July School Holidays: ರಾಜ್ಯದಲ್ಲಿ ಮಳೆ ರಜೆ ಹೊರತುಪಡಿಸಿ ಜುಲೈನಲ್ಲಿ ಶಾಲಾ-ಕಾಲೇಜುಗಳಿಗೆ ಇಷ್ಟು ದಿನ ರಜೆ
July School Holidays 2025: ರಾಜ್ಯದಲ್ಲಿ ಈಗಾಗಲೇ ಬೇಸಿಗೆ ರಜೆ ಮುಗಿದು ಶಾಲೆಗಳು ಆರಂಭವಾಗಿವೆ. ಈ ನಡುವೆಯೇ ಹಲವು ಜಿಲ್ಲೆಗಳಲ್ಲಿ ಕಾರಣಾಂತರಗಳಿಂದ ಶಾಲಾ-ಕಾಲೇಜುಗಳಿಗೆ ರಜೆಗಳನ್ನು ಘೋಷಣೆ ಮಾಡಲಾಗುತ್ತಿದೆ. ಹಾಗಾದ್ರೆ 2025ರ ಜುಲೈ ತಿಂಗಳಿನಲ್ಲಿ ಎಷ್ಟು ರಜೆಗಳು ಬರಲಿವೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಪ್ರತಿ ತಿಂಗಳು ಕೂಡ ಇಷ್ಟು ಸರ್ಕಾರಿ ರಜೆಗಳಂತ ಇರುತ್ತವೆ. ಹಾಗೆಯೇ ಇದೀಗ ಜುಲೈ ಎಂಟ್ರಿ ಆಗಿದ್ದು, ಈ ತಿಂಗಳಲ್ಲಿ ಎಷ್ಟು ರಜೆಗಳು ಬರುತ್ತವೆ ಎನ್ನುವುದು ಬಹುತೇಕರ ಪ್ರಶ್ನೆ ಆಗಿರುತ್ತದೆ. ಇದಕ್ಕೆ ಸಂಪೂರ್ಣ ಉತ್ತರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈಗಾಗಲೇ ಬೇಸಿಗೆ ರಜೆ ಮುಗಿದು ಶಾಲೆಗಳು ಆರಂಭವಾಗಿ ತರಗತಿಗಳು ನಡೆಯುತ್ತಿವೆ. ಇನ್ನು ಪ್ರತಿ ತಿಂಗಳಿನಂತೆ, ಈ ತಿಂಗಳು ಎಷ್ಟು ಶಾಲಾ ರಜಾದಿನಗಳು ಇರುತ್ತವೆ ಎಂಬುದರ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರು ಕುತೂಹಲದಿಂದಿ ಇರುತ್ತಾರೆ. ಈ ತಿಂಗಳು ಮೊಹರಂ ಹಬ್ಬವನ್ನು ಸಹ ಆಚರಣೆ ಮಾಡಲಾಗುತ್ತದೆ. ಈ ಹಬ್ಬ ಜುಲೈ 6 ಹಾಗೂ 7ರಂದು ಈ ಹಬ್ಬ ಬಂದಿದ್ದು, ಚಂದ್ರ ದರ್ಶನದ ಮೇಲೆ ಈ ಹಬ್ಬದ ರಜೆ ನಿರ್ಧಾರ ಆಗಲಿದೆ.
ಜುಲೈ ತಿಂಗಳಲ್ಲಿ ಬರುವ ರಜೆಗಳು: ಜುಲೈ 6ಕ್ಕೆ ಚಂದ್ರ ದರ್ಶನ ಆಗದಿದ್ದರೆ, ರಜಾ ದಿನವು ಜುಲೈ 7ಕ್ಕೆ ಮುಂದೂಡಿಕೆ ಆಗಲಿದೆ. ಅಂದಿನ ದಿನ ದೇಶಾದ್ಯಂತ ಬಹುತೇಕ ರಾಜ್ಯಗಳಲ್ಲಿನ ಶಾಲೆಗಳು ಮುಚ್ಚಲ್ಪಡುತ್ತವೆ. ಈ ರಜೆಯನ್ನು ಹೊರತುಪಡಿಸಿ ಜುಲೈನಲ್ಲಿ ಪ್ರತಿ ಭಾನುವಾರ ವಿದ್ಯಾರ್ಥಿಗಳಿಗೆ ವಾರದ ರಜೆ ಸಿಗುತ್ತದೆ. ಒಟ್ಟು ನಾಲ್ಕು ಭಾನುವಾರಗಳು ಬರಲಿವೆ.
ಜುಲೈ ತಿಂಗಳ ರಜೆಗಳ ಪಟ್ಟಿ
* ಜುಲೈ 6 - ಭಾನುವಾರ
* ಜುಲೈ 13 - ಭಾನುವಾರ
* ಜುಲೈ 20 - ಭಾನುವಾರ
* ಜುಲೈ 27 - ಭಾನುವಾರ
ಹಲವು ರಾಜ್ಯಗಳಲ್ಲಿ ಬೇಸಿಗೆ ರಜೆ ಮುಗಿದು ಶಾಲೆಗಳು ಓಪನ್ ಆಗಿವೆ. ಆದರೂ, ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾದ್ರೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ರಜೆಗಳನ್ನು ನೀಡಲಾಗುತ್ತಿದೆ. ಹವಾಮಾನ ಮತ್ತು ಪ್ರಾದೇಶಿಕ ಪರಿಸ್ಥಿತಿಗಳಿಗೆ ಅನುಗುಣವಾಗಿ ಸ್ಥಳೀಯ ಆಡಳಿತಗಳು ರಜಾ ದಿನಗಳನ್ನು ಘೋಷಣೆ ಮಾಡಬಹುದು.
ಸಾಮಾನ್ಯವಾಗಿ ಸರ್ಕಾರಿ ರಜೆಗಳನ್ನು ಹೊರತುಪಡಿಸಿ ವಿಶೇಷ ಕಾರ್ಯಕ್ರಮಗಳು, ಹವಾಮಾನ ವೈಪರಿತ್ಯದ ವೇಳೆ ರಜೆ ಘೋಷಣೆ ಆಯಾ ಜಿಲ್ಲಾಡಳಿತಗಳು ಹಾಗೂ ಸ್ಥಳೀಯ ಆಡಳಿತಗಳು ನಿರ್ಧಾರ ಮಾಡಲಿವೆ. ಹಾಗೆಯೇ ಈಗಾಗಲೇ ಕರ್ನಾಟಕದಲ್ಲಿ ಭಾರೀ ಮಳೆ ಹಿನ್ನೆಲೆ ಹಲವು ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಜೆಗಳನ್ನು ಘೋಷಣೆ ಮಾಡಲಾಗಿದೆ. ಅಲ್ಲದೆ, ರಜೆಗಳನ್ನ ಸರಿದೂಗಿಸಲು ಕೆಲವೆಡೆ ಶನಿವಾರ ಪೂರ್ತಿ ತರಗತಿಗಳನ್ನು ನಡೆಸಲು ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗದಂತೆ ಈ ಕ್ರಮ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.












Click it and Unblock the Notifications