ಬಾಲಕಿಯ ಪರಿಸರ ಕಾಳಜಿಗೆ ವಿಶ್ವವೇ ಬೆರಗು: 12ನೇ ವಯಸ್ಸಿಗೆ ಸಮುದ್ರದಲ್ಲಿನ 3,000ಕೆಜಿ ಪ್ಲಾಸ್ಟಿಕ್ ಹೆಕ್ಕಿದ ಸ್ಕೂಬಾ ಡೈವರ್

ಬಾಲ್ಯದಲ್ಲಿ ಬಹುತೇಕ ಮಕ್ಕಳು ಸಮುದ್ರದ ತೀರದಲ್ಲಿ ಮರಳಿನ ಗೂಡು ಕಟ್ಟಿ ಆಡುತ್ತಿದ್ದರೆ, ಚೆನ್ನೈನ ಈ ಬಾಲಕಿ ಮಾತ್ರ ಆ ಇಡೀ ಸಮುದ್ರವನ್ನೇ ರಕ್ಷಿಸುವ ಮಹತ್ಕಾರ್ಯಕ್ಕೆ ಕೈಹಾಕಿದ್ದಾಳೆ. ಕೇವಲ ಎರಡು ವರ್ಷಕ್ಕೆ ಈಜು ಕಲಿತು, ಐದನೇ ವಯಸ್ಸಿನಲ್ಲಿ ಸ್ಕೂಬಾ ಡೈವಿಂಗ್ ಆರಂಭಿಸಿದ ಈಕೆ, ಸಮುದ್ರದ ಆಳದಲ್ಲಿ ಪ್ಲಾಸ್ಟಿಕ್ ಬಾಟಲಿಗಳು, ಕವರ್‌ಗಳು ಮತ್ತು ಮೀನುಗಾರರ ಬಲೆಗಳಿಂದ ಜಲಚರಗಳು ಪಡುತ್ತಿರುವ ಪಾಡನ್ನು ಕಣ್ಣಾರೆ ಕಂಡಿದ್ದಾಳೆ. ಅದರಿಂದ ವಿಚಲಿತಳಾಗದೆ, ಸಮುದ್ರವನ್ನು ಶುಚಿಗೊಳಿಸುವ ಅಭಿಯಾನವನ್ನು ತನ್ನ ಜೀವನದ ಗುರಿಯನ್ನಾಗಿಸಿಕೊಂಡು ಇದೀಗ ಎಲ್ಲರಿಗೂ ಮಾದರಿಯಾಗಿದ್ದಾಳೆ. ಆಕೆಯ ಹೆಸರೇ ಥಾರಗೈ ಆರಾಧನಾ.

ಸಮುದ್ರ ಸಂರಕ್ಷಣೆ ಮತ್ತು 3000 ಕೆಜಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ

ಚೆನ್ನೈನ ಕಾರಪ್ಪಕಂ ನಿವಾಸಿಯಾಗಿರುವ ಥಾರಗೈ, ಹುಟ್ಟಿದ ಕೇವಲ ಮೂರೇ ದಿನಕ್ಕೆ ನೀರಿಗೆ ಇಳಿದು ಬೆಳೆದವಳು. ಆಕೆಯ ತಂದೆ ಅರವಿಂದ್ ತರುಣ್‌ಶ್ರೀ ಅವರು ಕಳೆದ 20 ವರ್ಷಗಳಿಂದ ವೃತ್ತಿಪರ ಸ್ಕೂಬಾ ಡೈವರ್ ಆಗಿದ್ದಾರೆ. ತಂದೆಯ ಮಾರ್ಗದರ್ಶನದಲ್ಲಿ ಸಮುದ್ರದ ಒಡಲು ಸೇರಿದ ಥಾರಗೈಗೆ ಅಲ್ಲಿನ ಸೌಂದರ್ಯದ ಜೊತೆಗೆ ಪ್ಲಾಸ್ಟಿಕ್ ಮಾಲಿನ್ಯದ ಭೀಕರತೆ ಅರಿವಿಗೆ ಬಂದಿತು.

