Karnataka Dam Water Level: ಕರ್ನಾಟಕದ 14 ಪ್ರಮುಖ ಜಲಾಶಯಗಳ ಇಂದಿನ ನೀರನ ಮಟ್ಟದ ವಿವರ

ಕರ್ನಾಟಕದ ವಿವಿಧ ಭಾಗಗಳಲ್ಲಿ ಸಾಧಾರಣ ಮಳೆ ಮುಂದುವರಿದಿದೆ. ಮುಂದಿನ 2 ದಿನಗಳಲ್ಲಿ ದೇಶದ ಉಳಿದ ಭಾಗಗಳಿಂದ ನೈಋತ್ಯ ಮುಂಗಾರು ಮತ್ತಷ್ಟು ಹಿಮ್ಮೆಟ್ಟಲು ಮತ್ತು ಅದೇ ಸಮಯದಲ್ಲಿ ದಕ್ಷಿಣ ಪರ್ಯಾಯ ದ್ವೀಪದಲ್ಲಿ ಈಶಾನ್ಯ ಮುಂಗಾರು ಮಳ ಪ್ರಾರಂಭವಾಗಲು ಪೂರಕವಾದ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮೇಲ್ಮಟ್ಟದ ವಾಯುಮಂಡಲದ (ಟ್ರೋಪೋಸ್ಪಿಯರ್) ಪಶ್ಚಿಮ ದಿಕ್ಕಿನ ಮಾರುತಗಳಲ್ಲಿನ 'ಟ್ರಫ್' (ಕಡಿಮೆ ಒತ್ತಡದ ವಿಸ್ತ್ರತ ವಲಯ) ಈಗ ಸರಿಸುಮಾರು 82°E ರೇಖಾಂಶದ ಉದ್ದಕ್ಕೂ, 22°N ಅಕ್ಷಾಂಶದ ಉತ್ತರಕ್ಕೆ, ಸಮುದ್ರ ಮಟ್ಟದಿಂದ 5.8 ರಿಂದ 7.6 ಕಿ.ಮೀ ಎತ್ತರದ ನಡುವೆ ವ್ಯಾಪಿಸಿದೆ. ಮನ್ನಾರ್ ಕೂಲ್ಲಿ ಮತ್ತು ಪಕ್ಕದ ದಕ್ಷಿಣ ತಮಿಳುನಾಡು ಕರಾವಳಿಯಲ್ಲಿದ್ದ ಮೇಲ್ಮಟ್ಟದ ವಾಯುಭಾರ ಕುಸಿತದ ಸುಳಿಗಾಳಿಯು (Cyclonic circulation) ಈಗ ದಕ್ಷಿಣ ಶ್ರೀಲಂಕಾ ಕರಾವಳಿಯ ಆಚೆಗಿನ ನೈಋತ್ಯ ಬಂಗಾಳ ಕೊಲ್ಲಿಯ ಮೇಲೆ ನೆಲೆಗೊಂಡಿದ್ದು, ಸಮುದ್ರ ಮಟ್ಟದಿಂದ 3.1 ಕಿ.ಮೀ ಎತ್ತರದವರೆಗೆ ವಿಸ್ತರಿಸಿದೆ. ದಕ್ಷಿಣ ಶ್ರೀಲಂಕಾ ಕರಾವಳಿಯ ಆಚೆಗಿನ ನೈಋತ್ಯ ಬಂಗಾಳ ಕೊಲ್ಲಿಯಲ್ಲಿರುವ ಮೇಲಿನ ಸುಳಿಗಾಳಿಯಿಂದ ಮಧ್ಯ ಬಂಗಾಳ ಕೊಲ್ಲಿಯವರೆಗೆ ಪೂರ್ವ ದಿಕ್ಕಿನ ಮಾರುತಗಳಲ್ಲಿನ ಒಂದು 'ಟ್ರಫ್' ವ್ಯಾಪಿಸಿದೆ ಇದು ಸಮುದ್ರ ಮಟ್ಟದಿಂದ 3.1 ಕಿ.ಮೀ ಎತ್ತರದವರೆಗೆ ವಿಸ್ತರಿಸಿದ್ದು, ಎತ್ತರಕ್ಕೆ ಹೋದಂತೆ ದಕ್ಷಿಣದ ಕಡೆಗೆ ವಾಲಿಕೊಂಡಿದೆ. ದಕ್ಷಿಣ ಅಂಡಮಾನ್ ಸಮುದ್ರ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿದ್ದ ಮೇಲ್ಮಟ್ಟದ ವಾಯುಭಾರ ಕುಸಿತದ ಸುಳಿಗಾಳಿಯು ಮೇಲೆ ತಿಳಿಸಲಾದ 'ಟಪ್'ನೊಂದಿಗೆ ವಿಲೀನಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಉಲ್ಲೇಖಿಸಿದೆ.

