ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೋರ್‌ವೆಲ್ ನೀರು ಬಳಕೆಗೆ ಅನುಮತಿ: ಜೂನ್ 30 ಕೊನೆಯ ದಿನ

|
Google Oneindia Kannada News

ನವದೆಹಲಿ, ಜೂನ್ 29: ಬೋರ್‌ವೆಲ್ ಇತ್ಯಾದಿ ಅಂತರ್ಜಲ (Ground Water) ಬಳಸುವುದಕ್ಕೆ ಅನುಮತಿ ಪಡೆಯುವುದು ಕಡ್ಡಾಯ ಮಾಡಲಾಗಿದೆ. ಅನುಮತಿ ಪಡೆಯಲು ಜೂನ್ 30, ಗುರುವಾರ ಕೊನೆಯ ದಿನವಾಗಿದೆ. ನಾಳೆಯೊಳಗೆ ನೀವು ನೊಂದಾಯಿಸಬೇಕಾಗುತ್ತದೆ.

ಈಗಾಗಲೇ ಅಂತರ್ಜಲ ಬಳಸುತ್ತಿರುವವರು ಹಾಗು ಹೊಸದಾಗಿ ಬೋರ್‌ವೆಲ್ (Borewell) ಕೊರೆಸಬೇಕೆನ್ನುವವರು ಎಲ್ಲರೂ ನೊಂದಾಯಿಸುವುದು ಕಡ್ಡಾಯವಾಗಿದೆ. ಕೇಂದ್ರ ಜಲ ಶಕ್ತಿ ಸಚಿವಾಲಯ ಈ ಅಧಿಸೂಚನೆ ಹೊರಡಿಸಿದೆ. ಅಂತರ್ಜಲದ ಸಣ್ಣ ಬಳಕೆದಾರರಿಗೆ ನೊಂದಾವಣಿಯಿಂದ ವಿನಾಯಿತಿ ನೀಡಲಾಗಿದೆ.

ಕೊಳವೆಬಾವಿಯ ನೀರು ಬಳಕೆ ಮಾಡುವ ವಸತಿ ಸಮುಚ್ಚಯಗಳು, ಹೌಸಿಂಗ್ ಸೊಸೈಟಿಗಳು, ಸರಕಾರದ ನೀರು ಸರಬರಾಜು ಸಂಸ್ಥೆಗಳು, ದೊಡ್ಡ ಪ್ರಮಾಣದ ನೀರಿನ ಸರಬರಾಜುದಾರರು, ಔದ್ಯಮಿಕ ಗಣಿ ಇತ್ಯಾದಿ ನೀರು ಬಳಕೆಯ ಯೋಜನೆಗಳನ್ನು ಮಾಡುವವರು, ಸ್ವಿಮ್ಮಿಂಗ್ ಪೂಲ್‌ಗಳು ಅನುಮತಿ ಪಡೆಯಬೇಕಾಗುತ್ತದೆ.

ಪ್ರಾಧಿಕಾರಗಳ ಅನುಮತಿ ಇಲ್ಲದೆ ಯಾರೂ ಕೂಡ ಹೊಸದಾಗಿ ಕೊಳವೆ ಬಾವಿ ಅಥವಾ ಬೋರ್‌ವೆಲ್‌ಗಳನ್ನು ಕೊರೆಸುವಂತಿಲ್ಲ. ಹಾಗೊಂದು ವೇಳೆ ಕೊರೆಸಿದರೆ ಕಾನೂನು ರೀತ್ಯ ಕ್ರಮ ಕೈಗೊಳ್ಳುವ ಅಧಿಕಾರ ಪ್ರಾಧಿಕಾರಕ್ಕಿರುತ್ತದೆ.

 ನೊಂದಣಿ ಶುಲ್ಕ 10 ಸಾವಿರ ರೂ

ನೊಂದಣಿ ಶುಲ್ಕ 10 ಸಾವಿರ ರೂ

ಅಂತರ್ಜಲ ಬಳಕೆಗೆ ಅನುಮತಿ ಪಡೆಯಲು 10 ಸಾವಿರ ರೂ ನೊಂದಣಿ ಶುಲ್ಕವನ್ನು ಪಾವತಿಸಬೇಕೆಂದು ಸೂಚಿಸಲಾಗಿದೆ. ಅಂತರ್ಜಲವನ್ನು ಬಳಸುತ್ತಿರುವವರು ಅನುಮತಿಗಾಗಿ ಜೂನ್ 30ರೊಳಗೆ ನೊಂದಾಯಿಸಬೇಕು. ಪೂರ್ಣ ಅರ್ಜಿ ಸಲ್ಲಿಸಿ 10 ಸಾವಿರ ರೂ ಶುಲ್ಕ ಪಾವತಿಸಲು ಕೊನೆಯ ದಿನವಾಗಿ ಸೆಪ್ಟೆಂಬರ್ 30 ನಿಗದಿ ಮಾಡಲಾಗಿದೆ.

