ನೋಡುವಂತಹ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇಲ್ಲಿದೆ ನೋಡಿ ವಿವರ.

ಮತದಾರರು 3 ರೀತಿಯಲ್ಲಿ ಮತಗಟ್ಟೆಯ ವಿವರವನ್ನು ತಿಳಿದುಕೊಳ್ಳಬಹುದಾಗಿದೆ. ಮೊದಲನೇಯದು ಮೊಬೈಲ್‌ ಅಪ್ಲಿಕೇಶನ್‌, ಎರಡು ವೆಬ್‌ಸೈಟ್‌, ಇನ್ನು ಮೂರನೇಯ ವಿಧಾನ ಕಾಲ್‌ ಸೆಂಟರ್‌ಗೆ ಕರೆ ಮಾಡುವ ಮೂಲಕ ಮತಗಟ್ಟೆಯ ವಿವರವನ್ನು ಪಡೆದುಕೊಳ್ಳಬಹುದಾಗಿದೆ.

karnataka elections 2023

ನಿಮ್ಮ ಮತಗಟ್ಟೆಯ ವಿವರ ತಿಳಿಯುವ ವಿಧಾನಗಳು

ಮತದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಚುನಾವಣಾ ಆಯೋಗಯು "ಚುನಾವಣಾ" ಹೆಸರಿನಲ್ಲಿ ಆಂಡ್ರಾಯ್ಡ್‌ ಮತ್ತು ಐಒಎಸ್‌ ಅಪ್ಲಿಕೇಶನ್‌ ಅನ್ನು ಬಿಡುಗಡೆ ಮಾಡಿದೆ. ಈ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಂಡು, ನಂತರ ಅಪ್ಲಿಕೇಶನ್‌ ಓಪನ್‌ ಮಾಡಿದಾಗ Search by Epic No ಅಥವಾ Search by Name ಎನ್ನುವ ಎರಡು ಆಯ್ಕೆಗಳು ಲಭ್ಯವಾಗುತ್ತದೆ.

ನೀವು Search by Epic No ಆಯ್ಕೆ ಮಾಡಿ, ವೋಟರ್‌ ಐಡಿ ನಂಬರ್‌ ಹಾಕಿದರೆ ವಿವರ ಸಿಗಲಿದೆ. ಹಾಗೆಯೆ Search by Name ಆಯ್ಕೆ ಮಾಡಿದರೆ ಹೆಸರು, ಜಿಲ್ಲೆ, ವಿಧಾನಸಭಾ ಕ್ಷೇತ್ರ, ಸಂಬಂಧಿಯ ಹೆಸರು, ಲಿಂಗ ಆಯ್ಕೆ ಮಾಡಿಯೂ ವಿವರವನ್ನು ತಿಳಿದುಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೇ ಜಿಪಿಎಸ್‌ ಆನ್‌ ಮಾಡಿ ಲೊಕೇಶನ್‌ ಮೂಲಕವೂ ಮತಗಟ್ಟೆಯ ಬಗ್ಗೆ ವಿವರವನ್ನು ತಿಳಿದುಕೊಳ್ಳಬಹುದಾಗಿದೆ.

ಇನ್ನು ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಲು ಸಾಧ್ಯ ಆಗದವರು ವೆಬ್‌ಸೈಟ್‌ ಮೂಲಕ ಮತಗಟ್ಟೆಯ ವಿವರವನ್ನು ಹುಡುಕಬಹುದಾಗಿದೆ. ಆಪ್‌ನಲ್ಲಿ ಹೇಗೆ ನಿಮ್ಮ ವೈಯಕ್ತಿಕ ದತ್ತಾಂಶಗಳನ್ನು ಹಾಕುತ್ತಾ ಅದೇ ರೀತಿಯ ವಿವರಗಳನ್ನು ಸಲ್ಲಿಸಿ ಮತಗಟ್ಟೆಯ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಪಾರ್ಕಿಂಗ್‌ ಸ್ಥಳ ತಿಳಿಯುವುದೇಗೆ?

