ಕಾಂಗ್ರೆಸ್‌ನಲ್ಲಿ ಯಾರಾದರೂ ಭ್ರಷ್ಟಾಚಾರ ಮಾಡಿ ರಾಜೀನಾಮೆ ನೀಡಿದ್ದಾರಾ..?-ಡಿಕೆ ಶಿವಕುಮಾರ್

ಕಮಿಷನ್ ವಿಚಾರದಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡರು. ಸಚಿವ ಈಶ್ವರಪ್ಪ ತಲೆ ತಂಡವಾಗಿ ರಾಜೀನಾಮೆ ನೀಡಿದರು. ಕಾಂಗ್ರೆಸ್ ಸರ್ಕಾರದಲ್ಲಿ ಯಾರಾದರೂ ಭ್ರಷ್ಟಾಚಾರ ಮಾಡಿ ರಾಜೀನಾಮೆ ನೀಡಿದ್ದಾರಾ..? ಎಂದು ಡಿ.ಕೆ ಶಿವಕುಮಾರ್‌ ಪ್ರಶ್ನಿಸಿದ್ದಾರೆ.

ಚಿತ್ರದುರ್ಗ, ಫೆಬ್ರವರಿ 9: ಬೆಂಗಳೂರಿನಲ್ಲಿರುವ ವಿಧಾನಸೌಧ ಗೋಡೆಗಳು ಕಾಸು ಕಾಸು ಎನ್ನುತ್ತಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣಕ್ಕೆ ಆಗಮಿಸಿದ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸೋಶಿಯಲ್ ಮೀಡಿಯಾದಲ್ಲಿ ಬಿಜೆಪಿ ಸರ್ಕಾರ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸದೇ ಇರುವ ಯೋಜನೆಗಳ ಬಗ್ಗೆ ಕೇಳುತ್ತಾ ಬಂದಿದ್ದೇವೆ ಆದರೆ ಅವರ ಉತ್ತರ ಶೂನ್ಯವಾಗಿದೆ. ನಾವು ಅಧಿಕಾರಕ್ಕೆ ಬಂದ ತಕ್ಷಣ ವಿವಿಧ ಬ್ಯಾಂಕುಗಳಲ್ಲಿರುವ ರೈತರ ಸಾಲವನ್ನು ಮನ್ನಾ ಮಾಡುತ್ತೇವೆ ಎಂದು ಹೇಳಿದ್ದರು ಆದರೆ ಇದುವರೆಗೂ ಸಾಲ ಮನ್ನಾ ಇಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ನಾವು ಬಿಜೆಪಿಯವರು ಪಾಪದ ಪತ್ರ ಎಂಬುದನ್ನು ಬಿಡುಗಡೆ ಮಾಡಿದ್ದೇವೆ ಇದರಲ್ಲಿ ಎಂಬುದನ್ನು ತಿಳಿಸಲಾಗುತ್ತದೆ. ರಾಜ್ಯದಲ್ಲಿರುವ ಇದೊಂದು ಬಿಜೆಪಿ ಭ್ರಷ್ಟಾಚಾರದ ಸರ್ಕಾರವಾಗಿದೆ. ಸರ್ಕಾರದಲ್ಲಿ 40% ಕಮಿಷನ್ ತಾಂಡವಾಡುತ್ತಿದೆ. ಶಾಸಕರು ಬೊಮ್ಮಾಯಿ ಸರ್ಕಾರಕ್ಕೆ 23,000 ಕೋಟಿ ಅಫರ್ ಭದ್ರ ಯೋಜನೆಯಲ್ಲಿ ಅವ್ಯವ್ಯಹಾರ ನಡೆದಿದೆ ಎಂದು ಪತ್ರ ಬರೆದು ಆರೋಪಿಸಿದ್ದಾರೆ. ಇದರ ಬಗ್ಗೆ ನೀವು ಏನಾದರೂ ಕ್ರಮ ಕೈಗೊಂಡಿದ್ದೀರಾ..? ಅಥವಾ ನಿಮ್ಮ ಪಕ್ಷದ ಶಾಸಕರಿಗೆ ನೋಟಿಸ್ ನೀಡಿದ್ದೀರಾ..? ಅವರನ್ನು ಪಕ್ಷದಿಂದ ತೆಗೆದಿದ್ದಿರಾ ಎಂದು ಪ್ರಶ್ನೆ ಹಾಕಿದರು. ಪತ್ರದಲ್ಲಿ ಕಾಮಗಾರಿ ಮಾಡದೇ 23 ಸಾವಿರ ಕೋಟಿ ರೂಪಾಯಿ ಅವ್ಯವಹಾರ ಆಗಿದೆ ಎಂದಿದ್ದಾರೆ ಇದಕ್ಕೆ ನಿಮ್ಮ ಉತ್ತರವೇನು ಎಂದರು.

