Live

Karnataka Election 2023 Live: 'ಕನಕಪುರ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್​​ ನಡುವೆ ಫೈಟ್​ ಕಾಣಿಸುತ್ತಿಲ್ಲ' ಆರ್ ಅಶೋಕ್

'ಬಂಡೆ' ಎಂದೇ ಫೇಮಸ್ ಆಗಿರುವ ಡಿಕೆ ಬ್ರದರ್ಸ್ ವಿರುದ್ಧ ಬಿಜೆಪಿ ರಣತಂತ್ರ ರೂಪಿಸಿದೆ. ಅಶೋಕ್ ಮುಂದಾಳತ್ವದಲ್ಲೇ ಕನಕಪುರ ಕೋಟೆ ಗೆಲ್ಲಲು ಬಿಜೆಪಿ ಸಿದ್ಧವಾಗಿದೆ. ಆದರೆ ಕಾಂಗ್ರೆಸ್ ಭದ್ರಕೋಟೆ ಛಿದ್ರಗೊಳಿಸಲು ಕಮಲ ಪಾಳಯ ಸಕ್ಸಸ್ ಆಗುತ್ತಾ? ಡಿ.ಕೆ. ಶಿವಕುಮಾರ್ ವಿರುದ್ಧ ಬಿಜೆಪಿ ಹೆಣೆದಿರುವ ರಣತಂತ್ರ ವರ್ಕೌಟ್ ಆಗುತ್ತಾ? ಎಂಬ ಕುತೂಹಲ ಇಡೀ ರಾಜ್ಯವನ್ನು ಕಾಡುತ್ತಿದೆ. ಮತ್ತೊಂದು ಕಡೆ ಇಂದು ಸ್ವತಃ ಡಿ.ಕೆ. ಶಿವಕುಮಾರ್ ಊರಿಗೂ ಲಗ್ಗೆ ಇಟ್ಟು ಪ್ರಚಾರ ಮಾಡಿ ಬಂದಿದ್ದಾರೆ ಆರ್. ಅಶೋಕ್. ಆದರೆ ಇದೇ ಸಂದರ್ಭದಲ್ಲಿ ಗಂಭೀರ ಆರೋಪ ಒಂದನ್ನ ಅಶೋಕ್ ಮಾಡಿದ್ದಾರೆ.

ಕನಕಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್​​ ನಡುವೆ ಫೈಟ್​ ಕಾಣಿಸುತ್ತಿಲ್ಲ ಎಂದು ಆರ್​. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಇದು ಒಳ ಒಪ್ಪಂದವೋ ಅಥವಾ ಹೊರ ಒಪ್ಪಂದವೋ ಗೊತ್ತಿಲ್ಲ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರನ್ನು ಕೆಣಕಿದ್ದಾರೆ. ಡಿಕೆಶಿಗೆ ಫೈಟ್​ ಕೊಡೋದು ಆರ್. ಅಶೋಕ್ ಮಾತ್ರ ಎಂಬುದು ಜನರಿಗೂ ಅನ್ನಿಸಿದೆ. ಡಿ.ಕೆ.ಶಿವಕುಮಾರ್​ ಹುಟ್ಟೂರಿನಲ್ಲೂ ನನಗೆ ಭರ್ಜರಿ ಸ್ವಾಗತ ಸಿಕ್ಕಿದೆ ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.

ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದ ಚುನಾವಣೆ ನಡೆಯಲಿದ್ದು, ಈಗಾಗಲೇ ನಾಮಪತ್ರ ಸಲ್ಲಿಕೆ ದಿನಾಂಕ ಏಪ್ರಿಲ್ 20ಕ್ಕೆ ಕೊನೆಗೊಂಡಿದೆ. ಏಪ್ರಿಲ್ 21ಕ್ಕೆ ನಾಮ ಪತ್ರ ಪರಿಶೀಲನೆ ಕೂಡ ಮುಗಿದಿದೆ. ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ. ಇನ್ನು ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಶನಿವಾರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಮೇ 15 ರೊಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.

Karnataka election 2023

ಪ್ರತಿದಿನ ಈ ಲೈವ್ ಪುಟ್ ಅಪ್‌ಡೇಟ್ ಆಗಲಿದೆ. ನಿಮ್ಮ ಕ್ಷೇತ್ರದ ಚಿತ್ರಣ, ನಾಯಕರ ಮಾತಿನ ಜಟಾಪಟಿ, ಟಿಕೆಟ್ ಘೋಷಣೆ, ಪಕ್ಷಗಳ ಪ್ರಣಾಳಿಕೆ ಸೇರಿದಂತೆ ಚುನಾವಣಾ ಸಂಪೂರ್ಣ ಚಿತ್ರಣಕ್ಕಾಗಿ ಈ ಪುಟವನ್ನು ಕ್ಲಿಕ್ ಮಾಡಿ, ಬುಕ್ ಮಾರ್ಕ್ ಮಾಡಿ ಇಟ್ಟುಕೊಳ್ಳಿ...ಮತದಾನದ ದಿನ ತಪ್ಪದೇ ನಿಮ್ಮ ಹಕ್ಕು ಚಲಾವಣೆ ಮಾಡಿ....

