ಕರ್ನಾಟಕ ವಿಧಾನಸಭಾ ಚುನಾವಣೆ: ಕಾಂಗ್ರೆಸ್ Vs ಜೆಡಿಎಸ್ ಕ್ಷೇತ್ರಗಳು

ಆಡಳಿತ ಬಿಜೆಪಿ ತನ್ನ ಮೊದಲ ಪಟ್ಟಿಯಲ್ಲಿ 189 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಬಿಡುಗಡೆಗೊಳಿಸಿದೆ. ಜೆಡಿಎಸ್ ಈಗಾಗಲೇ ಎರಡು ಸುತ್ತಿನಲ್ಲಿ ತನ್ನ ಅಭ್ಯರ್ಥಿಯನ್ನು ಘೋಷಿಸಿದ್ದಾಗಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಕೂಡಾ ಹಿಂದೆ ಬಿದ್ದಿಲ್ಲ. ಕೊನೆಯ ಸುತ್ತಿನ ಪಟ್ಟಿ ಬಿಡುಗಡೆ ಮಾಡುವುದೇ ಪಕ್ಷಗಳಿಗೆ ಇರುವ ಸವಾಲು.

ಕರ್ನಾಟಕದ ಚುನಾವಣಾ ಇತಿಹಾಸವನ್ನು ಅವಲೋಕಿಸುವುದಾದರೆ, ರಾಜ್ಯದ 224 ಕ್ಷೇತ್ರಗಳ ಪೈಕಿ ಕೆಲವೇ ಕೆಲವು ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುತ್ತದೆ. ಮಿಕ್ಕ ಕ್ಷೇತ್ರಗಳಲ್ಲಿ ಒಂದೋ ಬಿಜೆಪಿ ವರ್ಸಸ್ ಕಾಂಗ್ರೆಸ್, ಇಲ್ಲವೇ ಕಾಂಗ್ರೆಸ್ ವರ್ಸಸ್ ಜೆಡಿಎಸ್ ಅಥವಾ ಬಿಜೆಪಿ ವರ್ಸಸ್ ಜೆಡಿಎಸ್.

Karnataka Election 2023: Congress vs JDS, A Tough Fight In The State

ಪ್ರಮುಖವಾಗಿ, ಹಳೇ ಮೈಸೂರು ಭಾಗದಲ್ಲಿ ಅಥವಾ ಕಾವೇರಿ ಜಲಾಯನ ಪ್ರದೇಶದಲ್ಲಿನ ಚುನಾವಣೆಯನ್ನು ನೋಡುವುದಾದರೆ, ಈ ಭಾಗದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ (Congress Vs JDS) ನಡುವೆ ಬಹುತೇಕ ಕಡೆ ನೇರ ಹಣಾಹಣಿ. ಕಳೆದ ಎರಡು ಚುನಾವಣಾ ಫಲಿತಾಂಶವನ್ನು ಆಧರಿಸಿ, ಈ ರೀತಿಯ ಕ್ಷೇತ್ರಗಳು ಯಾವುವು ಎನ್ನುವುದನ್ನು ಟೇಬಲ್ ನಲ್ಲಿ ನೀಡಲಾಗಿದೆ.

