Gruha Jyothi scheme: ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್‌ನ್ಯೂಸ್: ಉಚಿತ ವಿದ್ಯುತ್ ಯೋಜನೆ ಬಗ್ಗೆ ಮಹತ್ವದ ಅಪ್‌ಡೇಟ್

Gruha Jyothi scheme:ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯ ರೀ-ವೆರಿಫಿಕೇಶನ್‌ (Re-Verification) ಪ್ರಕ್ರಿಯೆಗೆ ಸರ್ಕಾರ ಮತ್ತೊಂದು ತಿಂಗಳು ಗಡುವು ವಿಸ್ತರಿಸಿದೆ. ಅನರ್ಹ ಫಲಾನುಭವಿಗಳನ್ನು ಯೋಜನೆಯಿಂದ ಹೊರಗಿಡುವ ಉದ್ದೇಶದಿಂದ ನಡೆಯುತ್ತಿರುವ ಪರಿಶೀಲನೆಗೆ ಈ ಹಿಂದೆ ಆಗಸ್ಟ್‌ 31ರವರೆಗೆ ಕಾಲಾವಕಾಶ ನೀಡಲಾಗಿತ್ತು. ಇದೀಗ ಸೆಪ್ಟೆಂಬರ್‌ 30ರವರೆಗೆ ಗಡುವು ವಿಸ್ತರಿಸಿ ಇಂಧನ ಇಲಾಖೆ ಆದೇಶ ಹೊರಡಿಸಿದೆ.

ಗೃಹಜ್ಯೋತಿ ಯೋಜನೆಯಡಿ ಅರ್ಹತೆ ಹೊಂದಿರದ ಫಲಾನುಭವಿಗಳನ್ನು ಗುರುತಿಸಿ, ಯೋಜನೆಯ ಪ್ರಯೋಜನವನ್ನು ಅರ್ಹರಿಗೆ ಮಾತ್ರ ಮುಂದುವರಿಸುವ ಉದ್ದೇಶದಿಂದ ಜುಲೈ 1ರಿಂದ ರೀ-ವೆರಿಫಿಕೇಶನ್‌ ಕಾರ್ಯ ಆರಂಭಿಸಲಾಗಿತ್ತು. ಬೆಸ್ಕಾಂ ಸೇರಿದಂತೆ ರಾಜ್ಯದ ಎಲ್ಲಾ ಎಸ್ಕಾಂ ವ್ಯಾಪ್ತಿಯಲ್ಲಿ ಮನೆ-ಮನೆಗೆ ತೆರಳಿ ಫಲಾನುಭವಿಗಳ ದಾಖಲೆ ಹಾಗೂ ವಿದ್ಯುತ್‌ ಸಂಪರ್ಕದ ವಿವರಗಳನ್ನು ಪರಿಶೀಲಿಸಲಾಗುತ್ತಿದೆ.

Gruha Jyothi scheme Karnataka Governmnet Gruha Jyothi Re-Verification Deadline Extended to September 30

Gruha Jyothi scheme:ಶೇ.70ರಷ್ಟು ಪರಿಶೀಲನೆ ಪೂರ್ಣ

ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ 2026ರ ಮೇ ಅಂತ್ಯದ ವೇಳೆಗೆ 68,86,860 ಗೃಹಜ್ಯೋತಿ ಫಲಾನುಭವಿಗಳಿದ್ದರು. ಆಗಸ್ಟ್‌ 31ರವರೆಗೆ 46,70,588 ಫಲಾನುಭವಿಗಳ ಮರುಪರಿಶೀಲನೆ ಪೂರ್ಣಗೊಂಡಿದ್ದು, ಇದುವರೆಗೆ ರಾಜ್ಯಾದ್ಯಂತ ಗೃಹಜ್ಯೋತಿ ಫಲಾನುಭವಿಗಳ ಪೈಕಿ ಸುಮಾರು ಶೇ.70ರಷ್ಟು ರೀ-ವೆರಿಫಿಕೇಶನ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ ಇನ್ನೂ ಸುಮಾರು ಶೇ.30ರಷ್ಟು ಫಲಾನುಭವಿಗಳ ಪರಿಶೀಲನೆ ಬಾಕಿ ಉಳಿದಿದೆ.