Apr 25, 2023, 5:24 pm IST

ಬಿಜೆಪಿ ನಂದಿನಿಯನ್ನು ನಾಶ ಮಾಡಲು ಹೊರಟಿದೆ-ಪ್ರಿಯಾಂಕ ಗಾಂಧಿ

ಮೈಸೂರು:ಬಿಜೆಪಿ ಜನರಿಗೆ ಅನ್ಯಾಯ ಮಾಡಿದೆ. ಸೌಲಭ್ಯಗಳನ್ನು ನೀಡದೆ ವಂಚಿಸಿದೆ. ಮೀಸಲಾತಿ ಹೆಸರಲ್ಲೂ ಜನರ ಕಣ್ಣಿಗೆ ಮಂಕು ಬೂದಿ ಎರಚಿದೆ. ಸಂವಿಧಾನಕ್ಕೆ ತಿದ್ದುಪಡಿ ತರದೇ ಕೇವಲ ಬಿಲ್ ಪಾಸ್ ಮಾಡಿದೆ. ಇದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ಎಲ್ಲಾಕ್ಕಿಂತ ಹೆಚ್ಚಾಗಿ ನಂದಿನಿ ಬ್ರ್ಯಾಂಡ್ ನಾಶ ಮಾಡಲು ಹೊರಟಿದೆ. ಅಮೂಲ್ ಉತ್ಪನ್ನಗಳಿಗೆ ಹೆಚ್ಚು ಒತ್ತು ನೀಡುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಆರೋಪಿಸಿದರು. ಕಾಂಗ್ರೆಸ್ ಸರ್ಕಾರ ಕ್ಷೀರಭಾಗ್ಯ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿತ್ತು. ರೈತರಿಗೂ ಸಬ್ಸಿಡಿ ನೀಡಿತ್ತು. ಹಲವು ಭಾಗ್ಯಗಳ ಮೂಲಕ 5 ವರ್ಷಗಳ ಉತ್ತಮ ಆಡಳಿತ ನೀಡಿತ್ತು. ಆದರೆ, ಬಿಜೆಪಿ ಹಾಲಿನ ವಿಷಯದಲ್ಲೀ ರಾಜಕೀಯ ಮಾಡುತ್ತಿದೆ. 90 ಲಕ್ಷ ಲೀಟರ್ ಹಾಲು ಉತ್ಪಾದನೆಯನ್ನು 70 ಲಕ್ಷಕ್ಕೆ ಇಳಿಸಿತು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
Apr 23, 2023, 6:47 pm IST

ಕನಕಪುರ: 'ಕೈ-ತೆನೆಯ​​ ನಡುವೆ ಫೈಟ್​ ಕಾಣಿಸುತ್ತಿಲ್ಲ' ಆರ್ ಅಶೋಕ್

‘ಬಂಡೆ’ ಎಂದೇ ಫೇಮಸ್ ಆಗಿರುವ ಡಿಕೆ ಬ್ರದರ್ಸ್ ವಿರುದ್ಧ ಬಿಜೆಪಿ ರಣತಂತ್ರ ರೂಪಿಸಿದೆ. ಅಶೋಕ್ ಮುಂದಾಳತ್ವದಲ್ಲೇ ಕನಕಪುರ ಕೋಟೆ ಗೆಲ್ಲಲು ಬಿಜೆಪಿ ಸಿದ್ಧವಾಗಿದೆ. ಆದರೆ ಕಾಂಗ್ರೆಸ್ ಭದ್ರಕೋಟೆ ಛಿದ್ರಗೊಳಿಸಲು ಕಮಲ ಪಾಳಯ ಸಕ್ಸಸ್ ಆಗುತ್ತಾ? ಡಿ.ಕೆ. ಶಿವಕುಮಾರ್ ವಿರುದ್ಧ ಬಿಜೆಪಿ ಹೆಣೆದಿರುವ ರಣತಂತ್ರ ವರ್ಕೌಟ್ ಆಗುತ್ತಾ? ಎಂಬ ಕುತೂಹಲ ಇಡೀ ರಾಜ್ಯವನ್ನು ಕಾಡುತ್ತಿದೆ. ಮತ್ತೊಂದು ಕಡೆ ಇಂದು ಸ್ವತಃ ಡಿ.ಕೆ. ಶಿವಕುಮಾರ್ ಊರಿಗೂ ಲಗ್ಗೆ ಇಟ್ಟು ಪ್ರಚಾರ ಮಾಡಿ ಬಂದಿದ್ದಾರೆ ಆರ್. ಅಶೋಕ್. ಆದರೆ ಇದೇ ಸಂದರ್ಭದಲ್ಲಿ ಗಂಭೀರ ಆರೋಪ ಒಂದನ್ನ ಅಶೋಕ್ ಮಾಡಿದ್ದಾರೆ.
Apr 23, 2023, 4:51 pm IST

