Gruha Lakshmi Scheme: ₹2000 ಪಡೆಯುವವರಿಗೆ ಹೊಸ ಅಪ್ಡೇಟ್! ಪರಿಷ್ಕರಣೆಗೆ ವಿಶೇಷ ಆಪ್ ಸಿದ್ಧ

Gruha Lakshmi Scheme Updates: ಕರ್ನಾಟಕಕ್ಕೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ತಮ್ಮ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಎರಡು ಯೋಜನೆಗಳ ಪರಿಷ್ಕರಣೆಗೆ ಮುಂದಾಗಿದೆ. ಅದರಲ್ಲಿ 'ಗೃಹ ಜ್ಯೋತಿ' ಯೋಜನೆ ಪರಿಷ್ಕರಣೆ, ಪರಿಶೀಲನೆ ಬಹುತೇಕ ಅಂತಿಮ ಹಂತದಲ್ಲಿದೆ. ಇನ್ನೂ 'ಗೃಹ ಲಕ್ಷ್ಮೀ' ಯೋಜನೆಗೆ ಹೊಸದಾಗಿ ಮೊಬೈಲ್ ಆಪ್ ಅನ್ನು ಸಿದ್ಧಪಡಿಸಲಾಗುತ್ತಿದೆ. ಇದರಿಂದ ಫಲಾನುಭವಿಗಳು ತುಂಬಾ ಸರಳವಾಗಿ ಪರಿಶೀಲನೆಗೆ ಒಳಗೊಳ್ಳಬಹುದು.

ಈ ಕುರಿತು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್‌.ಎಂ.ರೇವಣ್ಣ ಅವರು ಮಾಹಿತಿ ನೀಡಿದ್ದಾರೆ. ಕಾಲ ಕಾಲಕ್ಕೆ ಸರ್ಕಾರ ಯೋಜನೆಗಳ ಪರಿಷ್ಕರಣೆಗೆ ಮುಂದಾಗುತ್ತದೆ. ಈ ಹಿಂದೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ ಕುರಿತು ದಾಖಲೆಗಳ ಪರಿಶೀಲನೆ ನಡೆಸಲಾಯಿತು. ಇದೀಗ ಮಾಸಿಕ ಮನೆಯ ಒಬ್ಬರಿಗೆ ಮಾಸಿಕ 2000 ರೂಪಾಯಿ ನೀಡುವ ಗೃಹ ಜ್ಯೋತಿ ಯೋಜನೆ ಪರಿಷ್ಕರಣೆಗೆ ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.

Gruha Lakshmi Scheme

ವಿಶೇಷ ಆಪ್ ಸಿದ್ಧ, ಬಳಕೆ, ಪ್ರಯೋಜನವೇನು?

ರಾಜ್ಯ ಸರ್ಕಾರ ಗೃಹ ಲಕ್ಷ್ಮೀಯ ಅರ್ಹ ಫಲಾನುಭವಿಗಳ ಪತ್ತೆಗೆ ಸ್ಮಾರ್ಟ್ ಕಾರ್ಡ್ ಜಾರಿ ಮಾಡಲು ಮುಂದಾಗಿದೆ. ಅಲ್ಲದೇ ಪ್ರೀ ವೆರಿಫಿಕೇಶನ್ ಮಾಡಲು ನಿರ್ಧರಿಸಿದೆ. ಇದೆಲ್ಲ ಸಾಕಾರಗೊಳಿಸಲು ಪ್ರತ್ಯೇಕ ಹೊಸ ವಿಶೇಷ ಮೊಬೈಲ್ ಅಪ್ಲಿಕೇಷನ್ ವೊಂದನ್ನು ತಯಾರಿಸಲಾಗಿದೆ.