ಸೆಪ್ಟೆಂಬರ್‌ 1ರಿಂದ ಮೀಟರ್‌ ರೀಡಿಂಗ್‌ಗಾಗಿ ಮನೆಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಸಿಬ್ಬಂದಿಗೆ ಅಗತ್ಯ ದಾಖಲೆಗಳನ್ನು ನೀಡಿ ಸಹಕರಿಸುವಂತೆ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ ತಿಳಿಸಿದ್ದಾರೆ. ಮನೆಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಕೆಲವು ಫಲಾನುಭವಿಗಳಿಂದ ಅಗತ್ಯ ಸಹಕಾರ ಹಾಗೂ ಸ್ಪಂದನೆ ಸಿಗದಿರುವುದು ಪರಿಶೀಲನೆ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಬಾಕಿ ಇರುವ ಫಲಾನುಭವಿಗಳಿಗೂ ಅವಕಾಶ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಗಡುವನ್ನು ಮತ್ತೊಂದು ತಿಂಗಳು ವಿಸ್ತರಿಸಿದೆ.

Gruha Jyothi scheme:ಮನೆ-ಮನೆಗೆ ತೆರಳಿ ಪರಿಶೀಲನೆ

ಬೆಸ್ಕಾಂ ಸೇರಿದಂತೆ ಎಲ್ಲಾ ವಿದ್ಯುತ್‌ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ಸಿಬ್ಬಂದಿ ಮನೆ-ಮನೆಗೆ ತೆರಳಿ ಗೃಹಜ್ಯೋತಿ ಫಲಾನುಭವಿಗಳ ಪರಿಶೀಲನೆ ನಡೆಸುತ್ತಿದ್ದಾರೆ. ಫಲಾನುಭವಿಗಳು ಸಿಬ್ಬಂದಿಗೆ ಅಗತ್ಯ ಮಾಹಿತಿ ಹಾಗೂ ದಾಖಲೆಗಳನ್ನು ನೀಡಿ ಸಹಕರಿಸುವಂತೆ ಮನವಿ ಮಾಡಲಾಗಿದೆ.

ಈಗ ಗಡುವು ಸೆಪ್ಟೆಂಬರ್‌ 30ರವರೆಗೆ ವಿಸ್ತರಣೆಯಾಗಿರುವುದರಿಂದ , ಇನ್ನೂ ರೀ-ವೆರಿಫಿಕೇಶನ್‌ ಪೂರ್ಣಗೊಳಿಸದ ಗೃಹಜ್ಯೋತಿ ಫಲಾನುಭವಿಗಳು ಈ ಅವಕಾಶವನ್ನು ಬಳಸಿಕೊಂಡು ಪರಿಶೀಲನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗಿದೆ.

ಸರ್ಕಾರದ ಈ ಕ್ರಮದಿಂದ ಯೋಜನೆಯಲ್ಲಿರುವ ಅನರ್ಹ ಫಲಾನುಭವಿಗಳನ್ನು ಗುರುತಿಸಿ ಹೊರಗಿಡಲು ಹಾಗೂ ಗೃಹಜ್ಯೋತಿಯ ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ಮುಂದುವರಿಸಲು ಅನುಕೂಲವಾಗಲಿದೆ.

ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ಮನವಿ

ಬೆಂಗಳೂರಿನ ಕೆಲವು ಅಪಾರ್ಟ್‌ಮೆಂಟ್‌ಗಳಲ್ಲಿ ಗೃಹಜ್ಯೋತಿ ಫಲಾನುಭವಿಗಳು ಸಮೀಕ್ಷೆ ವೇಳೆ ಬೆಸ್ಕಾಂ ಸಿಬ್ಬಂದಿಗೆ ಸಹಕರಿಸುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ. ಹೀಗಾಗಿ ಸಿಬ್ಬಂದಿ ಅಪಾರ್ಟ್‌ಮೆಂಟ್‌ಗಳಿಗೆ ಭೇಟಿ ನೀಡಿದಾಗ ಮರುಪರಿಶೀಲನೆಗೆ ಅಗತ್ಯ ಸಹಕಾರ ನೀಡುವಂತೆ ಬೆಸ್ಕಾಂ ಮನವಿ ಮಾಡಿದೆ.

ಮನೆ ಲಾಕ್‌ ಆಗಿದ್ದರೆ 3 ಬಾರಿ ಭೇಟಿ

ಮರುಪರಿಶೀಲನೆಗೆ ಸಿಬ್ಬಂದಿ ಭೇಟಿ ನೀಡಿದಾಗ ಮನೆ ಲಾಕ್‌ ಆಗಿದ್ದರೆ, ವಿಭಿನ್ನ ಸಮಯಗಳಲ್ಲಿ ಮೂರು ಬಾರಿ ಭೇಟಿ ನೀಡಲಾಗುತ್ತದೆ. ಪ್ರತಿ ಭೇಟಿಯಲ್ಲೂ ಸ್ಥಳದ ಅಕ್ಷಾಂಶ ಮತ್ತು ರೇಖಾಂಶವನ್ನು ದಾಖಲಿಸಿ ಮೊಬೈಲ್‌ ಆ್ಯಪ್‌ನಲ್ಲಿ 'DL' (Door Lock) ಎಂದು ನಮೂದಿಸಲಾಗುತ್ತದೆ.

ಮನೆ 'DL' ಎಂದು ಗುರುತಿಸಿದ ಬಳಿಕ ಫಲಾನುಭವಿಯ ನೋಂದಾಯಿತ ಮೊಬೈಲ್‌ ಸಂಖ್ಯೆಗೆ ಮೀಟರ್‌ ರೀಡರ್‌ ಹೆಸರು ಮತ್ತು ಸಂಪರ್ಕ ಸಂಖ್ಯೆಯೊಂದಿಗೆ SMS ಕಳುಹಿಸಲಾಗುತ್ತದೆ. ಈ ಮೂಲಕ ಫಲಾನುಭವಿಗಳು ಸಂಬಂಧಪಟ್ಟ ಮೀಟರ್‌ ರೀಡರ್‌ರನ್ನು ಸಂಪರ್ಕಿಸಿ ಮರುಪರಿಶೀಲನೆ ಪೂರ್ಣಗೊಳಿಸಬಹುದು.

ಮರುಪರಿಶೀಲನೆ ಆಗಿದೆಯೇ ಎಂದು ತಿಳಿಯುವುದು ಹೇಗೆ?

ಗೃಹಜ್ಯೋತಿ ಮರುಪರಿಶೀಲನೆ ಪೂರ್ಣಗೊಂಡಿದ್ದರೆ ವಿದ್ಯುತ್‌ ಬಿಲ್‌ನ ಮೇಲ್ಭಾಗದಲ್ಲಿ 'GJSURVEYED' ಎಂದು ನಮೂದಾಗಿರುತ್ತದೆ. ತಡವಾಗಿ ಮರುಪರಿಶೀಲನೆ ಪೂರ್ಣಗೊಳಿಸಿದರೆ ಸೆಪ್ಟೆಂಬರ್‌ ತಿಂಗಳ ವಿದ್ಯುತ್‌ ಬಿಲ್‌ನಲ್ಲಿ ಈ ಗುರುತು ಕಾಣಿಸಿಕೊಳ್ಳಲಿದೆ. ಮರುಪರಿಶೀಲನೆ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಬೆಸ್ಕಾಂ ಸಹಾಯವಾಣಿ 9480816111, 9480816112, 9480816113 ಮತ್ತು 9480816114 ಸಂಪರ್ಕಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+