ನಾನು ಗಳಿಸಿರುವ ಆಸ್ತಿ ಕಾನೂನು ಬದ್ಧವಾಗಿದೆ: ಐಟಿಗೆ ಮಾಹಿತಿ ನೀಡಿದ್ದೇನೆ ಎಂದ ಚನ್ನಣ್ಣನವರ್
ಬೆಂಗಳೂರು, ಜ. 31: ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಅವರ ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಕ್ರಷರ್ ಪ್ರಕರಣದಲ್ಲಿ ಲಂಚ ಸ್ವೀಕರಿಸಿದ ಆರೋಪ ಪ್ರಕರಣ ಸುದ್ದಿಯಾದ ಬೆನ್ನಲ್ಲೇ ನ್ಯಾಯಾಲಯದಿಂದ ತನ್ನ ವಿರುದ್ಧ ಯಾವುದೇ ಸುದ್ದಿ ಪ್ರಕಟಿಸದಂತೆ ತಾತ್ಕಾಲಿಕ ತಡೆಯಾಜ್ಞೆ ತಂದ ಬೆನ್ನಲ್ಲೇ ಇದೀಗ ತನ್ನ ವಿರುದ್ಧದ ಆರೋಪ ಕುರಿತು ರವಿ ಡಿ. ಚನ್ನಣ್ಣನವರ್ ಪ್ರಕಟಣೆ ನೀಡಿದ್ದಾರೆ.
''ನಾನು ಗಳಿಸಿರುವ ಆಸ್ತಿ ಪಿತ್ರಾಜಿತ ಮತ್ತು ಸ್ವಯಾರ್ಜಿತ. ಯಾವುದೇ ಆಸ್ತಿಯನ್ನು ಬೇನಾಮಿಯಾಗಿ ಗಳಿಸಿಲ್ಲ. ನನ್ನ ಎಲ್ಲಾ ಆಸ್ತಿಗಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆಯನ್ನು ಪಾವತಿ ಮಾಡಿದ್ದೇನೆ. ಎಲ್ಲಾ ವಿವರಗಳನ್ನು ಆದಾಯ ತೆರಿಗೆ ಇಲಾಖೆಗೆ ನೀಡಿದ್ದೇನೆ. ನನ್ನ ವಿರುದ್ಧ ಸಾಮಾಜಿಕ ಜಾಲ ತಾಣದಲ್ಲಿ ಮಾನ ಹರಣ ಸುದ್ದಿ ಪ್ರಕಟಿಸಲಾಗುತ್ತಿದೆ. ಇನ್ನು ನನ್ನ ತೇಜೋವಧೆ ಮಾಡುತ್ತಿರುವ ಮಾಧ್ಯಮಗಳಿಗೆ ನ್ಯಾಯವಾದಿಗಳ ಮೂಲಕ ನೋಟಿಸ್ ಜಾರಿ ಮಾಡಿದ್ದೇನೆ. ಇನ್ನೂ ನನ್ನ ವಿರುದ್ಧ ಸುಳ್ಳು ಆರೋಪ ಹೊರಿಸಿ ಮಾನಹಾನಿಕರ ಸುದ್ದಿ ಪ್ರಕಟಿಸುತ್ತಿರುವ ಸಂಬಂಧ ಮೂರು ಕೋಟಿ ರೂ.ಗೆ ಮಾನಹಾನಿ ಪ್ರಕರಣವನ್ನು ದಾಖಲಿಸಿದ್ದೇನೆ. ಎರಡು ವರ್ಷ ಜೈಲು ಶಿಕ್ಷೆ ವಿಧಿಸುವಂತೆ ನ್ಯಾಯಾಲಯವನ್ನ ಕೋರಿದ್ದೇನೆ,'' ಎಂದು ಸ್ಪಷ್ಟನೆ ನೀಡಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಅರೋಪ: ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಅವರಿಂದ ಸ್ಪಷ್ಟನೆ ನೀಡಿ ಪತ್ರ#ravidchannannavar #ಒನ್ಇಂಡಿಯಾಕನ್ನಡಸುದ್ದಿ pic.twitter.com/uqUx1OzGdf
— oneindiakannada (@OneindiaKannada) January 31, 2022
ನನ್ನ ಮೇಲಿನ ಅರೋಪಕ್ಕೆ ಸಂಬಂಧಿಸಿದಂತೆ ಸಿವಿಲ್ ಹಾಗೂ ಕ್ರಿಮಿನಲ್ ಮಾನಹಾನಿಕರ ಕೇಸು ದಾಖಲಿಸಿದ್ದೇನೆ. ನಾನು ದಾಖಲಿಸಿರುವ ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥ ಮಾಡುವ ವರೆಗೂ ನಾನು ಮಾತನಾಡುವುದು ಸೂಕ್ತವಲ್ಲ. ಇನ್ನು ನನ್ನ ವಹಿಸಿಕೊಂಡು ಯಾರೂ ಕೆಟ್ಟ ಪದಗಳನ್ನು ಬಳಿಸಿ ಸಾಮಾಜಿಕ ಜಾಲ ತಾಣದಲ್ಲಿ ಕೆಟ್ಟ ಪದ ಬಳಸದಂತೆ ಕಿವಿಮಾತು ಹೇಳಿದ್ದಾರೆ.

