ಕರ್ನಾಟಕ ವಿಧಾನಸಭಾ ಚುನಾವಣೆ: 2018 Vs 2013 ಗ್ರಾಫಿಕ್ಸ್ ನಲ್ಲಿ

ಹದಿನಾರನೇ ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಹಿರಂಗ ಪ್ರಚಾರ ಮುಗಿಯಲು ಇನ್ನು ಎರಡು ದಿನ ಬಾಕಿ ಉಳಿದುಕೊಂಡಿದೆ. ಪ್ರಧಾನಿ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ ಸೇರಿದಂತೆ ಹಲವು ಬಿಜೆಪಿ ಹಿರಿಯ ಮುಖಂಡರು ರಾಜ್ಯದಲ್ಲೇ ಮೊಕ್ಕಾಂ ಹೂಡಿ ಪಕ್ಷದ ಪರವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಇನ್ನು, ಹಾಲೀ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹುಬ್ಬಳ್ಳಿಯಲ್ಲಿ ಪ್ರಚಾರ ಮಾಡಿದ್ದಾರೆ. ರಾಹುಲ್ ಮತ್ತು ಪ್ರಿಯಾಂಕ ಗಾಂಧಿ ಕೂಡಾ ಬರದಿಂದ ಪಕ್ಷದ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ. ಜೆಡಿಎಸ್ಸಿನಿಂದ ದೇವೇಗೌಡ್ರು ಮತ್ತು ಕುಮಾರಸ್ವಾಮಿ ಕೂಡಾ ಮತಬೇಟೆ ನಡೆಸುತ್ತಿದ್ದಾರೆ.

Karnataka Assembly Elections, Comparison 2013 Vs 2018 In Flourish Graphics

ಕಳೆದ ಎರಡು ಚುನಾವಣೆಗೆ (2018 Vs 2013) ಹೋಲಿಸಿದರೆ ಮೂರು ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಸ್ ಗಳಿಸಿದ ಮತಗಳೆಷ್ಟು, ಸೀಟುಗಳೆಷ್ಟು, ಚುನಾವಣೆಯ ನಾಯಕತ್ವವನ್ನು ವಹಿಸಿಕೊಂಡವರು ಯಾರು ಎನ್ನುವುದನ್ನು ಫ್ಲೋರಿಸ್ ಡಿಸೈನ್ ಮೂಲಕ ಗ್ರಾಫಿಕ್ಸ್ ನಲ್ಲಿ ಕೆಳಗೆ ನೀಡಲಾಗಿದೆ.

2013ರ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಮುಂದಾಳತ್ವವನ್ನು ಸಿದ್ದರಾಮಯ್ಯ ವಹಿಸಿಕೊಂಡಿದ್ದರು. ಇನ್ನು, ಬಿಜೆಪಿಯ ಮುಂದಾಳತ್ವನ್ನು ಜಗದೀಶ್ ಶೆಟ್ಟರ್ ಆದಿಯಾಗಿ ಪ್ರಮುಖ ನಾಯಕರು ವಹಿಸಿಕೊಂಡಿದ್ದರು. ಜೆಡಿಎಸ್ ಕುಮಾರಸ್ವಾಮಿಯವರ ನೇತೃತ್ವದಲ್ಲಿ ಚುನಾವಣೆಯನ್ನು ಎದುರಿಸಿತ್ತು. ಆ ವೇಳೆ, ಯಡಿಯೂರಪ್ಪನವರು ಕೆಜೆಪಿಯನ್ನು ಕಟ್ಟಿ ಚುನಾವಣೆ ಎದುರಿಸಿದ್ದರು.

ಆ ಚುನಾವಣೆಯಲ್ಲಿ ಕಾಂಗ್ರೆಸ್ ಶೇ. 36.6 ಮತವನ್ನು ಪಡೆದಿತ್ತು. ಇನ್ನು, ಬಿಜೆಪಿ ಶೇ. 19.9, ಜೆಡಿಎಸ್ ಶೇ. 20.2 ಮತವನ್ನು 2013ರ ಚುನಾವಣೆಯಲ್ಲಿ ಪಡೆದಿತ್ತು. ಕಾಂಗ್ರೆಸ್ 122, ಬಿಜೆಪಿ ಮತ್ತು ಜೆಡಿಎಸ್ ತಲಾ ನಲವತ್ತು ಸ್ಥಾನವನ್ನು ಪಡೆದಿತ್ತು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಪೂರೈಸಿದ್ದರು.

ಅದೇ ರೀತಿಯಲ್ಲಿ 2018ರ ಚುನಾವಣೆಯನ್ನು ಕಾಂಗ್ರೆಸ್ ಅದಮ್ಯ ವಿಶ್ವಾಸದಿಂದ ಎದುರಿಸಿತ್ತು. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಚುನಾವಣೆ ಎದುರಿಸಿತ್ತು. ಇನ್ನು, ಬಿಜೆಪಿ ಯಡಿಯೂರಪ್ಪನವರ ಮತ್ತು ಜೆಡಿಎಸ್ ಎಚ್.ಡಿ.ಕುಮಾರಸ್ವಾಮಿಯವರ ಮುಂದಾಳತ್ವದಲ್ಲಿ ಪ್ರಚಾರಕ್ಕೆ ಧುಮುಕಿತ್ತು.

2018ರ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗದೇ ಅತಂತ್ರ ಫಲಿತಾಂಶ ಬಂದಿತ್ತು. ಬಿಜೆಪಿಗೆ ಶೇ. 36.35, ಕಾಂಗ್ರೆಸ್ಸಿಗೆ ಶೇ. 38.14, ಜೆಡಿಎಸ್ ಶೇ. 18.3 ಮತವನ್ನು ಪಡೆದಿತ್ತು. ಕಾಂಗ್ರೆಸ್ ಹೆಚ್ಚಿನ ವೋಟ್ ಶೇರ್ ಪಡೆದಿದ್ದರೂ ಎಂಬತ್ತು ಸ್ಥಾನವನ್ನು ಪಡೆದುಕೊಳ್ಳಲು ಶಕ್ತವಾಗಿತ್ತು. ಬಿಜೆಪಿಗೆ 104, ಜೆಡಿಎಸ್ಸಿಗೆ 37ಸ್ಥಾನವು ದಕ್ಕಿತ್ತು.

ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರಕಾರ ನಡೆಸಿತ್ತು, ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದರು. ಇದಾದ ನಂತರ ನಡೆದ ಆಪರೇಶನ್ ಕಮಲದ ಮೂಲಕ ಬಿಜೆಪಿಗೆ ಅಧಿಕಾರಕ್ಕೆ ಬಂತು. ಯಡಿಯೂರಪ್ಪ ನಂತರ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+