E- Khata: ಆಸ್ತಿದಾರರಿಗೆ ಮಹತ್ವದ ಹೊಸ ಮಾಹಿತಿ: ಆಸ್ತಿ ರಿಜಿಸ್ಟ್ರೇಷನ್‌ಗೆ ಇ -ಖಾತಾ ಕಡ್ಡಾಯ!
E- Khata: ಆಸ್ತಿಗಳಿಗೆ ಸಂಬಂಧಿಸಿದಂತೆ ಇ - ಖಾತಾ ಕಡ್ಡಾಯ ಮಾಡಲಾಗಿದೆ. ಆದರೆ ಈ ವಿಚಾರದಲ್ಲಿ ಕಂದಾಯ ವಿಭಾಗದ ಕೆಲವು ಅಧಿಕಾರಿಗಳು ಹಾಗೂ ಆಸ್ತಿದಾರರು ಕೆಲವೊಂದು ತಪ್ಪುಗಳನ್ನು ಮಾಡುತ್ತಿದ್ದು. ರಾಜ್ಯ ಸರ್ಕಾರವು ಗಂಭೀರವಾದ ಎಚ್ಚರಿಕೆಯೊಂದನ್ನು ಕೊಟ್ಟಿದೆ. ಹೌದು ಆಸ್ತಿಗಳ ಮಾರಾಟದಲ್ಲಿ ಆಗುವ ಮೋಸವನ್ನು ತಪ್ಪಿಸುವುದು. ಆಸ್ತಿ ಖರೀದಿ ಹಾಗೂ ಮಾರಾಟದ ಸಮಯದಲ್ಲಿ ಆಗುವ ಅವ್ಯವಹಾರಗಳನ್ನು ತಪ್ಪಿಸುವುದು ಇದರ ಮುಖ್ಯ ಉದ್ದೇಶ ಇದೆಲ್ಲಕ್ಕಿಂತ ಮುಖ್ಯವಾಗಿ ಆಸ್ತಿ ವ್ಯಾಪ್ತಿಯಿಂದ ಹೊರಗುಳಿದ ಆಸ್ತಿಗಳನ್ನು ಆಸ್ತಿ ವ್ಯಾಪ್ತಿಗೆ ತಂದು ಆಸ್ತಿ ತೆರಿಗೆ ಕಟ್ಟಿಸಿಕೊಳ್ಳುವುದು. ಆದರೆ, ಕೆಲವು ಆಸ್ತಿದಾರರು ತಮಗೇ ತಿಳಿಯದಂತೆ ತಪ್ಪು ಮಾಡುತ್ತಿರುವುದು ಇದೀಗ ಬಹಿರಂಗವಾಗಿದೆ.
ಆಸ್ತಿಗಳ ವಿಚಾರದಲ್ಲಿ ಇ -ಖಾತಾ ನೀಡುವುದನ್ನು ಕಡ್ಡಾಯ ಮಾಡಲಾಗಿದೆ. ಈ ನಿಯಮವನ್ನು ಯಾರಾದರೂ ಉಲ್ಲಂಘನೆ ಮಾಡಿದರೆ ಸಂಬಂಧಪಟ್ಟವರ ಮೇಲೆ ಕಠಿಣ ಕ್ರಮವನ್ನು ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ. ಈ ಸಂಬಂಧ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತರಾದ ಕೆ.ಎ. ದಯಾನಂದ್ ಅವರು ಎಚ್ಚರಿಕೆ ನೀಡಿದ್ದಾರೆ.

