'ಹೋಗಪ್ಪ ಯೋಗಿ' : ಆದಿತ್ಯನಾಥ್ ವಿರುದ್ಧ ಕಾಂಗ್ರೆಸ್ ಗರಂ

Subscribe to Oneindia Kannada
   ಬೆಂಗಳೂರಿನಲ್ಲಿ ಯೋಗಿ ಆದಿತ್ಯನಾಥ್ | ಕಾಂಗ್ರೆಸ್ ಫುಲ್ ಗರಂ | Oneindia Kannada

   ಬೆಂಗಳೂರು, ಜನವರಿ 7: ನಗರದ ವಿಜಯನಗರದಲ್ಲಿ ಇಂದು ನಡೆದ 'ಪರಿವರ್ತನಾ ಯಾತ್ರೆ'ಯ ಸಮಾವೇಶದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಿದ್ದರು. ಈ ವೇಳೆ ಯೋಗಿ ಆಡಿರುವ ಮಾತುಗಳು ಕಾಂಗ್ರೆಸ್ ಹಾಗೂ ರಾಜ್ಯದ ಜನರ ಕೆಂಗಣ್ಣಿಗೆ ಗುರಿಯಾಗಿದೆ.

   ಈ ಹಿನ್ನಲೆಯಲ್ಲಿ #HogappaYogi ಹ್ಯಾಷ್ ಟ್ಯಾಗ್ ಹಾಕಿ ಜನರು ಯೋಗಿ ಆದಿತ್ಯನಾಥ್ ಗೆ ಮಂಗಳಾರತಿ ಎತ್ತುತ್ತಿದ್ದು, ಟ್ಟಿಟ್ಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ.

   ಕಾಂಗ್ರೆಸ್ ಈ ದೇಶದ ದೊಡ್ಡ ಸಮಸ್ಯೆ : ಯೋಗಿ ಆದಿತ್ಯನಾಥ್

   ಕಾಂಗ್ರೆಸ್ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಕರ್ನಾಟಕ ಕಾಂಗ್ರೆಸ್ ಸೇರಿದಂತೆ ಹಲವರು ಉತ್ತರ ಪ್ರದೇಶದ ಪರಿಸ್ಥಿತಿ ಮತ್ತು ಕರ್ನಾಟಕದ ಪರಿಸ್ಥಿತಿಯನ್ನು ಹೋಲಿಕೆ ಮಾಡಿ ಟ್ವೀಟ್ ಮಾಡಿದ್ದಾರೆ. ಕರ್ನಾಟಕಕ್ಕೆ ಬುದ್ಧಿ ಹೇಳಲು ಬರಬೇಡಿ ಎಂದು ಯೋಗಿ ಆದಿತ್ಯನಾಥ್ ರನ್ನು ಝಾಡಿಸಿದ್ದಾರೆ.

   ಬುದ್ಧಿ ಹೇಳಲು ಬರಬೇಡಿ

   "ಹಿಂಸಾಚಾರವನ್ನು ಪ್ರಚೋದಿಸುವ ಯೋಗಿಯಂತಹ ಕೋಮುವಾದಿ ವ್ಯಕ್ತಿ ಕರ್ನಾಟಕಕ್ಕೆ ಬುದ್ಧಿ ಹೇಳಲು ಬರುವುದು ಬೇಡ. ದಯವಿಟ್ಟು ನಿಮ್ಮ ಸ್ವಂತ ರಾಜ್ಯದ ಬಗ್ಗೆ ನೋಡಿ. ಅಭಿವೃದ್ಧಿ ಮತ್ತು ಸಾಮಾಜಿಕ ಒಳಗೊಳ್ಳುವಿಕೆಗೆ ಸಂಬಂಧಿಸಿದಂತೆ ನಾವು ನಿಮ್ಮಿಂದ ತುಂಬಾ ಮುಂದಿದ್ದೇವೆ,"