ಮೂರನೆಯದಾಗಿ ಆಪ್‌ ಮತ್ತು ವೆಬ್‌ಸೈಟ್‌ ಎರಡರ ಮೂಲಕವೂ ಮತಗಟ್ಟೆಯ ಮಾಹಿತಿ ಪಡೆಯಲು ಸಾಧ್ಯ ಆಗದವರು 1950 ಅಥವಾ 180042 551950 ನಂಬರ್‌ಗೆ ಕರೆ ಮಾಡಿ ಮತಗಟ್ಟೆಯ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ. ಅದರಲ್ಲೂ ಮೊಬೈಲ್‌ ಅಪ್ಲಿಕೇಶನ್‌ ಮತ್ತು ವೆಬ್‌ಸೈಟ್‌ನಲ್ಲಿ ನಿಮ್ಮ ಕ್ಷೇತ್ರದ ಅಭ್ಯರ್ಥಿಯ ವಿವರ, ಪಾರ್ಕಿಂಗ್‌ ಸ್ಥಳ, ಗಾಲಿ ಕುರ್ಚಿ ನೋಂದಣಿ, ಸಮೀಪದ ಮತದಾನ ಕೇಂದ್ರಗಳು, ಆರೋಗ್ಯ ಸೌಲಭ್ಯಗಳನ್ನು ಸುಲಭವಾಗಿ ಮಾಹಿತಿಯನ್ನು ಕಲೆಹಾಕಬುದಾಗಿದೆ.

ಮತದಾನಕ್ಕೆ ಬೇಕಾಗುವ ದಾಖಲೆಗಳು

ಮತದಾನದ ಸಮಯದಲ್ಲಿ ಚುನಾವಣಾ ಗುರುತಿನ ಚೀಟಿ ಪ್ರಮುಖವಾದ ದಾಖಲೆ ಆಗಿದೆ. ಒಂದು ವೇಳೆ ವೋಟರ್‌ ಐಡಿ ಇಲ್ಲದಿದ್ದಾರೆ ನೀವು ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್‌, ಸರ್ಕಾರಿ ನೌಕರರ ಗುರುತಿನ ಚೀಟಿ, ಫೋಟೋ ಸಹಿತ ಇರುವ ಪಾಸ್‌ಬುಕ್, ಪಾನ್ ಕಾರ್ಡ್, ಆಧಾರ್ ಕಾರ್ಡ್‌ ಹೊಂದಿರಬೇಕಾಗುತ್ತದೆ.

ಈ ಮೂಲು ಚುನಾವಣೆಯ ಸಮಯದಲ್ಲಿ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಮತದಾನ ನಡೆದಿದ್ದು, ನಗರ ಪ್ರದೇಶದಲ್ಲಿ ಮತದಾನದ ಪ್ರಮಾಣ ಕಡಿಮೆ ಇರುತ್ತಿತ್ತು. ಆದ್ದರಿಂದ ಚುನಾವಣಾ ಆಯೋಗ ಮತದಾರರಿಗೆ ಸುಲಭವಾಗಿ ಮತಗಟ್ಟೆಯ ಮಾಹಿತಿಯನ್ನು ಪಡೆದುಕೊಳ್ಳು ಈ ವ್ಯವಸ್ಥೆಯನ್ನು ಕಲ್ಪಿಸಿದೆ. ಇಷ್ಟೆಲ್ಲ ವ್ಯವಸ್ಥೆ ಮಾಡಿಯೂ ಈ ಬಾರಿ ನಗರ ಪ್ರದೇಶಗಳಲ್ಲಿ ಎಷ್ಟು ಜನ ಮತದಾನ ಮಾಡಲಿದ್ದಾರೆ ಅನ್ನುವುದನ್ನು ಕಾದುನೋಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+