Inspiring: ಕೇವಲ 10 ರೂಪಾಯಿಗೆ ಹೊಟ್ಟೆ ತುಂಬಾ ಊಟ; ವಿದ್ಯಾರ್ಥಿಗಳಿಗೆ ಆಸರೆಯಾದ ಕೊಟ್ಟೂರಿನ ದಂಪತಿ

ಕರ್ನಾಟಕದ ಒಂದು ಸಣ್ಣ ಊರಿನಲ್ಲಿ ವಯೋವೃದ್ಧ ದಂಪತಿ ತಮ್ಮ ನಿಸ್ವಾರ್ಥ ಸೇವೆಯ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ಆಸರೆಯಾಗಿದ್ದಾರೆ. ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿರುವ ತಿಪ್ಪಣ್ಣ ಹೋಟೆಲ್, ಜನರಿಂದ ಪ್ರೇಮಾ ಅಜ್ಜಿ ಹೋಟೆಲ್ ಎಂದು ಪ್ರೀತಿಯಿಂದ ಕರೆಸಿಕೊಳ್ಳುವ ಈ ಪುಟ್ಟ ಉಪಹಾರ ದರ್ಶಿನಿ ಕೇವಲ ಒಂದು ಹೋಟೆಲ್ ಆಗಿ ಉಳಿದಿಲ್ಲ, ಬದಲಿಗೆ ಬಡ ವಿದ್ಯಾರ್ಥಿಗಳ ಪಾಲಿನ ಅನ್ನದಾಸೋಹ ಕೇಂದ್ರವಾಗಿದೆ.

ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ತರಕಾರಿ, ದಿನಸಿ ಬೆಲೆಗಳು ಏರಿಕೆಯಾದಂತೆಲ್ಲಾ ಹೋಟೆಲ್ ಮಾಲೀಕರು ಅನಿವಾರ್ಯವಾಗಿ ತಿಂಡಿ ತಿನಿಸುಗಳ ದರವನ್ನು ಹೆಚ್ಚಿಸುತ್ತಾರೆ. ಆದರೆ, ಈ ದಂಪತಿ ಮಾತ್ರ ಹಾಗೆ ಎಂದು ಮಾಡಿಲ್ಲ. ದಶಕಗಳಿಂದಲೂ ಇವರು ಕೇವಲ 10 ರೂಪಾಯಿಗೆ ಹೊಟ್ಟೆ ತುಂಬಾ ತಿಂಡಿ ಬಡಿಸುತ್ತಿದ್ದಾರೆ.

Inspiring

ಇವರ ಹೋಟೆಲ್‌ನಲ್ಲಿ ಬಿಸಿ ಬಿಸಿ ಇಡ್ಲಿ, ದೋಸೆ, ಪಡ್ಡು, ರೈಸ್ ಬಾತ್ ಮುಂತಾದ ರುಚಿಕರವಾದ ತಿಂಡಿಗಳು ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತವೆ. ಲಾಭ ಗಳಿಸುವುದಕ್ಕಿಂತ ಹೆಚ್ಚಾಗಿ ಹಸಿದವರಿಗೆ ಅನ್ನ ನೀಡುವುದೇ ಇವರ ಮುಖ್ಯ ಗುರಿ.

ಬಡ ವಿದ್ಯಾರ್ಥಿಗಳಿಗೆ ಊಟ

ಗ್ರಾಮೀಣ ಭಾಗಗಳಿಂದ ಪಟ್ಟಣಕ್ಕೆ ಬಂದು ಕಲಿಯುವ ಎಷ್ಟೋ ವಿದ್ಯಾರ್ಥಿಗಳು ಹಣಕಾಸಿನ ಸಮಸ್ಯೆಯಿಂದಾಗಿ ಬೆಳಗಿನ ಉಪಹಾರವನ್ನ ಬಿಟ್ಟು ತರಗತಿಗಳಿಗೆ ಹಾಜರಾಗುತ್ತಾರೆ. ಹಸಿವು ಮತ್ತು ಶಿಕ್ಷಣದ ನಡುವೆ ಒದ್ದಾಡುವ ಇಂತಹ ಬಡ ವಿದ್ಯಾರ್ಥಿಗಳಿಗೆ ಈ ಹೋಟೆಲ್ ಆಸರೆಯಾಗಿದೆ.