   ಅಪರಾಧಗಳಲ್ಲಿ ನೀವೇ ಮುಂದು

   "'ಎನ್ ಸಿಆರ್ ಬಿ' ಮಾಹಿತಿಗಳ ಪ್ರಕಾರ ಯೋಗಿ ಆದಿತ್ಯನಾಥ್ ಆಳ್ವಿಕೆಯ ಉತ್ತರ ಪ್ರದೇಶ ದೇಶದಲ್ಲೇ ಅಪರಾಧ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದೆ. ದೇಶದ ಶೇ. 14.5 ಮಹಿಳೆಯರ ಮೇಲಿನ ದೌರ್ಜನ್ಯ, ಶೇ. 12.4 ಅತ್ಯಾಚಾರ ಪ್ರಕರಣ, ಶೇ. 14.5 ಮಕ್ಕಳ ಮೇಲಿನ ದೌರ್ಜನ್ಯ, ಶೇ. 21.4 ಸೈಬರ್ ಕ್ರೈಂ, ಶೇ. 50 ಶಸ್ತ್ರಾಸ್ತ್ರ ವಶ, ಶೇ. 25.6 ಎಸ್.ಸಿ/ಎಸ್.ಟಿ ಮೇಲಿನ ಜಾತಿ ನಿಂದನೆ ಪ್ರಕರಣಗಳು ಉತ್ತರ ಪ್ರದೇಶದಲ್ಲಿ ನಡೆಯುತ್ತಿವೆ," ಎಂದು ಕರ್ನಾಟಕ ಕಾಂಗ್ರೆಸ್ ಮಾಹಿತಿ ಸಹಿತ ಯೋಗಿ ಆದಿತ್ಯನಾಥ್ ಗೆ ತಿರುಗೇಟು ನೀಡಿದೆ.

   ಕರ್ನಾಟಕದಲ್ಲಿ ರಸ್ತೆ ಅಭಿವೃದ್ಧಿ

   ಕರ್ನಾಟಕದಲ್ಲಿ 19,721 ಕಿಲೋಮೀಟರ್ ರಾಜ್ಯ ಹೆದ್ದಾರಿಗಳಿವೆ. ಅದೇ ಉತ್ತರ ಪ್ರದೇಶದಲ್ಲಿರುವುದು 7,543 ಕಿಲೋಮೀಟರ್ ಮಾತ್ರ ಎಂಬುದನ್ನು ಉಲ್ಲೇಖಿಸಿರುವ ವೈಶಾಲಿ ಎಂಪಿ ಎಂಬವರು, ಕರ್ನಾಟಕ ಯೋಗಿಗೆ ರಾಜ್ಯದಿಂದ ಹೋಗಲು ದಾರಿ ತೋರಿಸುತ್ತಿದೆ ಎಂದು ಕಾಲೆಳೆದಿದ್ದಾರೆ.

   ಯುಪಿ-ಕರ್ನಾಟಕ ಹೋಲಿಕೆ

   ಯೋಗಿ ಆದಿತ್ಯನಾಥ್ ಕರ್ನಾಟಕಕ್ಕೆ ಅಭಿವೃದ್ಧಿ ಬಗ್ಗೆ ಪಾಠ ಮಾಡುತ್ತಾರೆ. ಬಿಜೆಪಿಯ ಯೋಗಿ ಆಡಳಿತದ ಉತ್ತರ ಪ್ರದೇಶ ಸರಕಾರ ಮತ್ತು ಕಾಂಗ್ರೆಸ್ ನ ಸಿದ್ದರಾಮಯ್ಯ ಆಡಳಿತದ ಕರ್ನಾಟಕ ಸರಕಾರದ ನಡುವಿನ ಹೋಲಿಕೆ ಇಲ್ಲಿದೆ ಎಂದು ಮಲ್ಲೇಶ್ವರ ಕಾಂಗ್ರೆಸ್ ಮಾಹಿತಿ ಹಂಚಿಕೊಂಡಿದೆ.

   ಕನ್ನಡಿಗರಿಗೆ ಸದಾನಂದ ಗೌಡರಿಂದ ಅವಮಾನ

   "ಯೋಗಿ ಆದಿತ್ಯನಾಥ್ ಓರ್ವ ಕ್ರಿಮಿನಲ್, ಅವರ ಮೇಲೆ ಹಲವು ಪ್ರಕರಣಗಳು ಇವೆ. ಅವರನ್ನು ನಿರ್ಮಲಾನಂದನಾಥ ಸ್ವಾಮೀಜಿ ಜತೆ ಹೋಲಿಕೆ ಮಾಡುವ ಮೂಲಕ ಡಿವಿ ಸದಾನಂದ ಗೌಡ ಕನ್ನಡಿಗರು ಮತ್ತು ಒಕ್ಕಲಿಗರಿಗೆ ಅವಮಾನ ಮಾಡಿದ್ದಾರೆ," ಎಂದು ಶ್ರೀವತ್ಸ ಎನ್ನುವವರು ಟ್ವೀಟ್ ಮಾಡಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Uttar Pradesh Chief Minister Yogi Adityanath participated in the 'Parvartana Yatra' rally in Vijayanagar, Bengaluru today. In which Yogi teaches about developments to Siddaramaih. People are angry about this and tweeted with #HogappaYogi hash-tag.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