ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರದ್ಯುಮ್ನನ ಕೊಲೆಯಂಥ ಘಟನೆಗಳಿಗೆ ಕೊನೆ ಎಂದು?

By ವಿವೇಕ ಬೆಟ್ಕುಳಿ, ಕಾರವಾರ
|
Google Oneindia Kannada News

ದೇಶದ ಆಡಳಿತದ ಕೇಂದ್ರ ಸ್ಥಾನ ದೆಹಲಿಯ ಸಮೀಪದಲ್ಲೇ ಗುಗಾ೯೦ವ (ಗುರುಗ್ರಾಮ) ಇರುವುದು. ಇಲ್ಲಿನ ರಯನ್ ಇಂಟರ್ನ್ಯಾಷ್ಯನಲ್ ಸ್ಕೂಲ್ ನಲ್ಲಿ 7 ವರ್ಷದ ಬಾಲಕ ಪ್ರದ್ಯುಮ್ನನ ಕೊಲೆ ನಡೆದು 2 ತಿಂಗಳು ಗತಿಸಿದೆ. ಶಾಲೆಯಲ್ಲಿ ನಡೆದ ಬಾಲಕನ ಕೊಲೆ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರುವ ಪಾಲಕರಲ್ಲಿ ಆತಂಕವನ್ನು ಸ್ವೃಷ್ಠಿ ಮಾಡಿದೆ.

7 ವರ್ಷದ ಬಾಲಕನನ್ನು ಕೊಲೆ ಮಾಡಿದವರಾರು? ಪ್ರಾರಂಭದಲ್ಲಿ ಶಾಲೆಯ ಬಸ್ ಕಂಡಕ್ಟರ್ ಅಶೋಕನ ಮೇಲೆ ಆಪಾದನೆ, ಬಂಧನ ಆಯ್ತು. ಸಿಬಿಐ ತನಿಖೆಯ ನಂತರ ಅದೇ ಶಾಲೆಯ 11ನೇ ತರಗತಿಯ ವಿದ್ಯಾಥಿ೯ಯೇ ಕೊಲೆಗಾರ ಎಂದು ತಿಳಿದು ಬಂದಿದೆ. ಕೊಲೆಗೆ ಕಾರಣ ಪರೀಕ್ಷೆಯನ್ನು ಮುಂದುಡುವುದೇ ಆಗಿತ್ತು.

ಪ್ರದ್ಯುಮ್ನ ಠಾಕೂರ್ ಹತ್ಯೆಯ ಬೆಚ್ಚಿ ಬೀಳಿಸುವ ವಿವರಗಳುಪ್ರದ್ಯುಮ್ನ ಠಾಕೂರ್ ಹತ್ಯೆಯ ಬೆಚ್ಚಿ ಬೀಳಿಸುವ ವಿವರಗಳು

ಚಿಕ್ಕ ಕಾರಣಕ್ಕಾಗಿ ಕೊಲೆಯ ಅಗತ್ಯ ಏನಿತ್ತು? ಅದೂ 7 ವರ್ಷದ ಮುಗ್ದ ಬಾಲಕನನ್ನು ಕೊಲೆ ಮಾಡುವ ಅಗತ್ಯವಿತ್ತೆ? ಕೊಲೆ ಮಾಡಿದ ವಿದ್ಯಾಥಿ೯ ಮಾನಸಿಕವಾಗಿ ಖಿನ್ನನ್ನಾಗಿದ್ದನೆ? ಕೊಲೆಗಾರನನ್ನು ಬಾಲ ಅಪರಾಧಿ ಎಂದು ಪರಿಗಣಿಸದೇ ಜೀವಾವಧಿ ಶಿಕ್ಷೆ ನೀಡಬೇಕೆಂಬ ಆಗ್ರಹ, ಶಾಲೆಯ ಆಡಳಿತವನ್ನು ಕೆಲವು ದಿನ ತಾವೇ ತೆಗೆದುಕೊಳ್ಳುವೆವು ಎಂಬ ಸಕಾ೯ರದ ನಿಧಾ೯ರ, ಈ ರೀತಿಯಾಗಿ ಹತ್ತು ಹಲವಾರು ರೀತಿಯಲ್ಲಿ ಚಚೆ೯ಗಳು ಸದ್ಯದಲ್ಲಿ ಚಾಲ್ತಿಯಲ್ಲಿವೆ.