ಕ್ಷೇತ್ರ ಕಾಂಗ್ರೆಸ್ ಜೆಡಿಎಸ್
ಗುರುಮಿಠಕಲ್ ಬಾಬೂರಾವ್ ಚಿಂಚನಸೂರು ನಾಗನಗೌಡ ಕುಂದಕೂರ
ಮಾನ್ವಿ ಅಭ್ಯರ್ಥಿ ಘೋಷಣೆಯಾಗಿಲ್ಲ ರಾಜಾ ವೆಂಕಟಪ್ಪ ನಾಯಕ
ಭದ್ರಾವತಿ ಸಂಗಮೇಶ್ವರ ಬಿ.ಕೆ ಶಾರದಾ ಅಪ್ಪಾಜಿಗೌಡ
ಕೊರಟಗೆರೆ ಡಾ.ಜಿ.ಪರಮೇಶ್ವರ ಸುಧಾಕರ ಲಾಲ್
ಪಾವಗಡ ಎಚ್.ವಿ.ವೆಂಕಟೇಶ್ ತಿಮ್ಮರಾಯಪ್ಪ
ಮಧುಗಿರಿ ಕೆ.ಎನ್.ರಾಜಣ್ಣ ವೀರಭದ್ರಯ್ಯ
ಗೌರಿಬಿದನೂರು ಶಿವಶಂಕರ ರೆಡ್ಡಿ ಎನ್.ಎಚ್ ನರಸಿಂಹಮೂರ್ತಿ
ಶಿಡ್ಲಘಟ್ಟ ಅಭ್ಯರ್ಥಿ ಘೋಷಣೆಯಾಗಿಲ್ಲ ರವಿಕುಮಾರ್
ಶ್ರೀನಿವಾಸಪುರ ಕೆ.ಆರ್.ರಮೇಶ್ ಕುಮಾರ್ ಜಿ.ಕೆ.ವೆಂಕಟಶಿವ ರೆಡ್ಡಿ
ದೇವನಹಳ್ಳಿ ಕೆ.ಎಚ್.ಮುನಿಯಪ್ಪ ನಿಸರ್ಗ ನಾರಾಯಣಸ್ವಾಮಿ
ದೊಡ್ಡಬಳ್ಳಾಪುರ ಟಿ.ವೆಂಕಟರಾಮಯ್ಯ ಮುನೇಗೌಡ
ನೆಲಮಂಗಲ ಶ್ರೀನಿವಾಸಯ್ಯ.ಎನ್ ಡಾ.ಶ್ರೀನಿವಾಸಮೂರ್ತಿ
ಮಾಗಡಿ ಎಚ್.ಸಿ.ಬಾಲಕೃಷ್ಣ ಎ.ಮಂಜುನಾಥ
ರಾಮನಗರ ಇಕ್ಬಾಲ್ ಹುಸೇನ್ ನಿಖಿಲ್ ಕುಮಾರಸ್ವಾಮಿ
ಮಳವಳ್ಳಿ ಪಿ.ಎಂ.ನರೇಂದ್ರಸ್ವಾಮಿ ಡಾ.ಕೆ.ಅನ್ನದಾನಿ
ಮದ್ದೂರು ಅಭ್ಯರ್ಥಿ ಘೋಷಣೆಯಾಗಿಲ್ಲ ಡಿ.ಸಿ.ತಮ್ಮಣ್ಣ
ಮೇಲುಕೋಟೆ ದರ್ಶನ್ ಪುಟ್ಟಣ್ಣಯ್ಯ (ಕಾಂಗ್ರೆಸ್ ಬೆಂಬಲ) ಸಿ.ಎಸ್.ಪುಟ್ಟರಾಜು
ಮಂಡ್ಯ ಪಿ.ರವಿಕುಮಾರ್ ಎಂ.ಶ್ರೀನಿವಾಸ
ಶ್ರೀರಂಗಪಟ್ಟಣ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಡಾ.ರವೀಂದ್ರ ಶ್ರೀಕಂಠಯ್ಯ
ನಾಗಮಂಗಲ ಚೆಲುವರಾಯಸ್ವಾಮಿ ಸುರೇಶ್ ಗೌಡ
ಅರಸೀಕೆರೆ ಅಭ್ಯರ್ಥಿ ಘೋಷಣೆಯಾಗಿಲ್ಲ ಅಭ್ಯರ್ಥಿ ಘೋಷಣೆಯಾಗಿಲ್ಲ
ಬೇಲೂರು ಬಿ.ಶಿವರಾಂ ಅಭ್ಯರ್ಥಿ ಘೋಷಣೆಯಾಗಿಲ್ಲ
ಹೊಳೆನರಸೀಪುರ ಶ್ರೇಯಸ್.ಎಂ.ಪಟೇಲ್ ಎಚ್.ಡಿ.ರೇವಣ್ಣ
ಅರಕಲಗೂಡು ಅಭ್ಯರ್ಥಿ ಘೋಷಣೆಯಾಗಿಲ್ಲ ಅಭ್ಯರ್ಥಿ ಘೋಷಣೆಯಾಗಿಲ್ಲ
ಕೃಷ್ಣರಾಜನಗರ ಡಿ.ರವಿಶಂಕರ್ ಸಾ.ರಾ.ಮಹೇಶ್
ಹುಣಸೂರು ಎಚ್.ಪಿ.ಮಂಜುನಾಥ ಹರೀಶ್ ಗೌಡ
ತಿ.ನರಸೀಪುರ ಡಾ.ಎಚ್.ಸಿ.ಮಹದೇವಪ್ಪ ಅಶ್ವಿನ್ ಕುಮಾರ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+