ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪ್ರಾಪ್ತ ಪತ್ನಿ ಗರ್ಭಿಣಿ: ಪತಿಯ ವಿರುದ್ಧದ ಪೋಕ್ಸೋ ಕೇಸ್ ರದ್ದು

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು ನ.5. ಇದೊಂದು ವಿಚಿತ್ರ ಪ್ರಕರಣ, ಆತ ಮತ್ತು ಆಕೆ ಮದುವೆಯಾಗಿದ್ದಾರೆ, ಆದರೂ ಆತ ತನ್ನ ಪತ್ನಿಯನ್ನು ಗರ್ಭಿಣಿ ಮಾಡಿದ್ದಾನೆಂಬ ಕಾರಣಕ್ಕೆ ಪೋಕ್ಸೋ ಕಾಯಿದೆಯಡಿ ಕೇಸ್ ಎದುರಿಸಬೇಕಾಯಿತು. ಆದರೆ ಕೊನೆಗೂ ಸಂತ್ರಸ್ತೆ ಮತ್ತು ಆರೋಪಿ ನಡುವೆ ಸಂಧಾನ ಏರ್ಪಟ್ಟ ಹಿನ್ನೆಲೆಯಲ್ಲಿ ಪ್ರಕರಣ ಮುಕ್ತಾಯವಾಗಿದೆ. ನ್ಯಾಯಾಲಯ ಕೂಡ ಕೇಸ್ ಮುಂದುವರಿಸುವುದು ವ್ಯರ್ಥ ಎಂದು ಅಭಿಪ್ರಾಯಪಟ್ಟಿದೆ.

ಪ್ರಕರಣ ರದ್ದು ಕೋರಿ ವ್ಯಕ್ತಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ.ಕೆ.ನಟರಾಜನ್ ಅವರಿದ್ದ ಏಕಸದಸ್ಯಪೀಠ, ಮಹಮದ್ದೀಯ ಸಂಪ್ರದಾಯದಂತೆ ಮದುವೆಯಾಗಿದ್ದರೂ ಕೂಡ ತನ್ನ ಅಪ್ರಾಪ್ತ ಪತ್ನಿ ಗರ್ಭ ಧರಿಸಲು ಕಾರಣರಾಗಿದ್ದಾರೆಂದು ಹೂಡಿದ್ದ ಪೋಕ್ಸೋ ಕೇಸ್ ಬರಖಾಸ್ತುಗೊಳಿಸಿತು.

Breaking: ಪೋಕ್ಸೋ ಪ್ರಕರಣ: ನವೆಂಬರ್‌ 8ರವರೆಗೆ ಮುರುಘಾ ಶರಣರ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ Breaking: ಪೋಕ್ಸೋ ಪ್ರಕರಣ: ನವೆಂಬರ್‌ 8ರವರೆಗೆ ಮುರುಘಾ ಶರಣರ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

"ಪ್ರಕರಣದ ಸನ್ನಿವೇಶ ಮತ್ತು ದಾಖಲೆಗಳನ್ನು ಪರಿಗಣಿಸಿದರೆ ಪ್ರಕರಣವನ್ನು ಮುಂದುವರಿಸುವುದು ಪ್ರಯೋಜನವಿಲ್ಲ. ಜತೆಗೆ ಸಂತ್ರಸ್ತೆ ಬೇರೆ ಪ್ರತಿಕೂಲ ಸಾಕ್ಷಿಯಾಗಿರುವ ಹಿನ್ನೆಲೆಯಲ್ಲಿ ತನಿಖೆ ನಡೆದರೂ ಅದು ವೇಸ್ಟ್ ಆಗುತ್ತದೆ, ಹಾಗಾಗಿ ಪ್ರಕರಣವನ್ನು ರದ್ದುಗೊಳಿಸಲಾಗುತ್ತಿದೆ" ಎಂದು ನ್ಯಾಯಪೀಠ ಹೇಳಿದೆ.

In one case HC quashes POSCO case, and another case refuse for quashing

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮೊಹಮ್ಮದ್ ಸಮೀಮ್ ಮತ್ತು ಸ್ಟೇಟ್ ಆಫ್ ಹರಿಯಾಣ ಪ್ರಕರಣದಲ್ಲಿಮತ್ತು ದೆಹಲಿ ಹೈಕೋರ್ಟ್ ನೀಡಿರುವ ಪ್ರಕರಣಗಳನ್ನು ಪರಿಗಣಿಸಿ ಈ ಆದೇಶ ಮಾಡಿದೆ.

ಅರ್ಜಿದಾರರು ತಮ್ಮ ವಿರುದ್ಧದ ಪ್ರಕರಣ ರದ್ದುಗೊಳಿಸಬೇಕೆಂದು ಹೈಕೋರ್ಟ್ ಮೊರೆ ಹೋಗಿದ್ದರು. ಆರೋಪಿ ತಾನು ತಪ್ಪೆಸಗಿಲ್ಲ, ಮೊಹಮದ್ದೀಯನ್ ಕಾನೂನು ಪ್ರಕಾರ ೧೫ ವರ್ಷ ಆದ ನಂತರ ಬಾಲಕಿ ಋತುಮತಿಯಾಗಿದ್ದರೆ ಮದುವೆಯಾಗಿದ್ದೆ, ಈಗ ಸಂತ್ರಸ್ತೆ ವಯಸ್ಕಳಾಗಿದ್ದಾಳೆ ಮತ್ತು ಮಗುವಿಗೆ ಜನ್ಮ ನೀಡಿದ್ದಾರೆ. ಇಬ್ಬರೂ ಜೊತೆಯಾಗಿ ಬದುಕುತ್ತಿದ್ದೇವೆ. ಹಾಗಾಗಿ ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಕೋರಿದ್ದರು.

