ರೇಷನ್ ಕಾರ್ಡ್‌ಗೆ ಹೆಸರು ಸೇರಿಸುವುದು ಹೇಗೆ, ಬೇಕಾಗುವ ದಾಖಲೆಗಳು ಯಾವುವು ?
ration card: ರೇಷನ್ ಕಾರ್ಡ್ ಬಳಸುವವರಿಗೆ ಹಾಗೂ ಹೊಸದಾಗಿ ರೇಷನ್ ಕಾರ್ಡ್ ನಲ್ಲಿ ಹೆಸರು ಸೇರಿಸಲು ಇಚ್ಛಿಸುವವರಿಗೆ ಇದು ನಿಜಕ್ಕೂ ಗುಡ್‌ನ್ಯೂಸ್. ಮನೆಗೆ ಬರುವ ಹೊಸ ಸದಸ್ಯರು (ಹೊಸದಾಗಿ ಮದುವೆಯಾದವರು), ಇಲ್ಲವೇ ಮಕ್ಕಳ ಹೆಸರನ್ನು ರೇಷನ್ ಕಾರ್ಡ್‌ಗೆ ಸೇರಿಸುವುದು ಅತ್ಯಂತ ಸುಲಭದ ಕೆಲಸವಾಗಿದೆ. ಅಲ್ಲದೇ ರೇಷನ್ ಕಾರ್ಡ್ ಯಾರೆಲ್ಲ ಮಾಡಿಸಬಹುದು. ಹೊಸ ರೇಷನ್ ಕಾರ್ಡ್‌ಗೆ ಇರಬೇಕಾದ ಅರ್ಹತೆಗಳು ಏನು ಎನ್ನುವ ವಿವರ ಇಲ್ಲಿದೆ.
ರೇಷನ್ ಕಾರ್ಡ್‌ಗೆ ಬೇಕಾಗಿರುವ ಪ್ರಮುಖ ದಾಖಲೆಗಳು ಏನು ?
ರೇಷನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಸೇರಿದಂತೆ ಕೆಲವು ಪ್ರಮುಖ ದಾಖಲೆಗಳು ಬೇಕಾಗುತ್ತವೆ. ಆ ದಾಖಲೆಗಳ ವಿವರ ಈ ರೀತಿ ಇದೆ.
* ಆಧಾರ್ ಕಾರ್ಡ್
* ಖಾಯಂ ನಿವಾಸದ ಡಾಕ್ಯುಮೆಂಟ್
* ಮೊಬೈಲ್ ನಂಬರ್
* ಡ್ರೈವಿಂಗ್ ಲೈಸೆನ್ಸ್
* ನಿಮ್ಮ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋ
* ಮತದಾರರ ಗುರುತಿನ ಚೀಟಿ
* ಆದಾಯ ಪ್ರಮಾಣ ಪತ್ರ
* ಮನೆಯಲ್ಲಿ ಇರುವವರ ಬಗ್ಗೆ ಮಾಹಿತಿ

ರೇಷನ್ ಕಾರ್ಡ್‌ಗೆ ಯಾರು ಅರ್ಜಿ ಸಲ್ಲಿಸಬಹುದು & ಯಾರು ರೇಷನ್ ಕಾರ್ಡ್‌ಪಡೆಯುವುದಕ್ಕೆ ಅರ್ಹರು ?
ಹೊಸದಾಗಿ ರೇಷನ್ ಕಾರ್ಡ್ ಪಡೆಯುವುದಕ್ಕೆ ಹೊಸದಾಗಿ ಮದುವೆಯಾಗಿರುವವರು (ದಂಪತಿಗಳು) ಅರ್ಜಿ ಸಲ್ಲಿಸಬಹುದಾಗಿದೆ. ಕುಟುಂಬದಿಂದ ಬೇರೆಯಾಗಿ ವಾಸಿಸುತ್ತಿದ್ದರೂ, ಸಹ ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ, ಈ ಹಿಂದೆ ಕೂಡು ಕುಟುಂಬದ ರೇಷನ್ ಕಾರ್ಡ್‌ನಲ್ಲಿ ನಿಮ್ಮ ಹೆಸರು ಇದ್ದರೆ ಅದನ್ನು ಮೊದಲು ತೆಗೆಸಬೇಕಾಗುತ್ತದೆ.
ಇನ್ನು ಆಯಾ ಕುಟುಂಬದ ಆದಾಯಕ್ಕೆ ಅನುಗುಣವಾಗಿ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಸಿಗುತ್ತದೆ. ಆದಾಯಕ್ಕೆ ಅನುಗುಣವಾಗಿ ಆಹಾರ ಇಲಾಖೆ ಬಿಪಿಎಲ್ ಇಲ್ಲವೇ ಎಪಿಎಲ್ ಕಾರ್ಡ್ ನೀಡುತ್ತದೆ.
ರೇಷನ್ ಕಾರ್ಡ್: ಆಫ್ ಲೈನ್ ಅರ್ಜಿ ಸಲ್ಲಿಕೆ ಹೇಗೆ
ರೇಷನ್ ಕಾರ್ಡ್‌ಗೆ ಆಫ್ ಲೈನ್ ಹಾಗೂ ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ.
