ನಿಖಿಲ್ ಮದುವೆಗೆ 2ದಿನ ಮುನ್ನ ಸ್ಥಳ ಬದಲಾವಣೆ ಮಾಡಿದ ಕುಮಾರಸ್ವಾಮಿ

ರಾಮನಗರ, ಏಪ್ರಿಲ್ 15: ಅದ್ದೂರಿಯಾಗಿ ನಡೆಯಬೇಕಾಗಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯ ಪುತ್ರ ನಿಖಿಲ್ ಕುಮಾರಸ್ವಾಮಿಯ ಮದುವೆ ಏಪ್ರಿಲ್ ಹದಿನೇಳಕ್ಕೆ ಸರಳವಾಗಿ ನಡೆಯಲಿದೆ.

ರಾಮನಗರದಲ್ಲಿ ಮಾತನಾಡುತ್ತಿದ್ದ ಕುಮಾರಸ್ವಾಮಿ ಈ ಬಗ್ಗೆ ಹೇಳಿದಿಷ್ಟು, "ನನ್ನ ಮಗನ ಮದುವೆಯ ಬಗ್ಗೆ ಕುಟುಂಬದಲ್ಲಿ ಏನು ನಿರ್ಧಾರವಾಗಿತ್ತೋ, ಏಪ್ರಿಲ್ ಹದಿನೇಳಕ್ಕೆ ರಾಮನಗರದಲ್ಲಿ ಎಲ್ಲರ ಸಮ್ಮುಖದಲ್ಲಿ ದೊಡ್ಡ ಮಟ್ಟದಲ್ಲಿ ನಡೆಸಲು ನಿರ್ಧರಿಸಲಾಗಿತ್ತು".

"ವಿಶ್ವ ಈಗ ಎದುರಿಸುತ್ತಿರುವ ಈ ಸಮಸ್ಯೆಯಿಂದಾಗಿ, ನಾನು ಕೊನೆಯ ತನಕನೂ, ಮನೆಯಲ್ಲೇ ಮದುವೆ ಮಾಡುವ ನಿರ್ಧಾರಕ್ಕೆ ಬಂದಿದ್ದೆ. ಇದಕ್ಕೆ ಕಾರಣ, ಕೊರೊನಾ. ಈಗ ಸರಕಾರದ ಹೊಸ ಗೈಡ್ಲೈನ್ಸ್ ಗಳು ಬಂದಿರುವ ಹಿನ್ನಲೆಯಲ್ಲಿ, ಜೊತೆಗೆ, ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆಯ ಪ್ರಕಾರ, ಅದು ಉಲ್ಲಂಘನೆಯಾಗಬಾರದು ಎನ್ನುವ ನಿರ್ಧಾರಕ್ಕೆ ಬರಲಾಗಿದೆ".

"ಮನೆಯಲ್ಲಿ ಸರಳವಾಗಿ ಮದುವೆ ನಡೆಸಲು ನಿರ್ಧರಿಸಲಾಗಿದೆ. ಆದರೂ, ನನ್ನ ಹತ್ತಿರದ ಸಂಬಂಧಿಗಳು, ಅಂದರೆ ಅಣ್ಣಂದಿರು, ಅಕ್ಕತಂಗಿ, ಬಾವಂದಿರನ್ನು ಕರೆದರೂ, ಜನ ಅರವತ್ತು, ಎಪ್ಪತ್ತರ ಮೇಲೆ ಹೋಗುತ್ತದೆ" ಎಂದು ಕುಮಾರಸ್ವಾಮಿ ಹೇಳಿದರು.

