ಜೆಡಿಎಸ್‌ ಗೆ ಹೀನಾಯ ಸೋಲು; ಈ ಸೋಲು ಅಂತಿಮವಲ್ಲ, ನನ್ನ ಹೋರಾಟ ನಿಲ್ಲುವುದಿಲ್ಲ: ಹೆಚ್‌ ಡಿ ಕುಮಾರಸ್ವಾಮಿ

ಬೆಂಗಳೂರು, ಮೇ 13: ರಾಜ್ಯದ ಜನತೆಯ ಆದೇಶವನ್ನು ನಾನು ಸ್ವಾಗತಿಸುತ್ತೇನೆ. ಈ ಸೋಲು ಅಂತಿಮವಲ್ಲ, ನನ್ನ ಹೋರಾಟ ನಿಲ್ಲುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಹೇಳಿದರು.

ಈ ಕುರಿತು ಟ್ವೀಟ್‌ ಮೂಲಕ ಹೇಳಿರುವ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾದೇಶವೇ ಅಂತಿಮ. ಸೋಲು, ಗೆಲುವನ್ನು ನಾನು ಸಮಚಿತ್ತದಿಂದ ಸ್ವೀಕರಿಸುತ್ತೇನೆ. ಆದರೆ, ಈ ಸೋಲು ಅಂತಿಮವಲ್ಲ, ನನ್ನ ಹೋರಾಟ ನಿಲ್ಲುವುದಿಲ್ಲ, ಸದಾ ಜನರ ಜತೆಯಲ್ಲೇ ಇರುತ್ತೇನೆ. ನಮ್ಮ ಪಕ್ಷವನ್ನು ಆಶೀರ್ವದಿಸಿದ ಮಹಾಜನತೆಗೆ ಅಭಿನಂದನೆಗಳು ಎಂದರು.

hd kumaraswamy

ನನಗಾಗಲಿ, ನಮ್ಮ ಕುಟುಂಬಕ್ಕೆ ಆಗಲಿ ಸೋಲು, ಗೆಲುವು ಹೊಸದೇನಲ್ಲ. ಈ ಹಿಂದೆ ಹೆಚ್.ಡಿ.ದೇವೇಗೌಡರು, ಹೆಚ್.ಡಿ.ರೇವಣ್ಣ, ನಾನೂ ಸೋತಿದ್ದೆವು. ಹಾಗೆಯೇ ಗೆದ್ದಾಗ ಬದ್ಧತೆಯಿಂದ ಜನಸೇವೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಸಂಘಟನೆಯಲ್ಲಿ ತೊಡಗಿಸಿಕೊಂಡು ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ. ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲಿರುವ ನೂತನ ಸರಕಾರಕ್ಕೆ ಶುಭವಾಗಲಿ. ಜನರ ಆಶೋತ್ತರಳಿಗೆ ಸ್ಪಂದಿಸಲಿ ಎಂದು ಹಾರೈಸುತ್ತೇನೆ.

ಚುನಾವಣೆಯಲ್ಲಿ ಪಕ್ಷದ ಪರವಾಗಿ ಹಗಲಿರುಳು ಶ್ರಮಿಸಿದ ಕಾರ್ಯಕರ್ತರು, ಮುಖಂಡರು, ಅಭ್ಯರ್ಥಿಗಳಿಗೆ ನನ್ನ ಕೃತಜ್ಞತೆಗಳು. ಯಾವುದೇ ಕಾರಣಕ್ಕೂ ಯಾರೂ ಧೃತಿಗೆಡುವುದು ಬೇಡ, ನಿಮ್ಮ ಜತೆಯಲ್ಲಿ ನಾನಿದ್ದೇನೆ.ಜನಾದೇಶವನ್ನು ಸ್ವಾಗತಿಸುವುದಾಗಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+