ಹಲಾಲ್, ಹಿಜಾಬ್ ನಾವು ಕ್ರಿಯೇಟ್ ಮಾಡಿದ್ದಾ? ವಿನಯ್ ಕುಮಾರ್ ಸೊರಕೆ ಸಂದರ್ಶನ
ಕಾಂಗ್ರೆಸ್ಸಿನಿಂದ ಬಹುತೇಕ ಸೊರಕೆಯವರಿಗೆ ಟಿಕೆಟ್ ಎಂದು ಹೇಳಲಾಗುತ್ತಿದೆ. ಆದರೆ, ಬಿಜೆಪಿಯ ವಿಚಾರದಲ್ಲಿ ಹಾಗಲ್ಲ. ಮುಂಬರುವ ಚುನಾವಣೆಯ ಬಗ್ಗೆ ವಿನಯ್ ಕುಮಾರ್ ಸೊರಕೆಯವರು 'ಒನ್ ಇಂಡಿಯಾ' ಜೊತೆ ಮಾತುಕತೆ ನಡೆಸಿದ್ದಾರೆ. ಅವರ ಸಂದರ್ಶನದ ಆಯ್ದ ಭಾಗ:
ಕರಾವಳಿಯಲ್ಲಿ ಚುನಾವಣೆಯ ಗಾಳಿ ಜೋರಾಗಿ ಬೀಸುತ್ತಿದೆ. ಟಿಕೆಟ್ ಆಕಾಂಕ್ಷಿಗಳು ಪ್ರಭಾವೀ ಮುಖಂಡರು ಬಾಗಿಲು ತಟ್ಟುತ್ತಿದ್ದಾರೆ. ಉಡುಪಿ ಜಿಲ್ಲಾ ವ್ಯಾಪ್ತಿಯ ಕಾಪು ವಿಧಾನಸಭಾ ಕ್ಷೇತ್ರದ ಟಿಕೆಟಿಗಾಗಿಯೂ ಪೈಪೋಟಿಯಿದೆ.
Recommended Video

ಕಾಪು ಕ್ಷೇತ್ರದ ಕಾಂಗ್ರೆಸ್ ಟಿಕೆಟಿಗಾಗಿ ಹಿರಿಯ ಮುಖಂಡ ವಿನಯ್ ಕುಮಾರ್ ಸೊರಕೆಯವರು ಅರ್ಜಿ ಸಲ್ಲಿಸಿದ್ದಾರೆ. ಟಿಕೆಟ್ ಸಿಗುತ್ತೆ ಎನ್ನುವ ಖಚಿತ ವಿಶ್ವಾಸದಲ್ಲೂ ಸೊರಕೆಯವರಿದ್ದಾರೆ. ಕ್ಷೇತ್ರದಲ್ಲಿ ಉತ್ತಮ ವರ್ಚಸ್ಸನ್ನೂ ಇವರು ಹೊಂದಿದ್ದಾರೆ.
ಕಳೆದ ಬಾರಿಯ ಚುನಾವಣೆಯಲ್ಲಿ ವಿನಯ್ ಕುಮಾರ್ ಸೊರಕೆಯವರು ಬಿಜೆಪಿಯ ಲಾಲಾಜಿ ಮೆಂಡನ್ ವಿರುದ್ದ ಸುಮಾರು ಹನ್ನೆರಡು ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದರು. ಆದರೆ, ಈ ಬಾರಿಯ ಚುನಾವಣೆ ಬಿಜೆಪಿಗೆ ಅಷ್ಟೇನೂ ಸುಲಭವಲ್ಲ ಎನ್ನುವ ಮಾತಿದೆ.

ಕಾಂಗ್ರೆಸ್ಸಿನಿಂದ ಬಹುತೇಕ ಸೊರಕೆಯವರಿಗೆ ಟಿಕೆಟ್ ಎಂದು ಹೇಳಲಾಗುತ್ತಿದೆ. ಆದರೆ, ಬಿಜೆಪಿಯ ವಿಚಾರದಲ್ಲಿ ಹಾಗಲ್ಲ. ಮುಂಬರುವ ಚುನಾವಣೆಯ ಬಗ್ಗೆ ವಿನಯ್ ಕುಮಾರ್ ಸೊರಕೆಯವರು 'ಒನ್ ಇಂಡಿಯಾ' ಜೊತೆ ಮಾತುಕತೆ ನಡೆಸಿದ್ದಾರೆ. ಅವರ ಸಂದರ್ಶನದ ಆಯ್ದ ಭಾಗ ಇಂತಿದೆ:
ಪ್ರ: ಕಳೆದ ಚುನಾವಣೆಗೂ, ಮುಂಬರುವ ಚುನಾವಣೆಗೂ ಕಾಪು ಕ್ಷೇತ್ರದಲ್ಲಿ ಪರಿಸ್ಥಿತಿ ಯಾವ ರೀತಿಯಿದೆ?
