ಕರುಳು ಹಿಂಡುವ ವಿಡಿಯೋ: ಸತ್ತ ಮರಿಯಾನೆಯ ಜೊತೆ ತಾಯಿ ಆನೆಯ ರೋಧನೆ
ದುಃಖ, ನೋವು, ಸಾವು, ಪ್ರೀತಿ ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಲ್ಲ. ಪ್ರಾಣಿಗಳಿಗೂ ಈ ಎಲ್ಲಾ ಭಾವನೆಗಳು ಇರುತ್ತವೆ. ಅವುಗಳು ಕೂಡ ತಮ್ಮವರನ್ನು ಕಳೆದುಕೊಂಡಾಗ ಮನುಷ್ಯರಂತೆಯೇ ಕಣ್ಣೀರು ಹಾಕುತ್ತವೆ ಎಂಬುದಕ್ಕೆ ಸಾಕ್ಷಿಯಾದ ಅತ್ಯಂತ ಹೃದಯವಿದ್ರಾವಕ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಸತ್ತ ತನ್ನ ಮರಿಯನ್ನು ಹೇಗಾದರೂ ಮಾಡಿ ಎಬ್ಬಿಸಲೇಬೇಕು ಎಂದು ತಾಯಿ ಆನೆಯೊಂದು ನಡೆಸುವ ರೋಧನ, ನೋಡುಗರ ಕರುಳು ಹಿಂಡುವಂತಿದೆ.
ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಪ್ರವೀಣ್ ಕಸ್ವಾನ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಈ ವಿಡಿಯೋ, ಭಾರತದ ಅರಣ್ಯ ಪ್ರದೇಶವೊಂದರಲ್ಲಿ ಸೆರೆಹಿಡಿಯಲಾಗಿದೆ. ಮೃತಪಟ್ಟಿರುವ ತನ್ನ ಪುಟ್ಟ ಮರಿಯಾನೆ ಇನ್ನೇನು ಎದ್ದು ಬರುತ್ತದೆ ಎಂಬ ಭರವಸೆಯಲ್ಲಿ ತಾಯಿ ಆನೆಯು ತನ್ನ ಸೊಂಡಿಲಿನಿಂದ ಅದನ್ನು ಸವರುತ್ತಾ, ಎಬ್ಬಿಸಲು ನಿರಂತರವಾಗಿ ಪ್ರಯತ್ನಿಸುತ್ತಿರುವ ದೃಶ್ಯ ಈ ವಿಡಿಯೋದಲ್ಲಿದೆ. ಎಷ್ಟೇ ಪ್ರಯತ್ನಿಸಿದರೂ ಮರಿ ಏಳದಿದ್ದಾಗ, ತಾಯಿ ಆನೆಯು ತನ್ನ ಮರಿಯ ಮೃತದೇಹವನ್ನು ಕಾಲಿನಿಂದ ಮೆಲ್ಲನೆ ತಳ್ಳುತ್ತಾ, ಸೊಂಡಿಲಿನಿಂದ ಎಳೆಯುತ್ತಾ ತನ್ನೊಟ್ಟಿಗೆ ಕರೆದೊಯ್ಯಲು ಯತ್ನಿಸುತ್ತಿದೆ. ಈ ದೃಶ್ಯದಲ್ಲಿ ಆನೆಯ ಯಾವುದೇ ಆಕ್ರೋಶ ಅಥವಾ ಭಯ ಕಾಣುತ್ತಿಲ್ಲ; ಬದಲಾಗಿ ತನ್ನ ಮರಿ ಇನ್ನಿಲ್ಲ ಎಂಬ ಕಟು ಸತ್ಯವನ್ನು ಒಪ್ಪಿಕೊಳ್ಳಲಾಗದ ತಾಯಿಯ ಮೂಕ ವೇದನೆ ಮಾತ್ರ ಎದ್ದು ಕಾಣುತ್ತಿದೆ.

ಈ ಕರುಳು ಹಿಂಡುವ ವಿಡಿಯೋವನ್ನು ಹಂಚಿಕೊಂಡಿರುವ ಪ್ರವೀಣ್ ಕಸ್ವಾನ್ ಅವರು, "ದುಃಖ ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಲ್ಲ. ತನ್ನ ಮರಿಯ ಸಾವನ್ನು ಅರಗಿಸಿಕೊಳ್ಳಲು ಈ ತಾಯಿ ಆನೆಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಮೃತದೇಹವನ್ನು ಎಳೆಯುತ್ತಾ ಸಾಗುತ್ತಿದೆ. ಕೆಲವೊಮ್ಮೆ ಆನೆಗಳು ದಿನಗಳ ಕಾಲ ಹೀಗೆಯೇ ಮಾಡುತ್ತವೆ. ಅವುಗಳು ಕೂಡ ನಮ್ಮಂತೆಯೇ. ಶೋಕಿಸುವುದು, ನೆನಪಿಸಿಕೊಳ್ಳುವುದು ಹಾಗೂ ತಮ್ಮವರನ್ನು ಬಿಟ್ಟುಕೊಡಲು ನಿರಾಕರಿಸುವ ಗುಣವನ್ನು ಹೊಂದಿವೆ. 2024ರ ನವೆಂಬರ್‌ನಲ್ಲಿ ಈ ದೃಶ್ಯವನ್ನು ನಾವು ದಾಖಲಿಸಿದ್ದೆವು" ಎಂದು ಬರೆದುಕೊಂಡಿದ್ದಾರೆ.