ಬೆಂಗಳೂರು ಇಂದು ರೆಡ್ ಝೋನ್ ನಲ್ಲಿದೆ

ಬೆಂಗಳೂರು ಇಂದು ರೆಡ್ ಝೋನ್ ನಲ್ಲಿದೆ

"ಹೀಗಾಗಿ, ಈ ನಂಬರ್ ಲೆಕ್ಕಾಚಾರದ ಹಿನ್ನಲೆ ಒಂದು ಕಡೆ, ಇನ್ನೊಂದು ಕಡೆ, ಬೆಂಗಳೂರು ಇಂದು ರೆಡ್ ಝೋನ್ ನಲ್ಲಿದೆ. ರಾಮನಗರದಲ್ಲಿ ಮೊದಲಿಂದಲೂ ಮದುವೆ ಮಾಡುತ್ತೇನೆ ಎಂದು ಹೇಳುತ್ತಿದ್ದೆ. ರಾಮನಗರ ದೇವರ ದಯೆಯಿಂದ ಗ್ರೀನ್ ಝೋನ್ ನಲ್ಲಿದೆ. ನಮ್ಮ ಕುಟುಂಬದ ಕಾರ್ಯಕ್ರಮದ ಮೂಲಕವೂ ರಾಮನಗರಕ್ಕೆ ಯಾವುದೇ ಸಮಸ್ಯೆಯಾಗಬಾರದು".

ಕಾರ್ಯಕರ್ತರಿಗೆ ನನ್ನ ಮನವಿ, ಯಾರೂ ಅನ್ಯಥಾ ಭಾವಿಸಬಾರದು

ಕಾರ್ಯಕರ್ತರಿಗೆ ನನ್ನ ಮನವಿ, ಯಾರೂ ಅನ್ಯಥಾ ಭಾವಿಸಬಾರದು

"ನಮ್ಮೆಲ್ಲರ ಕಾರ್ಯಕರ್ತರಿಗೆ ನನ್ನ ಮನವಿ, ಯಾರೂ ಅನ್ಯಥಾ ಭಾವಿಸಬಾರದು. ಮತ್ತೆ ನಮ್ಮ ಮನೆಯ ಮದುವೆಯಿಂದಾಗಿ ಗೊಂದಲವಾಗಬಾರದು. ಏಪ್ರಿಲ್ ಹದಿನೇಳನೇ ತಾರೀಕಿನ ದಿನ, ನಿಮ್ಮ ಮನೆಯಲ್ಲೇ ಇದ್ದು, ನಮಗೆ ಆಶೀರ್ವದಿಸಿ. ಮುಂದೆ ಎಲ್ಲರ ಜೊತೆ ಸೇರಿ ಆರಕ್ಷತೆ ನಡೆಸುವ ತೀರ್ಮಾನಕ್ಕೆ ಬರುತ್ತೇನೆ".

ಕುಟುಂಬದ ಸದಸ್ಯರು

ಕುಟುಂಬದ ಸದಸ್ಯರು

"ಕೊರೊನಾ ಹಿನ್ನಲೆಯಲ್ಲಿ ಕೇವಲ ನಮ್ಮ ಕುಟುಂಬದ ಸದಸ್ಯರ ನಡುವೆ ಅತ್ಯಂತ ಸರಳವಾಗಿ ಈ ಮದುವೆ ನಡೆಯಲಿದೆ. ಆರೋಗ್ಯ ದೃಷ್ಟಿಯಿಂದ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಎಲ್ಲರೂ ಸಹಕರಿಸಬೇಕೆಂದು" ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ಕೇತಿಗಾನಹಳ್ಳಿಯ ಕುಮಾರಸ್ವಾಮಿಯವರ ಫಾರಂ ಹೌಸ್

ಕೇತಿಗಾನಹಳ್ಳಿಯ ಕುಮಾರಸ್ವಾಮಿಯವರ ಫಾರಂ ಹೌಸ್

"ರಾಮನಗರ ಇಂದು ಗ್ರೀನ್ ಝೋನ್ ನಲ್ಲಿ ಇರುವುದರಿಂದ, ಬೆಂಗಳೂರಿನ ಬದಲಾಗಿ ರಾಮನಗರದಲ್ಲಿ ಮದುವೆ ಮಾಡುವ ನಿರ್ಧಾರಕ್ಕೆ ಬರಲಾಗಿದೆ"ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಜಿಲ್ಲೆಯ ಕೇತಗಾನಹಳ್ಳಿಯ ಕುಮಾರಸ್ವಾಮಿಯವರ ಫಾರಂ ಹೌಸ್ ನಲ್ಲಿ ನಿಖಿಲ್ ಕುಮಾರಸ್ವಾಮಿ ಮದುವೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+