ಕೋವಿಡ್ ವ್ಯಾಕ್ಸಿನ್ ಗೊಂದಲ; ಆರೋಗ್ಯ ಇಲಾಖೆ ಸ್ಪಷ್ಟನೆ

ಬೆಂಗಳೂರು, ಮೇ 23; ಕರ್ನಾಟಕದಲ್ಲಿ ಕೋವಿಡ್ 19 ಲಸಿಕಾಕರಣದ ಬಗ್ಗೆ ಜನರಲ್ಲಿ ಹಲವಾರು ಗೊಂದಲ ಉಂಟಾಗಿದೆ. ಯಾರಿಗೆ ಲಸಿಕೆ ಸಿಗಲಿದೆ?, 18-44 ವರ್ಷದವರಿಗೆ ಯಾವಾಗ ಸಿಗಲಿದೆ? ಎಂದು ಜನರು ಪಶ್ನೆಗಳನ್ನು ಕೇಳುತ್ತಿದ್ದಾರೆ.

Recommended Video

      Karnatakaದಲ್ಲಿ ಈಗ ಎಲ್ಲೆಲ್ಲಿ , ಎಷ್ಟು ಲಸಿಕೆ ಉಳಿದಿದೆ ? | Oneindia Kannada

      ಆರೋಗ್ಯ ಇಲಾಖೆ ಪತ್ರಿಕಾ ಪ್ರಕಟಣೆ ಮೂಲಕ ಜನರಲ್ಲಿನ ಗೊಂದಲಗಳನ್ನು ಬಗೆಹರಿಸಿದೆ. ಗೊಂದಲ ನಿವಾರಣೆಗಾಗಿ ಈ ಸ್ಪಷ್ಟನೆ ನೀಡಲಾಗಿದೆ ಎಂದು ಟ್ವೀಟ್‌ನಲ್ಲಿ ಸ್ಪಷ್ಟಪಡಿಸಿದೆ. 45 ವರ್ಷ ಮೇಲ್ಪಟ್ಟವರು, ಕೋವಿಶೀಲ್ಡ್ 2ನೇ ಡೋಸ್, ಕೊವ್ಯಾಕ್ಸಿನ್ ಮೊದಲ ಡೋಸ್, 18-44 ವಯೋಮಿತಿಯವರಿಗೆ ಲಸಿಕೆ ಬಗ್ಗೆ ವಿವರಣೆಯನ್ನು ನೀಡಲಾಗಿದೆ.

      ಸರ್ಕಾರ 18-44 ವಯೋಮಿತಿಯ ಜನರಿಗೆ ಉಚಿತವಾಗಿ ಲಸಿಕೆ ನೀಡುವುದಾಗಿ ಘೋಷಣೆ ಮಾಡಿದೆ. ಇದಕ್ಕಾಗಿ ಲಸಿಕೆ ತಯಾರಿಕಾ ಕಂಪನಿಗಳಿಂದ ನೇರವಾಗಿ ಖರೀದಿ ಮಾಡಲಾಗುತ್ತಿದೆ. ಮೊದಲಿಗೆ ರಾಜ್ಯ ಸರ್ಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರಿಗೆ ಹಾಗೂ ಮುಂದಿನ ದಿನಗಳಲ್ಲಿ ಆದ್ಯತೆ ಗುಂಪುಗಳಿಗೆ ಲಸಿಕೆ ನೀಡಲಾಗುವುದು ಎಂದು ಸರ್ಕಾರ ಹೇಳಿದೆ.

      ಆರೋಗ್ಯ ಇಲಾಖೆ ಮಾಹಿತಿಯಂತೆ ಇದುವರೆಗೂ ಕರ್ನಾಟಕಕ್ಕೆ 1,24,20,510 ಡೋಸ್ ಲಸಿಕೆ ಬಂದಿದೆ. 1,01,60,060 ಕೋವಿಶೀಲ್ಡ್, 11,66,280 ಕೊವ್ಯಾಕ್ಸಿನ್ ಲಸಿಕೆಯನ್ನು ಕೇಂದ್ರ ಸರ್ಕಾರದಿಂದ ಪಡೆಯಲಾಗಿದೆ. 9,50,000 ಕೋವಿಶೀಲ್ಡ್, 1,44,170 ಕೊವ್ಯಾಕ್ಸಿನ್ ಡೋಸ್ ಲಸಿಕೆಯನ್ನು ರಾಜ್ಯ ಸರ್ಕಾರ ಖರೀದಿ ಮಾಡಿದೆ.