ಆನೆಗಳು ಅತ್ಯಂತ ಬುದ್ಧಿವಂತ ಹಾಗೂ ಭಾವನಾತ್ಮಕ ಜೀವಿಗಳು. ಅವುಗಳು ದೊಡ್ಡ ಗುಂಪಿನಲ್ಲಿ ವಾಸಿಸುತ್ತವೆ ಮತ್ತು ಪರಸ್ಪರ ಗಾಢವಾದ ಬಾಂಧವ್ಯವನ್ನು ಹೊಂದಿರುತ್ತವೆ. ತಮ್ಮ ಗುಂಪಿನ ಯಾವುದೇ ಆನೆ ಮೃತಪಟ್ಟರೂ ಮನುಷ್ಯರಂತೆಯೇ ಶೋಕ ಆಚರಿಸುವ ಗುಣವನ್ನು ಅವು ಹೊಂದಿವೆ. ಮೃತದೇಹದ ಬಳಿ ಗಂಟೆಗಟ್ಟಲೆ ನಿಲ್ಲುವುದು, ಸೊಂಡಿಲಿನಿಂದ ಸವರುತ್ತಾ ಕಣ್ಣೀರು ಹಾಕುವುದು ಮತ್ತು ಅದೇ ಸ್ಥಳಕ್ಕೆ ಮತ್ತೆ ಮತ್ತೆ ಭೇಟಿ ನೀಡುವ ಅಭ್ಯಾಸವನ್ನು ಆನೆಗಳು ರೂಢಿಸಿಕೊಂಡಿವೆ.
Grief is not uniquely human.#Elephant Mother not able to comprehend death of her calf.
— Parveen Kaswan, IFS (@ParveenKaswan) April 14, 2026
She keeps dragging body for some time, at times for days. They are so like us. Mourning, remembering, refusing to let go.
This we documented in nov 2024. pic.twitter.com/blqVDxZe2F
ತಾಯಿ ಆನೆಗಳು ತಮ್ಮ ಮರಿಗಳ ಬಗ್ಗೆ ಅತಿಯಾದ ಕಾಳಜಿ ಹೊಂದಿರುತ್ತವೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೆಟ್ಟಿಗರ ಕಣ್ಣಂಚಲ್ಲಿ ನೀರು ತರಿಸಿದ್ದು, ಪ್ರಾಣಿಗಳ ಈ ಅದ್ಭುತ ಭಾವನಾತ್ಮಕ ಲೋಕ ಕಂಡು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ತಾಯಿಯ ಪ್ರೀತಿಗೆ ಸಾವು ಕೂಡ ಅಡ್ಡಿಯಾಗಲಾರದು ಎಂಬುದನ್ನು ಈ ದೃಶ್ಯ ಮತ್ತೆ ಮತ್ತೆ ನೆನಪಿಸುವಂತಿದೆ.
-
ತಾಯಿ ಮಂಗನ ಮೌನ ರೋದನೆ: ನಮ್ಮ ಮೆಟ್ರೋ ನಿಲ್ದಾಣದಲ್ಲಿ ಕರುಣಾಜನಕ ದೃಶ್ಯ..Video Viral -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
ಆಶಾ ಭೋಸ್ಲೆ ಮೊಮ್ಮಗಳು ಜನೈಗೆ ಸಾಂತ್ವನ ಹೇಳಿದ ಕ್ರಿಕೆಟಿಗ ಮೊಹಮ್ಮದ್ ಸಿರಾಜ್; ವಿಡಿಯೋ ವೈರಲ್ -
Yuzvendra Chahal: ಯುಜ್ವೇಂದ್ರ ಚಹಾಲ್ 'ಕ್ಯೂಟ್' ಕಾಮೆಂಟ್, ತಾನಿಯಾ ಚಟರ್ಜಿ ವಿಡಿಯೋ ವೈರಲ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ













Click it and Unblock the Notifications