ಜನ್ ಕೀ ಬಾತ್ ಕರ್ನಾಟಕ ಸಮೀಕ್ಷೆ: ಸರಳ ಬಹುಮತದತ್ತ ಬಿಜೆಪಿ ದಾಪುಗಾಲು

ಬೆಂಗಳೂರು, ಮೇ 4: 'ಜನ್ ಕೀ ಬಾತ್' ಎಂಬ ಸಂಸ್ಥೆ ಕರ್ನಾಟಕ ಚುನಾವಣೆಗೆ ಸಂಬಂಧಿಸಿದಂತೆ ಸಮೀಕ್ಷೆ ನಡೆಸಿದ್ದು ಬಿಜೆಪಿ ಸರಳ ಬಹುಮತದ ಸಮೀಪಕ್ಕೆ ಬಂದು ನಿಲ್ಲಲಿದೆ ಎಂದು ಹೇಳಿದೆ. ಇಲ್ಲಿಯವರೆಗೆ ಹೆಚ್ಚಿನ ಸಮೀಕ್ಷೆಗಳು ಕರ್ನಾಟಕದಲ್ಲಿ ಕಾಂಗ್ರೆಸಿಗೆ ಹೆಚ್ಚಿನ ಸ್ಥಾನಗಳನ್ನು ನೀಡಿದ್ದವು. ಆದರೆ ಈ ಸಮೀಕ್ಷೆ ಬಿಜೆಪಿಗೆ ಭರ್ಜರಿ ಸ್ಥಾನಗಳನ್ನು ನೀಡಿದೆ.

ಸಮೀಕ್ಷೆಯ ಪ್ರಕಾರ ಬಿಜೆಪಿಯ ಸ್ಥಾನಗಳಲ್ಲಿ ಭಾರೀ ಏರಿಕೆಯಾಗಲಿದ್ದು ನೂರರ ಗಡಿ ದಾಟಲಿವೆ. ಜೆಡಿಎಸ್ ಕೂಡ ಸ್ವಲ್ಪ ಮಟ್ಟಿಗೆ ತನ್ನ ಸ್ಥಾನಗಳನ್ನು ಉತ್ತಮಪಡಿಸಿಕೊಳ್ಳಲಿದೆ. ಆದರೆ ಆಡಳಿತರೂಢ ಕಾಂಗ್ರೆಸ್ ಮಾತ್ರ ಭಾರೀ ಪ್ರಮಾಣದಲ್ಲಿ ಸೀಟುಗಳನ್ನು ಕಳೆದುಕೊಂಡು ಎರಡನೇ ಸ್ಥಾನಕ್ಕೆ ಕುಸಿಯಲಿದೆ ಎಂಬುದಾಗಿ ಸಮೀಕ್ಷೆಯು ತಿಳಿಸಿದೆ.

ಬಿಜೆಪಿಗೆ 102 ರಿಂದ 108 ಸ್ಥಾನಗಳು ಸಿಗಲಿವೆ ಎಂಬುದು ಸರ್ವೆಯ ಅಂದಾಜು. ಕಾಂಗ್ರೆಸ್ ಎರಡನೇ ಸ್ಥಾನ ಪಡೆಯಲಿದ್ದು 72-74 ಸ್ಥಾನಗಳಲ್ಲಷ್ಟೇ ಗೆಲುವು ಸಾಧಿಸಲಿದ್ದರೆ, ಜೆಡಿಎಸ್ 42-44 ಮತ್ತು ಇತರರು 2-4 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ.

Jan Ki Baat Karnataka opinion poll gives BJP 102 -108

ಬಿಜೆಪಿಗೆ ಶೇಕಡಾ 40ರಷ್ಟು ಮತಗಳು ಬೀಳಲಿವೆ, ಕಾಂಗ್ರೆಸ್ ಕೇವಲ ಶೇಕಡಾ 38 ಮತಗಳಿಗೆ ತೃಪ್ತಿ ಹೊಂದಬೇಕಾಗುತ್ತದೆ. ಜೆಡಿಎಸ್ ಕಳೆದ ಬಾರಿಯಷ್ಟೇ ಅಂದರೆ ಶೇಕಡಾ 20 ಮತಗಳನ್ನು ಪಡೆಯಬಹುದು ಎಂಬುದಾಗಿ ಸರ್ವೆ ಫಲಿತಾಂಶ ತಿಳಿಸಿದೆ.

ಒಟ್ಟು 1.2 ಲಕ್ಷ ಜನರಿಂದ ಅಭಿಪ್ರಾಯ ಸಂಗ್ರಹಿಸಿ ಈ ಸಮೀಕ್ಷೆ ನಡೆಸಿದ್ದೇವೆ ಎಂದು ಜನ್ ಕೀ ಬಾತ್ ಸಂಸ್ಥೆ ಹೇಳಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+