ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ ಕನ್ನಡ ಹಬ್ಬ ಆರಂಭ

Posted By:
Subscribe to Oneindia Kannada

ರಾಯಚೂರು, ಡಿಸೆಂಬರ್ 2: ಇಂದಿನಿಂದ (ಶುಕ್ರವಾರ) 82ನೇ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭವಾಗುತ್ತದೆ. ಬೆಳಗ್ಗೆ 8.30ಕ್ಕೆ ಇಲ್ಲಿನ ಕರ್ನಾಟಕ ಸಂಘದಿಂದ ಸಮ್ಮೇಳನಾಧ್ಯಕ್ಷ ಬರಗೂರು ರಾಮಚಂದ್ರಪ್ಪ ಅವರ ಮೆರವಣಿಗೆ ಆರಂಭವಾಗುತ್ತದೆ. ಆ ನಂತರ ಬೆಳಗ್ಗೆ 11ಕ್ಕೆ ಸಮ್ಮೇಳನಕ್ಕೆ ಚಾಲನೆ ಸಿಗಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದು, ಸಮ್ಮೇಳನದ ಅಧ್ಯಕ್ಷರಾದ ಡಾ.ಬರಗೂರು ರಾಮಚಂದ್ರಪ್ಪ ಅವರ ಭಾಷಣ ಇರುತ್ತದೆ. ಆ ನಂತರ ನಿಕಟಪೂರ್ವ ಅಧ್ಯಕ್ಷರಾದ ಡಾ.ಸಿದ್ದಲಿಂಗಯ್ಯ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಮಾತನಾಡುತ್ತಾರೆ.[82ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ]

Baragur Ramachandrappa

ಶಾಂತರಸ ಪ್ರಧಾನ ವೇದಿಕೆಯಲ್ಲಿ ದಲಿತ ಬಂಡಾಯ ಸಾಹಿತ್ಯ ಮತ್ತು ಚಳವಳಿಗಳು ಗೋಷ್ಠಿ ಮಧ್ಯಾಹ್ನ 2.30ಕ್ಕೆ ಇದೆ. ಸಾಹಿತ್ಯ-ಸಂಸ್ಕೃತಿ ಮತ್ತು ಸಾಮರಸ್ಯ ಎರಡನೇ ಗೋಷ್ಠಿ ಸಂಜೆ 4ಕ್ಕೆ. ರಾಜ್ಯದ ನೀರು-ನೀರಾವರಿ, ಸಮಸ್ಯೆಗಳು ಪರಿಹಾರಗಳು-ವಿಶೇಷ ಉಪನ್ಯಾಸ ಸಂಜೆ 5.30.

ಘನಮಠ ಶಿವಯೋಗಿ ವೇದಿಕೆಯಲ್ಲಿ ಮಹಿಳೆ ಆಧುನಿಕತೆಗೆ ಮುಖಾಮುಖಿ ಮಧ್ಯಾಹ್ನ 2.30. ಎರಡನೇ ಗೋಷ್ಠಿ ಸಮಾನ ಶಿಕ್ಷಣ ನೀತಿಯ ಸಾಧ್ಯತೆಗಳು ಸಂಜೆ 4.30ಕ್ಕೆ ಇದೆ.2015ರಲ್ಲಿ ರಾಯಚೂರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಯಬೇಕಿತ್ತು. ಅದರೆ ಬರ, ರೈತರ ಅತ್ಮಹತ್ಯೆ ಕಾರಣದಿಂದಾಗಿ ಮೂಂದೂಡಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
82nd Kannada sahitya sammelana starts from December 2nd in Raichur. Baraguru Ramachandrappa president of sammelana.
Please Wait while comments are loading...