ಡಿ. ಕೆ. ಶಿವಕುಮಾರ್‌ಗೆ ಜಾಮೀನು ಸಿಕ್ಕಿದ್ದು ಹೇಗೆ?; 3 ಅಂಶಗಳು

ಬೆಂಗಳೂರು, ಅಕ್ಟೋಬರ್ 23 : ಕನಕಪುರ ಕ್ಷೇತ್ರದ ಶಾಸಕ, ಮಾಜಿ ಸಚಿವ ಡಿ. ಕೆ. ಶಿವಕುಮಾರ್‌ ಜೈಲುವಾಸ ಅಂತ್ಯವಾಗಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಡಿ. ಕೆ. ಶಿವಕುಮಾರ್‌ಗೆ ಬುಧವಾರ ದೆಹಲಿ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತು. ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿರುವ ಡಿ. ಕೆ. ಶಿವಕುಮಾರ್ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದು, ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ.

ಸೆಪ್ಟೆಂಬರ್ 3ರಂದು ಜಾರಿ ನಿರ್ದೇಶನಾಲಯ ಡಿ. ಕೆ. ಶಿವಕುಮಾರ್ ಬಂಧಿಸಿತ್ತು. ಇಡಿ ವಿಶೇಷ ನ್ಯಾಯಾಲಯದಲ್ಲಿ ಡಿ. ಕೆ. ಶಿವಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿತ್ತು. ಆದ್ದರಿಂದ, ದೆಹಲಿ ಹೈಕೋರ್ಟ್‌ನಲ್ಲಿ ಅವರು ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.

ಜಾಮೀನು ಪ್ರಕ್ರಿಯೆಗಳು ಪೂರ್ಣಗೊಂಡರೇ ಬುಧವಾರ ಸಂಜೆಯೇ ಡಿ. ಕೆ. ಶಿವಕುಮಾರ್ ದೆಹಲಿಯ ತಿಹಾರ್ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ನೆಚ್ಚಿನ ನಾಯಕನಿಗೆ ಜಾಮೀನು ಸಿಕ್ಕಿದ ಬಳಿಕ ಸಾವಿರಾರು ಅಭಿಮಾನಿಗಳು ಸಂತಸಗೊಂಡಿದ್ದಾರೆ.

ಡಿ. ಕೆ. ಶಿವಕುಮಾರ್ ಜಾಮೀನು

ಡಿ. ಕೆ. ಶಿವಕುಮಾರ್ ಜಾಮೀನು

ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸುರೇಶ್ ಕೈಟ್ ಡಿ. ಕೆ. ಶಿವಕುಮಾರ್‌ಗೆ ಷರತ್ತು ಬದ್ಧ ಜಾಮೀನು ನೀಡಿದ್ದಾರೆ. 25 ಲಕ್ಷ ರೂ. ಬಾಂಡ್, ಪಾಸ್ ಪೋರ್ಟ್‌ ವಶಕ್ಕೆ ನೀಡಬೇಕು, ವಿಚಾರಣೆಗೆ ಕರೆದಾಗ ಹಾಜರಾಗಬೇಕು ಎಂಬ ಷರತ್ತುಗಳನ್ನು ಹಾಕಿ ಜಾಮೀನು ಮಂಜೂರು ಮಾಡಲಾಗಿದೆ. ಡಿ. ಕೆ. ಶಿವಕುಮಾರ್ ಪರವಾಗಿ ಅಭಿಷೇಕ್ ಮನು ಸಿಂಘ್ವಿ, ದಯಾನ್ ಕೃಷ್ಣನ್ ವಾದ ಮಂಡನೆ ಮಾಡಿದ್ದರು.

ಜಾಮೀನು ಸಿಕ್ಕಲು ಕಾರಣ -1

ಜಾಮೀನು ಸಿಕ್ಕಲು ಕಾರಣ -1

ಡಿ. ಕೆ. ಶಿವಕುಮಾರ್ ಜಾಮೀನು ಅರ್ಜಿಯ ವಾದ ಮಂಡನೆ ಮಾಡುವಾಗ ಆರೋಗ್ಯದ ಸಮಸ್ಯೆ ಕುರಿತು ಪ್ರಸ್ತಾಪಿಸಲಾಗಿತ್ತು. ಹೈ ಬಿಪಿ, ಸಕ್ಕರೆ ಕಾಯಿಲೆ ಅವರಿಗೆ ಇದೆ ಎಂದು ವಾದ ಮಂಡಿಸಿದ್ದರು. ಇದನ್ನು ಒಂದು ಅಂಶವಾಗಿ ಪರಿಗಣಿಸಿರುವ ನ್ಯಾಯಾಲಯ ಜಾಮೀನು ನೀಡಿದೆ.

ಜಾಮೀನು ಸಿಗಲು ಕಾರಣ - 2

ಜಾಮೀನು ಸಿಗಲು ಕಾರಣ - 2

ಡಿ. ಕೆ. ಶಿವಕುಮಾರ್ ಪರವಾಗಿ ವಾದ ಮಂಡನೆ ಮಾಡುವಾಗ ಅಭಿಷೇಕ್ ಮನು ಸಿಂಘ್ವಿ, ದಯಾನ್ ಕೃಷ್ಣನ್ ಆರೋಪಿ ವಿದೇಶಕ್ಕೆ ಪರಾರಿಯಾಗುವುದಿಲ್ಲ. ಪಾಸ್ ಪೋರ್ಟ್‌ ಅನ್ನು ಸಹ ನ್ಯಾಯಾಲಯದ ವಶಕ್ಕೆ ಒಪ್ಪಿಸಲಿದ್ದಾರೆ ಎಂದು ವಾದಿಸಿದ್ದರು. ಇದನ್ನು ಪರಿಗಣಿಸಿ ನ್ಯಾಯಾಲಯ ಜಾಮೀನು ನೀಡಿದೆ. ಪಾಸ್ ಪೋರ್ಟ್ ವಶಕ್ಕೆ ನೀಡುವಂತೆ ಷರತ್ತು ಹಾಕಿದೆ.

ಜಾಮೀನು ಸಿಗಲು ಕಾರಣ - 3

ಜಾಮೀನು ಸಿಗಲು ಕಾರಣ - 3

ಜಾಮೀನು ಅರ್ಜಿಯ ವಾದ ಮಂಡನೆ ಸಮಯದಲ್ಲಿ ಆರೋಪಿ ಸಾಕ್ಷ್ಯ ನಾಶ ಮಾಡುವುದಿಲ್ಲ. ವಿಚಾರಣೆಗೆ ಸಹಕಾರ ನೀಡಲಿದ್ದಾರೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿತ್ತು. ಇದನ್ನು ಪರಿಗಣನೆ ಮಾಡಿರುವ ನ್ಯಾಯಾಲಯ ಜಾಮೀನು ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+