Meet 12 Year Old Scuba Diver

ಬಾಲಕಿ ಥಾರಗೈಗೆ ಹುಟ್ಟಿನಿಂದಲೇ ನೀರಿನೊಂದಿಗೆ ಅವಿನಾಭಾವ ನಂಟು ಬೆಳೆದಿದೆ. ಆಕೆ ಕೇವಲ 3 ದಿನದ ಹಸುಗೂಸಾಗಿದ್ದಾಗಲೇ ಆಕೆಯ ತಂದೆ ಆಕೆಯನ್ನು ನೀರಿಗೆ ಪರಿಚಯಿಸಿದ್ದರು. 9 ತಿಂಗಳ ಮಗುವಿದ್ದಾಗ ನೀರಿನಲ್ಲಿ ತೇಲಲು ಕಲಿತ ಈಕೆ, ಎರಡೂವರೆ ವರ್ಷಕ್ಕೆ ಈಜುವುದನ್ನು ಕರಗತ ಮಾಡಿಕೊಂಡಳು.

ಆರಂಭದಲ್ಲಿ ತಂದೆಯ ಜೊತೆಗೂಡಿ ಕಡಲತೀರಗಳನ್ನು ಶುಚಿಗೊಳಿಸುವ ಕಾರ್ಯದಲ್ಲಿ ತೊಡಗಿದ್ದ ಈಕೆ, ನಂತರ ಸಮುದ್ರದ ಆಳಕ್ಕೂ ಇಳಿದು ತ್ಯಾಜ್ಯ ಹೆಕ್ಕಲು ಶುರುಮಾಡಿದಳು. ಇದುವರೆಗೆ ಸಮುದ್ರ ಮತ್ತು ಕಡಲತೀರಗಳಿಂದ ಬರೋಬ್ಬರಿ 3,000 ಕೆಜಿಗೂ ಅಧಿಕ ಪ್ಲಾಸ್ಟಿಕ್ ತ್ಯಾಜ್ಯವನ್ನು ಈ ಸ್ಕೂಬಾ ಡೈವರ್ ಥಾರಗೈ ಮತ್ತು ಆಕೆಯ ತಂದೆಯ ತಂಡ ಸಂಗ್ರಹಿಸಿದೆ. ಸಂಗ್ರಹಿಸಿದ ಪ್ಲಾಸ್ಟಿಕ್ ಅನ್ನು ಗುಜರಿಗೆ ಹಾಕಿ ಮರುಬಳಕೆಗೆ ನೀಡಿ, ಅದರಿಂದ ಬಂದ ಹಣವನ್ನು ತಮಿಳುನಾಡಿನ ಪರಿಸರ ಇಲಾಖೆಗೆ ದೇಣಿಗೆ ನೀಡುವ ದೊಡ್ಡ ಮತ್ತು ನಿಸ್ವಾರ್ಥ ಮನಸ್ಸು ಈಕೆಯದು.

ಜಾಗೃತಿ ಮೂಡಿಸಲು ನೀರಿನಡಿ ಭರತನಾಟ್ಯ

ಸಮುದ್ರದ ಮಾಲಿನ್ಯದ ಬಗ್ಗೆ ಕೇವಲ ಕಸ ಹೆಕ್ಕುವುದಷ್ಟೇ ಅಲ್ಲದೆ, ಜನರಲ್ಲಿ ಜಾಗೃತಿ ಮೂಡಿಸಲು ಥಾರಗೈ ಹಲವು ಸಾಹಸಗಳನ್ನೂ ಮಾಡಿದ್ದಾಳೆ. ಪ್ಲಾಸ್ಟಿಕ್ ಮಾಲಿನ್ಯದ ವಿರುದ್ಧ ಧ್ವನಿ ಎತ್ತಲು ಆಕೆ ಇತ್ತೀಚೆಗಷ್ಟೇ ಪಾಕ್ ಜಲಸಂಧಿಯನ್ನು ಈಜಿ ಪಾರ್ ಮಾಡಿದ್ದಾಳೆ.

