ಮತ್ತೆ ಉಡುಪಿ-ಕಾರವಾರ ರಸ್ತೆಯಲ್ಲಿ ಗುಡ್ಡ ಕುಸಿತ, ಸಂಚಾರ ಸ್ಥಗಿತ
ಉಡುಪಿ, ಜೂನ್ 11 : ನಿರಂತರ ಮಳೆ ಸುರಿಯುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿ 66 ಉಡುಪಿ ಹಾಗೂ ಕಾರವಾರ ರಸ್ತೆಯಲ್ಲಿ ಭಾನುವಾರ ಮತ್ತೆ ಗುಡ್ಡ ಕುಸಿದಿದೆ. ಇದರಿಂದ ಸಂಚಾರ ಸ್ಥಗಿತಗೊಂಡು ಟ್ರಾಫಿಕ್ ಜಾಮ್ ಆಗಿದೆ.
ತುಂತುರು ಮಳೆಯಿಂದಾಗಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಒತ್ತಿನೆಣೆ ಗ್ರಾಮದ ಬಳಿ ಜೂನ್ 07ರಂದು ಗುಡ್ಡ ಕುಸಿದಿತ್ತು. ಇದೀಗ ಭಾನುವಾರವೂ ಸಹ ಇದೇ ಸ್ಥಳದಲ್ಲಿ ಗುಡ್ಡ ಕುಸಿದಿದೆ. ಇದರಿಂದ ಉಡುಪಿ- ಕಾರವಾರ- ಗೋವಾ ಸಂಪರ್ಕ ಮಾಡುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸುಮಾರು ಎರಡು ಕಿ.ಮೀ. ವರೆಗೆ ವಾಹನಗಳು ಸಾಲುಗಟ್ಟಿ ನಿಂತಿವೆ.

ಸಾಲುಗಟ್ಟಿ ನಿಂತಿರುವ ನೂರಾರು ವಾಹನಗಳನ್ನು ಗುಡ್ಡದ ಕಡೆ ಬಾರದಂತೆ ಪೊಲೀಸರು ಸುರಕ್ಷತಾ ಕ್ರಮ ಕೈಗೊಂಡಿದ್ದಾರೆ. ಮಣ್ಣು ತೆಗೆಯುವ ಕಾರ್ಯಾಚರಣೆ ನಡೆಯುತ್ತಿದೆ.












Click it and Unblock the Notifications