DK Shivakumar Lashes Out At BJP Leaders

ಎಲ್ಲಿ ಹೋದರು ಲಂಚ, ಲಂಚ ಎಂಬ ಧ್ವನಿ ಕೇಳಿ ಬರುತ್ತಿದೆ. ಈ ಸರ್ಕಾರಕ್ಕೆ ದೊಡ್ಡ ಕಳಂಕ ಬಂದಿದೆ. ಕಮಿಷನ್ ವಿಚಾರದಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡರು. ಸಚಿವ ಈಶ್ವರಪ್ಪ ತಲೆ ತಂಡವಾಗಿ ರಾಜೀನಾಮೆ ನೀಡಿದರು. ಕಾಂಗ್ರೆಸ್ ಸರ್ಕಾರದಲ್ಲಿ ಯಾರಾದರೂ ಭ್ರಷ್ಟಾಚಾರ ಮಾಡಿ ರಾಜೀನಾಮೆ ನೀಡಿದ್ದಾರಾ..? ಎಂದು ಡಿ.ಕೆ ಶಿವಕುಮಾರ್‌ ಪ್ರಶ್ನಿಸಿದರು.

ಈ ಭ್ರಷ್ಟ ಸರ್ಕಾರ ಕಿತ್ತೊಗಿಯಬೇಕು ರೈತನನ್ನು ಬದುಕಿಸಬೇಕು ಮಹಿಳೆಯರನ್ನು ರಕ್ಷಿಸಬೇಕು. ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುನ್ನ ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಕೊಡುತ್ತೇವೆ ಎಂದಿದ್ದರು. ನಿಮ್ಮ ಖಾತೆಗೆ 15 ಲಕ್ಷ ರೂಪಾಯಿ ಬಂದಿದೆಯಾ..? ನೀವು ಅವರಿಗೆ ಮತ ನೀಡಬೇಕಾ..? ನಮ್ಮ ಕಾಂಗ್ರೆಸ್ ಸರ್ಕಾರದಲ್ಲಿ ನೀಡಿದ ಯೋಜನೆಗಳು ಜನರ ಬದುಕಿಗೆ ಪ್ರಯೋಜನವಾಗಿದ್ದವು. ಆದರೆ ಬಿಜೆಪಿಯವರು ಅಂತಹ ಯೋಜನೆಗಳನ್ನು ನೀಡಿದ್ದಾರಾ ಎಂದು ಜನರನ್ನು ಪ್ರಶ್ನಿಸಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ನಿಮ್ಮ ಮನೆ ಬೆಳಗಲು 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತಿದ್ದೇವೆ. ಪ್ರತಿ ಕುಟುಂಬದ ಗೃಹಿಣಿಗೆ ಮಾಸಿಕ 2,000 ಗೃಹಲಕ್ಷ್ಮಿ ಯೋಜನೆ ಕಾರ್ಯಕ್ರಮವನ್ನು ಜಾರಿಗೆ ತರಲಾಗುತ್ತದೆ. ನಾವು ಈಗಾಗಲೇ ಗ್ಯಾರಂಟಿ ಚಕ್ಕಿಗೆ ಸಹಿ ಹಾಕುತ್ತೇವೆ ಮೇ 15ರ ನಂತರ ನಿಮ್ಮ ಕಾಂಗ್ರೆಸ್ ಸರ್ಕಾರ ವಿದ್ಯುತ್ ಹಾಗೂ ಎರಡು ಸಾವಿರರೂ ಖಚಿತ ಇವನ ಜಾರಿ ಮಾಡದಿದ್ರೆ ನಾವು ನಿಮ್ಮ ಹತ್ತಿರ ಮತ ಕೇಳಕ್ಕೆ ಬರುವುದಿಲ್ಲ ಎಂದು ಡಿಕೆ ಶಿವಕುಮಾರ್ ಭರವಸೆ ನೀಡಿದರು ನಾವು ಬಡವರಿಗೆ 7 ಕೆ.ಜಿ ಅಕ್ಕಿಯನ್ನು ಕೊಡುತ್ತಿದ್ದೆವು ಆದರೆ ಈಗಿನ ಬಿಜೆಪಿ ಸರ್ಕಾರ 2 ಕೆ.ಜಿ ಅಕ್ಕಿ ಕಡಿತಗೊಳಿಸಿ ಐದು ಕೆಜಿಗೆ ತಂದು ನಿಲ್ಲಿಸಿದ್ದಾರೆ. ನಾವು ಅಧಿಕಾರಕ್ಕೆ ಬಂದ ತಕ್ಷಣ 10 ಕೆಜಿ ಅಕ್ಕಿಯನ್ನು ನಾವು ಉಚಿತವಾಗಿ ನೀಡುತ್ತೇವೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+