ಕೂಡಲಸಂಗಮ: ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ರಾಹುಲ್ ಗಾಂಧಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಕೂಡಲ ಸಂಗಮದಲ್ಲಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
Apr 23, 2023, 2:18 pm IST

ಏನು ಕೆಲಸ ಮಾಡಿದ್ದೀರಿ ಎಂದಿದ್ದಕ್ಕೆ ಯುವಕನಿಗೆ ಕಪಾಳಮೋಕ್ಷ ಮಾಡಿದ ಎಂಬಿ ಪಾಟೀಲ್

ಬಬಲೇಶ್ವರ ಕ್ಷೇತ್ರದ ದೇವಾಪೂರ ಗ್ರಾಮದ ಯುವಕನಿಗೆ ಕಾಂಗ್ರೆಸ್ ಅಭ್ಯರ್ಥಿ ಕಪಾಳಮೋಕ್ಷ 5 ವರ್ಷಗಳ ನಂತರ ನಮ್ಮ ಗ್ರಾಮಕ್ಕೆ ಆಗಮಿಸಿದ್ದೀರಿ, ಗ್ರಾಮದಲ್ಲಿ ಏನು ಅಭಿವೃದ್ಧಿ ಮಾಡಿದ್ದೀರಿ ಎಂದು ಪ್ರಶ್ನಿಸಿದ ಯುವಕ ಇದರಿಂದ ಕೋಪಗೊಂಡು ತುಂಬಿದ ಸಭೆಯಲ್ಲೇ ಯುವಕನ ಕೆನ್ನೆಗೆ ಬಾರಿಸಿದ ಎಂ.ಬಿ. ಪಾಟೀಲ್ ಎಂ.ಬಿ ಪಾಟೀಲ್ ಕೃತ್ಯಕ್ಕೆ ಮತದಾರರಿಂದ ತೀವ್ರ ಅಸಮಾಧಾನ.
Apr 23, 2023, 11:28 am IST

'ಸಮಾಜದ ಆತ್ಮವನ್ನು ಕದಡುವ ಕೆಲಸ' ಸಿದ್ದು ವಿರುದ್ದ ಸಿಎಂ ಕಿಡಿ

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ 'ಭ್ರಷ್ಟ ಸಿಎಂ' ಹೇಳಿಕೆಗೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದರು. 'ಇಡೀ ಸಮುದಾಯವನ್ನು ಭ್ರಷ್ಟ ಅನ್ನೋದು ನೋವಾಗಿದೆ. ಸಿದ್ದರಾಮಯ್ಯ ಹಿರಿಯ ನಾಯಕರು. ಅವರಿಂದ ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಸಮಾಜದ ಆತ್ಮವನ್ನು ಕದಡುವ ಕೆಲಸ ಮಾಡಿದ್ದಾರೆ. ಇದು ಕಾಂಗ್ರೆಸ್ ಸಂಸ್ಕೃತಿ ಎನಿಸುತ್ತಿದೆ. ಇದು ಅವರ ಸ್ಥಾನಕ್ಕೆ ಘನತೆಯನ್ನು ತಂದು ಕೊಡುವುದಿಲ್ಲ. ಮುಂದಿನ ದಿನಗಳಲ್ಲಿ ಜನ ಇದಕ್ಕೆ ತಕ್ಕ ಉತ್ತರ ನೀಡುತ್ತಾರೆ' ಎಂದು ಬೊಮ್ಮಾಯಿ ಹೇಳಿದರು.
Apr 23, 2023, 11:23 am IST

ಸವದಿಗೆ ಸೀಟ್ ಕೊಟ್ಟಿಲ್ಲ, ರಮ್ಯಾಗೆ ಎಲ್ಲಿಂದ ಕೊಡೋಣ? ಆರ್‌ ಅಶೋಕ್ ಟಾಂಗ್

ಬಿಜೆಪಿಯಿಂದ ನನಗೆ ಆಫರ್ ಬಂದಿತ್ತು ಎಂದು ನಟಿ ರಮ್ಯಾ ಹೇಳಿಕೊಂಡಿದ್ದರು. ಈ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಆರ್‌ ಅಶೋಕ್, 'ನಮ್ಮಲ್ಲಿ ಸವದಿ ಅವರಿಗೆ ಸೀಟ್ ಕೊಟ್ಟಿಲ್ಲ. ಹೀಗಿರುವಾಗ ರಮ್ಯಾ ಅವರಿಗೆ ಸೀಟ್ ಎಲ್ಲಿಂದ ಕೊಡೋಣ. ನಮ್ಮ ಪಕ್ಷದವರು ಯಾರೂ ಕೂಡ ರಮ್ಯಾ ಅವರನ್ನು ಪಕ್ಷಕ್ಕೆ ಬನ್ನಿ ಅಂತ ಕರೆದಿಲ್ಲ. ಅವರು ಕಾಂಗ್ರೆಸ್‌ ನ ಮೀಡಿಯಾ ಇಂಚಾರ್ಜ್ ಆಗಿ ಕೆಲ ಮಾಡಿದವರು. ಇದರಿಂದ ಕಾಂಗ್ರೆಸ್‌ಗೆ ಲಾಭ ಆಗಲಿ ಅಂತ ಈ ರೀತಿ ಮಾತನಾಡಿದ್ದಾರೆ' ಎಂದು ಆರ್‌ ಅಶೋಕ್ ಟಾಂಗ್ ಕೊಟ್ಟಿದ್ದಾರೆ.
Apr 23, 2023, 11:22 am IST

