Weather: ಕರ್ನಾಟಕ ವೆದರ್‌ನಲ್ಲಿ ಮಹತ್ವದ ಬದಲಾವಣೆ!

ಕರ್ನಾಟಕದಲ್ಲಿ ಕಳೆದ ಎರಡು ವಾರಗಳಿಂದ ಮೈಕೊರೆಯುವ ಚಳಿ ಇತ್ತು. ಚಳಿ ಜೊತೆ ಜೊತೆಗೆ ಮುಂಜಾನೆ ಸಮಯದಲ್ಲಿ ಮಂಜು ಮುಸುಕಿದ ವಾತಾವರಣ ಸಹ ಇತ್ತು. ಇದೀಗ ರಾಜ್ಯದ ಹವಾಮಾನದಲ್ಲಿ ಮಹತ್ವದ ಬದಲಾವಣೆ ಆಗಿದೆ. ಈ ಬಾರಿ ಚಳಿ ಬಂದಷ್ಟೇ ವೇಗವಾಗಿ ಇಳಿಕೆಯಾಗಿದೆ. ಮೊದಲು ಜೋರು ಮಳೆ... ಚಳಿ.. ಚಳಿ ವಾತಾವರಣ ಇತ್ತು. ಇದೀಗ ಸಣ್ಣಗೆ ಚಳಿ ಇಳಿಕೆಯಾಗುತ್ತಿದ್ದು, ಬಿಸಿಲು ಶುರುವಾಗುತ್ತಿದೆ. ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಹವಾಮಾನದಲ್ಲಿ ಮಹತ್ವದ ಬದಲಾವಣೆಗಳು ಆಗುತ್ತಿವೆ. ರಾಜ್ಯದಲ್ಲಿ ವೆದರ್ ಹೇಗಿದೆ ಎನ್ನುವ ವಿವರ ಇಲ್ಲಿದೆ.

ರಾಜ್ಯದಲ್ಲಿ ಈ ಬಾರಿ ಮೈಕೊರೆಯುವ ಚಳಿ ಇತ್ತು. ಚಂಡಮಾರುತದ ಪ್ರಭಾವದಿಂದ ಭಾರೀ ಮಳೆ ಸಹ ಮುಂದುವರಿದಿತ್ತು. ಮಳೆ - ಚಳಿಯ ನಂತರ ಇದೀಗ ಬಿಸಿಲಿನ ಸರದಿ ಎನ್ನುವಂತೆ ರಾಜ್ಯದಲ್ಲಿ ಸಣ್ಣಗೆ ಬಿಸಿಲು ಹೆಚ್ಚಳವಾಗುತ್ತಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ವಿವಿಧ ಭಾಗದಲ್ಲಿ ಈಗಾಗಲೇ ಒಣಹವೆ ಶುರುವಾಗಿದ್ದು. ಮುಂದಿನ ದಿನಗಳಲ್ಲಿ ಬಿಸಿಲು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಮುಂದಿನ ಒಂದು ವಾರಗಳ ಹವಾಮಾನ ವರದಿ ಹೇಗಿರಲಿದೆ ಎನ್ನುವುದರ ನೋಡೋಣ..

IMD Reports Sunny Weather in Karnataka till February 8

ಚಳಿ ಇಳಿಕೆ: ಕರ್ನಾಟಕದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಚಳಿ ಅಲ್ಪ ಇಳಿಕೆ ಕಂಡಿದೆ. ರಾಜ್ಯದಲ್ಲಿ ಚಳಿಯ ವಾತಾವರಣ ನಿಧಾನವಾಗಿ ಕಡಿಮೆಯಾಗುತ್ತಿದೆ. ಅಲ್ಲದೆ ಒಣಹವೆ / ಬಿಸಿಲು ಸಣ್ಣಗೆ ಹೆಚ್ಚಳವಾಗುತ್ತಿದೆ. ಸಂಜೆ ಹಾಗೂ ಮುಂಜಾನೆ ಸಮಯದಲ್ಲಿ ಚಳಿ ಇಳಿಕೆಯಾಗುತ್ತಿದೆ. ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಇನ್ನೊಂದು ವಾರದ ವರೆಗೆ ಮಳೆ ಇರುವುದಿಲ್ಲ. ಬಹುತೇಕ ಭಾಗದಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

ಹೌದು ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮುಂದಿನ ಒಂದು ವಾರಗಳ ಅವಧಿಯ ವರೆಗೆ ಮಳೆಯ ಮುನ್ಸೂಚನೆ ಇಲ್ಲ. ಮುಂದಿನ ಒಂದು ವಾರಗಳ ವರೆಗೆ ಅಂದರೆ ಫೆಬ್ರವರಿ 8ರ ವರೆಗೆ ರಾಜ್ಯದಾದ್ಯಂತ ಒಣಹವೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

ಶುರುವಾಯ್ತು ಬೇಸಿಗೆ!

ರಾಜ್ಯದಲ್ಲಿ ಈ ಬಾರಿ ಬೇಸಿಗೆ ಅವಧಿಗಿಂತ ಮುಂಚಿತವಾಗಿಯೇ ಎಂಟ್ರಿ ಕೊಟ್ಟಿದೆ. ಸಾಮಾನ್ಯವಾಗಿ ಫೆಬ್ರವರಿ ಅಂತ್ಯದಲ್ಲಿ ಇಲ್ಲವೇ ಮಾರ್ಚ್‌ ಮೊದಲ ವಾರದಲ್ಲಿ ಬೇಸಿಗೆ ಶುರುವಾಗುತ್ತಿತ್ತು. ಆದರೆ ಈ ಬಾರಿ ಚಳಿಗಾಲದಲ್ಲೇ ಬೇಸಿಗೆ ಶುರುವಾಗುತ್ತಿದ್ದು, ಜನ ಮುಂದಿನ ದಿನಗಳಲ್ಲಿ ಬಿಸಿಲಿನ ಧಗೆ ಹೇಗಿರಲಿದೆ ಎಂದು ಯೋಚಿಸುವಂತಾಗಿದೆ.

ಕಳೆದ ವರ್ಷ ಬೆಂಗಳೂರಿನಲ್ಲಿ ಬಿಸಿಲಿನ ತಾಪಮಾನ ತೀವ್ರ ಹೆಚ್ಚಳವಾಗಿತ್ತು. ಅಲ್ಲದೆ ಮಳೆ ಬೀಳದೆ ನೀರಿಗೆ ಹಾಹಾಕಾರ ಸೃಷ್ಟಿಯಾಗಿತ್ತು. ಈ ಬಾರಿಯೂ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆ ಕೊಡಲಾಗಿದೆ.

ಅಲ್ಲದೆ ಚಳಿಗಾಲದ ಅವಧಿಯಲ್ಲೇ ಬೇಸಿಗೆ ಶುರುವಾಗುತ್ತಿರುವುದು ಮುಂದಿನ ದಿನಗಳಲ್ಲಿ ಬಿಸಿಲು ಹೆಚ್ಚಾಗುವ ಮುನ್ಸೂಚನೆ ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+