Cabinet Expansion: ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಇಲ್ಲ ಮಂತ್ರಿಭಾಗ್ಯ: ಫೈನಲ್ ಆದ ಸಚಿವರ ಪಟ್ಟಿ ಇಲ್ಲಿದೆ
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕಳೆದ ಎರಡು ತಿಂಗಳಿನಿಂದ ಕುತೂಹಲ ಕೆರಳಿಸಿದ್ದ ಸಚಿವ ಸಂಪುಟ ವಿಸ್ತರಣೆ ಕಸರತ್ತಿಗೆ ತೆರೆ ಬಿದ್ದಿದೆ. ಇಂದು ಸಂಜೆ ಪ್ರಮಾಣ ವಚನ ಸ್ವೀಕರಿಸಲಿರುವ ಹೊಸ ಸಚಿವರ ಯಾರು ಎಂಬ ಪಟ್ಟಿ ಇಲ್ಲಿದೆ. ಈ ಪಟ್ಟಿಯಲ್ಲಿ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಸ್ಥಾನ ಸಿಕಿಲ್ಲ. ಈ ಬಾರಿ ಮತ್ತೊಬ್ಬ ಮಹಿಳಾ ಶಾಸಕಿಗೆ ಕಾಂಗ್ರೆಸ್ ಮಣೆ ಹಾಕಿದೆ. ಜೊತೆ ಆಡಿಯೋ ಲೀಕ್ ಆಗಿ ಮಂತ್ರಿ ಸ್ಥಾನ ಕಳೆದುಕೊಳ್ಳಲಿದ್ದಾರೆ ಎನ್ನಲಾಗಿದ್ದ ಶಾಸಕ ಜಮೀರ್ ಅಹ್ಮದ್ ಖಾನ್ ಅವರಿಗೆ ಪಟ್ಟಿಯಲ್ಲಿ ಸ್ಥಾನ ಲಭಿಸಿದೆ
ಇಂದು ಸೋಮವಾರ (ಆಗಸ್ಟ್ 3) ಸಂಜೆ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಜೂನ್ 3ರಂದು ಸಿಎಂ ಜತೆಗೆ 13 ಸಚಿವರು ಅಧಿಕಾರ ಸ್ವೀಕರಿಸಿದ್ದರು. ಇದೀಗ ಬಾಕಿ ಉಳಿದ 20 ಸಚಿವ ಸ್ಥಾನಗಳಿಗೆ ಶಾಸಕರು ಆಯ್ಕೆ ಆಗಿದ್ದು ಅವರೆಲ್ಲ ಇಂದು ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ಸೇರಲಿದ್ದಾರೆ.

ರಾಜ್ಯದ ನೂತನ ಸಚಿವರ ಪಟ್ಟಿ, ಹೆಸರುಗಳು ಇಲ್ಲಿವೆ
1. ಪುಟ್ಟರಂಗಶೆಟ್ಟಿ
2. ನರೇಂದ್ರ ಸ್ವಾಮಿ
3. ಎಸ್. ಎಸ್. ಮಲ್ಲಿಕಾರ್ಜುನ್
4. ಲಕ್ಷ್ಮಣ ಸವದಿ
5. ಕೆ.ಎಂ.ಶಿವಲಿಂಗೇಗೌಡ
6. ಬಸವಂತಪ್ಪ
7. ರುದ್ರಪ್ಪ ಲಮಾಣಿ,
8. ಜಮೀರ್ ಅಹ್ಮದ್
9. ವಿಜಯಾನಂದ ಕಾಶಪ್ಪನವರ
10. ಎಚ್, ಸಿ ಬಾಲಕೃಷ್ಣ
11. ಸಂತೋಷ್ ಲಾಡ್,
12. ಚೆಲುವರಾಯ ಸ್ವಾಮಿ
13. ಶಿವರಾಜ್ ತಂಗಡಗಿ
14. ಡಾ. ಅಜಯ್ ಸಿಂಗ್
15. ಬಸವರಾಜ್ ರಾಯರೆಡ್ಡಿ
16. ರಿಜ್ವಾನ್ ಅರ್ಷದ್
17. ಟಿ. ರಘುಮೂರ್ತಿ
18. ಗಾಯಿತ್ರಿ ಶಾಂತೇಗೌಡ
19. ಮಧು ಬಂಗಾರಪ್ಪ
20. ಮಾಂಕಾಳ ವೈದ್ಯ
ಸಮುದಾಯವಾರು, ಜಾತಿವಾರು ಹಾಗೂ ಜಿಲ್ಲಾ/ಪ್ರದೇಶವಾರು ನಾಯಕರಿಗೆ ಜೊತೆಗೆ ಯುವ ಶಾಸಕರಿಗೆ ಮಣೆ ಹಾಕಲಾಗಿದೆ. ನಿರಂತರ ಸರಣಿ ಸಭೆಗಳ ಬಳಿಕ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ, ಎಐಸಿಸಿ ಮಲ್ಲಿಕಾರ್ಜುನ್ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಿಎಂ ಡಿಕೆ ಶಿವಕುಮಾರ್, ರಣದೀಪ್ ಸಿಂಗ್ ಸುರ್ಜೇವಾಲ, ಕೆ.ಸಿ.ವೇಣುಗೋಪಾಲ್ ಸೇರಿದಂತೆ ವರಿಷ್ಠರು ಸೇರಿ ಪಟ್ಟಿ ಫೈನಲ್ ಮಾಡಿದ್ದಾರೆ.
