ಕುಮಟಾದ ದೀವಗಿಯಲ್ಲಿ ಗುಡ್ಡ ಕುಸಿದು ಮೂರು ಮಕ್ಕಳ ಸಾವು
ಕುಮಟಾ, ಜೂನ್ 11: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದೀವಗಿಯಲ್ಲಿ ಭಾನುವಾರ ಸುರಿದ ಭಾರೀ ಮಳೆಗೆ ಗುಡ್ಡ ಕುಸಿದು ಮೂವರು ಮಕ್ಕಳು ಮೃತಪಟ್ಟು, ಹತ್ತು ಮಹಿಳೆಯರಿಗೆ ಗಂಭೀರ ಗಾಯಗಳಾಗಿವೆ. ಧನುಷ್ ಅಂಬಿಗ, ಯತಿನ್ ಅಂಬಿಗ ಹಾಗೂ ಭವ್ಯಾ ಅಂಬಿಗ ಮೃತಪಟ್ಟವರು.
ಗಂಭೀರವಾಗಿ ಗಾಯಗೊಂಡ ಮಹಿಳೆಯರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಗುಡ್ಡ ಕುಸಿಯುವ ಸಂದರ್ಭದಲ್ಲಿ ಬೈಕ್ ಸವಾರರು ಸಿಲುಕಿಕೊಂಡಿದ್ದು, ಅವರಿಗಾಗಿ ಶೋಧ ನಡೆಯುತ್ತಿದೆ. ಕಾರವಾರದಿಂದ ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳಕ್ಕೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ.
[ಮುಂಗಾರಿನ ಅಭಿಷೇಕಕ್ಕೆ ಕಾದಿದೆ ನನ್ನ ಮೈಮನ]

ಸುತ್ತಲೂ ಹಸಿರಿನಿಂದ ಕೂಡಿದ್ದು, ಬೆಟ್ಟ-ಗುಡ್ಡಗಳು ಇವೆ. ಮೇಲ್ನೋಟಕ್ಕೆ ಈ ಬೆಟ್ಟ-ಗುಡ್ಡಗಳು ಗಟ್ಟಿಯಾಗಿ ಕಂಡುಬಂದರೂ ಮಳೆ ಬಂದಾಗ ಕುಸಿಯುತ್ತಿದೆ. ರಸ್ತೆ ನಿರ್ಮಾಣ ಮಾಡುವ ಮೊದಲು ಈ ಬಗ್ಗೆ ಪರೀಕ್ಷೆ ನಡೆಸಲಾಯಿತೋ ಇಲ್ಲವೋ ಎಂಬ ಅನುಮಾನ ಮೂಡಿಸುತ್ತದೆ ಈಗ ಕೆಲಸ ನಡೆಯುತ್ತಿರುವ ವೈಖರಿ.
[ಮತ್ತೆ ಉಡುಪಿ-ಕಾರವಾರ ರಸ್ತೆಯಲ್ಲಿ ಗುಡ್ಡ ಕುಸಿತ, ಸಂಚಾರ ಸ್ಥಗಿತ]

ಇದೀಗ ಮೂರು ಮಕ್ಕಳ ಜೀವ ಹೋಗಿದೆ. ಸ್ಥಳ ಪರಿಶೀಲನೆಗಾಗಿ ಜಿಲ್ಲಾಧಿಕಾರಿ ನಕುಲ್ ಸೇರಿದಂತೆ ಜನಪ್ರತಿನಿಧಿಗಳು ಘಟನೆ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications