Ration Card And LPG: ರಾಜ್ಯದಲ್ಲಿ ಎಲ್‌ಪಿಜಿ ಹಾಗೂ ಪಡಿತರ ಚೀಟಿಯಲ್ಲಿ ಬದಲಾವಣೆ: ಇಲ್ಲಿದೆ ಮಹತ್ವದ ಅಪ್ಡೇಟ್
Ration Card And LPG: ಪಡಿತರ ಚೀಟಿ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಅಷ್ಟೇ ಅಲ್ಲದೆ, ಇದರಿಂದ ಬಡವರಿಗೆ ಉಚಿತ ಆಹಾರ ಧಾನ್ಯ ಸೇರಿದಂತೆ ಹಲವು ಸೌಲಭ್ಯಗಳನ್ನು ದೊರೆಯಲಿವೆ. ಇನ್ನು ನಾಳೆಯಿಂದ ಎಲ್‌ಪಿಜಿ ಹಾಗೂ ಈ ಪಡಿತರ ಚೀಟಿಗೆ ಸಂಬಂಧಿಸಿದಂತೆ ಸರ್ಕಾರ ಹೊಸ ಬದಲಾವಣೆಗಳನ್ನು ತರಲು ಮುಂದಾಗಿದೆ. ಹಾಗಾದ್ರೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಮಾರ್ಚ್ 27ರಿಂದ ಎಲ್‌ಪಿಜಿ ಮತ್ತು ಪಡಿತರ ಚೀಟಿಯಲ್ಲಿ ಮಹತ್ವದ ಬದಲಾವಣೆಗಳನ್ನು ತರಲು ಸರ್ಕಾರ ಮುಂದಾಗಿದೆ. ಈ ಹೊಸ ನಿಯಮಗಳು ಸಾಮಾನ್ಯ ಜನರ ಮೇಲೆ ಪರಿಣಾಮ ಬೀರಲಿವೆ. ಈ ನಿಯಮಗಳ ಬದಲಾವಣೆ ಸುರಕ್ಷೆ ಮತ್ತು ಪಾರದರ್ಶಕತೆಯನ್ನು ತರುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ತಿಳಿದುಬಂದಿದೆ.

ಪಡಿತರ ಚೀಟಿಯಲ್ಲಿ ಏನೆಲ್ಲಾ ಬದಲಾವಣೆ?
* ಡಿಜಿಟಲ್ ರೇಷನ್ ಕಾರ್ಡ್: ಇದೀಗ ಎಲ್ಲಾ ರೇಷನ್ ಕಾರ್ಡ್‌ಗಳನ್ನು ಡಿಜಿಟಲ್ ರೂಪದಲ್ಲಿ ಪರಿವರ್ತನೆ ಮಾಡಲಾಗುತ್ತಿದೆ. ಇದರಿಂದ ಅರ್ಹ ಫಲಾನುಭವಿಗಳಿಗೆ ಪಡಿತರ ವಿತರಣೆ ಮಾಡುವುದು ಮತ್ತು ಭ್ರಷ್ಟಾಚಾರ ನಿಯಂತ್ರಣ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ.
* ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆ: ಈ ಯೋಜನೆಯನ್ನು ವಲಸೆ ಕಾರ್ಮಿಕರಿಗಾಗಿಯೇ ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ಕಾರ್ಡ್ ಡಿಜಟಲೀಕರಣ ಮಾಡಿಕೊಂಡರೆ ದೇಶದ ಯಾವುದೇ ಭಾಗದಲ್ಲಿ ಅರ್ಹ ಫಲಾನುಭವಿಗಳು ಪಡಿತರವನ್ನು ಪಡೆದುಕೊಳ್ಳಬಹುದು.
* ಇ-ಕೆವೈಸಿ ಮತ್ತು ಬಯೋಮೆಟ್ರಿಕ್ ವೆರಿಫಿಕೇಷನ್: ಅರ್ಹ ಫಲಾನುಭವಿಗಳ ಗುರುತಿಗಾಗಿ ಇ-ಕೆವೈಸಿ ಮತ್ತು ಬಯೋಮೆಟ್ರಿಕ್ ವೆರಿಫಿಕೇಷನ್ ಕಡ್ಡಾಯ ಆಗಿದ್ದು, ಇದರಿಂದ ನಕಲಿ ಪಡಿತರ ಚೀಟಿಗಳನ್ನು ನಿಯಂತ್ರಣ ಮಾಡಲು ಆಗುತ್ತದೆ.
ಎಲ್‌ಪಿಜಿಯಲ್ಲಿ ಯಾವೆಲ್ಲಾ ಬದಲಾವಣೆ?