ಸೊರಕೆ: ನಾನು ಈ ಹಿಂದೆ ಲೋಕಸಭಾ ಸದಸ್ಯನಾಗಿದ್ದೆ, 2013ರಲ್ಲಿ ನಾನು ಸುಮಾರು 1,800 ಮತಗಳ ಅಂತರದಿಂದ ಗೆಲುವು ಸಾಧಿಸಿದೆ. ಮುಂದೆ ಐದು ವರ್ಷ ನಮ್ಮದೇ ಸರಕಾರವಿತ್ತು. ಕಾಪು ಕ್ಷೇತ್ರ ಸ್ವಾವಲಂಬಿ ಆಗಬೇಕೆಂದು ಸರ್ವತೋಮುಖ ಅಭಿವೃದ್ದಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೆವು.
2018ರಲ್ಲಿ ಮತದಾರ ಅಭಿವೃದ್ದಿಯ ವಿಚಾರವನ್ನು ಗಮನಕ್ಕೆ ತೆಗೆದುಕೊಳ್ಳದೇ ಭಾವನಾತ್ಮಕ ವಿಚಾರಕ್ಕೆ ಆದ್ಯತೆ ನೀಡಿದ್ದರಿಂದ ನನಗೆ ಸೋಲಾಯಿತು. ಮೋದಿಯವರನ್ನು ಕರೆಸಿಕೊಂಡು ಮತ ಕೇಳಿದರು. ಚುನಾವಣೆ ಮುಗಿದ ನಂತರ ಜನರಿಗೆ ಗೊತ್ತಾಯಿತು, ಇದು ಮೋದಿಯ ಚುನಾವಣೆ ಅಲ್ಲ ಎಂದು.

ಪ್ರ: ಕಳೆದ ಐದು ವರ್ಷದಲ್ಲಿ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳು ನಡೆದಿಲ್ಲವೇ?
ಸೊರಕೆ: ಹಾಲೀ ಶಾಸಕರು ಮೂರು ಬಾರಿ ಎಂಎಲ್ಎ ಆಗಿದ್ದವರು. ವಿಷನ್ ಅಥವಾ ಕ್ಷೇತ್ರವನ್ನು ಯಾವರೀತಿ ಅಭಿವೃದ್ದಿ ಮಾಡಬಹುದು ಎನ್ನುವ ನೀಲಿ ನಕಾಶೆ ಇರಬೇಕು. ಕ್ಷೇತ್ರದ ವ್ಯಾಪ್ತಿಯ ಮೂರು ಪಂಚಾಯತಿಯಲ್ಲಿ ನಗರ ಪ್ರದೇಶದ ತೆರಿಗೆಯನ್ನೇ ಸಂಗ್ರಹಿಸಲಾಗುತ್ತಿದೆ. ಮೂಲಭೂತ ಸೌಕರ್ಯ ಅಭಿವೃದ್ದಿ ಆಗಬೇಕಿದ್ದರೆ ಕಾಪು ಕ್ಷೇತ್ರ ಪುರಸಭೆಯಾಗಬೇಕು. ಅದನ್ನು ನಿರ್ಮಾಣ ಮಾಡುವ ಕೆಲಸ ನಡೆಯಬೇಕು.
ಪ್ರ: SDPI ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ, ಇದು ಕಾಂಗ್ರೆಸ್ಸಿಗೆ ಬರುವ ವೋಟ್ ಅನ್ನು ಡಿವೈಡ್ ಮಾಡುವುದಿಲ್ಲವೇ?
ಸೊರಕೆ: ಇಲ್ಲಿ ಕಾಂಗ್ರೆಸ್ ಸೋತರೆ ಬಿಜೆಪಿ, ಬಿಜೆಪಿ ಸೋತರೆ ಕಾಂಗ್ರೆಸ್ ಗೆಲ್ಲುವುದು. ಹೀಗಿರುವಾಗ ಇಲ್ಲಿ ಬೇರೆ ಪಕ್ಷ ಗೆಲ್ಲುವ ಸಾಧ್ಯತೆಯಿಲ್ಲ. ಈ ಆಜಾನ್, ಹಲಾಲ್, ಹಿಜಾಬ್, ಎನ್ಸಿಆರ್ ನಾನು ಕ್ರಿಯೇಟ್ ಮಾಡಿದ್ದಲ್ಲ. ಇದೆಲ್ಲವನ್ನೂ ಕ್ರಿಯೇಟ್ ಮಾಡಿದ್ದು ಬಿಜೆಪಿ.