ಬೆಂಗಳೂರಿನ ಯಲಹಂಕದಲ್ಲಿ ಸಿಎಂ ಬೊಮ್ಮಾಯಿ ರೋಡ್ ಶೋ

ಚುನಾವಣೆಗೆ ಹದಿನೇಳು ದಿನಗಳು ಬಾಕಿ ಇವೆ. ಇದರಿಂದ ಬಿಜೆಪಿ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಬೆಂಗಳೂರಿನ ಯಲಹಂಕದಲ್ಲಿ ಇಂದು ಭರ್ಜರಿ ರೋಡ್ ಶೋನಲ್ಲಿ ಭಾಗಿಯಾಗಿದ್ದಾರೆ. ರೋಡ್ ಶೋನಲ್ಲಿ ಅಧಿಕ ಸಂಖ್ಯೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಭಾಗಿವಹಿಸಿ ಬೆಂಬಲ ನೀಡಿರುವುದು ಕಂಡು ಬಂದಿದೆ.
Apr 23, 2023, 11:07 am IST

ಸೋಮಣ್ಣ ಎದುರು ಸಿದ್ದು ಪರ ಘೋಷಣೆ ಕೂಗಿದ ಕಾರ್ಯಕರ್ತರು

ವರುಣಾ ಪ್ರಚಾರದ ವೇಳೆ ಇಂದು ವಿ ಸೋಮಣ್ಣ ಎದುರು ಸಿದ್ದರಾಮಯ್ಯ ಪರ ಘೋಷಣೆಗಳನ್ನು ಕಾರ್ಯಕರ್ತರು ಕೂಗಿದ್ದಾರೆ. ವರುಣಾದಲ್ಲಿ ಸೋಮಣ್ಣ ಪ್ರಚಾರಕ್ಕೆ ಅಡ್ಡಪಡಿಸಲಾಗಿದೆ. ಭೂಗತಹಳ್ಳಿ ಗ್ರಾಮದಲ್ಲಿ ಪ್ರಚಾರದ ವೇಳೆ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ.
Apr 23, 2023, 10:28 am IST

ಚಂಡಿಕಾ ಯಾಗದಲ್ಲಿ ಭಾಗವಹಿಸಲಿರುವ ಡಿಕೆ ಶಿವಕುಮಾರ್

ಚುನಾವಣೆ ಪ್ರಯುಕ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವ ಕುಮಾರ್ ಟೆಂಪಲ್ ರನ್ ಶುರು ಮಾಡಿದ್ದಾರೆ. ಇಂದು ಬೆಳಗ್ಗೆ 9 ಗಂಟೆಯಿಂದ 12 ಗಂಟೆವರೆಗೆ ನಡೆಯಲಿರುವ ಚಂಡಿಕಾ ಯಾಗದಲ್ಲಿ ಡಿಕೆ ಶಿವಕುಮಾರ್ ಹಾಗೂ ಅವರ ಕುಟುಂಬಸ್ಥರು ಭಾಗವಹಿಸಲಿದ್ದಾರೆ. ಶನಿವಾರ ಯಾಗದ ಸಂಕಲ್ಪ ಮಾಡಿದ್ದರು. ಭಾನುವಾರ ಯಾಗದ ಪೂರ್ಣಾಹುತಿ ನಡೆಯಲಿದ್ದು ಡಿ.ಕೆ.ಶಿವಕುಮಾರ್ ಕುಟುಂಬ ಸಮೇತರಾಗಿ ಪಾಲ್ಗೊಂಡಿದ್ದಾರೆ. 15 ಜನ ಋತ್ವಿಜರಿಂದ‌ ಯಾಗ ನಡೆಯಲಿದೆ.
Apr 22, 2023, 11:07 pm IST

ಭ್ರಷ್ಟ ಸಿಎಂ ಹೇಳಿಕೆಗೆ ಸಿದ್ದರಾಮಯ್ಯ ಸ್ಪಷ್ಟನೆ

ಬಸವರಾಜ ಬೊಮ್ಮಾಯಿಗೆ ಮಾತ್ರ ಭ್ರಷ್ಟ ಸಿಎಂ ಅಂತಾ ಹೇಳಿದ್ದೇನೆ. ಲಿಂಗಾಯತ ಸಮುದಾಯದ ಬಗ್ಗೆ ಅಪಾರ ಗೌರವವಿದೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿಎಂ ಬೊಮ್ಮಾಯಿಗೆ ಸೀಮಿತವಾಗಿ ಮಾತ್ರ ನಾನು ಹೇಳಿಕೆ ನೀಡಿದ್ದೇನೆ ಎಂದು ಹೇಳಿದರು.
Apr 22, 2023, 4:15 pm IST