* ರೇಷನ್ ಕಾರ್ಡ್‌ನಲ್ಲಿ ಹೊಸದಾಗಿ ಹೆಸರು ಸೇರಿಸಲು ಆಹಾರ ಇಲಾಖೆಯ ಕಚೇರಿಯಿಂದ ತೆರಳಿ ಫಾರ್ಮ್‌ವೊಂದನ್ನು ಪಡೆದುಕೊಳ್ಳಬೇಕು.
* ಆ ಅರ್ಜಿಯಲ್ಲಿ ಕೇಳಿರುವ ಎಲ್ಲಾ ವಿವರಗಳನ್ನು ಸರಿಯಾಗಿ ತುಂಬಿಸಬೇಕು.
* ಇದರೊಂದಿಗೆ ಅಗತ್ಯ ದಾಖಲೆಗಳನ್ನು ಆಹಾರ ಇಲಾಖೆಗೆ ಸಲ್ಲಿಸಬೇಕು.
* ಇದರೊಂದಿಗೆ ಈ ಹೊಸ ಫಾರ್ಮ್ ಸಲ್ಲಿಸಿದ ಮೇಲೆ ಇಲಾಖೆಯಿಂದ ನೀಡುವ ರಸೀದಿಯನ್ನು ತೆಗೆದುಕೊಳ್ಳಿ. ಇದರಿಂದ ರೇಷನ್ ಕಾರ್ಡ್‌ನಲ್ಲಿ ಹೆಸರು ಯಾವ ಹಂತದಲ್ಲಿ ಇದೆ ಅಂತ ನೋಡಬಹುದು.
* ಈ ಪ್ರಕ್ರಿಯೆಗಳು ಪೂರ್ಣಗೊಂಡರೆ ರೇಷನ್ ಕಾರ್ಡ್ ಪಡೆದುಕೊಳ್ಳಬಹುದಾಗಿದೆ.
ಆನ್‌ಲೈನ್‌ನ ಮೂಲಕ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವುದು ಹೇಗೆ ?
ಇನ್ನು ಆಫ್‌ಲೈನ್‌ನಷ್ಟೇ ಸುಲಭವಾಗಿ ನೀವು ಆನ್‌ಲೈನ್‌ನಲ್ಲೂ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಇದೆ.
* https://ahara.kar.nic.in/homeಎನ್ನವು ವೆಬ್‌ಸೈಟ್‌ನಲ್ಲಿ ಮೊದಲು ಲಾಗಿನ್ ಆಗಬೇಕು.
* ರೇಷನ್ ಕಾರ್ಡ್‌ನಲ್ಲಿ ಹೊಸ ಸೇರ್ಪಡೆಗೆ ರಿಕ್ವೆಸ್ಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
* ಪೇಜ್‌ನಲ್ಲಿ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಬೇಕು. ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ, ಅದರ ಪ್ರತಿಯನ್ನು ಅದರಲ್ಲಿ ಅಪ್ಲೋಡ್ ಮಾಡಬೇಕು.
* ಅಪ್ ಲೋಡ್ ಪ್ರಕ್ರಿಯೆ ಮುಗಿದ ಮೇಲೆ ಫಾರ್ಮ್ ಸಬ್ ಮಿಟ್ ಮಾಡಬೇಕು.
* ಈ ಮೇಲಿನ ಎಲ್ಲಾ ವಿವರಗಳನ್ನು ನೀವು ಸರಿಯಾಗಿ ಸಲ್ಲಿಸಿದ್ದರೆ, ನಿಮ್ಮ ಮನೆಗೇ ಹೊಸ ರೇಷನ್ ಕಾರ್ಡ್ ಬರುತ್ತದೆ.
ಮಗುವಿನ ಹೆಸರು ರೇಷನ್ ಕಾರ್ಡ್‌ನಲ್ಲಿ ಸೇರಿಸುವುದು ಹೇಗೆ ?
ಮಗುವಿನ ಹೆಸರುಗಳನ್ನು ರೇಷನ್ ಕಾರ್ಡ್‌ನಲ್ಲಿ ನೀವು ಸೇರಿಸಬಹುದಾಗಿದೆ. ಆರು ವರ್ಷದೊಳಗಿನ ಮಕ್ಕಳ ಹೆಸರು ಸೇರಿಸಲು ಮೊಬೈಲ್ ನಂಬರ್ ಕನೆಕ್ಟ್ ಆಗಿರುವ ಆಧಾರ್ ಕಾರ್ಡ್ ನಂಬರ್ ಹಾಗೂ ಜನನ ಪ್ರಮಾಣ ಪತ್ರ ಕಡ್ಡಾಯವಾಗಿದೆ. ರೇಷನ್ ಕಾರ್ಡ್‌ನ ಮೂಲ ದಾಖಲೆ ಹಾಗೂ ಮಗುವಿನ ಜನನ ಪ್ರಮಾಣಪತ್ರ ಬೇಕಾಗುತ್ತದೆ. ಇದರೊಂದಿಗೆ ಪೋಷಕರ ಆಧಾರ್ ಕಾರ್ಡ್ ಸಲ್ಲಿಸಬೇಕಾಗುತ್ತದೆ.











Click it and Unblock the Notifications