ಅಲ್ಪಸಂಖ್ಯಾತರು ಎನ್ನುವುದು ನಮ್ಮ ಸಾಂಪ್ರದಾಯಿಕ ವೋಟ್, ಅದು ನಮ್ಮಿಂದ ಕೈತಪ್ಪಿದರೆ ಯಾರಿಗೆ ಲಾಭ ಆಗುತ್ತದೆ, ಅದು ಬಿಜೆಪಿಗೆ ತಾನೇ ಲಾಭ ಆಗುವುದು. ಇದೆಲ್ಲಾ ಗೊತ್ತಿದ್ದೂ ಬಿಜೆಪಿಗೆ ಅನುಕೂಲ ಮಾಡಿಕೊಟ್ಟರೆ ಹೇಗೆ? ಪರಿಸ್ಥಿತಿ ಹೀಗಿರುವಾಗ ನಾವು ಅಲ್ಪಸಂಖ್ಯಾತರ ಪಕ್ಷ ಅಲ್ಲ ಎಂದಾಯಿತಲ್ಲವೇ..
ಪ್ರ: ನೀವು (ಕಾಂಗ್ರೆಸ್ಸಿಗರು) ಮಾಡುತ್ತಿರುವ ಬಿಜೆಪಿ ವಿರುದ್ದದ ಭ್ರಷ್ಟಾಚಾರದ ಆರೋಪಕ್ಕೆ ತಾರ್ಕಿಕ ಅಂತ್ಯ ಕಾಣಿಸುವಲ್ಲಿ ಯಾಕೆ ವಿಫಲರಾಗುತ್ತಿದ್ದೀರಿ?
ಸೊರಕೆ: ಮುಂದಿನ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬಂದರೆ ಅದಕ್ಕೆ ತಾರ್ಕಿಕ ಅಂತ್ಯ ಸಿಕ್ಕ ಹಾಗೇ. ಯಾವ ಇಲಾಖೆಗೆ ಹೋಗಿ..ಭ್ರಷ್ಟಾಚಾರ ತಾಂಡವಾಡುತ್ತಿದೆ. ಜನಸಾಮಾನ್ಯರಿಗೆ ಬೇಕಾಗುವ ಯಾವುದೇ ಕಾರ್ಯಕ್ರಮ ಇವರಲ್ಲಿಲ್ಲ. ಬೆಲೆ ಏರಿಕೆ ಕಮ್ಮಿ ಮಾಡುತ್ತೇನೆ ಎಂದು ಅಧಿಕಾರಕ್ಕೆ ಬಂದ ಇವರು ಮಾಡಿದ್ದೇನು..
ಪ್ರ: ಕಾಪು ವಿಧಾನಸಭಾ ಚುನಾವಣೆಯಲ್ಲಿ ಮತದಾರ ಕಾಂಗ್ರೆಸ್ಸಿಗೆ ಯಾಕೆ ಮತ ಚಲಾಯಿಸಬೇಕು?
ಸೊರಕೆ: ಸಿದ್ದರಾಮಯ್ಯ ನೇತೃತ್ವದ ನಮ್ಮ ಸರಕಾರ ಅಧಿಕಾರದಲ್ಲಿದ್ದಾಗ 168 ಭರವಸೆಯನ್ನು ಕೊಟ್ಟಿದ್ದೆವು ಮತ್ತು ಎಲ್ಲಾ ಭರವಸೆಯನ್ನು ಈಡೇರಿಸಿದ್ದೇವೆ. ಈ ಐದು ವರ್ಷದಲ್ಲಿ ಬಿಜೆಪಿ ಆರ್ನೂರು ವಿಚಾರವನ್ನು ಪ್ರಣಾಳಿಕೆಯಲ್ಲಿ ಪ್ರಸ್ತಾವವನ್ನು ಮಾಡಿತ್ತು, ಯಾವುದನ್ನೂ ಈಡೇರಿಸಲಿಲ್ಲ.
ಜನರ ಕಷ್ಟದ ಸಮಯಕ್ಕೆ ಸ್ಪಂದಿಸುವ ಕೆಲಸವನ್ನು ಬಿಜೆಪಿ ಮಾಡಲಿಲ್ಲ. ಬೇರೆ ಬೇರೆ ರಾಜ್ಯಗಳಿಗೆ ಪ್ಯಾಕೇಜ್ ಅನ್ನು ಕೊಡಲಾಯಿತು, ನಮ್ಮ ರಾಜ್ಯಕ್ಕೆ ಕೊಟ್ಟಿಲ್ಲ. ಐದು ಲಕ್ಷ ಕೋಟಿ ಸಾಲವನ್ನು ಮಾಡಿದ್ದಾರೆ, ಅದರಲ್ಲಿ ನಲವತ್ತು ಪರ್ಸೆಂಟ್ ಲಂಚ ಹೊಡೆಯುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಇದೆಲ್ಲಾ ಸರಿ ಪಡಿಸಲು ಜನ ಕಾಂಗ್ರೆಸ್ಸಿಗೆ ಮತ ಚಲಾಯಿಸಬೇಕೆಂದು ಮನವಿ ಮಾಡುತ್ತೇನೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications