ಆ ಟ್ವೀಟ್ ಗೂ ನನಗೂ ಸಂಬಂಧವಿಲ್ಲ: ವೀರಪ್ಪ ಮೊಯ್ಲಿ

Recommended Video

      ಕಾಂಗ್ರೆಸ್ ವಿರುದ್ಧ ನೀಡಿದ ಹೇಳಿಕೆಗೆ ಸಮರ್ಥನೆ ಕೊಟ್ಟ ವೀರಪ್ಪ ಮೊಯ್ಲಿ | Oneindia Kannada

      ಬೆಂಗಳೂರು, ಮಾರ್ಚ್ 16: ಕಾಂಗ್ರೆಸ್ ನಲ್ಲಿ ಟಿಕೇಟ್ ಗಾಗಿ ಹಣದ ರಾಜಕೀಯ ನಡೆಯುತ್ತಿದೆ ಎಂಬ ವಿವಾದಾತ್ಮಕ ಟ್ವೀಟ್ ಮೂಲಕ ಗಮನ ಸೆಳೆದಿದ್ದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, 'ಆ ಟ್ವೀಟ್ ಅನ್ನು ನಾನು ಮಾಡಿಯೇ ಇಲ್ಲ' ಎಂದು ಸಮಜಾಯಿಷಿ ನೀಡಿದ್ದಾರೆ.

      'ನನಗೂ ಆ ಟ್ವೀಟ್ ಗೂ ಸಂಬಂಧವಿಲ್ಲ. ನನ್ನ ಪುತ್ರನೂ ಆ ರೀತಿ ಟ್ವೀಟ್ ಮಾಡುವವನಲ್ಲ. ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ' ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

      ರಾಜ್ಯದಲ್ಲಿ ಲೋಕೋಪಯೋಗಿ ಸಚಿವ(ಎಚ್ ಸಿ ಮಹದೇವಪ್ಪ)ರು ಮತ್ತು ರಸ್ತೆ ಗುತ್ತಿಗೆದಾರರ ನಡುವೆ ಹೊಂದಾಣಿಕೆ ನಡೆಯುತ್ತಿದೆ ಎಂದು ನೇರವಾಗಿ ಆರೋಪಿಸಿರುವ ಮೊಯ್ಲಿ, ಈ ಕುರಿತು ಗಮನ ಹರಿಸುವಂತೆ ಹೈಕಮಾಂಡ್ ಬಳಿ ಮನವಿ ಮಾಡಿಕೊಂಡಿದ್ದರು. ತಮ್ಮ ಈ ಟ್ವೀಟ್ ಅನ್ನು ರಾಹುಲ್ ಗಾಂಧಿ, ಐಎನ್ ಸಿ ಕಾಂಗ್ರೆಸ್, ಕರ್ನಾಟಕ ಕಾಂಗ್ರೆಸ್ ಗೂ ಟ್ಯಾಗ್ ಮಾಡಿದ್ದರು.

      ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

      ಚಿಕ್ಕಬಳ್ಳಾಪುರ ಸಂಸದ ವೀರಪ್ಪ ಮೊಯ್ಲಿ ಅವರ ಪುತ್ರ ಹರ್ಷ ಮೋಯ್ಲಿ ಅವರು 'ಕಾರ್ಕಳ' ವಿಧಾನಸಭಾ ಕ್ಷೇತ್ರದ ಟಿಕೇಟ್ ಆಕಾಂಕ್ಷಿಯಾಗಿದ್ದು, ಅವರಿಗೆ ಟಿಕೇಟ್ ನೀಡುವಂತೆ ಮೊಯ್ಲಿ ಹೈಕಮಾಂಡ್ ಬಳಿ ಚರ್ಚಿಸಿದ್ದಾರೆ ಎನ್ನಲಾಗಿದೆ. ಆದರೆ ಹೈಕಮಾಂಡ್ ಅವರ ಮಾತುಗಳಿಗೆ ಸೊಪ್ಪು ಹಾಲಿಲ್ಲ ಎಂಬುದು ಕೆಲವು ಮೂಲಗಳಿಂದ ತಿಳಿದುಬಂದ ವಿಷಯ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+