'ರಾಗಿ ಕಳ್ಳ' ಎಂದಿದ್ದ ಹೆಚ್‌ ಡಿ ರೇವಣ್ಣಗೆ ಶಿವಲಿಂಗೇಗೌಡ ತಿರುಗೇಟು

'ರಾಗಿ ಕಳ್ಳ' ಎಂದಿದ್ದ ಹೆಚ್‌ ಡಿ ರೇವಣ್ಣಗೆ ಶಿವಲಿಂಗೇಗೌಡರು ತಿರುಗೇಟು ಕೊಟ್ಟಿದ್ದಾರೆ. ಇಂದು ಹಾಸನದಲ್ಲಿ ಮಾತನಾಡಿದ ಅವರು, 'ಇವರೇನ್ ನನ್ನ ವಿರುದ್ಧ ಆರೋಪ ಮಾಡೋದು. ಇವರೇನ್ ಗಳಿಸಿ ನನಗೆ ಕೊಟ್ಟಿದ್ದಾರೆ. ನನಗೆ ಗೊತ್ತಿದೆ ನಾನೇನು ಮಾಡಿದಿನಿ ಅಂತ. ನಾನು ನಿಂತಾಗಲೇ ಎಂಬತ್ತು ಸಾವಿರ ಓಟು ಬಂದಿತ್ತು. ಈ ಬಾರಿ ಅರಸೀಕೆರೆಯಲ್ಲಿ ಗೆದ್ದು ತೋರಿಸಲಿ ಎಂದು ಶಿವಲಿಂಗೇಗೌಡರು ಸವಾಲು ಹಾಕಿದ್ದಾರೆ.
Apr 22, 2023, 4:12 pm IST

'ಧರ್ಮ ಒಡೆಯಲು ಕಾಂಗ್ರೆಸ್ ಪ್ರಯತ್ನ' ಶಂಕರ್ ಪಾಟೀಲ್ ಮುನೇನಕೊಪ್ಪ

ಹುಬ್ಬಳ್ಳಿಯಲ್ಲಿ ಪ್ರಚಾರದ ವೇಳೆ ಮಾತನಾಡಿದ ಶಂಕರ್ ಪಾಟೀಲ್ ಮುನೇನಕೊಪ್ಪ, 'ಬಿಜೆಪಿಯಲ್ಲಿ ಲಿಂಗಾಯತರಿಗೆ ಮೋಸ ಆಗಿಲ್ಲ. ಯಾರೋ ಒಬ್ಬರು ಪಕ್ಷ ಬಿಟ್ಟು ಹೋದರೆ ಅದು ಪಕ್ಷಕ್ಕೆ ಡ್ಯಾಮೇಜ್ ಆಗೋದಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಬಹುಮತದಿಂದ ಬಿಜೆಪಿ ಮತ್ತೆ ಗೆಲವು ಸಾಧಿಸಲಿದೆ. ಈ ಹಿಂದೆ ಧರ್ಮ ಒಡೆಯಲು ಕಾಂಗ್ರೆಸ್ ಪ್ರಯತ್ನ ಮಾಡಿತ್ತು. ಈಗಲೂ ಮಾಡುತ್ತಿದೆ' ಎಂದು ಹೇಳಿದರು.
Apr 22, 2023, 3:21 pm IST

ಸಿದ್ದರಾಮಯ್ಯ ಪ್ರಚಾರದ ಬಗ್ಗೆ ವಿ ಸೋಮಣ್ಣ ಹೇಳಿದ್ದೇನು?

ಸಿದ್ದರಾಮಯ್ಯ ಪ್ರಚಾರದ ಬಗ್ಗೆ ಮಾತನಾಡಿದ ವಿ ಸೋಮಣ್ಣ, 'ಸಿದ್ದರಾಮಯ್ಯ ಜೊತೆ ನಾನೂ ಕೆಲಸ ಮಾಡಿದ್ದೇನೆ. ನಾನೇನು ಭೂತನೂ ಅಲ್ಲ, ಪಿಶಾಚಿನೂ ಅಲ್ಲ. ನಾನೊಬ್ಬ ಮನುಷ್ಯ. ನನಗಿಂತ ದೊಡ್ಡ ವ್ಯಕ್ತಿ ಅವರು. ಅವರ ಪಾಡಿಗೆ ಅವರು ಪ್ರಚಾರ ಮಾಡುತ್ತಾರೆ. ನಾನು ನನ್ನ ಪಾಡಿಗೆ ಪ್ರಚಾರ ಮಾಡುತ್ತಾರೆ' ಎಂದರು.
Apr 22, 2023, 3:21 pm IST

ಮೈಸೂರಿನಲ್ಲಿ ಸಿದ್ದರಾಮಯ್ಯ ಹೇಳಿಕೆ

ವರುಣಾದ ಕಾರೇಪುರ ಗ್ರಮದಲ್ಲಿ ರೋಡ್ ಶೋ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, 'ಸೋಮಣ್ಣ ಆರ್‌ಎಸ್‌ಎಸ್ ಏನೇ ಮಾಡಿದರೂ ಜನ ನನ್ನ ಕೈ ಹಿಡಿಯುತ್ತಾರೆ. ಈ ಕ್ಷೇತ್ರದಲ್ಲಿ ನನ್ನನ್ನು ಕಟ್ಟಿ ಹಾಕೋ ಉದ್ದೇಶ ಇದೆ. ಬಿಜೆಪಿ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನನ್ನ್ ಮೇಲಿನ ಜನಪ್ರಿಯತೆ ಕುಗ್ಗಿಸುವ ಉದ್ದೇಶ ಬಿಜೆಪಿಗೆ ಇದೆ. ನಮ್ಮ ಕ್ಷೇತ್ರಕ್ಕೆ ಸೋಮಣ್ಣ ಏನೂ ಮಾಡಿಲ್ಲ. ಸೋಮಣ್ಣ ಅವರ ಕೊಡುಗೆ ಏನೂ ಇಲ್ಲ. ಆದರೂ ವರುಣಾದಲ್ಲಿ ಅವರನ್ನು ನಿಲ್ಲಿಸಿದ್ದಾರೆ. ಜನರಿಗೆ ಇವೆಲ್ಲಾ ಗೊತ್ತಿದೆ. ಅವರು ಏನೋ ಕುತಂತ್ರ ಮಾಡಿದರೂ ಜನ ನಂಬಲ್ಲ' ಎಂದು ಸಿದ್ದರಾಮಯ್ಯ ಹೇಳಿದರು.
Apr 22, 2023, 3:20 pm IST

ವರುಣಾ ಅಖಾಡಕ್ಕೆ ಸಿದ್ದರಾಮಯ್ಯ ಎಂಟ್ರಿ

ವರುಣಾದಲ್ಲಿ ಇಂದು ಸಿದ್ದರಾಮಯ್ಯ ರೋಡ್ ಶೋ ಮಾಡಿದರು. ಈ ವೇಳೆ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ ಸಿಕ್ಕಿದೆ. ಸಿದ್ದರಾಮಯ್ಯ ಅವರನ್ನು ವರುಣಾದಲ್ಲಿ ಪಟಾಕಿ ಸಿಡಿಸಿ, ವಾದ್ಯ ಮೇಳದೊಂದಿಗೆ ಹೂವಿನ ಮಳೆ ಸುರಿಸಿ ಸ್ವಾಗತ ಕೋರಲಾಗಿದೆ. ಕಾರೇಪುರ ಗ್ರಾಮದಲ್ಲಿ ಸಿದ್ದರಾಮಯ್ಯ ಇಂದು ಪ್ರಚಾರ ಮಾಡಿದರು. ಸಿದ್ದರಾಮಯ್ಯ ಅವರಿಗೆ ಜೈಕಾರ ಹಾಕುತ್ತಾ ಅಭಿಮಾನಿಗಳು ಕಾರ್ಯಕರ್ತರು ಸ್ವಾಗತ ಕೋರಿದರು. ಈ ವೇಳೆ ಅಧಿಕ ಸಂಖ್ಯೆಯಲ್ಲಿ ಜನ ನೆರೆದಿದ್ದರು.
Apr 22, 2023, 2:47 pm IST

ಧರ್ಮಸ್ಥಳಕ್ಕೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್

ಧರ್ಮಸ್ಥಳಕ್ಕೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್
ಪತ್ನಿ, ಮಗ, ಮಗಳು ಮತ್ತು ಅಳಿಯನ ಜೊತೆ ಧರ್ಮಸ್ಥಳಕ್ಕೆ ಬಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಧರ್ಮಸ್ಥಳದ ಮಂಜುನಾಥಸ್ವಾಮಿ ದರ್ಶನಕ್ಕೆ ಹೆಲಿಕಾಪ್ಟರ್‌ನಲ್ಲಿ ಬಂದ ಡಿಕೆಶಿ ಕುಟುಂಬ ಚುನಾವಣಾಧಿಕಾರಿಗಳ ಜೊತೆ ಹೆಲಿಕಾಪ್ಟರ್ ಸಿಬ್ಬಂದಿ ವಾಗ್ವಾದ ಹೆಲಿಕಾಪ್ಟರ್ ಪರಿಶೀಲನೆಗೆ ಬಂದ ಚುನಾವಣಾಧಿಕಾರಿಗಳೊಂದಿಗೆ ಪೈಲಟ್ ವಾಗ್ದಾದ ನಡೆಸಿದರು
Apr 22, 2023, 12:08 pm IST

ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ತಿರಸ್ಕರಿಸಲು ಷಡ್ಯಂತ್ರ: ಡಿಕೆಶಿ

