ಬಿಪಿಎಲ್ & ಎಪಿಎಲ್‌: ನಿಮ್ಮ ರೇಷನ್ ಕಾರ್ಡ್ ಯಾವುದಕ್ಕೆ ಆಯ್ಕೆ ಆಗಿದೆ ಒಮ್ಮೆ ಚೆಕ್‌ ಮಾಡಿಕೊಳ್ಳಿ-ಮಾಹಿತಿ ಇಲ್ಲಿದೆ

Ration Card: ಈಗಾಗಲೇ ರಾಜ್ಯ ಸರ್ಕಾರ ಬಹುತೇಕ ಜಿಲ್ಲೆಗಳಲ್ಲಿ ನಕಲಿ ದಾಖಲೆ ನೀಡಿ ಪಡೆದಂತಹ ಬಿಪಿಎಲ್‌ ಕಾರ್ಡ್‌ಗಳನ್ನುನ ರದ್ದು ಮಾಡುತ್ತಲೇ ಇದೆ. ಇದರ ನಡುವೆಯೇ ಇದೀಗ ಬಿಪಿಎಲ್ ಕಾರ್ಡ್ ಇದ್ದವರಿಗೆ ಸರ್ಕಾರ ದಿಢೀರ್‌ ಶಾಕ್ ನೀಡಿದೆ. ರಾಜ್ಯದ ಸುಮಾರು 60,000 ಬಿಪಿಎಲ್ ಕಾರ್ಡ್ ಇದ್ದಕ್ಕಿದ್ದಂತೆ ಎಪಿಎಲ್ ಕಾರ್ಡ್ ಆಗಿ ಬದಲಾಗಿದೆ. ಹೇಗೆ ಅಂತೀರ ಇಲ್ಲಿದೆ ನೋಡಿ ಮಾಹಿತಿ.

ಬಿಪಿಎಲ್ ಕಾರ್ಡ್‌ಗಳ ಪರಿಷ್ಕರಣೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಅದರಂತೆಯೇ ಅನರ್ಹ ಕಾರ್ಡ್‌ಗಳನ್ನು ರದ್ದುಪಡಿಸುವುದಾಗಿ ಈಗಾಗಲೇ ಸೂಚನೆ ನೀಡಿತ್ತು. ಆದಾಯ ತೆರಿಗೆ ಪಾವತಿ ಮಾಡುವವರು ವಾರ್ಷಿಕ ಆದಾಯ 1.2 ಲಕ್ಷಕ್ಕಿಂತ ಹೆಚ್ಚು ಇದ್ದಲ್ಲಿ ಅಂತಹ ಕಾರ್ಡ್‌ಗಳನ್ನು ರದ್ದುಗೊಳಿಸಲಾಗುವುದು ಎಂದು ಸರ್ಕಾರ ಈಗಾಗಲೇ ಮಾನದಂಡ ಹೇಳಿತ್ತು.

Important Information for Ration Card Holders in Karnataka

ಅದರಂತೆ ಸರ್ಕಾರ ಪರಿಷ್ಕರಣೆ ನಡೆಸಿದೆ. ಸುಮಾರು 12,00,000 ಅನರ್ಹ ಕಾರ್ಡ್‌ಗಳನ್ನು ಪತ್ತೆ ಮಾಡಿತ್ತು. ಇದೀಗ ದಿಢೀರ್‌ 60,000 ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಿದೆ. ಆದರೆ, ಈ ಬಗ್ಗೆ ಹಲವು ಗ್ರಾಹಕರಿಗೆ ತಿಳಿದಿಲ್ಲ. ನ್ಯಾಯಬೆಲೆ ಅಂಗಡಿಗೆ ಹೋಗಿ ಬಯೋಮೆಟ್ರಿಕ್ ಮೇಲೆ ಬೆರಳಿಟ್ಟಾಗಲೇ ಸತ್ಯ ಗೊತ್ತಾಗಿರುವುದು.