ಆಸ್ತಿ ಗಳಿಕೆ ಕುರಿತು ಸ್ಪಷ್ಟನೆ ಇಲ್ಲ: ಇನ್ನು ರವಿ ಡಿ. ಚನ್ನಣ್ಣನವರ್ ಅವರು ಕ್ರಷರ್ ಮಾಲೀಕನಿಂದ ಐದು ಲಕ್ಷ ರೂ. ಲಂಚ ಸ್ವೀಕಿರಿಸದ್ದಾರೆ ಎಂಬ ಅರೋಪ ಕೇಳಿ ಬಂದಿತ್ತು. ಈ ಕುರಿತು ಮಂಜುನಾಥ್ ಎಂಬುವರು ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದ್ದ ದೂರನ್ನು ಉಲ್ಲೇಖಿಸಿ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿತ್ತು. ಈ ನಡುವೆ ಕ್ರಷರ್ ವಿಚಾರಕ್ಕೆ ನನ್ನ ವಿರುದ್ಧ ಯಾರೂ ಸುದ್ದಿ ಪ್ರಕಟಿಸಬಾರದು ಎಂದು ಮಾಧ್ಯಮಗಳ ವಿರುದ್ಧ ತಡೆಯಾಜ್ಞೆ ತಂದಿದ್ದರು. ಇದರ ನಡುವೆ ರವಿ ಡಿ. ಚನ್ನಣ್ಣನವರ್ ಅವರು ಅಕ್ರಮ ಆಸ್ತಿ ಗಳಿಸಿದ್ದಾರೆ ಎಂಬ ಆರೋಪ ಪುಷ್ಟೀಕರಿಸುವ ದಾಖಲೆಗಳು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿದ್ದವು. ಅಕ್ರಮ ಆಸ್ತಿ ಗಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
ಆರೋಪದ ನಡುವೆ ರವಿ ಡಿ. ಚನ್ನಣ್ಣವರ್ ಆಸ್ತಿ ಕುರಿತು ಸ್ಪಷ್ಟನೆ ನೀಡಬೇಕು ಎಂಬ ಒತ್ತಾಯಗಳು ಕೇಳಿ ಬಂದಿದ್ದವು. ಈ ನಡುವೆ ಇದೀಗ ತನ್ನ ಮೇಲಿನ ಆರೋಪ ಕುರಿತು ನಾನು ಕೇಸು ಹಾಕುತ್ತೇನೆ. ನಾನು ಗಳಿಸಿರುವ ಆಸ್ತಿಗಳು ನ್ಯಾಯಬದ್ಧವಾಗಿವೆ. ಸ್ವಯಾರ್ಜಿತ ಹಾಗೂ ಪಿತ್ರಾರ್ಜಿತ ಮೂಲದಿಂದ ಬಂದಿದೆ ಎಂದು ಹೇಳಿದ್ದಾರೆ. ಆದರೆ, ರವಿ ಡಿ. ಚನ್ನಣ್ಣವರ್ ಅವರ ತಾಯಿ, ತಂದೆ ಹಾಗೂ ಆಪ್ತರ ಹೆಸರಿನಲ್ಲಿ ಇದೆ ಎನ್ನಲಾದ ಆಸ್ತಿಗಳಿಗೆ ಸಂಬಂಧಿಸಿದಂತೆ ಯಾವ ಆದಾಯದ ಮೂಲದಿಂದ ಯಾವಾಗ ಖರೀದಿ ಮಾಡಲಾಗಿದೆ. ಖರೀದಿ ಮೌಲ್ಯ ಎಷ್ಟು ಎಂಬುದರ ಬಗ್ಗೆ ಪ್ರಕಟಣೆಯಲ್ಲಿ ಯಾವುದೇ ಸ್ಪಷ್ಟನೆ ನೀಡಿಲ್ಲ.












Click it and Unblock the Notifications