 ಇವರಿಗಿದೆ ವಿನಾಯಿತಿ

ಇವರಿಗಿದೆ ವಿನಾಯಿತಿ

ಆದರೆ, ಕಡಿಮೆ ಅಂತರ್ಜಲ ನೀರು ಬಳಸುವ ನಿವಾಸಿಗಳಿಗೆ ವಿನಾಯಿತಿ ನೀಡಲಾಗಿದೆ. ಅಂದರೆ, 2 ಹೆಚ್‌ಪಿ ಹಾಗೂ ಅದಕ್ಕಿಂತ ಕಡಿಮೆ ಸಾಮರ್ಥ್ಯದ ಮೋಟಾರ್ ಪಂಪ್‌ಗಳನ್ನು ಉಪಯೋಗಿಸಿ ನೀರು ತೆಗೆಯುವವರು ನೊಂದಾಯಿಸಬೇಕಿಲ್ಲ. ಕೆಲ ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಪ್ರತೀ ಮನೆಯಲ್ಲೂ ಬೋರ್ವೆಲ್ ಹೊಂದಿರುವವರ ಸಮೀಕ್ಷೆಯನ್ನು ಜಲಮಂಡಳಿ ನಡೆಸಿ ಎನ್‌ಒಸಿ ಒದಗಿಸಲಾಗಿತ್ತು.

 ಇದು ಎನ್‌ಒಸಿ

ಇದು ಎನ್‌ಒಸಿ

ಅಂತರ್ಜಲ ಬಳಕೆದಾರರು ಅನುಮತಿಗಾಗಿ ನೊಂದಾಯಿಸಬೇಕಿರುವುದು ಕೇಂದ್ರೀಯ ಅಂತರ್ಜಲ ಪ್ರಾಧಿಕಾರದೊಂದಿಗೆ. ನೊಂದಾಯಿಸಿದ ಬಳಿಕ ಪ್ರಾಧಿಕಾರದಿಂದ ಎನ್‌ಒಸಿ ನೀಡಲಾಗುತ್ತದೆ. ಈ ಎನ್‌ಒಸಿ ಇಲ್ಲದೆಯೇ ಯಾರೂ ಕೂಡ ಅಂತರ್ಜಲ ಬಳಕೆ ಮಾಡುವಂತಿಲ್ಲ. ಮಾಡಿದರೆ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.

 ಕೊಳವೆಬಾವಿ ಕೊರೆಯಲು ಅನುಮತಿ ಕಡ್ಡಾಯ

ಕೊಳವೆಬಾವಿ ಕೊರೆಯಲು ಅನುಮತಿ ಕಡ್ಡಾಯ

ಕರ್ನಾಟಕದಲ್ಲಿ ಕೊಳವೆ ಬಾವಿ ಅಥವಾ ಬೋರ್‌ವೆಲ್ ಕೊರೆಸಬೇಕೆಂದರೆ ಸ್ಥಳೀಯ ಸಂಸ್ಥೆಗಳ ಅನುಮತಿ ಕಡ್ಡಾಯ ಮಾಡಲಾಗಿರುವ ನಿಯಮ ಈಗಾಗಲೇ ಚಾಲ್ತಿಯಲ್ಲಿದೆ. ಇದು ನಿವೇಶನ ಅಥವಾ ಜಮೀನು ಒಳಗೊಂಡಂತೆ ಎಲ್ಲೇ ಕೊಳವೆಬಾವಿ ಕೊರೆಸಬೇಕೆಂದಿದ್ದರೂ ೧೫ ದಿನ ಮುಂಚಿತವಾಗಿ ಪಂಚಾಯಿತಿ ಅಥವಾ ಪಾಲಿಕೆ ಸಂಸ್ಥೆಗಳಿಂದ ನಿರಾಕ್ಷೇಪಣ ಪತ್ರ ಅಥವಾ ಎನ್‌ಒಸಿಯನ್ನು ಪಡೆಯಬೇಕು ಎಂಬ ನಿಯಮ ಇದೆ.

ಕೊಳವೆಬಾವಿ ಕೊರೆಸುವುದರಲ್ಲೂ ಕೆಲ ನಿಯಮಗಳಿವೆ. ಕರ್ನಾಟಕ ಅಂತರ್ಜಲ ಪ್ರಾಧಿಕಾರದಲ್ಲಿ ನೊಂದಣಿಯಾಗಿರುವ ಮೆಷೀನ್‌ಗಳಿಂದ ಮಾತ್ರ ಬೋರ್ವೆಲ್ ಕೊರೆಸಬೇಕು ಎಂದಿದೆ.

(ಒನ್ಇಂಡಿಯಾ ಸುದ್ದಿ)

Recommended Video

ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವಿಸ್ ನೇತೃತ್ವದ ಬಿಜೆಪಿ ಸರ್ಕಾರ ರಚನೆಗೆ ಕ್ಷಣಗಣನೆ | *Poltics | OneIndia

English summary
Central Jal Shakti Ministry has issued public notice asking groundwater users to get permission from the authority. June 30 is the last date to register.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X