ಈ ಪಟ್ಟಿಯಲ್ಲಿರುವ ಶಾಸಕರು ನೂತನ ಸಚಿವರಾಗಿ ಪ್ರಮುಖ ಖಾತೆಗೆ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಯಾರಿಗೆ ಯಾವ ಖಾತೆ ಎಂಬ ಮಾಹಿತಿ ಸಿಗಬೇಕಿದೆ. ಸಂಪುಟ ವಿಸ್ತರಣೆ ಬಳಿಕವೂ ಒಂದಷ್ಟು ಅಸಮಾಧಾನ ಭುಗಿಲೇಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಜಾತಿವಾರು ಲೆಕ್ಕಾಚಾರದಲ್ಲಿ ಸಚಿವರು ಫೈನಲ್
ಎಸ್ಎಸ್ ಮಲ್ಲಿಕಾರ್ಜುನ್- ದಾವಣಗೆರೆ-ಲಿಂಗಾಯತ
ವಿಜಯಾನಂದ ಕಾಶಪ್ಪನವರ್, ಹುನಗುಂದ- ಪಂಚಮಸಾಲಿ
ಬಸವರಾಜ ರಾಯರೆಡ್ಡಿ, ಯಲಬುರ್ಗಾ-ಲಿಂಗಾಯತ
ಎಚ್.ಸಿ ಬಾಲಕೃಷ್ಣ, ಮಾಗಡಿ- ಒಕ್ಕಲಿಗ
ಶಿವರಾಜ್ ತಂಗಡಗಿ- ಕನಕಗಿರಿ- ದಲಿತ
ಅಜಯ್ ಸಿಂಗ್- ಜೇವರ್ಗಿ- ರಜಪೂತ
ಶಿವಲಿಂಗೇಗೌಡ- ಅರಸೀಕರೆ-ಒಕ್ಕಲಿಗ
ಜಮೀರ್ ಅಹ್ಮದ್- ಚಾಮರಾಜಪೇಟೆ- ಮುಸ್ಲಿಂ
ಚಲುವರಾಯಸ್ವಾಮಿ- ಮಂಡ್ಯ-ಒಕ್ಕಲಿಗ
ಟಿ.ರಘುಮೂರ್ತಿ- ಚಳ್ಳಕೆರೆ-ವಾಲ್ಮೀಕಿ
ಲಕ್ಷ್ಮಣ್ ಸವದಿ - ಅಥಣಿ- ಲಿಂಗಾಯಿತ
ಗಾಯತ್ರಿ ಶಾಂತೇಗೌಡ- ಎಂಎಲ್ಸಿ, ಒಕ್ಕಲಿಗ (ಪಟ್ಟಿಯಿಂದ ಕೈಬಿಡಲಾಗಿದೆ)
ಮಧು ಬಂಗಾರಪ್ಪ- ಸೊರಬ-ಈಡಿಗ
ರುದ್ರಪ್ಪ ಲಮಾಣಿ- ಹಾವೇರಿ- ಲಂಬಾಣಿ
ರಿಜ್ವಾನ್ ಅರ್ಷದ್- ಶಿವಾಜಿನಗರ- ಮುಸ್ಲಿಂ
ಪುಟ್ಟರಂಗಶೆಟ್ಟಿ- ಚಾಮರಾಜನಗರ- ಉಪ್ಪಾರ
ಸಂತೋಷ್ ಲಾಡ್- ಕಲಘಟಗಿ- ಮರಾಠ
ಮಂಕಾಳು ವೈದ್ಯ- ಭಟ್ಕಳ-ದಲಿತ-ಎಡ
ನರೇಂದ್ರ ಸ್ವಾಮಿ- ಮಳವಳ್ಳಿ- ದಲಿತ-ಬಲ
ಕೆ.ಎಸ್ ಬಸವಂತಪ್ಪ- ಮಾಯಕೊಂಡ-ದಲಿತ-ಎಡ
ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಂಬಂಧ ಸಚಿವರ ಅಧಿಕೃತ ಪಟ್ಟಿ ಬಿಡುಗಡೆ ಆಗುತ್ತಿದ್ದಂತೆ ಇತರ ಸಚಿವಾಕಾಂಕ್ಷಿಗಳಲ್ಲಿ ಅಸಮಾಧಾನ ಭುಗಿಲೆದ್ದಿದೆ. ಗಾಯತ್ರಿ ಶಾಂತೇಗೌಡ ಅವರನ್ನು ಕೈಬಿಡುವಂತೆ ಒತ್ತಾಯ ಹೆಚ್ಚಾಗಿದೆ. ಹಾವೇರಿಯ ಯಾಸಿರ್ ಖಾನ್ ಪಠಾಣ್ ಬೆಂಬಲಿಗರು ಆಕ್ರೋಶ ಹೊರ ಹಾಕಿದ್ದಾರೆ. ಕೆಲವು ಶಾಸಕರ ಬೆಂಬಲಿಗರು ತಮ್ಮ ನಾಯಕರಿಗೆ ಸಚಿವ ಸ್ಥಾನ ನೀಡುವಂತೆ ಪ್ರತಿಭಟನೆಗೆ ಮುಂದಾಗಿದ್ದಾರೆ.


Click it and Unblock the Notifications
