Heavy Rain: ಮಳೆ.. ಮಳೆ.. ಶುರುವಾಯ್ತು ಭರ್ಜರಿ ಮುಂಗಾರು ಮಳೆ!

ಮಳೆ ಆರ್ಭಟ ಸ್ವಲ್ಪ ದಿನಗಳ ಕಾಲ ಸೈಲೆಂಟ್ ಆಗಿತ್ತು, ಆದರೆ ಇದೀಗ ಮತ್ತೆ ಮುಂಗಾರು ಮಳೆ ಮೋಡಗಳು ಅಲರ್ಟ್ ಆಗಿದ್ದು ಅಬ್ಬರಿಸುತ್ತಿವೆ. ಹೀಗಾಗಿ ಕರ್ನಾಟಕದ ಹಲವು ಜಿಲ್ಲೆ & ತಾಲೂಕುಗಳಿಗೆ ಭಾರಿ ಭರ್ಜರಿ ಮಳೆ ಬೀಳುವುದು ಗ್ಯಾರಂಟಿ ಆಗಿದೆ. ಹಾಗಾದ್ರೆ ಯಾವ, ಯಾವ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಸುರಿಯಲಿದೆ? ಮಳೆ ಬಗ್ಗೆ ಮಾಹಿತಿಗೆ ಮುಂದೆ ಓದಿ.

ಕರ್ನಾಟಕ ರಾಜ್ಯಕ್ಕೆ ಮುಂಗಾರು ಮಳೆಯೇ ಆಸರೆ, ಯಾಕಂದ್ರೆ ಮುಂಗಾರು ಮಳೆ ಬೀಳದಿದ್ದರೆ ಕನ್ನಡಿಗರ ಪರಿಸ್ಥಿತಿ ಕೈಮೀರಿ ಹೋಗಲಿದೆ. ಹೀಗಾಗಿ ಮುಂಗಾರು ಮಳೆಯನ್ನೆ ಆಶ್ರಯಿಸಿ ಕನ್ನಡ ನಾಡಿನ ಜನರು ಜೀವನ ಮಾಡುತ್ತಾರೆ. ಹೀಗಿದ್ದಾಗ 2023 ರಲ್ಲಿ ಮುಂಗಾರು ಮಳೆ ಕೈಕೊಟ್ಟಿತ್ತು. ಆದರೆ 2024 ರಲ್ಲಿ ಮುಂಗಾರು ಮಳೆ ಭರ್ಜರಿಯಾಗಿ ಎಂಟ್ರಿ ಕೊಟ್ಟು, ಭಾರಿ ಮಳೆ ಸುರಿಸುತ್ತಿದೆ. ಅದ್ರಲ್ಲೂ ಕಳೆದ 1 ತಿಂಗಳಿಂದ ಕರ್ನಾಟಕದ ಬಹುತೇಕ ಜಿಲ್ಲೆಗಳಿಗೆ ಭಾರಿ ಮಳೆ ಬಿದ್ದಿದ್ದು, ಕೆಲ ದಿನಗಳಿಂದ ಮಳೆ ಸೈಲೆಂಟ್ ಆಗಿತ್ತು. ಆದರೆ ಈಗ ಮತ್ತೆ ಮಳೆ ಮೋಡಗಳು ಅಲರ್ಟ್ ಆಗಿವೆ.

Heavy Rain Will Start In Karnataka For Next 5 Days From 20th Of June 2024

ಯಾವ ಯಾವ ಜಿಲ್ಲೆಗಳಿಗೆ ಮಳೆ?

ಮಳೆ ಕಳೆದ 2 ತಿಂಗಳಿಂದ ಕನ್ನಡಿಗರ ಕೈಹಿಡಿದಿದ್ದು, ಬೆಂಗಳೂರು ನಗರ ಸೇರಿ ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ದಾವಣಗೆರೆ, ಚಾಮರಾಜನಗರ, ಧಾರವಾಡ, ಕೊಡಗು & ದಕ್ಷಿಣ ಕನ್ನಡ, ಉಡುಪಿ, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಿದೆ. ಇದು ಒಂದ್ಕಡೆ ಆಗಿದ್ದರೆ, ಇನ್ನೂ 2 ವಾರಗಳ ಕಾಲ ಭರ್ಜರಿ ಮಳೆ ಬೀಳುವ ಸಾಧ್ಯತೆ ಇದೆ ಎಂಬ ಸುದ್ದಿ ಸಿಕ್ಕಿದೆ. ಅದ್ರಲ್ಲೂ ಕರ್ನಾಟಕದ ಕರಾವಳಿ ಮತ್ತು ಮಲೆನಾಡಿನ ಭಾಗಗಳಲ್ಲಿ ಮುಂದಿನ 5 ದಿನಗಳ ಕಾಲ ಸಾಧಾರಣದಿಂದ ಚದುರಿದಂತೆ ಭರ್ಜರಿ ಮಳೆಯಾಗುವ ನಿರೀಕ್ಷೆ ಇದೆ.

ಮಳೆ ಅಬ್ಬರ ತಡೆಯಲು ಸಕಲ ಸಿದ್ಧತೆ!

ಮುಂದಿನ 1 ವಾರ ಕರ್ನಾಟಕ ರಾಜ್ಯದ ಉತ್ತರ ಒಳನಾಡು & ದಕ್ಷಿಣ ಒಳಾನಾಡು ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಕೊಡಗು, ಉಡುಪಿ, ಚಾಮರಾಜನಗರ ಜಿಲ್ಲೆ, ಮಂಡ್ಯ, ಮಂಗಳೂರು & ಉತ್ತರ ಕನ್ನಡ, ತುಮಕೂರು, ಹಾಸನ, ಚಿತ್ರದುರ್ಗ, ಬೆಳಗಾವಿ ಜಿಲ್ಲೆ ಸೇರಿ ದಾವಣಗೆರೆಯ ಹಲವು ಪ್ರದೇಶದಲ್ಲಿ ಮಳೆ ಅಬ್ಬರಿಸಲಿದೆ ಎನ್ನಲಾಗಿದೆ.

ಇದು ದಕ್ಷಿಣ ಕರ್ನಾಟಕದಲ್ಲಿ ಆಗಿದ್ದರೆ, ಮತ್ತೊಂದು ಕಡೆ ಉತ್ತರ ಕರ್ನಾಟಕದ ವಿಜಯಪುರ, ಯಾದಗಿರಿ, ಕಲಬುರಗಿ, ರಾಯಚೂರು, ಬೀದರ್, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ & ಕೊಪ್ಪಳದಲ್ಲಿ ಕೂಡ ಮಳೆ ಅಬ್ಬರಿಸಲಿದೆ. ಈ ಮೂಲಕ ಮುಂದಿನ ಕೆಲವು ದಿನಗಳ ಕಾಲ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸುವುದು ಪಕ್ಕಾ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+