ಅನರ್ಹ ಬಿಪಿಎಲ್ ಕಾರ್ಡ್ ಹೊಂದಿರುವುದು ಗೊತ್ತಾದಾಗ ನೋಟಿಸ್ ನೀಡಲಾಗುತ್ತದೆ. ನಂತರ ಅಮಾನತಿನಲ್ಲಿಡಲಾಗುತ್ತದೆ. ಆದರೆ, ಇಲ್ಲಿ ಯಾವುದೂ ಮಾಡಲಾಗಿಲ್ಲ ಎನ್ನುವುದು ಗ್ರಾಹಕರ ವಾದವಾಗಿದೆ. ದಿಢೀರ್ ಹೀಗೆ ಬಿಪಿಎಲ್ ಕಾರ್ಡ್‌ನಿಂದ ತೆಗೆದು ಎಪಿಎಲ್ ಎಂದು ಮಾಡಿದರೆ ಹೇಗೆ ಎಂದು ಪ್ರಶ್ನಿಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೊಶ ಹೊರಹಾಕುತ್ತಿದ್ದಾರೆ. ಇನ್ನೂ ನೀವು ಬಿಪಿಎಲ್ ಕಾರ್ಡ್ ಹೊಂದಿದ್ದರೆ ಈಗಲೇ ಹೋಗಿ ಚೆಕ್ ಮಾಡುವುದು ಉತ್ತಮ.

ಯಾರೆಲ್ಲಾ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು?: ಕರ್ನಾಟಕದ ಎಲ್ಲಾ ಖಾಯಂ ನಿವಾಸಿಗಳು ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಬಹುದು. ಮಾನದಂಡಗಳಿಗೆ ಅನುಸಾರವಾಗಿ ಎಪಿಎಲ್ ಅಥವಾ ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಮಾಡಹುದಾಗಿದೆ. ಕರ್ನಾಟಕದ ನಿವಾಸಿಗಳು ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಆಹಾರ ಇಲಾಖೆಯ ಕಚೇರಿಗೇ ಹೋಗಬೇಕೆಂದಿಲ್ಲ.

ಬದಲಾಗಿ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. Ahara.kar.nic.in ವೆಬ್‌ಸೈಟ್‌ನಲ್ಲಿ ಅರ್ಹ ಫಲಾನುಭವಿಗಳು ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಇ-ಪಡಿತರ ಚೀಟಿ ಪಡೆದುಕೊಳ್ಳಬಹುದು ಮತ್ತು ನಿಮ್ಮ ಪಡಿತರ ಚೀಟಿಯ ಸ್ಥಿತಿ-ಗತಿಯನ್ನು ಪರಿಶೀಲನೆ ಮಾಡಬಹುದಾಗಿದೆ.

ಬೇಕಾಗುವ ದಾಖಲೆಗಳು

* ಆಧಾರ್ ಕಾರ್ಡ್
* ಇ-ಮೇಲ್ ಐಡಿ
* ಮೊಬೈಲ್ ಸಂಖ್ಯೆ
* ವಿದ್ಯುತ್ ಬಿಲ್
* ಪ್ಯಾನ್ ಕಾರ್ಡ್

ಇನ್ನು ಇಲ್ಲಿ ನೀಡಲಾಗಿರುವ ದಾಖಲೆಗಳೊಂದಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಅರ್ಜಿ ಸಲ್ಲಿಸಿದ 15 ದಿನಗಳ ಬಳಿಕ ನಿಮ್ಮ ಪಡಿತರ ಚೀಟಿಯನ್ನು ನೀಡಲಾಗುತ್ತದೆ. ಇದಕ್ಕೆ 100 ರೂಪಾಯಿ ಶುಲ್ಕ ಪಾವತಿಸಿ ಪಡೆಯಬಹುದಾಗಿದೆ. ಒಂದು ವೇಳೆ ಪಡಿತರ ಚೀಟಿ ಕುರಿತ ಯಾವುದೇ ಗೊಂದಲಗಳಿದ್ದರೆ, ನೀವು ಆಹಾರ ಇಲಾಖೆಯ ಟೋಲ್ ಫ್ರೀ ನಂಬರ್ 18004259339 ಅಥವಾ ಸಹಾಯವಾಣಿ 1967ಗೆ ಕರೆ ಮಾಹಿರಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ. ಇನ್ನು ಬೆಳಗ್ಗೆ 10 ಗಂಟೆಯಿಂದ ಸಂಜೆ 5:30ರ ವರಗೂ ಈ ನಂಬರ್‌ಗಳಿಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಆಹಾರ ಇಲಾಖೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+