      ಆರೋಗ್ಯ ಇಲಾಖೆ ಸ್ಪಷ್ಟನೆ -1

      ಆರೋಗ್ಯ ಇಲಾಖೆ ಸ್ಪಷ್ಟನೆ -1

      45 ವರ್ಷ ಮೇಲ್ಪಟ್ಟವರಿಗೆ ಲಸಿಕೆ. ಕೋವಿಶೀಲ್ಡ್ ಮೊದಲ ಡೋಸ್ ನಗರ ಪ್ರದೇಶದಲ್ಲಿ ಆನ್‌ಲೈನ್ ಮತ್ತು ಗ್ರಾಮೀಣ ಪ್ರದೇಶದಲ್ಲಿ ಆನ್‌ ಸೈಟ್ ನೋಂದಣಿ ಮೂಲಕ ಲಸಿಕಾಕರಣ ನಡೆಸುವುದು.

      ಕೋವಿಶೀಲ್ಡ್ 2ನೇ ಡೋಸ್. ಹತ್ತಿರದ ಕೋವಿಡ್ 18 ಲಸಿಕಾಕರಣ ಕೇಂದ್ರಕ್ಕೆ ನೇರವಾಗಿ ತೆರಳಬಹುದು (ವಾಕ್ ಇನ್).

      ಇಲಾಖೆ ಸ್ಪಷ್ಟನೆ - 2

      ಇಲಾಖೆ ಸ್ಪಷ್ಟನೆ - 2

      ಕೊವ್ಯಾಕ್ಸಿನ್ ಮೊದಲ ಡೋಸ್ ಲಸಿಕೆ ಸದ್ಯಕ್ಕೆ ಲಭ್ಯವಿರುವುದಿಲ್ಲ.

      2ನೇ ಡೋಸ್ ಪಡೆಯಬೇಕಾದ ಫಲಾನುಭವಿಗಳಿಗೆ ಎಸ್‌ಎಂಎಸ್ ಮೂಲಕ ಮಾಹಿತಿ ನೀಡಲಾಗುತ್ತದೆ. ಎಸ್‌ಎಂಎಸ್‌ನಲ್ಲಿ ತಿಳಿಸಲಾದ ಕೋವಿಡ್ ಲಸಿಕಾಕರಣ ಕೇಂದ್ರಕ್ಕೆ ನಿಗದಿತ ಸಮಯಕ್ಕೆ ಹೋಗಿ ಲಸಿಕೆ ಪಡೆಯಬಹುದು.

      ಆರೋಗ್ಯ ಇಲಾಖೆ ಸ್ಪಷ್ಟನೆ -3

      ಆರೋಗ್ಯ ಇಲಾಖೆ ಸ್ಪಷ್ಟನೆ -3

      18-44 ವಯೋಮಿತಿಯ ಜನರಿಗೆ ಸದ್ಯಕ್ಕೆ ಲಸಿಕೆ ಲಭ್ಯವಿರುವುದಿಲ್ಲ.
      ಆದರೆ ರಾಜ್ಯ ಸರ್ಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರಿಗೆ/ ದುರ್ಬಲ ಗುಂಪಿನವರಿಗೆ ಮತ್ತು ಆದ್ಯತೆ ಗುಂಪಿನವರಿಗೆ ನೋಡೆಲ್ ಅಧಿಕಾರಿಗಳು ಲಸಿಕಾಕರಣದ ದಿನಾಂಕ ಮತ್ತು ಸಮಯದ ಮಾಹಿತಿಯನ್ನು ನೀಡುವರು.

      ಆರೋಗ್ಯ ಇಲಾಖೆ ಟ್ವೀಟ್

      ಲಸಿಕಾಕರಣದ ಮಾಹಿತಿಯನ್ನು ಆರೋಗ್ಯ ಇಲಾಖೆ ಕನ್ನಡ ಮತ್ತು ಇಂಗ್ಲಿಶ್ ಭಾಷೆಯಲ್ಲಿ ಟ್ವೀಟ್ ಮಾಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+