ವಿಶೇಷವೆಂದರೆ, ಈ ಹೋಟೆಲ್‌ನ ಮಾಲೀಕರು ಎಂದಿಗೂ ಶಾಲೆಯ ಮೆಟ್ಟಿಲೇರಿ ಶಿಕ್ಷಣ ಪಡೆದವರಲ್ಲ. ಶಿಕ್ಷಣದಿಂದ ವಂಚಿತರಾದ ನೋವು ಮತ್ತು ಹಸಿವಿನ ಸಂಕಟ ಅವರಿಗೆ ಚೆನ್ನಾಗಿ ತಿಳಿದಿದೆ. ತಾವು ಪಟ್ಟ ಕಷ್ಟವನ್ನ ಇಂದಿನ ವಿದ್ಯಾರ್ಥಿಗಳು ಪಡಬಾರದು, ಹಣದ ಕೊರತೆಯಿಂದಾಗಿ ಯಾರೊಬ್ಬರ ಶಿಕ್ಷಣವೂ ಅರ್ಧಕ್ಕೆ ನಿಲ್ಲಬಾರದು ಎಂಬ ಆಸೆಯಿಂದ ಅವರು ಈ ನಿಸ್ವಾರ್ಥ ಸೇವೆಯನ್ನ ಮುಂದುವರಿಸಿಕೊಂಡು ಬಂದಿದ್ದಾರೆ.

ಕರ್ನಾಟಕದ ಹೋಟೆಲ್ ಲೋಕದಲ್ಲಿ ಇದೊಂದು ಸ್ಫೂರ್ತಿದಾಯಕ ಸುದ್ದಿ

ಇದು ಕೇವಲ ಅನ್ನದಾನವಲ್ಲ, ವಿದ್ಯಾರ್ಥಿಗಳಿಗೆ ಅವರು ನೀಡುತ್ತಿರುವ ಆತ್ಮಗೌರವ. ಬೆಳಗಿನ ಜಾವ ಎದ್ದು, ಅತ್ಯಂತ ಕಾಳಜಿಯಿಂದ ಊಟ ಸಿದ್ಧಪಡಿಸಿ, ಮಕ್ಕಳಂತೆ ಪ್ರೀತಿಯಿಂದ ಬಡಿಸುವ ಈ ದಂಪತಿಯ ಕಾರ್ಯ ನಿಜಕ್ಕೂ ಶ್ಲಾಘನೀಯ. ವಿದ್ಯಾರ್ಥಿಗಳು ತರಗತಿಗೆ ಹೋಗುವ ಮುನ್ನ ಹಸಿವಿನ ಚಿಂತೆಯಿಲ್ಲದೆ, ನೆಮ್ಮದಿಯಿಂದ ಹೊಟ್ಟೆ ತುಂಬಾ ಉಂಡು ಹೋಗಲು ಈ ಹೋಟೆಲ್ ಕಾರಣವಾಗಿದೆ.

ಇಂದಿನ ಕಮರ್ಷಿಯಲ್ ಯುಗದಲ್ಲಿ, ಹಣಕ್ಕಿಂತ ಮಾನವೀಯತೆಯೇ ದೊಡ್ಡದು ಎಂದು ತೋರಿಸಿಕೊಟ್ಟಿರುವ ಕೊಟ್ಟೂರಿನ ಈ ದಂಪತಿಯ ಕಥೆ ಸಮಾಜಕ್ಕೆ ಒಂದು ಮಾದರಿ.

ಈ ಪುಟ್ಟ ಹೋಟೆಲ್‌ನಲ್ಲಿ ಉಪಹಾರ ಸವಿದು ತಮ್ಮ ವಿದ್ಯಾಭ್ಯಾಸ ಮುಗಿಸಿ, ಇಂದು ದೊಡ್ಡ ದೊಡ್ಡ ಹುದ್ದೆಗಳಲ್ಲಿರುವ ಅನೇಕರು ಈ ದಂಪತಿಯನ್ನ ಇಂದಿಗೂ ಮರೆತಿಲ್ಲ. ತಮಗೆ ಆಸರೆಯಾದ ಪ್ರೇಮಾ ಅಜ್ಜಿ ಹಾಗೂ ತಿಪ್ಪಣ್ಣ ಅವರ ಗುಣಗಾನ ಮಾಡುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+