Karnataka Dam Water Levels Latest Update on Water Storage in 14 Major Reservoirs

ಕೆಆರ್‌ಎಸ್ ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ): 124.80
ಇಂದಿನ ಮಟ್ಟ: 101.12
ಒಳಹರಿವು: 644
ಹೊರಹರಿವು: 2,660 ಕ್ಯೂಸೆಕ್ಸ್‌ಗಳಲ್ಲಿ

ಹಾರಂಗಿ ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ): 2,859
ಇಂದಿನ ಮಟ್ಟ: 2,846.35
ಒಳಹರಿವು: 107
ಹೊರಹರಿವು: 1,800 ಕ್ಯೂಸೆಕ್ಸ್‌ಗಳಲ್ಲಿ

ಕಬಿನಿ ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ): 2,284.00
ಇಂದಿನ ಮಟ್ಟ: 2267.72
ಒಳಹರಿವು: 408
ಹೊರಹರಿವು: 1,300 ಕ್ಯೂಸೆಕ್ಸ್‌ಗಳಲ್ಲಿ

ಹೇಮಾವತಿ ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ): 2,922
ಇಂದಿನ ಮಟ್ಟ: 2,892.68
ಒಳಹರಿವು: 800
ಹೊರಹರಿವು: 300 ಕ್ಯೂಸೆಕ್ಸ್‌ಗಳಲ್ಲಿ

ಲಿಂಗನಮಕ್ಕಿ ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ): 1,819
ಇಂದಿನ ಮಟ್ಟ: 1,793.10
ಒಳಹರಿವು: 1,986
ಹೊರಹರಿವು: 4,276.73 ಕ್ಯೂಸೆಕ್ಸ್‌ಗಳಲ್ಲಿ

ಸೂಪಾ ಜಲಾಶಯ

ಗರಿಷ್ಠ ಮಟ್ಟ (ಮೀ.ಗಳಲ್ಲಿ): 564
ಇಂದಿನ ಮಟ್ಟ: 545.91
ಒಳಹರಿವು: 53.55
ಹೊರಹರಿವು: 4,244.73 ಕ್ಯೂಸೆಕ್ಸ್‌ಗಳಲ್ಲಿ

ಮಾಣಿ ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ): 595
ಇಂದಿನ ಮಟ್ಟ: 585.20
ಒಳಹರಿವು: 0
ಹೊರಹರಿವು: 277

ತುಂಗಭದ್ರಾ ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ): 1,633
ಇಂದಿನ ಮಟ್ಟ: 1,619.50
ಒಳಹರಿವು: 0
ಹೊರಹರಿವು: 11,983

ಮಲಪ್ರಭಾ ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ): 2,079.50
ಇಂದಿನ ಮಟ್ಟ: 2,065.30
ಒಳಹರಿವು: 0
ಹೊರಹರಿವು: 194

ಘಟಪ್ರಭಾ ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ): 2,175
ಇಂದಿನ ಮಟ್ಟ: 2,174.58
ಒಳಹರಿವು: 0
ಹೊರಹರಿವು: 164

ತುಂಗಾ (ಮೀ)

ಗರಿಷ್ಠ ಮಟ್ಟ (ಅಡಿಗಳಲ್ಲಿ): 588.24
ಇಂದಿನ ಮಟ್ಟ: 588.24
ಒಳಹರಿವು: 1,277
ಹೊರಹರಿವು: 1,277

ಭದ್ರಾ ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ): 186
ಇಂದಿನ ಮಟ್ಟ: 173.3
ಒಳಹರಿವು: 224
ಹೊರಹರಿವು: 768

ಆಲಮಟ್ಟಿ ಜಲಾಶಯ

ಗರಿಷ್ಠ ಮಟ್ಟ (ಮೀ.ಗಳಲ್ಲಿ): 519.60
ಇಂದಿನ ಮಟ್ಟ: 517.85
ಒಳಹರಿವು: 0
ಹೊರಹರಿವು: 16,053

ನಾರಾಯಣಪುರ ಜಲಾಶಯ

ಗರಿಷ್ಠ ಮಟ್ಟ (ಮೀ. ಗಳಲ್ಲಿ): 492.25
ಇಂದಿನ ಮಟ್ಟ: 490.08
ಒಳಹರಿವು: 6,285
ಹೊರಹರಿವು: 16,686

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+