ಈ ಆಪ್‌ ನಲ್ಲಿ ಅರ್ಹ ಫಲಾನುಭವಿಗಳು ತಮಗೆ ಕೇಳಲಾಗುವ ಕೆಲವು ಪ್ರಶ್ನೆಗಳಿಗೆ ಉತ್ತರಿಸಬೇಕು. ಯಜಮಾನಿಯ ಎಫಿಕ್ ಕಾರ್ಡ್ ಸಂಖ್ಯೆ, ವಿಳಾಸ, ಮೊಬೈಲ್ ಸಂಖ್ಯೆ, ಮನೆಯ ಪರಿಸ್ಥಿತಿ, ಮನೆಯವರ ಆದಾಯ ಒಳಗೊಂಡಂತೆ ಅಗತ್ಯ ಮಾಹಿತಿ ಹಾಕಿದರೆ ಸಾಕು ನಿಮ್ಮ ಪರಿಶೀಲನೆ ಮುಕ್ತಾಯಗೊಳ್ಳುವಂತೆ ಸಿದ್ಧಪಡಿಸಲಾಗಿದೆ. ಈ ಆಪ್ ಮೂಲಕ ಪರಿಶೀಲನೆ ಇನ್ನೂ ಆರಂಭಿಸಲಾಗಿಲ್ಲ ಎಂದು ಎಚ್‌.ಎಂ. ರೇವಣ್ಣ ಅವರು ಮಾಹಿತಿ ಕೊಟ್ಟರು.

1.22 ಕೋಟಿ ಗೃಹಿಣಿಯರ ಖಾತೆ ಹಣ ಜಮೆ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ನುಡಿದಂತೆ ನಡೆದಿದೆ. ಒಂದು ವರ್ಷದಲ್ಲಿ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಲಂಚ, ದಲ್ಲಾಳಿಗಳ ಹಾವಳಿ ಇಲ್ಲದೇ ಯೋಜನೆಗಳ ಲಾಭ ನೇರವಾಗಿ ಫಲಾನುಭವಿಗಳಿಗೆ ಸಿಗುವಂತಾಗಿದೆ. ಯೋಜನೆಗಳ ಅನುಷ್ಠಾನಕ್ಕಾಗಿ ಸಮಿತಿ ಮೂಲಕ 4650 ಜನ ಶ್ರಮಿಸಿದ್ದೇವೆ.

ಅರ್ಹರಿಗೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಹಣ ಪಾವತಿಸಲಾಗುತ್ತಿದೆ. ಗೃಹಲಕ್ಷ್ಮೀ ಯೋಜನೆಯಡಿ ಮನೆಯ ಯಜಮಾನಿಗೆ/ಗೃಹಿಣಿಗೆ ಮಾಸಿಕವಾಗಿ 2,000 ರೂಪಾಯಿ ನಂತೆ ಈವರೆಗೆ 1.22 ಕೋಟಿ ಜನರಿಗೆ 79,404 ಕೋಟಿ ರೂಪಾಯಿ ಹಣ ಪಾವತಿಸಿದ್ದೇವೆ ಎಂದು ತಿಳಿಸಿದರು.

ಯಾವುದೇ ಯೋಜನೆ ನಿಲ್ಲಿಸಲ್ಲ

ಗೃಹಲಕ್ಷ್ಮೀ ಯೋಜನೆಯಡಿ ಒಂದಷ್ಟು ಹಣ ಅನರ್ಹರ ಬ್ಯಾಂಕ್ ಖಾತೆಯಲ್ಲಿ ಉಳಿದಿದ್ದು, ರಿಕವರಿ ಮಾಡಲಾಗುತ್ತಿದೆ. 117 ಕೋಟಿ ರೂಪಾಯಿ ಸರ್ಕಾರಕ್ಕೆ ವಾಪಸ್ ಬರಬೇಕಿದ್ದು, ಅದರಲ್ಲಿ ಕೇವಲ 47 ಕೋಟಿ ರೂ. ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಸಣ್ಣ ಪುಟ್ಟ ನ್ಯೂನ್ಯತೆಗಳು ಇವೆ. ಆದರೆ ಗೃಹ ಲಕ್ಷ್ಮೀ ಆಗಲಿ, ಬೇರಾವುದೇ ಗ್ಯಾರಂಟಿ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ನಿಲ್ಲಿಸುವುದಿಲ್ಲ, ಯೋಜನೆಗಳು ಮುಂದುವರಿಯಲಿವೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+