Hope Pradyuman incident never repeats

ಆದರೆ ಯಾವ ಕಾರಣಕ್ಕಾಗಿ ಮಗುವಿನ ಕೊಲೆಯಾಯಿತು? ಪರೀಕ್ಷೆ ಎಂಬ ಭಯ ಮಕ್ಕಳನ್ನು ಕೊಲೆ ಮಾಡುವಂತಹ ಕೃತ್ಯಕ್ಕೂ ಉತ್ತೇಜನ ನೀಡುವುದು ಎಂದಾದರೇ ಅಂತಹ ಮೌಲ್ಯಮಾಪನದ ಅಗತ್ಯ ಇದೆಯಾ? ತನ್ನದೇ ಶಾಲೆಯಲ್ಲಿ ಓದುತ್ತಿರುವ ಮಗುವನ್ನು ಕೊಂದಾದರೂ ಕೆಲವು ದಿನ ಪರೀಕ್ಷೆಯ ಭಯದಿಂದ ದೂರ ವಿರಬಹುದು ಎಂದು ಒಬ್ಬ ಬಾಲಕ ಆಲೋಚಿಸುವನು ಎಂದಾದರೆ, ಈ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡುವ ಅಗತ್ಯವಿದೆ.

ಶಿಕ್ಷಣ ನೈತಿಕತೆಯನ್ನು ಕಲಿಸುವುದು, ಉತ್ತಮ ನಾಗರಿಕನನ್ನಾಗಿ ರೂಪಿಸುವುದು, ಶಿಕ್ಷಣ ಇಲ್ಲದ ಮನುಷ್ಯ ಪಶುವಿಗೆ ಸಮಾನ ಈ ಎಲ್ಲಾ ಶಿಕ್ಷಣಕ್ಕೆ ಸಂಬಂಧಿಸಿದ ವಾಕ್ಯಗಳನ್ನು ಹೇಳುತ್ತಾ ನಾವು ಶಾಲೆಯಲ್ಲಿ ಏನು ಕಲಿಸುತ್ತಿರುವೆವು? ನಿಜವಾಗಿ ಶಾಲೆ ಉತ್ತಮ ಪ್ರಜೆಯನ್ನು ತಯಾರಿಸುತ್ತಾ ಇದೆಯಾ? ಮಕ್ಕಳು ಶಾಲೆಗೆ ಹೋಗುವಾಗ, ಪರೀಕ್ಷೆ ಬರೆಯುವಾಗ ಭಯ ಪಡುವುದು ಯಾಕೆ? ಶಿಕ್ಷಕರ ಮೇಲೆ ಉತ್ತಮ ಫಲಿತಾಂಶದ ಒತ್ತಡ ಎಲ್ಲಿಂದ ಬರುತ್ತಿದೆ? ಸಾಮಾಜಿಕ ಸೇವೆಯಲ್ಲಿ ಒಂದಾದ ಶಿಕ್ಷಣ ಕ್ಷೇತ್ರ ಇಂದು ವ್ಯಾಪ್ಯಾರಿ ಕ್ಷೇತ್ರವಾಗಿ ಪರಿವರ್ತನೆ ಆಗಲು ಕಾರಣವೇನು?

ಈ ಎಲ್ಲಾ ಪ್ರಶ್ನೆಗಳಿಗೆ ನಾವು ಉತ್ತರವನ್ನು ಹುಡುಕುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. ಇಂತಹ ಪ್ರಯತ್ನಗಳನ್ನು ಆಂದೋಲನದ ರೀತಿಯಲ್ಲಿ ಮಾಡಿ ನಮ್ಮ ಶೈಕ್ಷಣಿಕ ವ್ಯವಸ್ಥೆಯನ್ನೇ ವಿಮಶೆ೯ಗೆ ಒಳಪಡಿಸಿ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ.