ಬಿಜೆಪಿ, ಮುಖ್ಯಮಂತ್ರಿಗಳ ಕಚೇರಿಯಿಂದ ಅಧಿಕಾರ ದುರುಪಯೋಗ ಮಾಡಿಕೊಂಡು ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ತಿರಸ್ಕರಿಸಲು ಷಡ್ಯಂತ್ರ ನಡೆಯುತ್ತಿದೆ ಎಂದು ಡಿ ಕೆ ಶಿವಕುಮಾರ್‌ ಆರೋಪಿಸಿದ್ದಾರೆ. ಚುನಾವಣಾ ಆಯೋಗ ಮುಖ್ಯಮಂತ್ರಿ ಕಚೇರಿಯ ದೂರವಾಣಿ ಕರೆ ಪಟ್ಟಿ ತರೆಸಿಕೊಳ್ಳಬೇಕು. ಸದತ್ತಿ ಯೆಲ್ಲಮ್ಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಮಪತ್ರದಲ್ಲಿ ದೋಷವಿದ್ದರೂ ಅದನ್ನು ತಿದ್ದಲು ಮುಖ್ಯಮಂತ್ರಿ ಕಚೇರಿಯಿಂದ ಚುನಾವಣಾಧಿಕಾರಿಗಳಿಗೆ ಕರೆ ಮಾಡಿ ಒತ್ತಡ ಹೇರಲಾಗುತ್ತಿದೆ ಎಂದರು.
Apr 22, 2023, 12:07 pm IST

ಬಸವ ಜಯಂತಿ ಕಾರ್ಯಕ್ರಮವು ಕೂಡಲಸಂಗಮದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಾಳೆ ( ಏಪ್ರಿಲ್‌ 23 ) ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮಕ್ಕೆ ಆಗಮಿಸಲಿದ್ದಾರೆ.
Apr 22, 2023, 10:58 am IST

ಏಪ್ರಿಲ್ 30 ಒಕ್ಕಲಿಗರ ಕೋಟೆಯಲ್ಲಿ ಮೋದಿ ರ‍್ಯಾಲಿ

ಹೈವೋಲ್ಟೆಜ್ ಕ್ಷೇತ್ರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ನಡುವಿನ ಸ್ಪರ್ಧೆ ಏರ್ಪಟ್ಟಿದೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಎಂಟ್ರಿಗೆ ಮಹೂರ್ತ ಫಿಕ್ಸ್‌ ಆಗಿದೆ. ಏಪ್ರಿಲ್ 30ರಂದು ಕ್ಷೇತ್ರದಲ್ಲಿ ಮೋದಿ ಅವರು ಚುನಾವಣಾ ರ‍್ಯಾಲಿ ನಡೆಸಲಿದ್ದಾರೆ.
Apr 22, 2023, 10:57 am IST

ನಾಮಪತ್ರ ತಿರಸ್ಕಾರ ವಿಚಾರ: ಬಿಜೆಪಿ ದ್ವೇಷ ರಾಜಕಾರಣದಲ್ಲಿ ತೊಡಗಿದೆಯೇ?
Apr 22, 2023, 10:42 am IST

ವರುಣಾದಲ್ಲಿ ಸಿದ್ದರಾಮಯ್ಯ ಚುನಾವಣಾ ಪ್ರಚಾರ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಶನಿವಾರ ವರುಣಾ ಕ್ಷೇತ್ರದಲ್ಲಿ ಪ್ರಚಾರವನ್ನ ನಡೆಸಲಿದ್ದು, 16 ಗ್ರಾಮಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ವರುಣಾದಲ್ಲಿ ಬಿಜೆಪಿ ಅಭ್ರ್ಥಿ ವಿ ಸೋಮಣ್ಣ ಅವರ ಪ್ರಚಾರ ಜೋರಾಗಿದೆ. ಇತ್ತ ಸಿದ್ದರಾಮಯ್ಯ, ಸೋಮಣ್ಣ ನಡುವೆ ಪೈಪೋಟಿ ಏರ್ಪಟ್ಟಿದ್ದು, ಮತ್ತೊಂದು ಸುತ್ತಿನ ಪ್ರಚಾರಕ್ಕೆ ಸಿದ್ದಾರಮಯ್ಯ ಮುಂದಾಗಿದ್ದಾರೆ.
Apr 22, 2023, 8:46 am IST

ಬಿಜೆಪಿಯಲ್ಲಿ ಶಕ್ತ ನಾಯಕರಿದ್ದಾರೆ. ನಾನು ಅವರಿಗೆ ಪ್ರತಿಸ್ಪರ್ಧಿಯಾಗಲು ಬಯಸುವುದಿಲ್ಲವೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿಎಲ್ ಸಂತೋಷ್ ಹೇಳಿದ್ದಾರೆ. ಅವರು ಮೈಸೂರಿನಲ್ಲಿ ತಮ್ಮ ಪಕ್ಷದ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
Apr 22, 2023, 7:41 am IST