* ಕೆವೈಸಿ ಮತ್ತು ಆಧಾರ್-ಮೊಬೈಲ್ ಲಿಂಕಿಂಗ್: ಈಗ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಮಾಡಬೇಕೆಂದರೆ ಇ-ಕೆವೈಸಿ ಕಡ್ಡಾಯವಾಗಿ ಮಾಡಿಕೊಂಡಿರಬೇಕಾಗುತ್ತದೆ. ಹಾಗೆಯೇ ಆಧಾರ್ ಸಂಖ್ಯೆಯನ್ನು ಮೊಬೈಲ್ ನಂಬರ್‌ಗೆ ಲಿಂಕ್ ಮಾಡಬೇಕಾಗುತ್ತದೆ.
* ಓಟಿಪಿ ವೇರಿಫಿಕೇಷನ್: ಗ್ಯಾಸ್ ಸಿಲಿಂಡರ್ ಬುಕ್ಕಿಂಗ್‌ನಲ್ಲಿ ಈಗ ಓಟಿಪಿ ವೇರಿಫಿಕೇಷನ್ ಕಡ್ಡಾಯ ಆಗಲಿದೆ. ಇದರಿಂದ ನಕಲಿ ಕ್ಲೇಮ್ಸ್ ಮತ್ತು ತಪ್ಪಾದ ಗ್ರಾಹಕರಿಗೆ ಗ್ಯಾಸ್ ಸಿಲಿಂಡರ್ ರವಾನೆಯಾಗುವುದನ್ನು ತಪ್ಪಿಸಲಾಗುತ್ತದೆ.
* ಸಬ್ಸಿಡಿ ಮತ್ತು ಸಿಲಿಂಡರ್ ಲಿಮಿಟ್‌ನಲ್ಲಿ ಬದಲಾವಣೆ ಸಾಧ್ಯತೆ: ಎಲ್‌ಪಿಜಿ ಗ್ಯಾಸ್ ಸಬ್ಸಿಡಿ ಪ್ರಕ್ರಿಯೆಯನ್ನು ಮತ್ತಷ್ಟು ಪಾರದರ್ಶಕವನ್ನಾಗಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಮತ್ತೊಂದೆಡೆ ಗ್ರಾಹಕರು ಪಡೆಯುವ ಗ್ಯಾಸ್ ಲಿಮಿಟ್ ಮೇಲೆ ಬದಲಾವಣೆ ಆಗುವ ಸಾಧ್ಯತೆಗಳಿವೆ.
* ಸ್ಮಾರ್ಟ್ ಚಿಪ್ ಸಿಲಿಂಡರ್: ಸಿಲಿಂಡರ್‌ನಲ್ಲಿ ಸ್ಮಾರ್ಟ್ ಚಿಪ್ ಅಳವಡಿಕೆ ಮಾಡಲಾಗುವುದು. ಇದರಿಂದ ಅನಿಲದ ಸ್ಥಿತಿ ಮತ್ತು ಟ್ರ್ಯಾಕಿಂಗ್ ಮಾಡಬಹುದು.
Ration Card: ವ್ಯವಸ್ಥೆಯಲ್ಲಿನ ಪಾರದರ್ಶಕತೆಯನ್ನು ಹೆಚ್ಚಿಸಲು ಮತ್ತು ಅರ್ಹ ಫಲಾನುಭವಿಗಳಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಎಲ್ಲಾ ಪಡಿತರ ಚೀಟಿಯನ್ನು ಮಾರ್ಚ್ 27ರಿಂದ ಡಿಜಿಟಲೈಸ್ ಮಾಡಲು ಸರ್ಕಾರ ನಿರ್ಧರಿಸಿದೆ. ಪಡಿತರ ಚೀಟಿ ನಿಯಮಗಳು 2025ರ ಅಡಿಯಲ್ಲಿ ಎಲ್ಲಾ ಫಲಾನುಭವಿಗಳು ತಮ್ಮ ಗುರುತು ಪರಿಶೀಲಿಸಿಕೊಳ್ಳಲು ಕಡ್ಡಾಯವಾಗಿ ಇ-ಕೆವೈಸಿ ಮಾಡಿಕೊಳ್ಳಬೇಕಾಗುತ್ತದೆ.
LPG: ಒಟಿಪಿ ಪರಿಶೀಲಿಸಿದ ನಂತರ ಎಲ್‌ಪಿಜಿ ಸಿಲಿಂಡರ್ ವಿತರಿಸಲಾಗುತ್ತದೆ. ಈ ಮೂಲಕ ನಕಲಿ ವಿತರಣೆಯನ್ನು ನಿಯಂತ್ರಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.












Click it and Unblock the Notifications