ಪ್ರಕರಣದ ಹಿನ್ನೆಲೆ:

ಆ ವ್ಯಕ್ತಿ ಮುಸ್ಲಿಂ ಸಂಪ್ರದಾಯದಂತೆ ಹಾಗೂ ಮಹಮ್ಮದೀಯ ಕಾನೂನಿನಂತೆ ಮೈಸೂರಿನಲ್ಲಿ ಮದುವೆಯಾಗಿದ್ದನು. ಆಕೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ವೈದ್ಯಕೀಯ ತಪಾಸಣೆಗೆ ಹೋಗಿದ್ದಾಗ ಆಕೆ ಗರ್ಭ ಧರಿಸಿರುವ ಅಂಶ ಬೆಳಕಿಗೆ ಬಂದಿತು. ಆ ದಾಖಲೆ ಪರಿಶೀಲಿಸಿದಾಗ ಆಕೆಗಿನ್ನೂ 17 ವರ್ಷ 2 ತಿಂಗಳಷ್ಟೇ ಆಗಿತ್ತು. ಆ ಕುರಿತು ಆಸ್ಪತ್ರೆ ಸಿಬ್ಬಂದಿ ನೀಡಿದ ಮಾಹಿತಿ ಆಧರಿಸಿ ಚಂದ್ರ ಲೇಔಟ್ ಪೊಲೀಸರು ಆರೋಪಿ ವಿರುದ್ಧ ಪೋಕ್ಸೋ ಕಾಯಿದೆ ಸೆಕ್ಷನ್ 5(ಎಲ್), 6 ಮತ್ತು 17, ಐಪಿಸಿ ಸೆಕ್ಷನ್ 376, 376(2)(ಎನ್) ಮತ್ತು ಬಾಲ್ಯ ವಿವಾಹ ನಿರ್ಬಂಧ ಕಾಯಿದೆ ಸೆಕ್ಷನ್ 9 ಮತ್ತು 11ರಡಿ ದಾಖಲಾಗಿದ್ದ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸಿ ಆರೋಪಿಗಳ ವಿರುದ್ಧ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿಕೇಸು ದಾಖಲಿಸಿ, ಆರೋಪಪಟ್ಟಿಯನ್ನೂ ಸಹ ಸಲ್ಲಿಸಿದ್ದರು.

ಪೋಕ್ಸೋ ಕೇಸ್ ರದ್ದಿಗೆ ನಕಾರ:

ಆದರೆ ಮತ್ತೊಂದು ಪ್ರಕರಣದಲ್ಲಿ ಪೋಕ್ಸೋ ಕೇಸ್ ರದ್ದು ಮಾಡಲು ನಿರಾಕರಿಸಿದೆ. ವೇಶ್ಯಾವಾಟಿಕೆಗೆ ಒತ್ತಾಯವಾಗಿ ದೂಡಲಾಗಿದ್ದ ಅಪ್ರಾಪ್ತೆಯೊಂದಿಗೆ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ ಮತ್ತು ಸಂಭೋಗ ದೃಶ್ಯಗಳನ್ನು ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಸಿದ್ದ ವ್ಯಕ್ತಿಯೊಬ್ಬನ ವಿರುದ್ಧ ದಾಖಲಾಗಿರುವ ಪೋಕ್ಸೋ, ಅತ್ಯಾಚಾರ ಹಾಗೂ ಮಾನವ ಕಳ್ಳಸಾಗಣೆ ಪ್ರಕರಣವನ್ನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.

ವೇಶ್ಯವಾಟಿಕೆ ಕೇಂದ್ರಕ್ಕೆ ನಾನು ಗ್ರಾಹಕನಾಗಿದ್ದರಿಂದ ಮಾನವ ಕಳ್ಳಸಾಗಣೆ ಪ್ರಕರಣ, ಪೋಕ್ಸೋ ಅಥವಾ ಅತ್ಯಾಚಾರ ಪ್ರಕರಣ ದಾಖಲಿಸಲಾಗದು ಎಂಬ ಆರೋಪಿಯ ವಾದ ತಳ್ಳಿಹಾಕಿರುವ ಹೈಕೋರ್ಟ್, ಸಂತ್ರಸ್ತೆಯು ಅಪ್ತಾಪ್ತೆಯಾಗಿದ್ದಾರೆ. ಆಕೆಯೊಂದಿಗೆ ಬಲವಂತವಾಗಿ ಸಂಭೋಗ ನಡೆಸಿ, ಅದರ ದೃಶ್ಯಗಳನ್ನು ದಾಖಲಿಸಿಕೊಂಡು ಬೆದರಿಕೆ ಹಾಕಿರುವುದರಿಂದ ಆರೋಪಿಯನ್ನು ಗ್ರಾಹಕ ಎಂದು ಪರಿಗಣಿಸಲಾಗುವುದಿಲ್ಲ ಎಂದು ಆದೇಶಿಸಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಮತ್ತದರ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಕೇರಳದ ಕಾಸರಗೋಡಿನ ಮೊಹಮ್ಮದ್ ಷರೀಫ್ (45) ಎಂಬಾತ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.

English summary
He had to face a case under the POCSO Act for impregnating his wife. But finally, the case was closed due to the negotiation between the victim and the accused. The court also opined that it is futile to continue the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X