ಅಚ್ಚರಿಯೆಂದರೆ 2025ರಲ್ಲಿ, ನೀರಿನ ಮೇಲ್ಮೈಯಿಂದ ಸುಮಾರು 20 ಅಡಿ ಆಳದಲ್ಲಿ ಭರತನಾಟ್ಯ ಪ್ರದರ್ಶನ ಮಾಡುವ ಮೂಲಕ ಸಮುದ್ರದ ಉಳಿವಿಗಾಗಿ ಜಗತ್ತಿನ ಗಮನ ಸೆಳೆದಿದ್ದಾಳೆ. ಇದಲ್ಲದೆ, 'ಸೇವ್ ದಿ ಓಷನ್' ಅಭಿಯಾನದಡಿ ಕೋವಲಂನಿಂದ ನೀಲಂಕರೆವರೆಗೆ 18 ಕಿಲೋಮೀಟರ್ ದೂರವನ್ನು ಈಜಿ 'ಅಸಿಸ್ಟ್ ವರ್ಲ್ಡ್ ರೆಕಾರ್ಡ್ಸ್'ನಲ್ಲಿ ದಾಖಲೆ ಕೂಡ ಬರೆದಿದ್ದಾಳೆ.

ಅಳಿವಿನಂಚಿನಲ್ಲಿರುವ ಡ್ಯುಗೊಂಗ್ ಸಂರಕ್ಷಣೆ

ಥಾರಗೈ ಕೇವಲ ಪ್ಲಾಸ್ಟಿಕ್ ನಿರ್ಮೂಲನೆಗೆ ಮಾತ್ರ ಸೀಮಿತವಾಗಿಲ್ಲ, ಅಳಿವಿನಂಚಿನಲ್ಲಿರುವ ಸಮುದ್ರ ಜೀವಿಗಳ ರಕ್ಷಣೆಗೂ ಶ್ರಮಿಸುತ್ತಿದ್ದಾಳೆ. ಆಕೆಯ ತಂದೆ ಅರಣ್ಯ ಇಲಾಖೆ ಹಾಗೂ 'ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ'ದಂತಹ ಸಂಸ್ಥೆಗಳ ಜೊತೆ ಕೆಲಸ ಮಾಡುವುದರಿಂದ, ಥಾರಗೈಗೆ ಅಪರೂಪದ ಜಲಚರಗಳ ಬಗ್ಗೆ ಅಪಾರ ಆಸಕ್ತಿ ಬೆಳೆದಿದೆ.

ಮುಖ್ಯವಾಗಿ 'ಡ್ಯುಗೊಂಗ್' (ಕಡಲ ಹಸು) ಎಂಬ ಅಪರೂಪದ ಜೀವಿಯನ್ನು ಉಳಿಸುವ ನಿಟ್ಟಿನಲ್ಲಿ ಆಕೆ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತಿದ್ದಾಳೆ. ಪ್ಲಾಸ್ಟಿಕ್ ಮತ್ತು ಮೀನುಗಾರರ ಬಲೆಗಳಿಂದ ಜಲಚರಗಳು ಉಸಿರುಗಟ್ಟುತ್ತಿವೆ, ಇದನ್ನು ತಡೆಯಲೇಬೇಕು ಎಂಬುದು ಆಕೆಯ ಕಳಕಳಿಯಾಗಿದೆ. ಭವಿಷ್ಯದಲ್ಲಿ ತಂದೆಯಂತೆಯೇ ಪರಿಣಿತ ಡೈವಿಂಗ್ ಮಾಸ್ಟರ್ ಆಗಿ, ಸಾಗರ ಪರಿಸರ ವ್ಯವಸ್ಥೆಯನ್ನು ರಕ್ಷಿಸುವ ಕನಸನ್ನು ಈಕೆ ಹೊಂದಿದ್ದಾಳೆ. ಇಂದಿನ ಯುವಜನತೆಗೆ ಈ 8 ವರ್ಷದ ಬಾಲಕಿಯ ಪರಿಸರ ಕಾಳಜಿ ನಿಜಕ್ಕೂ ಸ್ಪೂರ್ತಿದಾಯಕ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+