Hope Pradyuman incident never repeats

ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳು, ಪಾಲಕರು, ಶಿಕ್ಷಕರು ಆಡಳಿತ ಮಂಡಳಿಯವರು ಎಲ್ಲರ ಒಂದೇ ಗುರಿ 100% ಉತ್ತಮ ಫಲಿತಾಂಶ ಬರಬೇಕು. ಈ ಕಾರಣಕ್ಕಾಗಿಯೇ ಒಬ್ಬರು ಇನ್ನೊಬ್ಬರ ಮೇಲೆ ಒತ್ತಡ ಹಾಕುತ್ತಾ ಇರುವರು. ಈ ಎಲ್ಲದಕ್ಕೂ ಮೂಲ ಕಾರಣ ನಮ್ಮ ಮೌಲ್ಯಮಾಪನ ಪದ್ದತಿಯೇ ಆಗಿರುವುದು. ದುರಾದೃಷ್ಠವಶಾತ್ ನಮ್ಮ ಸಮಾಜದಲ್ಲಿ ಈ ಮೌಲ್ಯಮಾಪನ ಪದ್ದತಿಯ ಮೇಲೆ ಹೆಚ್ಚಿನ ವ್ಯವಸ್ಥೆ ರೂಪುಗೊಂಡಿರುವುದು.

ಮೌಲ್ಯಮಾಪನ ಪದ್ದತಿಯನ್ನು ಬದಲಾಯಿಸದೇ, ಸಿಲಬಸ್ ಬದಲಾವಣೆ, ಶಿಕ್ಷಕರಿಗೆ ತರಬೇತಿ ನೀಡುವುದು, ಮಕ್ಕಳಿಗೆ ಒಂದು ವಿಷಯವಾಗಿ ನೈತಿಕ ಶಿಕ್ಷಣ ಹೇಳುವುದು, ಮಹಾನ್ ವ್ಯಕ್ತಿಗಳ ಚರಿತ್ರೆ ತಿಳಿಸುವುದು, ಈ ಎಲ್ಲಾ ಕ್ರಮಗಳು ಶಿಕ್ಷಣ ವ್ಯವಸ್ಥೆಯಲ್ಲಿ ಕಾಣುತ್ತಿರುವ ಮೇಲುನೋಟದ ಲಕ್ಷಣಗಳಿಗೆ ಪರಿಹಾರವಾಗಿವೆಯೇ ವಿನಃ ಶಾಶ್ವತ ಪರಿಹಾರ ಆಗಲಾರದು. ಶೈಕ್ಷಣಿಕ ವ್ಯವಸ್ಥೆಯ ಬದಲಾವಣೆಗಾಗಿ ನಾವು ಶಿಕ್ಷಣವನ್ನು ನೋಡುವ ದೃಷ್ಟಿಯೇ ಬದಲಾಗಬೇಕಾಗಿದೆ.

ಪ್ರದ್ಯುಮ್ನನೇ ಕೊನೆ, ಮತ್ತೇ ಇಂತಹ ಘಟನೆ ಮರುಕಳಿಸಬಾರದು ಆ ದಿಶೆಯಲ್ಲಿ ಗಟ್ಟಿ ನಿಧಾ೯ರಗಳನ್ನು ತೆಗೆದುಕೊಳ್ಳಬಹುದಾದ ಇಂದಿನ ನಮ್ಮ ಪ್ರಧಾನಿಯವರು, ತುಂಬಾ ತಳ ಹಂತದಿಂದ ಮೇಲೆ ಬಂದಿರುವ ನಮ್ಮ ಮುಖ್ಯಮಂತ್ರಿಗಳ ಶೈಕ್ಷಣಿಕ ವ್ಯವಸ್ಥೆಯ ಬದಲಾವಣೆಗಾಗಿ ಮುನ್ನುಡಿ ಬರೆಯುವ ಚಚೆ೯ ಮುಂದುವರೆಸಲಿ ಎಂದು ಆಶಿಸೋಣ.

English summary
Where our eductaion system is heading? Why murders are happening just for the sake of postponing examination? Why exams are being thrust on the students? When will the incidents like murder of Pradyuman stop?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X