ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಈ 6 ಜಿಲ್ಲೆಗಳಲ್ಲಿ ನವೆಂಬರ್ 5 ರಿಂದ 7ರವರೆಗೂ ಮಳೆ

|
Google Oneindia Kannada News

ಬೆಂಗಳೂರು, ನವೆಂಬರ್ 02: ಕರ್ನಾಟಕದ 6 ಜಿಲ್ಲೆಗಳಲ್ಲಿ ನವೆಂಬರ್ 5 ರಿಂದ 7ರವರೆಗೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ನವೆಂಬರ್ 3 ರಿಂದ 7ರವರೆಗೂ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಮಳೆಯಾಗಲಿದೆ.

ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಳೆ, ಉಳಿದೆಡೆ ಒಣಹವೆ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಳೆ, ಉಳಿದೆಡೆ ಒಣಹವೆ

ನವೆಂಬರ್ 5 ರಿಂದ 7ರವರೆಗೆ ಉಡುಪಿ, ದಕ್ಷಿಣ ಕನ್ನಡ,ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗದಲ್ಲಿ ಮಳೆಯಾಗಲಿದೆ.ಬೀದರ್‌ನಲ್ಲಿ ಅತಿ ಕನಿಷ್ಠ ಅಂದರೆ 12.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಶೃಂಗೇರಿ, ಬಾಳೆಹೊನ್ನೂರು,ಕೊಟ್ಟಿಗೆಹಾರ, ಧರ್ಮಸ್ಥಳ, ಭಾಗಮಂಡಲ, ಬಂಡೀಪುರದಲ್ಲಿ ಮಳೆಯಾಗಿದೆ.

ಮುಗಿದ ಮುಂಗಾರು

ಮುಗಿದ ಮುಂಗಾರು

ಈಗಾಗಲೇ ಮುಂಗಾರು ಅವಧಿ ಮುಗಿದಿದ್ದು, ಹಿಂಗಾರು ಮಳೆ ಆರಂಭವಾಗಿದೆ. ಅಲ್ಲದೆ ವಾತಾವರಣದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿದ್ದು, ನವೆಂಬರ್ 4ರ ನಂತರ ರಾಜ್ಯದಲ್ಲಿ ಮತ್ತೊಂದು ಸುತ್ತಿನ ಮಳೆಯಾಗುವ ಸಾಧ್ಯತೆಗಳಿವೆ. ಅಕ್ಟೋಬರ್ 28ಕ್ಕೆ ನೈರುತ್ಯ ಮುಂಗಾರು ಮರಳುವಿಕೆ ಮುಗಿದಿದ್ದು, ಈಶಾನ್ಯ ಹಿಂಗಾರು ಆರಂಭವಾಗಿದೆ.

ರಾಜ್ಯದಲ್ಲಿ ಒಣಹವೆ

ರಾಜ್ಯದಲ್ಲಿ ಒಣಹವೆ

ಈ ನಡುವೆ ಕಳೆದೊಂದು ವಾರದಿಂದ ರಾಜ್ಯದಲ್ಲಿ ಒಣಹವೆ ಮುಂದುವರೆದಿದ್ದು, ಮಳೆಯ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಅರಬೀಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವ ಪರಿಣಾಮ ನವೆಂಬರ್ 4ರಿಂದ ಮೂರು ದಿನಗಳ ಕಾಲ ರಾಜ್ಯದಲ್ಲಿ ಮತ್ತೆ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನಿವೃತ್ತ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್ ರೆಡ್ಡಿ ತಿಳಿಸಿದರು.

ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ

ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ

ಬಂಗಾಳಕೊಲ್ಲಿಯಲ್ಲಿ ಎರಡುಮೂರು ಮೇಲ್ಮೈ ಸುಳಿಗಾಳಿಗಳು ಉಂಟಾಗಿವೆ. ತಮಿಳುನಾಡಿನ ಚೆನ್ನೈ ಸಮೀಪದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದೆ. ಅಲ್ಲದೆ ಅರಬ್ಬೀ ಸಮುದ್ರದಲ್ಲಿ ಕೇರಳ ಹಾಗೂ ಮಹಾರಾಷ್ಟ್ರ ತೀರಾ ಪ್ರದೇಶದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದೆ.

ದಕ್ಷಿಣ ಒಳನಾಡಿನಲ್ಲಿ ಮೋಡಕವಿದ ವಾತಾವರಣ

ದಕ್ಷಿಣ ಒಳನಾಡಿನಲ್ಲಿ ಮೋಡಕವಿದ ವಾತಾವರಣ

ರಾಜ್ಯದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರಲಿದ್ದು, ಇನ್ನೆರಡು ದಿನ ಒಣಹವೆ ಕಂಡುಬಂದಿದೆ. ಚದುರಿದಂತೆ ಅಲ್ಲಲ್ಲಿ ಸಾಧಾರಣ ಮಳೆಯಾಗಲಿದೆ. ನವೆಂಬರ್ 4ರ ನಂತರ ಉತ್ತರ ಕರ್ನಾಟಕ ಹೊರತುಪಡಿಸಿ ರಾಜ್ಯದ ಬಹುತೇಕ ಭಾಗಗಳಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಯಾಗಲಿದೆ ಎಂದು ಹೇಳಿದರು.

Recommended Video

DK Ravi ನಾನು ತುಂಬಾ ಚನ್ನಾಗಿದ್ವಿ! | Kusuma Exclusive Interview | Part 2 | Oneindia Kannada

English summary
Rainfall occurred at a few places over Coastal Karnataka and at isolated places over South Interior Karnataka. Dry weather prevailed over North Interior Karnataka. Heavy Rainfall Will Occur In Karnataka From November 5-7.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X