ಹೈಕಮಾಂಡ್‌ ಹೇಳಿದರು ಯತ್ನಾಳ್‌ ಪರ ಪ್ರಚಾರ ಮಾಡಲ್ಲ: ಪಟ್ಟಣಶೆಟ್ಟಿ

ವಿಜಯಪುರ ನಗರ ಬಿಟ್ಟು ಉಳಿದ ಎಲ್ಲ ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತೇನೆ. ಹೈಕಮಾಂಡ್ ಯತ್ನಾಳ ಜೊತೆ ಪ್ರಚಾರಕ್ಕೆ ಹೋಗು ಎಂದು ಹೇಳಿದರೂ ನಾನು ಪ್ರಚಾರಕ್ಕೆ ಹೋಗುವುದಿಲ್ಲ ಎಂದು ಅಪ್ಪು ಪಟ್ಟಣಶೆಟ್ಟಿ ಹೇಳಿದರು.
Apr 21, 2023, 9:53 pm IST

ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕರ ಪಟ್ಟಿ

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗಾಗಿ ಎಲ್ಲ ಪಕ್ಷಗಳು ಕ್ರಿಯಾಶೀಲವಾಗಿವೆ. ಈ ಪೈಕಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವು (NCP) ಸಹ ಪರವಾಗಿ ಚುನಾವಣಾ ಪ್ರಚಾರ ಮಾಡುವ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
Apr 21, 2023, 8:22 pm IST

ಅರಕಲಗೂಡು ವಿಧಾನಸಭಾ ಕ್ಷೇತ್ರ

ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ನಿನ್ನೆ ತೆರೆಮರೆಯಲ್ಲಿ ನಡೆದಿದ್ದ ಅಚ್ಚರಿಯ ರಾಜಕೀಯ ಬೆಳವಣಿಗೆ ಹಾಗೆಯೇ ತಣ್ಣಗಾಗಿದೆ. ಬಿಜೆಪಿ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದ್ದ ಎಂ.ಟಿ.ಕೃಷ್ಣೇಗೌಡ ಅವರು, ಶುಕ್ರವಾರ ಸ್ಪರ್ಧೆಯಿಂದ ಹಿಂದೆ ಸರಿದು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದುಕೊಂಡಿದ್ದಾರೆ. ಕಾಂಗ್ರೆಸ್ ಟಿಕೆಟ್ ಅಕಾಂಕ್ಷಿಯಾಗಿದ್ದ ಎಂ.ಟಿ.ಕೃಷ್ಣೇಗೌಡ ಅವರು ಕಡೆ ಕ್ಷಣದಲ್ಲಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಮೊದಲು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು.
Apr 21, 2023, 4:56 pm IST

ಲಿಂಗಾಯತ ಡ್ಯಾಮಿನ ಬಗ್ಗೆ ಮಾತನಾಡಿದ್ದೀರಿ, ಎಷ್ಟು ಗಟ್ಟಿ ಇದೆ ಎಂದು ಅರಿವು ನಿಮಗಿಲ್ಲ
Apr 21, 2023, 4:55 pm IST

ರೈತ ವರನ ವಿವಾಹವಾಗುವ ವಧುವಿಗೆ ಎರಡು ಲಕ್ಷ
Apr 21, 2023, 3:37 pm IST

ಕೋನರಡ್ಡಿ ಹಮ್ಮಿಕೊಂಡಿದ್ದ ಬಹಿರಂಗ ಚುನಾವಣಾ ಪ್ರಚಾರ

ಅಣಿಗೇರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎನ್.ಎಚ್.ಕೋನರಡ್ಡಿ ಹಮ್ಮಿಕೊಂಡಿದ್ದ ಬಹಿರಂಗ ಚುನಾವಣಾ ಪ್ರಚಾರ ಸಭೆಗೆ ಆಗಮಿಸಿದ್ದ ನಲವಡಿ ಗ್ರಾಮದ ಮುಖಂಡ ದೇವನಗೌಡ ಪಾಟೀಲ (52) ಹೃದಯಾಘಾತದಿಂದ ಮೃತಪಟ್ಟ ಧಾರುಣ ಘಟನೆ ಸಂಭವಿಸಿದೆ.
Apr 21, 2023, 2:08 pm IST

ಒಂದು ಕಡೆ ಈಶ್ವರಪ್ಪ ಮೇಲೆ ಕಮಿಷನ್ ಆರೋಪ. ಡೆತ್ ನೋಟ್ ಬರೆದಿಟ್ಟು ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ. ಇನ್ನೊಂದೆಡೆ ಸ್ವತಃ ಕರೆ ಮಾಡಿ ಈಶ್ವರಪ್ಪರನ್ನು ಶ್ಲಾಘಿಸಿದ ಪ್ರಧಾನಿ ಮೋದಿ.
Apr 21, 2023, 2:07 pm IST

ನನ್ನನ್ನು ರಾಜಕೀಯವಾಗಿ ಮುಗಿಸಲು ವ್ಯವಸ್ಥಿತವಾಗಿ ಷಡ್ಯಂತ್ರ ನಡೆಸಲಾಗುತ್ತಿದೆ.
READ MORE

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+