Get Updates
Get notified of breaking news, exclusive insights, and must-see stories!

School Dasara Holiday: ರಾಜ್ಯದಲ್ಲಿ ಶಾಲಾ ದಸರಾ ರಜೆ ವಿಸ್ತರಣೆ: ಕಲಿಕಾ ಅವಧಿ ಕೊರತೆ ಕುರಿತು ಮಹತ್ವದ ಅಪ್ಡೇಟ್

School Dasara Holiday: ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ದಸರಾ ರಜೆಯನ್ನು ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ನೀಡಲಾಗಿತ್ತು. ಆದರೆ ಈ ರಜೆಯನ್ನು ಅಕ್ಟೋಬರ್ 18ರ ವರೆಗೂ ವಿಸ್ತರಣೆ ಮಾಡಲಾಗಿದೆ. ಇದಕ್ಕೆ ಕಾರಣವೂ ಇದೆ. ಇನ್ನೂ ಹೆಚ್ಚುವರಿ ರಜೆ ಸಿಗುವುದರಿಂದ ವಿದ್ಯಾರ್ಥಿಗಳಿಗೆ ಕಲಿಕಾ ದಿನಗಳ ಕೊರತೆ ಆಗಲಿದೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಈ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಾತನಾಡಿ ಗೊಂದಲಗಳಿಗೆ ತೆರೆ ಎಳೆಯುವ ಕೆಲಸವನ್ನು ಮಾಡಿದ್ದಾರೆ.

ಶಾಲೆಗಳ ದಸರಾ ರಜೆಯನ್ನು ಅಕ್ಟೋಬರ್ 18ರ ವರೆಗೂ ವಿಸ್ತರಣೆ ಮಾಡಲಾಗಿದೆ. ಇದು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಮಾತ್ರ ಅನ್ವಯ ಆಗಲಿದ್ದು, ಖಾಸಗಿ ಶಾಲೆಗಳು ಅಕ್ಟೋಬರ್ 8ರಿಂದ ಆರಂಭವಾಗಿವೆ. ಶಾಲೆಗಳ ರಜೆ ವಿಸ್ತರಣೆಯಿಂದ ವಿದ್ಯಾರ್ಥಿಗಳಿಗೆ ಕಲಿಕಾ ದಿನಗಳ ಕೊರತೆ ಆಗಲಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದು, ಈ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಾತನಾಡಿ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

Karnataka Education Minister Clarifies Holiday Extension and Students learning period

"ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ, ಶಾಲೆಗಳಲ್ಲಿ ವರ್ಷದಲ್ಲಿ 220 ಕಲಿಕಾ ದಿನಗಳ ಅಗತ್ಯ ಇದೆ. ಈ ಶೈಕ್ಷಣಿಕ ವರ್ಷದಲ್ಲಿ 240 ಕಲಿಕಾ ದಿನಗಳು ಲಭ್ಯ ಇದ್ದು, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹಿನ್ನೆಲೆ 9 ದಿನ ರಜೆ ನೀಡಲಾಗಿದೆ. ಆದರೂ ಒಟ್ಟು ಕಲಿಕಾ ದಿನಗಳ ಕೊರತೆ ಆಗುವುದಿಲ್ಲ. ಇದು ಮಕ್ಕಳ ಕಲಿಕೆ ಮೇಲೆ ಯಾವುದೇ ಪರಿಣಾಮ ಬಿರುವುದಿಲ್ಲ," ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸ್ಪಷ್ಟನೆ ನೀಡಿದರು.

ಮಂಗಳೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ನಡೆಸುತ್ತಿರುವ ಸಮೀಕ್ಷೆಗೆ ಬಿ.ಎಸ್‌.ಯಡಿಯೂರಪ್ಪ, ಎಚ್‌.ಡಿ.ದೇವೇಗೌಡರಂತಹ ನಾಯಕರು ವಿರೋಧ ಮಾಡುತ್ತಿಲ್ಲ. ಆದರೆ, ಸಂವಿಧಾನದ ಮೇಲೆ ಪ್ರಮಾಣ ಮಾಡಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಆರ್‌.ಅಶೋಕ್, ಅಶ್ವತ್ಥ್‌ನಾರಾಯಣ ಮತ್ತು ತೇಜಸ್ವಿ ಸೂರ್ಯ ಅಂತಹವರು ಸಮೀಕ್ಷೆಗೆ ಸಹಕರಿಸಬೇಡಿ ಎಂದು ಹೇಳುತ್ತಿದ್ದಾರೆ. ಇದು ಅವರ ಹೊಣೆಗೇಡಿತನ. ಅವರು ಯಾವ ಮುಖ ಇಟ್ಟುಕೊಂಡು ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸುತ್ತಾರೆ ಎಂದು ಪ್ರಶ್ನೆ ಮಾಡುವ ಮೂಲಕ ಆಕ್ರೋಶ ವ್ತಕ್ತಪಡಿಸಿದರು.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಜನ ಉದ್ಯೋಗ ದೃಷ್ಟಿಯಿಂದ ಬೇರೆ ದೇಶಗಳಲ್ಲಿ, ಬೇರೆ ಊರುಗಳಲ್ಲಿ ನೆಲೆಸಿರುವವರ ಪ್ರಮಾಣ ಹೆಚ್ಚಿದೆ. ಆದ್ದರಿಂದ ಸಮೀಕ್ಷೆಯ ಗುರಿ ಸಾಧನೆಗೆ ಅಡಚಣೆ ಉಂಟಾಗಿದೆ ಎಂದರು. ಸದ್ಯ ಸರ್ಕಾರ ಅಕ್ಟೋಬರ್ 18 ವರೆಗೂ ರಜೆ ವಿಸ್ತರಣೆ ಮಾಡಿದೆ. ಅಕ್ಟೋಬರ್ 19 ಭಾನುವಾರ ಆಗಿದ್ದು, ಅಕ್ಟೋಬರ್ 20 ಹಾಗೂ 22ಕ್ಕೆ ದೀಪಾವಳಿ ರಜೆ ಇರುವುದರಿಂದ ಶಾಲೆಗಳು ಬಹುತೇಕ ಹಬ್ಬಗಳು ಮುಗಿದ ಬಳಿಕವೇ ಆರಂಭ ಆಗಲಿವೆ.

ಜಾತಿ ಗಣತಿ ಹಿನ್ನೆಲೆ ಸರ್ಕಾರ ಶಾಲೆಗಳ ದಸರಾ ರಜೆಯನ್ನು ವಿಸ್ತರಣೆ ಮಾಡಿದೆ. ಈ ಮೂಲಕ ಅಕ್ಟೋಬರ್‌ 7ಕ್ಕೆ ಮುಕ್ತಾಯ ಆಗಬೇಕಿದ್ದ ರಜೆ ಅಕ್ಟೋಬರ್ 18ವರೆಗೂ ವಿಸ್ತರಣೆಯಾಗಿದೆ. ಇನ್ನು ಶಾಲೆಗಳು ಪುನರಾರಂಭ ಆಗುವುದು ಅಕ್ಟೋಬರ್ 23ಕ್ಕೆ. ಇನ್ನು ಶಾಲಾ ಮಕ್ಕಳಿಗೆ ಸರ್ಕಾರದಿಂದ ವಿಸ್ತರಣೆ ಆಗಿರುವ ದಸರಾ ರಜೆ ಖಾಸಗಿ ಮತ್ತು ಅನುದಾನ ರಹಿತ ಶಾಲೆಗಳಿಗೆ ಈ ರಜೆ ಅನ್ವಯ ಆಗುವುದಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+