ಇ-ಖಾತಾ ಮಾಡಿಸಿಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ. ಆದರೆ, ಆಸ್ತಿಯ ಡಿಜಿಟಲ್ ಸ್ವರೂಪಕ್ಕೆ ಯಾವುದೇ ರೀತಿಯ ಡೆಡ್‌ಲೈನ್ ವಿಧಿಸಿಲ್ಲ. ಆದರೆ ಇದನ್ನು ಕಡ್ಡಾಯ ಮಾಡಿರುವುದರಿಂದ ತಪ್ಪಿಸುವಂತೆ ಇಲ್ಲ. ತಪ್ಪಿಸಿದರೆ ಕಠಿಣ ಕ್ರಮವನ್ನು ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ. ರಾಜ್ಯದಲ್ಲಿ ಸ್ಥಿರಾಸ್ತಿ ನೋಂದಣಿ ಮಾಡುವ ಸಮಯದಲ್ಲಿ ಇ-ಆಸ್ತಿ ಹಾಗೂ ಇ-ಸ್ವತ್ತು ತಂತ್ರಾಂಶದಿಂದ ಮಾಹಿತಿ ಪಡೆದುಕೊಂಡು ನೋಂದಣಿಯನ್ನು ಮಾಡಬೇಕು. ಈ ರೀತಿಯ ನಿಯಮ ಉಲ್ಲಂಘಿಸಿದರೆ ಸಂಬಂಧಪಟ್ಟ ಸಬ್ ರಿಜಿಸ್ಟಾರ್‌ಗಳ ಮೇಲೆ ಕೆಸಿಎಸ್‌ಆರ್ ನಿಯಮಾನುಸಾರ ಶಿಸ್ತು ಕ್ರಮ ನಿಶ್ಚಿತ ಎಂದು ಎಚ್ಚರಿಕೆ ನೀಡಲಾಗಿದ್ದು. ಈ ರೀತಿ ಮಾಡುವ ಆಸ್ತಿದಾರರಿಗೂ ವಾರ್ನಿಂಗ್ ಕೊಡಲಾಗಿದೆ.
ಈ ಸಂಬಂಧ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತರಾದ ಕೆ.ಎ. ದಯಾನಂದ್ ಅವರು ಆದೇಶ ಹೊರಡಿಸಿದ್ದಾರೆ. ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಎಲ್ಲಾ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳಿಗೆ ಕಡ್ಡಾಯವಾಗಿ ಇ-ಆಸ್ತಿ, ಇ-ಸ್ವತ್ತು ಬಳಸಿಕೊಂಡೇ ನೋಂದಣಿ ಮಾಡಬೇಕು ಎಂದು ಹೇಳಲಾಗಿದೆ. ಈ ಅಂಶಗಳು ಕಾವೇರಿ ತಂತ್ರಾಂಶದಲ್ಲಿ ದಾಖಲಾಗಿವೆ. ಆದರೆ, ಕರ್ನಾಟಕದ ಕೆಲವೊಂದು ಉಪನೋಂದಣಾಧಿಕಾರಿಗಳು ಇ-ಖಾತಾ ತೆಗೆದುಕೊಳ್ಳದೆಯೇ ರಿಜಿಸ್ಟ್ರೇಷನ್ ಮಾಡುತ್ತಿದ್ದಾರೆ.
ಈ ರೀತಿಯ ಕಳ್ಳಾಟದಿಂದ ಮತ್ತೊಂದು ಸಮಸ್ಯೆ ಎದುರಾಗಿದ್ದು. ಈ ವಿಷಯವನ್ನು ಕಂದಾಯ ಇಲಾಖೆ ಹಾಗೂ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ರಾಜ್ಯದಲ್ಲಿ ಇ ಖಾತಾ ನೀಡುತ್ತಿರುವುದೇ ಆಸ್ತಿ ಮೋಸವನ್ನು ತಪ್ಪಿಸುವುದಕ್ಕೆ ಆದರೆ, ಅದರಲ್ಲಿಯೇ ಈ ರೀತಿ ಆಗುತ್ತಿರುವುದು ಸರ್ಕಾರದ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದೆ.
ಆಸ್ತಿ ರಿಜಿಸ್ಟ್ರೇಷನ್‌ಗೆ ಇ ಖಾತಾ ಕಡ್ಡಾಯ: ರಾಜ್ಯ ಸರ್ಕಾರವು ಆಸ್ತಿಗಳ ಸುರಕ್ಷತೆಗೆ ಇ ಖಾತಾ ಕಡ್ಡಾಯ ಮಾಡಿದೆ. ಇದೀಗ ಆಸ್ತಿಗಳ ರಿಜಿಸ್ಟ್ರೇಷನ್‌ಗೂ ಇ ಖಾತಾ ಕಡ್ಡಾಯ ಮಾಡಲಾಗಿದೆ. ಈ ಕ್ರಮವನ್ನು ಅನುಸರಿಸದೆ ಇದ್ದರೆ ಕಾನೂನು ಕ್ರಮವನ್ನು ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.












Click it and Unblock the Notifications